Acharya Vidyasagar; ಜ್ಞಾನ, ಕರುಣೆ ಮತ್ತು ಸೇವೆಯ “ತ್ರಿವೇಣಿ’
ಈಚೆಗೆ ಜಿನೈಕ್ಯರಾದ ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್‌ಗೆ ಪ್ರಧಾನಿ ಮೋದಿ ನುಡಿನಮನ
Team Udayavani, Feb 21, 2024, 6:00 AM IST
ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್ ಅವರು ಜಿನೈಕ್ಯರಾಗುವ ಮೂಲಕ ಸಮಾಧಿ ಸ್ಥಿತಿಯನ್ನು ತಲುಪಿದರು. ಅವರ ಅಗಲಿಕೆಯು ನಮ್ಮೆಲ್ಲರನ್ನೂ ದುಃಖತಪ್ತರನ್ನಾಗಿಸಿದೆ. ಅವರ ಜೀವಿತಕಾಲವು ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತ ಪರ್ವವಾಗಿತ್ತು. ಆಳವಾದ ಜ್ಞಾನ, ಅಮಿತ ಕರುಣೆಯ ಜತೆಗೆ ಮನುಕುಲದ ಏಳಿಗೆ ಕುರಿತಾಗಿ ಅಚಲ ಬದ್ಧತೆಗೆ ಅವರು ಸಾಕಾರಮೂರ್ತಿಯಾಗಿದ್ದರು. ಹಲವಾರು ಸಂದರ್ಭಗಳಲ್ಲಿ ಅವರ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ, ಗೌರವ ನನ್ನದಾಗಿದೆ. ನಾನೂ ಸೇರಿದಂತೆ ಅಸಂಖ್ಯ ಜೀವಗಳ ಹಾದಿಯನ್ನು ಬೆಳಗಿದ ದಾರಿದೀಪವನ್ನು ಕಳೆದು ಕೊಂಡ ಆಳವಾದ ಭಾವವು ನನ್ನನ್ನು ಕಾಡುತ್ತಿದೆ.
ಪೂಜ್ಯ ಆಚಾರ್ಯ ಅವರನ್ನು ಜ್ಞಾನ, ಕರುಣೆ ಮತ್ತು ಸೇವೆಯ “ತ್ರಿವೇಣಿ’ ಎಂದು ಸದಾ ಸ್ಮರಿಸಲಾಗುತ್ತದೆ. ಅವರೊಬ್ಬ ನೈಜ ತಪಸ್ವಿಯಾಗಿದ್ದರು, ಅವರ ಜೀವನವು ಭಗವಾನ್ ಮಹಾವೀರರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ. ಅವರ ಜೀವನವು ಜೈನ ಧರ್ಮದ ಮೂಲ ತತ್ತಗಳಿಗೆ ಉದಾಹರಣೆಯಾಗಿದೆ. ಜೈನ ಧರ್ಮದ ಆದಶìಗಳನ್ನು ತಮ್ಮದೇ ಆದ ಕೃತಿಗಳು ಮತ್ತು ಬೋಧನೆಗಳ ಮೂಲಕ ಅವರು ಸಾಕಾರಗೊಳಿಸಿದರು. ಸಕಲ ಜೀವಿಗಳ ಬಗ್ಗೆ ಅವರ ಕಾಳಜಿಯು ಜೈನ ಧರ್ಮದ ಜೀವನದ ಬಗ್ಗೆ ಅವರು ಹೊಂದಿದ್ದ ಆಳವಾದ ಗೌರವವನ್ನು ಪ್ರತಿಬಿಂಬಿ ಸುತ್ತದೆ. ಚಿಂತನೆ, ಮಾತು ಮತ್ತು ಕೃತಿಯಲ್ಲಿ ಪ್ರಾಮಾಣಿಕತೆ ಇರ ಬೇಕೆಂಬ ಜೈನ ಧರ್ಮದ ಮಹತ್ವವನ್ನು ಪ್ರತಿಬಿಂಬಿಸುವ ಮೂಲಕ ಅವರು ಸತ್ಯದ ಜೀವನವನ್ನು ನಡೆಸಿದರು. ಅವರ ಜೀವನಶೈಲಿ ತುಂಬಾ ಸರಳವಾಗಿತ್ತು. ಜೈನ ಸಮುದಾಯದಲ್ಲಿ ಅವರು ಬಹಳ ಎತ್ತರಕ್ಕೆ ಬೆಳೆದು ನಿಂತರು. ಆದರೆ ಅವರ ಪ್ರಭಾವವು ಕೇವಲ ಒಂದು ಸಮುದಾಯಕ್ಕೆ ಸೀಮಿತ ವಾಗಿರಲಿಲ್ಲ. ಆಚಾರ್ಯರು ತಮ್ಮ ಜೀವನವಿಡೀ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ, ವಿಶೇಷವಾಗಿ ಯುವಕರಲ್ಲಿ ಆಧ್ಯಾತ್ಮಿ ಕತೆಯ ಸು#ರಣೆಗಾಗಿ ದಣಿವರಿಯದೆ ಕೆಲಸ ಮಾಡಿದರು.
