Administration ಅತಿರೇಕಗಳು-ಸ್ಥಳೀಯ ಪ್ರತಿಕ್ರಿಯೆ-ಆಡಳಿತದ ಸ್ಪಂದನೆ


Team Udayavani, Oct 25, 2023, 5:51 AM IST

1-eeqwewqe

ನಾವು ಇಂದಿನ ರಾಜ ಕಾರಣವನ್ನು ಗಮನಿಸಿದರೆ ಆಡಳಿತ ನಡೆಸುವ ವೇಳೆ ಅನೇಕ ದೌರ್ಜನ್ಯ ಗಳು, ಆಡಳಿತಾತ್ಮಕವಾದ ತಪ್ಪುಗಳು ಗತಿಸುತ್ತವೆ. ಆದರೆ ಇಂದಿನ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರಕಾರ, ಪಕ್ಷ ಹಾಗೂ ಯಾವುದೇ ರಾಜಕೀಯ ವ್ಯಕ್ತಿಯೂ ತಾವು ಮಾಡಿದ ತಪ್ಪುಗಳಿಗೆ ವಿಷಾದ ವ್ಯಕ್ತಪಡಿಸುವುದಿರಲಿ, ಅದನ್ನೇ ಸರಿ ಎಂದು ಸಮರ್ಥಿಸುವುದನ್ನು ಕಾಣುತ್ತೇವೆ. ಅದರೊಂದಿಗೆ ಹಿಂದೆ ನೀವು ಮಾಡಿದ್ದೀರಿ, ನಾವು ಮಾಡಿದರೆ ತಪ್ಪೇನು ಎಂದು ಪ್ರಶ್ನಿಸುವುದನ್ನು ಕಾಣುತ್ತೇವೆ. ಇದರಿಂದ ಮುಖ್ಯವಾಗಿ ತಿಳಿಯುವುದು ನಾವು ಇತಿಹಾಸದಿಂದ ಪಾಠ ಕಲಿತಿಲ್ಲ ಎಂಬುದು. ಇದರೊಂದಿಗೆ ಸಮಸ್ಯೆಗಳಿಗೆ ಸ್ಥಳೀಯಾಡಳಿತ ಸ್ಪಂದಿಸುವ ರೀತಿಯೂ ವಿಭಿನ್ನವಾಗಿದೆ.

ನಾವು ನಮ್ಮ ಕರಾವಳಿ ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ನಮಗೆ ಹಿಂದಿನ ವಿಜಯನಗರ ಆಳ್ವಿಕೆಯ ಕಾಲದ ಅನೇಕ ಘಟನೆಗಳು ಎದ್ದು ಕಾಣು ತ್ತವೆ. ಆಡಳಿತದಲ್ಲಿ ಅತಿರೇಕಗಳು ಸಂಭವಿ ಸಿದಾಗ ಸರಕಾರ ಯಾವ ರೀತಿ ಪ್ರತಿಕ್ರಿ ಯಿಸಿದೆ ಎಂಬುದು ಅವುಗಳಿಂದ ತಿಳಿ ಯುತ್ತದೆ. ವಿಜಯನಗರ ಆಡಳಿತ ಕಾಲ ದಲ್ಲಿ ಕರಾವಳಿ ಪ್ರದೇಶ ಎರಡು ರಾಜ್ಯ ಗಳಾಗಿ (ಬಾರಕೂರು, ಮಂಗಳೂರು) ವಿಂಗಡಿಸಲ್ಪಟ್ಟಿತ್ತು. ರಾಜ್ಯಗಳಲ್ಲಿ ರಾಜ್ಯ ಪಾಲರು ಮುಖ್ಯಸ್ಥರಾಗಿದ್ದರು. ಅವರು ತಮ್ಮ ಆಡಳಿತ ಕಾಲದಲ್ಲಿ ಕೇಂದ್ರ ಸರ ಕಾರದ ಹಿತವನ್ನು ನಿರ್ಲಕ್ಷಿ ಸುವಂತಿರಲಿಲ್ಲ. ಅದರೊಂದಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರವನ್ನು ಉಲ್ಲಂ ಸುವಂತಿರಲಿಲ್ಲ. ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಯಾಗದಂತೆ ನಡೆದುಕೊಳ್ಳಬೇಕಾಗಿತ್ತು. ಬಹಳ ಜಾಗರೂಕರಾಗಿರಬೇಕಾಗಿತ್ತು. ರಾಜ್ಯಪಾಲರುಗಳ ದಬ್ಟಾಳಿಕೆಗೆ ಜನರು ಒಳಗಾದಾಗ ರಾಜರು ಮಧ್ಯ ಪ್ರವೇಶಿಸಿ ನ್ಯಾಯದಾನ ಮಾಡಿದ ಹಲವಾರು ನಿದರ್ಶನಗಳು ಕರಾವಳಿಯ ಇತಿಹಾ ಸದಲ್ಲಿ ನಮಗೆ ದೊರೆಯುತ್ತವೆ. ತಮಗೆ ಅನ್ಯಾಯವಾದಾಗ ಜನ ಪ್ರತಿಭಟಿಸು ತ್ತಿದ್ದರು. ನ್ಯಾಯ ಸಿಗುತ್ತಿತ್ತು.

