ವಿದ್ಯಾರ್ಥಿ ಜೀವನದ ಹವ್ಯಾಸ

ನಮ್ಮ ಉದಯವಾಣಿ ನಮ್ಮ ಹೃದಯವಾಣಿ: ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ

Team Udayavani, Jan 19, 2020, 6:30 AM IST

an-36

ಸುಮಾರು ನಲವತ್ತು ವರುಷಗಳ ಹಿಂದೆ ನಾನು ಐದನೇ ತರಗತಿಯಲ್ಲಿದ್ದಾಗ ವಿಶ್ವನಾಥ ಮಾಸ್ತರರು ಒಂದು ಮುಖ್ಯವಾದ ವಾರ್ತೆಯನ್ನು ಉದಯ ವಾಣಿಯಲ್ಲಿ ತರಗತಿಯಲ್ಲಿ ಓದಿ, ಆ ಪತ್ರಿಕೆಯನ್ನು ಮನೆಗೆ ತೆಗೆದು ಕೊಂಡು ಹೋಗಿ ಮನೆಯಲ್ಲಿ ಓದುವಂತೆ ಹೇಳಿ ದರು. ಅದನ್ನು ಮನೆಯಲ್ಲಿ ಒಂದೂ ಅಕ್ಷರವನ್ನು ಬಿಡದೇ ಓದಿದ್ದೆ.

ಅನಂತರ ಆರನೇ ತರಗತಿಯಲ್ಲಿ ರಮಾನಂದ ಮಾಸ್ತರರು ನನ್ನನ್ನು ವಾರ್ತಾ ಮಂತ್ರಿಯನ್ನಾಗಿ ಆರಿಸಿದರು. ಬೆಳಗ್ಗೆ ಅರ್ಧ ಗಂಟೆ ಶಾಲೆಗೆ ಮುಂಚಿತವಾಗಿ ಬಂದು ಹಿಂದಿನ ದಿನ ಉದಯವಾಣಿಯಲ್ಲಿ ಬಂದಂತಹ ಪ್ರಮುಖ ವಾರ್ತೆಯನ್ನು ಶಾಲಾ ಕರಿಹಲಗೆಯ ಮೇಲೆ ಬರೆಯಬೇಕು. ಅನಂತರ ಹತ್ತು ನಿಮಿಷ ಆ ದಿನದ ಪ್ರಮುಖ ವಾರ್ತೆ ಯನ್ನು ತರಗತಿಯಲ್ಲಿ ಮಕ್ಕಳಿಗೆ ಓದಿ ಹೇಳಬೇಕು. ಆಗ ಆರಂಭವಾದ ಉದಯವಾಣಿ ಓದುವ ಹವ್ಯಾಸ ಇಂದು ದಿನಚರಿಯಾಗಿದೆ.

ಉದಯವಾಣಿಯ ಮುದ್ರಣದ ಅಚ್ಚುಕಟ್ಟಾದ ವಿನ್ಯಾಸ, ಪ್ರತೀ ದಿನ ಒಂದೇ ಸಮನಾದ ವರ್ಗೀಕೃತ ವಿಚಾರಗಳು ನಿಜವಾ ಗಿಯೂ ಮನಸ್ಸಿಗೆ ಆನಂದವನ್ನು ಕೊಡುತ್ತಿತ್ತು. ಅದರ ಅಂದವಾದ ಮುದ್ರಣ ಮತ್ತು ವಿನ್ಯಾಸಕ್ಕೆ ಅನೇಕ ಬಾರಿ ಪ್ರಶಸ್ತಿಗಳು ಬಂದಿರುವುದು ಈಗಲೂ ನೆನೆಪಿದೆ. ದಶಕಗಳ ಹಿಂದೆಯೂ ಸಹ ವಿದೇಶಗಳಲ್ಲಿ ಸಿಗುತ್ತಿದ್ದ ಭಾರ ತದ ವಾರ್ತಾ ಪತ್ರಿಕೆಗಳಲ್ಲಿ ಉದಯವಾಣಿಯೂ ಒಂದಾಗಿತ್ತು.