ಶಿಕ್ಷಣವು ಆಚಾರ್ಯರ ಹೃದಯಕ್ಕೆ ಬಹಳ ಆಪ್ತವಾದ ಕ್ಷೇತ್ರವಾಗಿತ್ತು. ವಿದ್ಯಾಧರನಿಂದ (ಅವರ ಬಾಲ್ಯದ ಹೆಸರು) ವಿದ್ಯಾಸಾಗರ ಆಗುವವರೆಗಿನ ಅವರ ಪ್ರಯಾಣದುದ್ದಕ್ಕೂ ಜ್ಞಾನವನ್ನು ಗಳಿಸುವ ಮತ್ತು ಜ್ಞಾನವನ್ನು ನೀಡುವ ಆಳವಾದ ಬದ್ಧತೆಯನ್ನು ಅವರು ಮುಂದುವರಿಸಿದರು. ಶಿಕ್ಷಣವು ನ್ಯಾಯ ಯುತ ಮತ್ತು ಪ್ರಬುದ್ಧ ಸಮಾಜದ ಮೂಲಾಧಾರವಾಗಿದೆ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು.
ಇದೇ ವೇಳೆ, ನಮ್ಮ ಯುವಕರು ಪಡೆಯುವ ಶಿಕ್ಷಣವು ನಮ್ಮ ಸಾಂಸ್ಕೃತಿಕ ತಣ್ತೀಗಳಲ್ಲಿ ಬೇರೂರಿರಬೇಕು ಎಂದು ಸಂತ ಶಿರೋ ಮಣಿ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಜೀ ಅವರು ಬಯಸಿದ್ದರು. ನಾವು ನಮ್ಮ ಹಿಂದಿನ ಕಲಿಕೆಗಳಿಂದ ದೂರ ಉಳಿದಿದ್ದರಿಂದಲೇ ನೀರಿನ ಕೊರತೆಯಂತಹ ಪ್ರಮುಖ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಮಗೆ ಸಾಧವಾಗಲಿಲ್ಲ ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಸಮಗ್ರ ಶಿಕ್ಷಣವೆಂಬುದು ಕೌಶಲ ಮತ್ತು ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂದು ಅವರು ನಂಬಿದ್ದರು. ಭಾರತದ ಭಾಷಾ ವೈವಿಧ್ಯತೆಯ ಬಗ್ಗೆ ಅವರು ಅಪಾರ ಹೆಮ್ಮೆ ಹೊಂದಿದ್ದರು ಮತ್ತು ಭಾರತೀಯ ಭಾಷೆಗಳನ್ನು ಕಲಿಯಲು ಯುವಕರನ್ನು ಪ್ರೋತ್ಸಾಹಿಸಿದರು.
