ಜಗತ್ತಿಗೆ ಹೊಸ ಸವಾಲು; ಬೆಳಕಿನ ಮಾಲಿನ್ಯ


Team Udayavani, Nov 2, 2022, 6:15 AM IST

ಜಗತ್ತಿಗೆ ಹೊಸ ಸವಾಲು; ಬೆಳಕಿನ ಮಾಲಿನ್ಯ

ಬೆಳಕಿನ ಮಾಲಿನ್ಯವು ಕೈಗಾರಿಕೀಕರಣ ಮತ್ತು ನಗರೀಕರಣದ ಪ್ರಭಾವವಾಗಿದೆ. ಹಳ್ಳಿಗಳಲ್ಲಾದರೋ ರಾತ್ರಿ 7ರಿಂದ 9 ಗಂಟೆಯೊಳಗಾಗಿ ಅಂಗಡಿ- ಮುಂಗಟು rಗಳು ಮುಚ್ಚಲ್ಪಡುತ್ತವೆ. ಆದರೆ ಮಹಾ ನಗ ರಗಳಲ್ಲಿ ಕತ್ತಲಾಗುವುದೇ ಇಲ್ಲ. ಅತೀ ಹೆಚ್ಚಿನ ಸಮಯ ಕೃತಕ ಬೆಳಕಿನಡಿಯಲ್ಲಿರುವವರಿಗೆ ನಿದ್ರಾ ಹೀನತೆಯು ಕಂಡು ಬರುವ ಸಾಧ್ಯತೆ ಇರುತ್ತದೆ. ಹಗಲಿನ ಬೆಳಕು ಕಡಿಮೆಯಾಗುತ್ತಾ ಬಂದಂತೆ ನಮ್ಮ ಮೆದುಳು melatonin ಎಂಬ ಹಾರ್ಮೋ ನನ್ನು ಸ್ರವಿಸುತ್ತದೆ. ಇದು ನಿದ್ರೆಯ ಚಕ್ರವನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬೆಳಕಿನ ಮಾಲಿನ್ಯವು melatonin ಉತ್ಪಾದನೆಯ ಮೇಲೆ ಪರಿಣಾಮ ಬೀರಿ ನಿದ್ರಾಹೀನತೆಗೆ ಕಾರಣವಾಗುತ್ತದೆ. ಕತ್ತಲೆಯಾಗುತ್ತಾ ಬಂದ ಹಾಗೆ ಪಕ್ಷಿಗಳು ತಮ್ಮ ಸ್ಥಾನಕ್ಕೆ ಮರಳುತ್ತವೆ. ಈ ಅತೀ ಹೆಚ್ಚಿನ ಕೃತಕ ಬೆಳಕಿನಿಂದಾಗಿ ಅವುಗಳಿಗೆ ಗೊಂದಲವಾಗುವ, ದಾರಿ ತಪ್ಪುವ ಸಾಧ್ಯತೆಗಳಿವೆ. ವಲಸೆ ಹೋಗುವ ಪಕ್ಷಿಗಳು, ರಾತ್ರಿ ಆಹಾರ ಹುಡುಕುವ ಪಕ್ಷಿಗಳು ಕೃತಕ ಬೆಳಕಿನಿಂದಾಗಿ ಭಾರೀ ತೊಂದರೆಗೆ ಒಳಗಾಗುತ್ತವೆ. ಸಣ್ಣಪುಟ್ಟ ಕೀಟಗಳು ಈ ಬೆಳಕಿನೆಡೆಗೆ ಆಕರ್ಷಿತವಾಗಿ ಜೀವ ಕಳೆದುಕೊಳ್ಳುತ್ತವೆ.

ವಾಯುಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಇವುಗಳ ಸಾಲಿಗೆ 21ನೇ ಶತಮಾನದ ಕೊಡುಗೆ ಎಂದರೆ ಬೆಳಕಿನ ಮಾಲಿನ್ಯ. ರಾತ್ರಿಯಲ್ಲಿ ಆಕಾಶವು ಬೀದಿ ದೀಪ, ಜಾಹೀರಾತು ಫ‌ಲಕಗಳು, ವಾಹನಗಳು ಮತ್ತಿತರ ಮನುಷ್ಯ ನಿರ್ಮಿತ ಬೆಳಕಿನಿಂದ ಬೆಳಗುವುದನ್ನು ಸರಳವಾಗಿ ಬೆಳಕಿನ ಮಾಲಿನ್ಯ ಎನ್ನಬಹುದು. ಇದು ಪ್ರಾಣಿ-ಪಕ್ಷಿಗಳ ಜೀವನ ಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ ಆಕಾಶಕಾಯಗಳ ವೀಕ್ಷಣೆಗೂ ತೊಡಕನ್ನು ಉಂಟು ಮಾಡುತ್ತದೆ.

