ಗ್ರಾಮೀಣಾಭಿವೃದ್ಧಿ ಸಚಿವರಿಗೆ ಸಾರ್ವಜನಿಕರ ಸಲಹೆ
Team Udayavani, Mar 4, 2020, 6:34 AM IST
ಅಭಿವೃದ್ಧಿಪರ ಪತ್ರಿಕೋದ್ಯಮಕ್ಕೆ ಹೆಸರಾಗಿರುವ ಜನಮನದ ಜೀವನಾಡಿ “ಉದಯವಾಣಿ’ ಪತ್ರಿಕೆ ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳ ಸಚಿವರೊಂದಿಗೆ ಸಂವಾದ ಆಯೋಜಿಸಿ ರೈತರು, ವಿದ್ಯಾರ್ಥಿಗಳು, ಮಹಿಳೆಯರ ಸಹಿತ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಮುಂದಿಟ್ಟು ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಚಿವ “ಕೆ.ಎಸ್. ಈಶ್ವರಪ್ಪ’ ಅವರು ಉದಯವಾಣಿ ಕಚೇರಿಗೆ ಸಂವಾದಕ್ಕಾಗಿ ಆಗಮಿಸಿದ್ದಾಗ ತಮ್ಮ ಇಲಾಖೆಯ ಕಾರ್ಯಯೋಜನೆಗಳನ್ನು ತಿಳಿಸಿ ಇಲಾಖೆಯನ್ನು ಮತ್ತಷ್ಟು ಸುಧಾರಣೆಗೊಳಿಸಲು ಗ್ರಾಮೀಣ ಭಾಗದ ಜನಪ್ರತಿನಿಧಿ ಗಳು ಸೇರಿ ರೈತಾಪಿ ಸಮುದಾಯ ಸಲಹೆ ನೀಡುವಂತೆ ಪತ್ರಿಕೆ ಮೂಲಕ ಖುದ್ದು ಮನವಿ ಸಲ್ಲಿಸಿದ್ದರು. ಸಚಿವರ ಮನವಿಗೆ ಸಾವಿರಾರು ಮಂದಿ ಸಲಹೆ-ಸೂಚನೆ ಕಳುಹಿಸಿದ್ದರು. ಈ ಪೈಕಿ ಆಯ್ದ ಹಲವು ಸಲಹೆ-ಸೂಚನೆಗಳ ಕಿರುಹೊತ್ತಿಗೆಯನ್ನು ಮಂಗಳವಾರ ಸಚಿವ ಈಶ್ವರಪ್ಪ ಅವರಿಗೆ ಸಲ್ಲಿಸಲಾಯಿತು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಚಿವರು, ಉದಯವಾಣಿ ಓದುಗರ ಸಲಹೆಗಳನ್ನು ಪರಿಗಣಿಸುವು ದಾಗಿ ಹೇಳಿದರು. ಕಿರುಹೊತ್ತಿಗೆಯ ಆಯ್ದ ಕೆಲವು ಸಲಹೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಸದಾ ತೊಂದರೆ
ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಕುಡಿಯುವ ನೀರಿನ ತೊಂದರೆ ಇದೆ. 15 ವರ್ಷಗಳ ಹಿಂದೆ ವಿಶ್ವಬ್ಯಾಂಕ್ ಯೋಜನೆಯ ನೀರಿನ ಟ್ಯಾಂಕ್ ಮಂಜೂರಾಗಿದೆ. ಆದರೆ ಅದು ಉದ್ಘಾಟನೆಯೇ ಆಗಿಲ್ಲ. ಸುಮಾರು 1,00,000 ಲೀ. ನೀರಿನ ಸಾಮರ್ಥ್ಯ ಹೊಂದಿದ್ದರೂ, ನೀರಿನ ಮೂಲ ಇಲ್ಲದ್ದರಿಂದ ಇದ್ದೂ ಇಲ್ಲದಂತಾಗಿದೆ. ಸುಮಾರು 4 ಕಿಲೋಮೀಟರ್ ದೂರದ ನದಿಯಿಂದ ಪೈಪ್‌ಲೈನ್ ಇದ್ದರೂ, ಅದು ಕೂಡ ನಿರುಪಯುಕ್ತ. 8 ವರ್ಷಗಳ ಹಿಂದೆ ನೀರಿನ ಸಮಸ್ಯೆಗೆ ಸುಮಾರು ಇಪ್ಪತ್ತು ಲಕ್ಷ ಖರ್ಚಾಗಿದೆ. ಅದು ಫಲ ನೀಡಿಲ್ಲ. ದಿನದ 16 ಗಂಟೆ ಉರಿಯುತ್ತಿದ್ದ ಬೀದಿ ದೀಪ, ಊರಿನ 4 ಸೋಲಾರ್ ಕಂಬ ಒಂದೇ ವರ್ಷಕ್ಕೆ ಕೆಟ್ಟು ಹೋದವು. 