ಕ್ರಿ.ಶ. 1404 ರಲ್ಲಿ ಬಾರಕೂರು ರಾಜ್ಯದ ರಾಜ್ಯಪಾಲನಾಗಿದ್ದ ಮಹಾಬಲ ದೇವ ಒಡೆಯ ನಖರ ಹಂಜಮಾನ ವ್ಯಾಪಾರಿ ಸಂಘಗಳ ವಿಶೇಷಾಧಿಕಾರವನ್ನು ರದ್ದುಪಡಿಸಿದ್ದನ್ನು ವಿರೋಧಿಸಿ ಸಾಮ್ರಾಟ ಇಮ್ಮಡಿ ಬುಕ್ಕನಿಗೆ ಸ್ಥಾನಪತಿ ದೂರು ನೀಡಿದಾಗ ರಾಜ ಅವನ ವಿರುದ್ಧ ತನಿ ಖೆಗೆ ಆಜ್ಞಾಪಿಸಿದ. ಗೋವೆಯ ಬಾಚಣ್ಣ ಒಡೆಯ ತನಿಖೆ ನಡೆಸಿ ಮಹಾಬಲದೇವ ಒಡೆಯ ತಪ್ಪಿತಸ್ಥನೆಂದು ತೀರ್ಮಾನವಾ ದಾಗ ತೊಂದರೆಗೊಳಗಾದವರಿಗೆ ಪರಿ ಹಾರ ನೀಡಲಾಯಿತು. ಆಗ ಜನ ಅಸಹಾ ಯಕರಾಗುವ ಅಗತ್ಯವಿರಲಿಲ್ಲ.

ಕ್ರಿ.ಶ. 1418 ರಲ್ಲಿ ಮಂಗಳೂರಿನ ರಾಜ್ಯಪಾಲರಾಗಿದ್ದ ತಿಮ್ಮಣ್ಣ ಒಡೆಯ ಸೈನ್ಯವನ್ನು ಹಂಜಮಾನರ ಮೇಲೆ ಹರಿಯ ಬಿಟ್ಟು ಅವರ ಪಳ್ಳಿಗಳನ್ನು ಸುಟ್ಟು ಹಾಕಿದ. ಈ ದಬ್ಟಾಳಿಕೆಯನ್ನು ಖಂಡಿಸಿ ಮುಸ್ಲಿಮರು ಊರು ಬಿಟ್ಟು ಹೋದ ವಿಚಾರ ರಾಜನಿಗೆ ತಿಳಿಯಿತು. ಅವನು ಬೈಚ ದಂಡ ನಾಯಕನಿಗೆ ವಿಷಯ ಪರಿಶೀಲನೆಗೆ ಆಜ್ಞೆ ಮಾಡಿದ. ರಾಜ್ಯಪಾಲ ತಪ್ಪಿತಸ್ಥನೆಂದು ತಿಳಿದಾಗ ಅವನೇ ತಪ್ಪನ್ನು ಸರಿಪಡಿಸಿ ಪರಿಹಾರ ನೀಡುವಂತೆ ಸೂಚಿಸಲಾಯಿತು. ತಮ್ಮ ಸರಕಾರದ ರಾಜ್ಯಪಾಲ ಎಂಬ ಕಾರಣಕ್ಕೆ ಅವನನ್ನು ರಕ್ಷಿಸುವ ಕೆಲಸವನ್ನು ರಾಜ ಮಾಡಲಿಲ್ಲ ಎಂಬುದು ಆಡಳಿತದ ಪಾರದರ್ಶಕತೆಗೆ ಉತ್ತಮ ಉದಾಹರಣೆ.