ಪೂಜ್ಯ ಆಚಾರ್ಯರು ಸ್ವತಃ ಸಂಸ್ಕೃತ ಪ್ರಾಕೃತ ಮತ್ತು ಹಿಂದಿ ಭಾಷೆಗಳಲ್ಲಿ ವ್ಯಾಪಕವಾಗಿ ಬರೆದಿದ್ದಾರೆ. ಸಂತರಾಗಿ ಅವರು ಎಷ್ಟು ಔನತ್ಯಕ್ಕೆ ತಲುಪಿದ್ದರು ಮತ್ತು ಆದರೂ ಅವರು ಎಷ್ಟು ವಿನಯವಂತರಾಗಿದ್ದರು ಎಂಬುದನ್ನು ಅವರ ಅಪ್ರತಿಮ ಕೃತಿಯಾದ “ಮೂಕ್ಮತಿ’ಯಲ್ಲಿ ಸ್ಪಷ್ಟವಾಗಿ ಕಾಣಬಹುದು. ತಮ್ಮ ಕೃತಿಗಳ ಮೂಲಕ ಅವರು ದೀನದಲಿತರಿಗೆ ಧ್ವನಿ ನೀಡಿದರು.
ಆರೋಗ್ಯ ಕ್ಷೇತ್ರದಲ್ಲೂ ಪೂಜ್ಯ ಆಚಾರ್ಯ ಅವರ ಕೊಡುಗೆ ಗಳು ಪರಿವರ್ತನಾತ್ಮಕವಾಗಿವೆ. ಅವರು ಹಲವು ಪ್ರಯತ್ನಗಳಲ್ಲಿ, ಅದರಲ್ಲೂ ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹಲವಾರು ಪ್ರಯತ್ನಗಳಲ್ಲಿ ತೊಡಗಿದ್ದರು. ಆರೋಗ್ಯ ರಕ್ಷಣೆಗೆ ವಿಚಾರವಾಗಿ ಸಮಗ್ರ ಕಾರ್ಯವಿಧಾನವನ್ನು ಅನುಸರಿಸುತ್ತಿದ್ದರು. ಅದು ದೈಹಿಕ ಯೋಗಕ್ಷೇಮವನ್ನು ಆಧ್ಯಾತ್ಮಿಕ ಸ್ವಾಸ್ಥ್ಯದೊಂದಿಗೆ ಸಂಯೋ ಜಿಸಿ, ಆ ಮೂಲಕ ಒಟ್ಟಾರೆ ವ್ಯಕ್ತಿಯ ಅಗತ್ಯ ಪೂರೈಸುವಂತಿತ್ತು.
ರಾಷ್ಟ್ರ ನಿರ್ಮಾಣದ ಬಗ್ಗೆ ಸಂತ ಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ್ ಮಹಾರಾಜ್ ಅವರ ಬದ್ಧತೆಯ ಬಗ್ಗೆ ವ್ಯಾಪಕ ಅಧ್ಯಯನ ಮಾಡುವಂತೆ ನಾನು ಮುಂಬರುವ ಪೀಳಿಗೆಯನ್ನು ಒತ್ತಾಯಿಸುತ್ತೇನೆ. ಯಾವುದೇ ಪಕ್ಷಪಾತದ ಪರಿಗಣನೆಗಳನ್ನು ಮೀರಿ ರಾಷ್ಟ್ರೀಯ ಹಿತಾಸಕ್ತಿಯತ್ತ ಗಮನ ಹರಿಸುವಂತೆ ಅವರು ಸದಾ ಜನರನ್ನು ಒತ್ತಾಯಿಸುತ್ತಿದ್ದರು. ಅವರು ಮತದಾನದ ಬಲವಾದ ಪ್ರತಿಪಾದಕರಲ್ಲಿ ಒಬ್ಬರಾಗಿದ್ದರು. ಏಕೆಂದರೆ ಅವರು ಅದನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಭಾಗವಹಿಸುವಿಕೆಯ ಅಭಿವ್ಯಕ್ತಿಯಾಗಿ ನೋಡಿದರು. ಅವರು ಆರೋಗ್ಯಕರ ಮತ್ತು ಶುದ್ಧ ರಾಜಕೀಯದ ಪ್ರತಿಪಾದಕರಾಗಿ ದ್ದರು. ನೀತಿ ನಿರೂಪಣೆಯು ಜನರ ಕಲ್ಯಾಣಕ್ಕೆ ಸಂಬಂಧಿಸಿರಬೇಕು, ಸ್ವಹಿತಾಸಕ್ತಿಗೆ ಅಲ್ಲ (“ಲೋಕನೀತಿ’ ಎಂಬುದು “ಲೋಕ್ ಸಂಗ್ರಾಹ್’ ಆಗಿರಬೇಕೇ ಹೊರತು “ಲೋಭ ಸಂಗ್ರಹ’ ವಲ್ಲ) ಎಂಬ ತತ್ತದಲ್ಲಿ ನಂಬಿಕೆಯಿಟ್ಟಿದ್ದರು.