3 ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳಿಂದ 1 ಕೋಟಿ ಬಿಡುಗಡೆಯಾಯಿತು. ಅದು ಏನಾಗಿದೆಯೋ ಗೊತ್ತಿಲ್ಲ. ನಮ್ಮೂರಿನ 25 ಲಕ್ಷ ವೆಚ್ಚದ ಬಸ್ ನಿಲ್ದಾಣದ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದೆ. ಕೇವಲ ಒಂದೇ ವರ್ಷಗಳಲ್ಲಿ ಕೀಳುವ ರಸ್ತೆಗಳು, ಅಂತರ್ಜಲ ಅಭಿವೃದ್ಧಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.
ಶಾಂತೇಶ್ ವಿ.ಬಿ, ಬಿಸರಹಳ್ಳಿ ಗ್ರಾಮ, ಕೊಪ್ಪಳ
ಹಾಳುಬಿದ್ದ, ತೆರೆದ ಬಾವಿಗಳು
ಹಾಸನ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕಿರು ನೀರಾವರಿ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ನೀರಿನ ಸೌಲಭ್ಯ ಮಾಡಿಕೊಟ್ಟ ನಂತರ, ಬಹುತೇಕ ಹಳ್ಳಿಗಳಲ್ಲಿ ತೆರೆದ ಬಾವಿಗಳು ಹಾಳುಬಿದ್ದಿವೆ. ಕೆರೆ ಕಟ್ಟೆ, ಕಲ್ಯಾಣಿಗಳು ಹೂಳು ತುಂಬಿವೆ. ಅಂತರ್ಜಲ ಬತ್ತಿ ಸಾವಿರ ಅಡಿ ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ. ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳುವ ಯಾವ ಕ್ರಮವನ್ನೂ, ಯಾರೂ ಅಳವಡಿಸಿಕೊಳ್ಳುತ್ತಿಲ್ಲ. ಅಂತರ್ಜಲ ಮರುಪೂರಣ ಆಗಬೇಕೆಂದರೆ, ಕೆರೆಗಳ ಹೂಳೆತ್ತಬೇಕು. ಹಳ್ಳಿ, ಪಟ್ಟಣ, ನಗರ ಎಲ್ಲ ಕಡೆಗಳಲ್ಲೂ ಜಲ ಮೂಲಗಳ ರಕ್ಷಣೆಯಾಗಬೇಕು. ರೈತರಿಗೆ ನೀರಿನ ಬಳಕೆಯ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸಬೇಕು. ಜಲಸಂರಕ್ಷಣೆಯನ್ನು ಎಲ್ಲರ ಹೊಣೆಗಾರಿಕೆಯಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮಮಟ್ಟದಲ್ಲಿ ಅಭಿಯಾನ ನಡೆಯಬೇಕು.