ಬೆಳಕಿನ ಮಾಲಿನ್ಯ ಎಂದರೆ ಅದು ರಾತ್ರಿ ಹೊತ್ತು ಮಾತ್ರವಲ್ಲ. ಅಗತ್ಯವಿರದ ಅಥವಾ ಅಗತ್ಯಕ್ಕಿಂತ ಹೆಚ್ಚಿರುವ ಅಥವಾ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿರದ ಕೃತಕ ಬೆಳಕಿನ ಮೂಲಗಳು ಹಗಲಿನಲ್ಲಿಯೂ ಬೆಳಕಿನ ಮಾಲಿನ್ಯಕ್ಕೆ ಕಾರಣವೆನಿಸುತ್ತವೆ. ಆದರೆ ರಾತ್ರಿ ಹೊತ್ತು ಹೊರಗಿನ ಕತ್ತಲೆಯಿಂದಾಗಿ ಇದರ ಪರಿಣಾಮ ಅರಿವಿಗೆ ಬರುತ್ತದೆ. ನೀವು ಯಾವುದೇ ಮಾಲ್‌ನ ಒಳಗಿದ್ದು ಗಮನಿಸಿ, ನಿಮಗದು ದಿನದ ಯಾವ ಹೊತ್ತು ಎಂದು ಅರಿವಿಗೇ ಬರುವುದಿಲ್ಲ. ಅಷ್ಟರ ಮಟ್ಟಿಗೆ ಅಲ್ಲಿ ಕೃತಕ ಬೆಳಕಿನ ಪ್ರಭಾವವಿರುತ್ತದೆ. ಈಗಂತೂ ಮಾಲ್‌ ಎಂದಲ್ಲ ಹೆಚ್ಚಿನ ಕಚೇರಿಗಳಲ್ಲಿ ಹವಾನಿಯಂತ್ರಕಗಳನ್ನು ಅಳವಡಿಸಿರುವುದರಿಂದ ಹೊರಗಿನ ಬೆಳಕಿಗೆ ಒಳಗೆ ಪ್ರವೇಶವೇ ಇರುವುದಿಲ್ಲ. ಕೃತಕ ಬೆಳಕಿನದ್ದೇ ಸಾಮ್ರಾಜ್ಯ. ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು ಹಗಲಿನ ಸಹಜ ಬೆಳಕಿನಲ್ಲಿ ಕೆಲಸ ಮಾಡಿದರೆ ಸುಸ್ತು, ಆಯಾಸ ಅನುಭವಕ್ಕೆ ಬರುವುದು ಕಡಿಮೆ. ಆದರೆ ಕೃತಕ ಬೆಳಕಿನಲ್ಲಿ ಹೆಚ್ಚು.

ಬೆಳಕಿನ ಮಾಲಿನ್ಯವು ಕೈಗಾರಿಕೀಕರಣ ಮತ್ತು ನಗರೀಕರಣದ ಪ್ರಭಾವವಾಗಿದೆ. ಹಳ್ಳಿಗಳಲ್ಲಾದರೋ ರಾತ್ರಿ 7ರಿಂದ 9 ಗಂಟೆಯೊಳಗಾಗಿ ಅಂಗಡಿ- ಮುಂಗಟ್ಟುಗಳು ಮುಚ್ಚಲ್ಪಡುತ್ತವೆ. ಆದರೆ ಮಹಾ ನಗ ರಗಳಲ್ಲಿ ಕತ್ತಲಾಗುವುದೇ ಇಲ್ಲ. ಅತೀ ಹೆಚ್ಚಿನ ಸಮಯ ಕೃತಕ ಬೆಳಕಿನಡಿಯಲ್ಲಿರುವವರಿಗೆ ನಿದ್ರಾ ಹೀನತೆಯು ಕಂಡು ಬರುವ ಸಾಧ್ಯತೆ ಇರುತ್ತದೆ. ಹಗಲಿನ ಬೆಳಕು ಕಡಿಮೆಯಾಗುತ್ತಾ ಬಂದಂತೆ ನಮ್ಮ ಮೆದುಳು melatonin ಎಂಬ ಹಾರ್ಮೋ ನನ್ನು ಸ್ರವಿಸುತ್ತದೆ. ಇದು ನಿದ್ರೆಯ ಚಕ್ರವನ್ನು ನಿಯಂತ್ರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬೆಳಕಿನ ಮಾಲಿನ್ಯವು melatonin ಉತ್ಪಾದನೆಯ ಮೇಲೆ ಪರಿಣಾಮ ಬೀರಿ ನಿದ್ರಾಹೀನತೆಗೆ ಕಾರಣವಾಗುತ್ತದೆ.