ಸುಮಾರು ಎರಡು ದಶಕಗಳ ಹಿಂದೆ ವಿದೇಶಕ್ಕೆ ಬಂದ ಆರಂಭದಲ್ಲಿ ಉದಯವಾಣಿ ಎಲ್ಲಿ ಸಿಗುತ್ತದೆ ಎಂಬುದರ ಅರಿವಿಲ್ಲದೆ ಮುಂಜಾನೆ ಚಡಪಡಿಸಿದ್ದೂ ಇದೆ. ಆ ಅನಂತರ ಅದರ ಇರುವಿಕೆಯನ್ನು ಪತ್ತೆ ಮಾಡಿ ಮುಂಜಾನೆ ಎದ್ದು ಸುಮಾರು 30 ಕಿ.ಮೀ. ದೂರದ ಇನ್ನೊಂದು ಪಟ್ಟಣಕ್ಕೆ ಕಾರಿನಲ್ಲಿ ಹೋಗಿ ಹಿಂದಿನ ದಿನದ ಪತ್ರಿಕೆಯನ್ನು ಕೊಂಡು ತರುತ್ತಿದ್ದ ದಿನಗಳೂ ಇದ್ದವು. ಅದನ್ನು ತಂದು ಅದರ ಮೇಲೆ ಕಣ್ಣಾಡಿಸಿದ ಮೇಲೇನೆ ಕೆಲಸಕ್ಕೆ ಹೋಗುವ ಪರಿ ಪಾಠವಿತ್ತು.

ಆದರೆ ಈಗ ಇಂಟರ್ನೆಟ್‌ ಮತ್ತು ಮೊಬೈಲ್‌ ಫೋನುಗಳಲ್ಲಿ ಉದಯವಾಣಿಯು ಸಿಗುತ್ತಿರುವುದರಿಂದ ಕೆಲಸದ ನಡುವೆಯೇ ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೇನೆ. ಪ್ರತೀ ದಿನ ಉದಯ ವಾಣಿಯನ್ನು ಓದದೇ ಇದ್ದರೆ ಏನನ್ನೋ ಕಳಕೊಂಡ ಅನುಭವ. ಅನಿವಾರ್ಯ ಕಾರಣಗಳನ್ನು ಬಿಟ್ಟರೆ ಉಳಿದ ದಿನಗಳಲ್ಲಿ ಉದಯ ವಾಣಿಯನ್ನು ಓದದನೆ ಮಲಗಿಕೊಂಡ ದಿನಗಳು ನನ್ನ ಜೀವನದಲ್ಲಿ ಕಡಿಮೆ. ಇದು ನನ್ನ ಮತ್ತು ಉದಯವಾಣಿಯ ಅವಿನಾಭಾವ ಸಂಬಂಧ.

ಅರ್ಧ ಶತಮಾನವನ್ನು ಕಂಡ ಈ ಪತ್ರಿಕೆಯು ಇನ್ನೂ ನೂರ್ಕಾಲ ಬಾಳಲಿ, ನಮಗೆಲ್ಲರಿಗೂ ಪ್ರತೀ ದಿನ ಮುಂಜಾನೆ ಸಿಹಿ ಸುದ್ದಿಗಳನ್ನು ಇನ್ನೂ ಬಹಳ ವರ್ಷಗಳ ಕಾಲ ಕೊಡುತ್ತಾ ಇರಲಿ ಎಂಬುದಾಗಿ ನನ್ನ ಆಶಯ.

ಡಾ| ಮುಕುಂದ್‌ ಆರ್‌ ನಾಯಕ್‌, ಮಸ್ಕತ್‌

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jalachara-4

Winter Season: ಚಳಿಗಾಲದಲ್ಲಿ ಕಡಲಿಗೆ ಇಳಿಯುವ ಮುನ್ನ…

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ

ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.