ಜೆ.ಆರ್.ರವಿಕುಮಾರ್, ಜನಿವಾರ, ಕುಪ್ಪಳಿ, ಹಾಸನ
ಕಾಮಗಾರಿ ಬೇಗ ಮುಗಿಯಲಿ
ಗ್ರಾಮಪಂಚಾಯತಿಗಳಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರೀಟೀಕರಣ ಕಾರ್ಯವನ್ನು ಏಕಕಾಲದಲ್ಲೇ ಮುಗಿಸಿದರೆ ಉತ್ತಮ. ವರ್ಷಕ್ಕೆ 15ರಿಂದ 20 ಮೀಟರ್ ಕಾಮಗಾರಿ ಮಾತ್ರ ಮಾಡುತ್ತಾರೆ. ಇದರಿಂದ ವರ್ಷಪೂರ್ತಿ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಾರೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು.
ಡಾ.ಕೃಷ್ಣ, ಕಣಿಯೂರು, ಬೆಳ್ತಂಗಡಿ
ಕಟ್ಟಕಡೆಯ ಫಲಾನುಭವಿಗಳಿಗೂ ತಲುಪಲಿ
ಗ್ರಾಮ ಪಂಚಾಯಿತಿಯು, ಅಧಿಕಾರ ವಿಕೇಂದ್ರೀಕರಣದ ಕೊನೆಯ ಹಂತವಾಗಿದ್ದು, ಸರ್ಕಾರದ ಎಲ್ಲಾ 28 ಇಲಾಖೆಗಳ ಕಾರ್ಯಕ್ರಮಗಳನ್ನು ಸಮಾಜದ ಕಟ್ಟಕಡೆಯ ಫಲಾನುಭವಿಗಳಿಗೂ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳ ಮೇಲೆ ಅಧಿಕ ಕಾರ್ಯಭಾರ, ಒತ್ತಡ ಹೆಚ್ಚಿರುವುದರಿಂದ, ಸರ್ಕಾರವು ಕೂಡಲೇ ಹೋಬಳಿಗೆ ಒಬ್ಬರಂತೆ ಇದೇ ದರ್ಜೆಯ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಿ ನೇಮಕಾತಿ ಮಾಡಬೇಕು.
ಶ್ರೀನಿವಾಸ್ ಯಾದವ್, ತುಮಕೂರು
ಮಂಕಿ ಪಾರ್ಕ್ ಬೇಕು
ಕರ್ನಾಟಕ-ಕೇರಳ ಗಡಿಭಾಗದ ಗ್ರಾಮಗಳಲ್ಲಿ ಮಹಿಳಾ ಸಹಾಯಕಿಯರ ಆರೋಗ್ಯ ಕೇಂದ್ರ ಇದೆ. ಇದನ್ನು ಉನ್ನತೀ ಕರಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು, ಗಡಿಭಾಗದ ಗ್ರಾಮಗಳಲ್ಲಿ ಮಂಗಗಳ ಹಾವಳಿ ತಡೆಯಲು ಮಂಕಿಪಾರ್ಕ್ ನಿರ್ಮಿಸಬೇಕು.
ಕೆ.ಪದ್ಮನಾಭ ಭಟ್, ಕನಕಮಜಲು
ಜಲಾಮೃತ ಯೋಜನೆ
ಜಲಾಮೃತ ಯೋಜನೆಯಡಿ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಲಕ್ಷಾಂತರ ಗಿಡಗಳನ್ನು ನೆಡಲಾ ಯಿತು. ಆದರೆ ಉಳಿದದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಇಲಾಖೆಯ ಕೆಳಗೆ ಸಾಮಾಜಿಕ ಅರಣ್ಯ, ಕೃಷಿ, ತೋಟಗಾರಿಕೆ ಇಲಾಖೆ ಇದೆ.ಇವುಗಳ ಒಗ್ಗೂಡಿಸುವಿಕೆ ಯೋಜನೆ ಯೊಂದಿಗೆ ನೆಟ್ಟ ಗಿಡಗಳ ನಿರ್ವಹಣೆಗಾಗಿ ಮನಸ್ಸು ಮಾಡಿದರೆ ಕೋಟ್ಯಂತರ ಗಿಡಗಳನ್ನು ಮರವಾಗುವಂತೆ ಬೆಳೆಸಬಹುದು. ಈಗ ಸಬ್ಸಿಡಿ ದರದಲ್ಲಿ ರೈತರಿಗೆ ಹನಿ ನೀರಾವರಿ ಮಾಡಲು ವ್ಯವಸ್ಥೆ ಇದೆ. ಅದೇ ವ್ಯವಸ್ಥೆ ಯನ್ನು ಗ್ರಾಮ ಪಂಚಾಯತಿ ನೆಡುವ ಗಿಡಗಳಿಗೆ ನೀರೆರೆಯಲೂ ಬಳಸಬೇಕು.
