ಮತ್ತೆ ಎಲ್ಲರೂ ಒಂದಾಗಬೇಕಾಗಿದೆ
Team Udayavani, May 16, 2021, 8:03 PM IST
ಕುಟುಂಬವೆಂದರೆ ನಾವೆಲ್ಲ ತಿಳಿದಿರುವಂತೆ ರಕ್ತ ಸಂಬಂಧ, ಹೋಲಿಕೆಯಿಂದ ರೂಪುಗೊಂಡ ಒಂದು ಗುಂಪು. ಮನುಷ್ಯ ಸಂಘಜೀವಿ. ಹುಟ್ಟಿದಾಗಿನಿಂದಲೇ ಕುಟುಂಬ ಜೀವನ ಆರಂಭವಾಗುತ್ತದೆ. ಮಗು ಬೆಳೆಯುತ್ತಿದ್ದಂತೆ ತಂದೆ, ತಾಯಿ, ಕುಟುಂಬ ಸದಸ್ಯರ ಪ್ರೀತಿ ವಿಶ್ವಾಸಗಳು, ಪೋಷಣೆ ಅದರ ಜೀವನದ ಮುಖ್ಯ ಅಂಗ. ಏಕೆಂದರೆ ಒಂದು ಮಗುವಿಗೆ ಅದರ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಭೌತಿಕ ಬೆಳವಣಿಗೆಗೆ ಕುಟುಂಬ ಮಾಧ್ಯಮ ಎಂದರೆ ಅತಿಶಯೋಕ್ತಿಯಲ್ಲ.
“ವಸುಧೈವ ಕುಟುಂಬಕಂ’ ಜಗತ್ತು ಒಂದೇ ಕುಟುಂಬ ಎಂದು ಉಪನಿಷತ್ತುಗಳು ಸಾರಿವೆ. ಇದನ್ನು ಒಂದು ಮರಕ್ಕೆ ಹೋಲಿಸಬಹುದು. ಒಂದು ಮರ ತಾನೇ ಹುಟ್ಟಿರುವುದಿಲ್ಲ. ಅದಕ್ಕೆ ಹಿಂದಿನ ಮರದ ಬೇರು ಅಥವಾ ಬೀಜ ಕಾರಣವಾಗಿರುತ್ತದೆ. ಅನಂತರ ಅದು ಬೃಹತ್ತಾಗಿ ಬೆಳೆದು ಎಲೆ, ಹೂ, ಕಾಯಿ, ಹಣ್ಣುಗಳಾಗಿ ಫಲ ನೀಡುತ್ತವೆ. ಇಷ್ಟಾಗಬೇಕಾದರೆ ಅದಕ್ಕೆ ನೀರು, ಶಾಖ ಮುಖ್ಯ. ಅಂತೆಯೇ ಒಂದು ಕುಟುಂಬ ಕೂಡ. ಬಹಳ ಹಿಂದಿನಿಂದ ವಂಶಗಳಾಗಿ ಬಂದಿರುತ್ತದೆ.
ಒಂದು ಕುಟುಂಬದ ಹಿನ್ನೆಲೆ, ಹೊಂದಾಣಿಕೆ ಸುಖ ಸಂಸಾರಕ್ಕೆ ಬಹಳ ಮುಖ್ಯ. ಹೀಗೆ ಸಣ್ಣ ಸಣ್ಣ ಕುಟುಂಬಗಳು ಸೇರಿ ವಿಶ್ವವೇ ಒಂದು ಕುಟುಂಬವಾಗಿದೆ. ಇದು ಪಾರವಿಲ್ಲದ ಸಿಂಧು, ಸಾಗರದ ಅಲೆಗಳಂತೆ, ಬೆಟ್ಟಗಳಂತೆ ಬೆಳೆಯುತ್ತಲೇ ಇರುತ್ತದೆ. ಎಲ್ಲ ಕುಟುಂಬಗಳು ಸತ್ಯ, ಧರ್ಮ,ಶಾಂತಿ, ಪ್ರೇಮ, ಅಹಿಂಸೆ ಈ ಐದು ಮಾನ ವೀಯತೆಯ ಮೌಲ್ಯಗಳನ್ನು ಪಾಲಿಸಿ ನಡೆದು ಕೊಂಡರೆ ಗೃಹದಲ್ಲಿ ಶಾಂತಿಯ ಬೀಜ ಬಿತ್ತ
ಬಹುದು. ಇದೇ ವಿಶ್ವ ಶಾಂತಿಗೂ ಬಹಳ ಮುಖ್ಯವಾದ ಮೂಲವಾಗಿ ಪರಿಣಮಿಸುತ್ತದೆ. ಇದರಲ್ಲಿ ಮನೆ ಮಗಳು, ಸೊಸೆ, ತಾಯಿ, ಯಜಮಾನಿಯ ಪಾತ್ರ ಮಹತ್ವ¨ªಾಗಿರುತ್ತದೆ.