ಕತ್ತಲೆಯಾಗುತ್ತಾ ಬಂದ ಹಾಗೆ ಪಕ್ಷಿಗಳು ತಮ್ಮ ಸ್ಥಾನಕ್ಕೆ ಮರಳುತ್ತವೆ. ಈ ಅತೀ ಹೆಚ್ಚಿನ ಕೃತಕ ಬೆಳಕಿನಿಂದಾಗಿ ಅವುಗಳಿಗೆ ಗೊಂದಲವಾಗುವ, ದಾರಿ ತಪ್ಪುವ ಸಾಧ್ಯತೆಗಳಿವೆ. ವಲಸೆ ಹೋಗುವ ಪಕ್ಷಿಗಳು, ರಾತ್ರಿ ಆಹಾರ ಹುಡುಕುವ ಪಕ್ಷಿಗಳು ಕೃತಕ ಬೆಳಕಿನಿಂದಾಗಿ ಭಾರೀ ತೊಂದರೆಗೆ ಒಳಗಾಗುತ್ತವೆ. ಸಣ್ಣಪುಟ್ಟ ಕೀಟಗಳು ಈ ಬೆಳಕಿನೆಡೆಗೆ ಆಕರ್ಷಿತವಾಗಿ ಜೀವ ಕಳೆದುಕೊಳ್ಳುತ್ತವೆ. ಬೆಳಕಿನ ಮಾಲಿನ್ಯವು ಪಕ್ಷಿಗಳ ಹಗಲು -ರಾತ್ರಿಗಳ ಜೀವನ ಕ್ರಮದ ಮೇಲೂ ಪ್ರಭಾವ ಬೀರುತ್ತವೆ. ಪಕ್ಷಿಗಳು ಮಾತ್ರವಲ್ಲ ಈ ಕೃತಕ ಬೆಳಕು ಜಲಚರಗಳ ಜೀವನಚಕ್ರದ ಮೇಲೂ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ರಾತ್ರಿಯ ಅತಿಯಾದ ಬೆಳಕು ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ. ಹೆಚ್ಚು ಬೆಳಕು ಬೀಳುವ ಪ್ರದೇಶದಲ್ಲಿ ಕೃಷಿಯ ಫ‌ಸಲು ಕಡಿಮೆ ಯಾಗಿರುವುದು ಈಗಾಗಲೇ ಗೊತ್ತಾಗಿದೆ. ಈ ಬೆಳಕಿನ ಮಾಲಿನ್ಯದಿಂದಾಗಿ ಆಕಾಶ ವೀಕ್ಷಣೆ, ಬಾಹ್ಯಾಕಾಶ ಸಂಶೋಧನೆಗೂ ಅಡ್ಡಿಯಾಗಿದೆ. ಹೀಗಾಗಿ ವಿವಿಧ ದೇಶಗಳಲ್ಲಿ ಒಂದಷ್ಟು ವಿಶಾಲ ಪ್ರದೇಶದಲ್ಲಿ ಕೃತಕ ಬೆಳಕಿನ ಪ್ರಭಾವವಿಲ್ಲದಂತೆ ಮಾಡಿ ಅದನ್ನು ಸಂರಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ ಎಂದು ಘೋಷಿಸಲಾ ಗುತ್ತಿದೆ. “ಅಂತಾರಾಷ್ಟ್ರೀಯ ಕಗ್ಗತ್ತಲ್ಲಿನ ಆಕಾಶ ಸಂಘ ಟನೆ'(International Dark Sky Association–IDSA) ಪ್ರಕಾರ ಕೃತಕ ಬೆಳಕಿಲ್ಲದ, ನಕ್ಷತ್ರಗಳು ಹೊಳೆ ಯುವ, ವಿಶಾಲ ಆಕಾಶದ ವೀಕ್ಷಣೆಗೆ ಸಾಧ್ಯವಾ ಗುವ, ರಾತ್ರಿಯ ಶುಭ್ರ ವಾತಾವರಣವನ್ನು ಅನು ಭವಿಸಲು ಸಾಧ್ಯ ಮಾಡಿ ಕೊಡಬಲ್ಲ ಸ್ಥಳವೇ ಸಂರ ಕ್ಷಿತ ಕಗ್ಗತ್ತಲಿನ ಆಕಾಶ ಪ್ರದೇಶ (Dark Sky Reserve-DSR). ಭಾರತದಲ್ಲಿ ಲಡಾಖ್‌ನ ಹಾನ್ಲà ಯಲ್ಲಿ ಮೊದಲ ಬಾರಿಗೆ ಇಂಥ ಪ್ರದೇಶವನ್ನು ರೂಪಿಸಲಾಗುತ್ತಿದೆ.