ಸಂತೋಷ್, ಶ್ರೀರಂಗಪಟ್ಟಣ
ಶೌಚಾಲಯ ಬೇಕು
ಬಾಗಲಕೋಟ ಜಿಲ್ಲೆ ಬದಾಮಿ ತಾಲೂಕಿನ ನರೇನುರ ಗ್ರಾಮದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಎಲ್ಲರೂ ಬಯಲಿಗೆ ಹೋಗಬೇಕಾಗಿದೆ. ಪಂಚಾಯಿತಿಯವರಿಗೆ ಮತ್ತು ನಮ್ಮ ಕ್ಷೇತ್ರದ ಶಾಸಕರಿಗೆ ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಊರಿಗೇ ಬಂದು ಭೂಮಿ ಪೂಜೆ ಮಾಡಿದ್ದಾರೆ. ಆದರೆ ಶೌಚಾಲಯ ನಿರ್ಮಾಣವಾಗಿಲ್ಲ. ಈ ವಿಷಯದ ಬಗ್ಗೆ ಹಲವು ಬಾರಿ ಶಾಸಕರಿಗೆ ತಿಳಿಸಿದರೂ ಸಹ, ಇದರ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ. ನಿಮ್ಮಿಂದಲಾದರೂ ಸಹ ನಮ್ಮೂರಿಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಆಗಲಿ.
ರಿಷಿ ಬಡಿಗೇರ್
ನೇರ ವೇತನ ಪದ್ಧತಿ ಜಾರಿಯಾಗಲಿ
ಸರ್ಕಾರ ಗ್ರಾಮೀಣ ಜನರಿಗೆಂದು ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅದನ್ನು ಜನ ಸಾಮಾನ್ಯರಿಗೆ ತಲುಪಿಸುವ ಗ್ರಾಮ ಪಂಚಾಯಿತಿ ನೌಕರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರದಿಂದ ನೇರವೇತನ ಪದ್ಧತಿ ಜಾರಿ ಮಾಡಿದ್ದರೂ ಅನುಷ್ಠಾನ ವಾಗಿಲ್ಲ. ನೌಕರರ ಪೂರ್ಣ ವೇತನವನ್ನು ಸರ್ಕಾರ ಭರಿಸುತ್ತಿಲ್ಲ ಹಾಗೂ ಮೂರು ತಿಂಗಳ ಮುಂಚೆಯೇ ನೌಕರರ ವೇತನ ವನ್ನು ಗ್ರಾಮ ಪಂಚಾಯಿತಿ ಖಾತೆಗೆ ಜಮಾ ಮಾಡಬೇಕೆಂಬ ನಿಯಮ ಇದ್ದರೂ, ಅದೂ ಜಾರಿಯಾ ಗಿಲ್ಲ. ಗ್ರಾಮ ಪಂಚಾಯಿತಿ ನೌಕರರ ಸುಮಾರು 6 ರಿಂದ 10 ತಿಂಗಳುಗಳ ವೇತನ ಬಾಕಿ ಇರುತ್ತದೆ.
ರಾಜು ಮಾಯಾಚಾರಿ, ಹೊನ್ನಾಳಿ, ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Belthangady: ಬಸ್ ಬೈಕ್ ಢಿಕ್ಕಿ, ಸವಾರ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.