ಜನರು ತಮ್ಮ ವಿಚಾರದಲ್ಲಿ, ತಮ್ಮ ಕುಟುಂಬದ ವಿಚಾರದಲ್ಲಿ, ಸಮಾಜ ಮತ್ತು ದೇಶದ ವಿಚಾರದಲ್ಲಿ ತಾವು ನಿರ್ವಹಿಸಬೇಕಾ ಗಿರುವ ಕರ್ತವ್ಯಗಳ ಬಗ್ಗೆ ಹೊಂದಿರುವ ಬದ್ಧತೆಯ ಅಡಿಪಾ ಯದ ಮೇಲೆ ಬಲವಾದ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಪೂಜ್ಯ ಆಚಾರ್ಯರು ನಂಬಿದ್ದರು. ಪ್ರಾಮಾಣಿಕತೆ, ಸಮಗ್ರತೆ ಮತ್ತು ಸ್ವಾವಲಂಬನೆಯಂತಹ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಅವರು ಜನರನ್ನು ಪ್ರೋತ್ಸಾಹಿಸಿದರು. ಇದು ನ್ಯಾಯಯುತ, ಕರುಣಾಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜದ ಸೃಷ್ಟಿಗೆ ಅತ್ಯಗತ್ಯ ಎಂದು ಅವರು ಅರಿತಿದ್ದರು. ನಾವು “ವಿಕಸಿತ ಭಾರತ’ ವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಈ ಹೊತ್ತಿನಲ್ಲಿ ಕರ್ತವ್ಯಗಳಿಗೆ ಒತ್ತು ನೀಡುವುದು ಬಹಳ ಮುಖ್ಯವಾಗಿದೆ.
ಪ್ರಪಂಚದಾದ್ಯಂತ ಪರಿಸರ ನಾಶವು ವ್ಯಾಪಕವಾಗಿರುವ ಈ ಕಾಲಘಟ್ಟದಲ್ಲಿ, ಪೂಜ್ಯ ಆಚಾರ್ಯ ಜೀ ಅವರು ಪ್ರಕೃತಿಗೆ ಹಾನಿಯನ್ನು ಕಡಿಮೆ ಮಾಡುವ ಜೀವನ ವಿಧಾನಕ್ಕೆ ಕರೆ ನೀಡಿದರು. ಅಂತೆಯೇ, ನಮ್ಮ ಆರ್ಥಿಕತೆಯಲ್ಲಿ ಕೃಷಿ ವಹಿಸ ಬಹುದಾದ ಮಹತ್ವದ ಪಾತ್ರವನ್ನು ಅವರು ಮನಗಂಡಿದ್ದರು. ಕೃಷಿಯನ್ನು ಆಧುನಿಕ ಮತ್ತು ಸುಸ್ಥಿರವಾಗಿಸಲು ಒತ್ತು ನೀಡಿ ದರು. ಜೈಲಿನಲ್ಲಿರುವ ಕೈದಿಗಳನ್ನು ಸುಧಾರಿಸುವ ನಿಟ್ಟಿನಲ್ಲೂ ಅವರ ಕೆಲಸವು ಗಮನಾರ್ಹವಾದುದು.