ಕ್ರಿ.ಶ. 1436ರಲ್ಲಿ ಬಾರಕೂರು ರಾಜ್ಯದ ರಾಜ್ಯಪಾಲ ಅಣ್ಣಪ್ಪ ಒಡೆಯ ಶಿವಳ್ಳಿಯ ಮೇಲೆ ದಾಳಿ ಮಾಡಿದಾಗ ತೊಂದರೆ ಗೊಳಗಾದವರಿಗೆ ಪರಿಹಾರ ನೀಡಿದ ಉಲ್ಲೇಖವಿದೆ. ಇನ್ನೊಂದು ಉದಾಹರಣೆ ಬಾರಕೂರಿನ ರಾಜ್ಯಪಾಲನಾಗಿದ್ದ ಚಾರದ ತಿಮ್ಮಣ್ಣ ಒಡೆಯ ಚಾಂತಾರಿನಲ್ಲಿ ಈಶ್ವರ ಉಂಗುರಪಳ್ಳಿಯ ಮನೆಯನ್ನು ಸುಟ್ಟು ತೊಂದರೆಗೊಳಪಡಿಸಿದಾಗ ಅವನು ಊರು ಬಿಟ್ಟು ಹೋದನು. ಹಾರಾಡಿ ಯಲ್ಲಿ ಇಂತಹುದೇ ದಬ್ಟಾಳಿಕೆಯನ್ನು ವೋರಂಬಳ್ಳಿ ಮನೆಯವರ ಮೇಲೂ ಮಾಡಿದ. ಅವರೂ ಜಾಗ ಬಿಟ್ಟು ಹೋ ದರು. ಅನಂತರ ರಾಜ್ಯಪಾಲನಾಗಿ ಬಂದ ರೂಪಣ್ಣ ಒಡೆಯನು ಕ್ರಿ.ಶ. 1447ರಲ್ಲಿ ಆ ಊರುಗಳಿಗೆ ಬಂದು ಗ್ರಾಮಗಳನ್ನು ಸಂತೈಸಿ ನೊಂದವರಿಗೆ ಪರಿಹಾರ ನೀಡಿದ.

ಕ್ರಿ.ಶ. 1536ರಲ್ಲಿ ರಾಜ್ಯಪಾಲ ಕೊಂಡ ಪ್ಪ ಒಡೆಯ ಉಪ್ಪೂರು ಗ್ರಾಮದ ಮೇಲೆ ಸೈನ್ಯದೊಂದಿಗೆ ದಾಳಿ ಮಾಡಿದ. ಊರಿ ನವರ ಪ್ರತಿಭಟನೆ ಹಿಂಸಾರೂಪ ತಳೆ ಯಿತು. ಕೊನೆಗೆ ಕೊಂಡಪ್ಪ ಒಡೆಯ ಪರಿ ಹಾರ ನೀಡಬೇಕಾಯಿತು. ಅವನು ತನ್ನ ಹುದ್ದೆಯನ್ನು ಕಳೆದುಕೊಳ್ಳಬೇ ಕಾಯಿತು.

ಕ್ರಿ. ಶ. 1544 ರಲ್ಲಿ ಅಚ್ಚಪ್ಪ ಒಡೆಯ ಬಾರಕೂರಿನ ರಾಜ್ಯಪಾಲನಾಗಿದ್ದ. ಅವನು ಕೋಟೆಕೇರಿಯ ಸೆಟ್ಟಿಕಾರ ಬೆಮ್ಮ ಬಾಲೆ ಸೆಟ್ಟಿಯ ಮಗಳ ಮೇಲೆ ಅತ್ಯಾ ಚಾರವೆಸಗಿದ. ಆಗ ಹತ್ತುಕೇರಿಯವರು ಪ್ರತಿಭಟಿಸಿದರು. ಆಗ ಅಚ್ಚಪ್ಪ ಒಡೆಯ ತನ್ನ ತಪ್ಪಿಗಾಗಿ ಬೆಮ್ಮ ಬಾಲೆ ಸೆಟ್ಟಿ ವಂಶ ಪಾರಂಪರ್ಯವಾಗಿ ಉಪ್ಪಿಲಾಡಿಯಲ್ಲಿ ಅರಮನೆಯ ಭೂಮಿಯಲ್ಲಿನ ಆದಾಯ ಅನುಭವಿಸಿ ಬರುವಂತೆ ಪರಿಹಾರವನ್ನು ನೀಡಿದ. ಇವು ಕೆಲವೊಂದು ಉದಾಹರ ಣೆಗಳು ಮಾತ್ರ. ಇಂತಹ ನಿದರ್ಶನಗಳು ನಮ್ಮ ಕರಾವಳಿಯ ಇತಿಹಾಸದಲ್ಲಿ ಸಾಕಷ್ಟಿವೆ.