ಮದುವೆಯಾದ ನವವಧು ಅತ್ತೆ ಮನೆಗೆ ಹೋಗು ವಾಗ ಹಾಡುತ್ತಾರೆ, ಎಮ್ಮಾ ಮನೆಯಂಗಳದಿ ಬೆಳೆ ದೊಂದ ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿ ರುವೆವು, ಕೊಳ್ಳಿರಿ ಹೂವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು… ಅರ್ಥ ಗರ್ಭಿತವಾದ ಪದಗಳು. ಒಂದು ಹೆಣ್ಣು ಹುಟ್ಟಿದ ಮನೆ ಮತ್ತು ಸೇರಿದ ಮನೆಯ ಬೆಳಕಾಗಬೇಕು. ಆಗಲೇ ಕುಟುಂಬದಲ್ಲಿ ಸುಖ ಶಾಂತಿ ನೆಲೆಸಲು ಸಾಧ್ಯ.
ಹಿಂದಿನ ಕಾಲದಲ್ಲಿ ಹೆಣ್ಣಿಗೆ ನೂರು ಮಕ್ಕಳ ತಾಯಿಯಾಗು ಎಂದು ಆಶೀರ್ವಾದ ಮಾಡು ತ್ತಿದ್ದರು. ಇದರ ಅರ್ಥ ಕುಟುಂಬ ಬೆಳೆಯಬೇಕು, ವಂಶಗಳು ಉದ್ಧಾರವಾಗಬೇಕು. ಮಕ್ಕಳಿರಲಮ್ಮ ಮನೆ ತುಂಬ ಎನ್ನುತ್ತಿದ್ದರು. ಆಗಲೇ ಕುಟುಂಬ ಬೆಳೆಯಲು ಸಾಧ್ಯ.
ನಿಜ, ಈಗ ಕಾಲ ಬದಲಾಗಿದೆ, ದೊಡ್ಡ ಕುಟುಂಬಗಳು ಸಣ್ಣದಾಗಿವೆ. ನಮಗೆ ಒಬ್ಬನೇ ಮಗ. ನಾವು ಏಳು ಜನ ಮಕ್ಕಳು, ನಮ್ಮ ತಂದೆ ತಾಯಿಯವರಿಗೆ. ಭಿನ್ನ ಬೇಧವಿಲ್ಲದೆ ಬೆಳೆಸಿದರು. ಜೀವನದ ಅತ್ಯುತ್ತಮ ಗುರುಗಳಾಗಿದ್ದರು. ಜತೆಗೆ ದೈವಭಕ್ತಿ ಬಿತ್ತಿದರು. ದೂರದ ಬಂಧುಗಳನ್ನು ನಮ್ಮ ಕುಟುಂಬದವರಂತೆಯೇ ಕಾಣುತ್ತಿದ್ದರು. ಅದಕ್ಕೆ ಉದಾಹರಣೆ ಈಗಲೂ ಎಲ್ಲ ಸೋದರ ಸಂಬಂಧಿಗಳ ಜತೆ ಸಂಪರ್ಕ ಬಿಟ್ಟಿಲ್ಲ. ಆದರೆ ಇಂದಿನ ಯುವಜನಾಂಗಕ್ಕೆ ಬಂಧುಗಳಲ್ಲಿ ಆಸಕ್ತಿ ಕುಂದುತ್ತಿದೆ. ಬಹುಶಃ ವೇಳೆಯ ಅಭಾವವೆಂದರೆ ತಪ್ಪಾಗಬಹುದು. ಅದು ನೆಪ ಮಾತ್ರ.