ಹಿಂದೆಲ್ಲ ರಾತ್ರಿ ಹೊತ್ತು ಮನೆಯಂಗಳದಲ್ಲಿ ಕುಳಿತುಕೊಂಡರೆ ನಕ್ಷತ್ರ ವೀಕ್ಷಣೆ ಸಾಧ್ಯವಾಗುತ್ತಿತ್ತು. ಉಲ್ಕಾಪಾತದಂತಹ ಎಷ್ಟೋ ಆಕಾಶ ವಿಸ್ಮಯಗಳನ್ನು ಬರೀ ಕಣ್ಣಿನಿಂದ ನೋಡಬಹುದಾಗಿತ್ತು. ಆಕಾಶ‌ ದಲ್ಲಿನ ಅದ್ಭುತ ಸೌಂದರ್ಯ ಗಣಿಯನ್ನು ಆಸ್ವಾದಿಸಬಹು ದಾಗಿತ್ತು.ಚಂದ್ರನ ಕ್ಷಯ-ವೃದ್ಧಿಯೂ ಗೊತ್ತಾಗುತ್ತಿತ್ತು. ಸುಮ್ಮನೆ ಆಕಾಶ ನೋಡುತ್ತಾ ಕುಳಿತರೆ ಸಾಕು, ಏನೋ ಒಂದು ನೆಮ್ಮದಿ, ಮನಃಶಾಂತಿ ದೊರಕು ತ್ತಿತ್ತು. ಆದರೆ ಈಗ ಒತ್ತೂತ್ತಾಗಿರುವ ಕಟ್ಟಡ ಗಳು, ಅಗತ್ಯಕ್ಕಿಂತ ಹೆಚ್ಚಿನ ಬೆಳಕು ಬೀರುವ ಜಾಹೀ ರಾತು ಫ‌ಲಕಗಳು, ವಾಣಿಜ್ಯ ಮಳಿ ಗೆಗಳು ಆಕಾಶ ವೀಕ್ಷಣೆಯನ್ನು ಅಸಾಧ್ಯವಾಗಿಸಿವೆ. ಕೈಗೆಟುಕದ ನಕ್ಷತ್ರಗಳು ಕಣ್ಣಿಗೂ ಕಾಣಿಸದಂತಾಗಿವೆ.
ಈ ಬೆಳಕಿನ ಮಾಲಿನ್ಯಕ್ಕೆ ಪರಿಹಾರವೆಂದರೆ ಅಗತ್ಯ ಇದ್ದಷ್ಟೇ ಕೃತಕ ದೀಪಗಳನ್ನು ಅಗತ್ಯವಿದ್ದಲ್ಲಿ ಮಾತ್ರ ಬಳಸಬೇಕು. ರಾತ್ರಿ ಆದಷ್ಟು ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ರಾತ್ರಿ ಹೊತ್ತು ಕೃತಕ ದೀಪಗಳನ್ನು ಬಳಸುವಲ್ಲಿ ನಿಯಮಾವಳಿಗಳನ್ನು ರೂಪಿಸುವುದು, ಕಡಿಮೆ ತೀವ್ರತೆಯ(intensity) ಆದರೆ ಗೋಚರತೆಯಲ್ಲಿ(visibility) ರಾಜಿ ಮಾಡಿಕೊಳ್ಳದ ಎಲ…ಇಡಿ ದೀಪಗಳನ್ನು ಬಳಸುವುದು ಮುಂತಾದ ಕ್ರಮಗಳಿಂದ ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ.

-ಶಾಂತಲಾ ಎನ್‌. ಹೆಗ್ಡೆ, ಸಾಲಿಗ್ರಾಮ

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.