ಅಧಿಕಾರದಲ್ಲಿದ್ದವರು ಜಾಗರೂಕತೆ ಯಿಂದ ಕಾರ್ಯನಿರ್ವಹಿಸಬೇಕು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅವರು ಅಧಿಕಾರದ ದರ್ಪದಿಂದ ಎಲ್ಲೆ ಮೀರಿ ವರ್ತಿಸಿದ್ದರು. ಅದನ್ನು ಜನ ಪ್ರತಿಭಟಿಸುತ್ತಿದ್ದರು. ಅವರ ಪ್ರತಿಭಟನೆ ವಿಫ‌ಲವಾದಾಗ ಅವರು ಹೂಡುತ್ತಿದ್ದ ಇನ್ನೊಂದು ಅಸ್ತ ಊರು ಬಿಟ್ಟು ಹೋಗುವುದು. ಆಗ ಸರಕಾರ ಕೆಟ್ಟ ಹೆಸರು ಬರಬಹುದು ಎಂಬ ಕಾರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತಿತ್ತು. ಹೀಗೆ ಜನರು ಹಲವು ಸಂದರ್ಭಗಳಲ್ಲಿ ತಮಗೆ ನ್ಯಾಯ ದೊರಕಿಸಿಕೊಂಡಿದ್ದರು.

ಆಗಿನ ರಾಜರ ಆಡಳಿತ ಕಾಲದಲ್ಲೂ ಜನ ದಬ್ಟಾಳಿಕೆಯನ್ನು ಸಹಿಸಿಕೊಳ್ಳುತ್ತಿರ ಲಿಲ್ಲ. ಸ್ಥಳೀಯ ಸಂಸ್ಥೆಗಳು ಜನರ ಬೆಂಬ ಲಕ್ಕೆ ನಿಲ್ಲುತ್ತಿದ್ದವು. ಸಂಸ್ಥೆಗಳ ಅಥವಾ ಜನರ ಪ್ರತಿನಿಧಿಗಳ ಅಧಿಕಾರವನ್ನು ಸರ ಕಾರ ಮೊಟಕುಗೊಳಿಸುವಂತಿರಲಿಲ್ಲ. ಆದರೆ ಈಗ ಜನ ಪ್ರತಿಭಟನೆ ಆರಂಭಿ ಸಿದರೆ ಅದನ್ನು ಹೇಗಾದರೂ ಮಾಡಿ ನಿಲ್ಲಿಸುವುದಕ್ಕೆ ಸರಕಾರವೇ ಪ್ರತಿತಂತ್ರ ಹೂಡುವುದನ್ನು ಕಾಣುತ್ತೇವೆ. ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶ ವೆದರೆ ಕರಾವಳಿಯ ಪ್ರದೇಶದಿಂದ ರಾಜ ಧಾನಿ ಹಂಪೆ ಅಷ್ಟು ದೂರದಲ್ಲಿದ್ದರೂ ಇಲ್ಲಿನ ಜನರ ಕಷ್ಟ ಸುಖಗಳಿಗೆ ಸರಕಾರ ತತ್‌ಕ್ಷಣ ಸ್ಪಂದಿಸುತ್ತಿತ್ತು ಎಂಬುದು. ಅದು ಯಾವುದೇ ಆಧುನಿಕ ಸಂಪರ್ಕ ಸಾಧನಗಳಿಲ್ಲದ ಕಾಲ. ಅದು ಮಾತ್ರವಲ್ಲ ಆಗಿನ ಸರಕಾರ ಜನರಿಗೆ ಬೇಕಾದ ಅನು ಕೂಲತೆಗಳನ್ನು ಅಗತ್ಯವಾಗಿ ಒದಗಿಸುತ್ತಿ ತ್ತು. ಇದಕ್ಕೆ ಉತ್ತಮ ಉದಾಹರಣೆ ಯೆಂದರೆ ಆಳುಪ ರಾಣಿ ಚಿಕ್ಕಾ ಯಿತಾಯಿ ಸುಮಾರು 650 ವರ್ಷಗಳ ಹಿಂದೆ ಬಾರಕೂರು ಬೆಣ್ಣೆಕುದ್ರು ಮಧ್ಯೆ ಹೊಳೆಗೆ ನಿರ್ಮಿಸಿದ ಮರದ ಸೇತುವೆ ಹಾಗೂ ಅದರ ನಿರ್ವಹಣೆಗೆ ಮಾಡಿದ ವ್ಯವಸ್ಥೆ.

ಡಾ| ಬಿ. ಜಗದೀಶ ಶೆಟ್ಟಿ, ಬ್ರಹ್ಮಾವರ

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.