ಈಗಿನ ಮಕ್ಕಳಿಗೆ ಕುಟುಂಬ ವರ್ಗದವ ರೊಂದಿಗೆ ಸಂಪರ್ಕ ಮುಂದುವರಿಸುವುದು ತಂದೆ ತಾಯಿಯರ ಕರ್ತವ್ಯ. ಆಧುನಿಕ ಜೀವನದಲ್ಲಿ ಅದರಲ್ಲೂ ನಾವು ನಮ್ಮ ತಾಯ್ನಾಡನ್ನು ಬಿಟ್ಟು ಹೊರ ದೇಶಕ್ಕೆ ಹೋಗಿ ನೆಲೆಸಿದಾಗ ನಮ್ಮ ಮಕ್ಕಳಿಗೆ ನಮ್ಮ ಕುಟುಂಬದವರ ಸಂಪರ್ಕ ಕಡಿಯುವ ಸಾಧ್ಯತೆ ಇದೆ. ಆದರೆ ತಂತ್ರಜ್ಞಾನ ಎಷ್ಟು ಮುಂದುವರಿದಿದೆ. ನಾವು ನಮ್ಮವರನ್ನು ಎದುರು ನೋಡಿ ಮಾತಾಡಬಹುದು.
ಒಂದಾನೊಂದು ಕಾಲದಲ್ಲಿ ಕಾಗದ ತಲುಪ ಬೇಕಾದರೆ 20 ದಿನಗಳಾಗುತ್ತಿತ್ತು. ಅಂತರ್ಜಾಲದ ಮಹತ್ತು ಈಗ 20 ಸೆಕೆಂಡುಗಳು, ಕುಟುಂಬದವರ ಮದುವೆಗೆ ಹೋಗಕ್ಕಾಗದಿದ್ದರೆ ಜೂಮ್ ಮೂಲಕ ಹೊರದೇಶದಿಂದಲೇ ಭಾಗವಹಿಸಬಹುದು. ನನ್ನ ಅನಿಸಿಕೆಯಂತೆ ಕುಟುಂಬದ ಸಂಪರ್ಕ ಆಧುನಿಕ ಯುಗದಲ್ಲಿ ಸುಲಭವಾಗಿದೆ. ಆದರೆ ಅದರ ಸದುಪಯೋಗ ಪಡಿಸಿಕೊಂಡು ಎರಡು ದೇಶಗಳ ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಸೇತುವೆ ಆದರೆ “ವಸುಧೈವ ಕುಟುಂಬಕಂ’ ಖಂಡಿತ ಸಾಧ್ಯ. ಎರಡು ದೇಶಗಳು ಒಂದೇ ಕುಟುಂಬದ ಭಾವನೆ ಬರುತ್ತದೆ.
ಬಸವಣ್ಣನವರು ಹೇಳಿದಂತೆ “ಇವನಾರವ ಅನ್ನದೆ ಇವ ನಮ್ಮವ’ ಅಂದು ಭಾವಿಸಬೇಕು. ಸಂತ ಫ್ರಾನ್ಸಿಸ್ ಹೇಳಿದಂತೆ ಸಹೋದರ ಸೂರ್ಯ, ಸಹೋದರಿ ಚಂದ್ರ ಎಂದು ಭಾವಿಸಿದಾಗ “ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಎಲ್ಲ ಕುಟುಂಬಗಳು ವಿಶ್ವ ಶಾಂತಿಯಲ್ಲಿ ಭಾಗವಾಗಬಹುದು.
ದೊತ್ತೂರೆಸ್ಸ
ಜಯ ಮೂರ್ತಿ, ಇಟಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.