ನಮ್ಮ ನೆಲದ ಸೌಂದರ್ಯವೇ ಅಂಥದ್ದು. ಇತರರಿಗೆ ದಾರಿ ದೀಪವಾಗಿ ಬೆಳಕು ತೋರಿದ ಮತ್ತು ನಮ್ಮ ಸಮಾಜವನ್ನು ಉದ್ಧಾರ ಮಾಡಿದ ಶ್ರೇಷ್ಠ ವ್ಯಕ್ತಿಗಳಿಗೆ ಸಾವಿರಾರು ವರ್ಷಗಳಿಂದ ನಮ್ಮ ಮಣ್ಣು ಜನ್ಮ ನೀಡುತ್ತಾ ಬಂದಿದೆ. ಸಂತರು ಮತ್ತು ಸಮಾಜ ಸುಧಾರಕರ ಈ ಶ್ರೇಷ್ಠ ಪರಂಪರೆಯಲ್ಲಿ ಪೂಜ್ಯ ಆಚಾರ್ಯ ಜೀ ಅವರು ಪರಮೋತ್ಛ ವ್ಯಕ್ತಿಯಾಗಿ ನಿಂತಿದ್ದಾರೆ. ಅವರು ಏನೇ ಮಾಡಿದರೂ, ಅವರು ವರ್ತಮಾನಕ್ಕಾಗಿ ಮಾತ್ರ ವಲ್ಲ, ಭವಿಷ್ಯಕ್ಕಾಗಿಯೂ ಮಾಡಿದರು. ಕಳೆದ ವರ್ಷ ನವೆಂಬರ್ ನಲ್ಲಿ ನನಗೆ ಛತ್ತೀಸ್‌ಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಈ ಭೇಟಿ ಪೂಜ್ಯ ಆಚಾರ್ಯಜೀ ಅವರೊಂದಿಗಿನ ನನ್ನ ಕೊನೆಯ ಭೇಟಿ ಯಾಗಲಿದೆ ಎಂದು ನನಗೆ ಆಗ ತಿಳಿದಿರಲಿಲ್ಲ. ಆ ಕ್ಷಣಗಳು ತುಂಬಾ ವಿಶೇಷವಾಗಿದ್ದವು. ನಮ್ಮ ದೇಶವು ಸಾಗುತ್ತಿರುವ ದಿಕ್ಕು ಮತ್ತು ವಿಶ್ವ ವೇದಿಕೆಯಲ್ಲಿ ಭಾರತ ಪಡೆಯುತ್ತಿರುವ ಗೌರವದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು.
ಸಂತ ಶಿರೋಮಣಿ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್ ಜೀ ಅವರನ್ನು ಬಲ್ಲ ಮತ್ತು ಅವರ ಬೋಧನೆಗಳು ಹಾಗೂ ಅವರ ಜೀವನದ ಸ್ಪಶìಕ್ಕೆ ಒಳಗಾದ ಎಲ್ಲರಲ್ಲೂ, ಆಚಾರ್ಯ ಜೀ ಅವರ ಅಗಲಿಕೆಯಿಂದ ಉಂಟಾಗಿರುವ ಶೂನ್ಯತೆಯು ಆಳವಾಗಿ ಅನುಭವಕ್ಕೆ ಬರುತ್ತದೆ. ಆದಾಗ್ಯೂ, ಅವರು ತಮ್ಮಿಂದ ಸ್ಫೂರ್ತಿ ಪಡೆದವರ ಹೃದಯ ಮತ್ತು ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರ ಸ್ಮರಣೆಯನ್ನು ಗೌರವಿಸುವ ಮೂಲಕ, ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಸಾಕಾರಗೊಳಿಸಲು ನಾವು ಬದ್ಧರಾಗಿದ್ದೇವೆ. ಆ ಮೂಲಕ, ನಾವು ಒಬ್ಬ ಮಹಾನ್ ಜೀವಿಯ ಆತ್ಮಕ್ಕೆ ಗೌರವ ಸಲ್ಲಿಸುವುದರ ಜತೆಗೆ, ನಮ್ಮ ದೇಶ ಮತ್ತು ಜನರಿಗಾಗಿ ಅವರ ಧ್ಯೇಯವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ.
-ನರೇಂದ್ರ ಮೋದಿ
ಪ್ರಧಾನ ಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.