ಅಗ್ನಿಪಥದಿಂದ ಸೇನೆಗೂ, ಯುವಜನರಿಗೂ ಲಾಭ


Team Udayavani, Jun 23, 2022, 6:05 AM IST

ಅಗ್ನಿಪಥದಿಂದ ಸೇನೆಗೂ, ಯುವಜನರಿಗೂ ಲಾಭ

ಅಗ್ನಿವೀರ್‌ ಯೋಜನೆಯು ದೇಶರಕ್ಷಣೆಯ ಪಯಣದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ. ದೇಶದ ಎರಡು ಅವಿಭಾಜ್ಯ ಸ್ತಂಭಗಳಾಗಿರುವ ರಕ್ಷಣ ಪಡೆಗಳು ಮತ್ತು ರಾಷ್ಟ್ರದ ಯುವಕರ ಮೇಲೆ ಇದು ನೇರ ಪರಿಣಾಮ ಬೀರುತ್ತದೆ.

ಎಲ್ಲ ಮೂರು ಸೇನಾ ಮುಖ್ಯಸ್ಥರು ವೇದಿಕೆಯನ್ನು ಹಂಚಿ ಕೊಂಡಿದ್ದ ಗೌರವಾನ್ವಿತ ರಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು. ಇದಕ್ಕೆ ಸಮಾಜದ ವಿವಿಧ ವರ್ಗದ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ಹಾಗೆಯೇ ಹಲವಾರು ಸಾಧಕ ಬಾಧಕಗಳನ್ನು ಎತ್ತಿ ತೋರಿಸಿ ವಿವಿಧ ರೀತಿಯ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ.

ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ, ಬದಲಾ ವಣೆಯು ಮಾತ್ರ ಸ್ಥಿರವಾಗಿರುತ್ತದೆ. ಅದೇ ಸಮಯದಲ್ಲಿ, ಬದಲಾವಣೆಗೆ ಪ್ರತಿರೋಧವನ್ನು ಒಡ್ಡುವುದು ಮಾನವ ಸ್ವಭಾವದ ಅವಿಭಾಜ್ಯ ಅಂಶವಾಗಿದೆ, ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳಬೇಕು. ಮುಂದುವರಿಯುವ ಮೊದಲು ಯೋಜನೆಯ ವಿಶಾಲ ರೂಪರೇಷೆಯನ್ನು ನೋಡೋಣ.

ಸರಕಾರದ ಪ್ರಕಟನೆೆಗಳ ಪ್ರಕಾರ ಅಗ್ನಿವೀರ್‌ ಯೋಜನೆಯು ಎಲ್ಲ ಮೂರು ರಕ್ಷಣ ಪಡೆಗಳಲ್ಲಿ ಸಾಮಾನ್ಯವಾಗಿ ಪಿಬಿಒಆರ್‌ ಎಂದು ಕರೆಯಲ್ಪಡುವ “ಅಧಿಕಾರಿ ಹುದ್ದೆಗಿಂತ ಕೆಳಗಿನ ವಿಭಾಗ’ ಶ್ರೇಣಿಯ ಎಲ್ಲ ನೇಮಕಾತಿಗಳಿಗೆ ಹೊಸ ನೇಮಕಾತಿ ಮಾರ್ಗವಾಗಿದೆ. 17.5ರಿಂದ 21 ವರ್ಷ ವಯಸ್ಸಿನ ಅರ್ಹ ಅಭ್ಯರ್ಥಿಗಳನ್ನು 4 ವರ್ಷಗಳ ನಿಗದಿತ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ಅನಂತರ ಎಲ್ಲ ಅಗ್ನಿವೀರರಿಗೆ ತಮ್ಮ ತಮ್ಮ ಪಡೆಗಳಲ್ಲಿ ಖಾಯಂ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಆಯ್ಕೆಯನ್ನು ನೀಡಲಾಗುತ್ತದೆ. ಆದಾಗ್ಯೂ ಖಾಯಂ ಕೆಲಸಕ್ಕಾಗಿ ಕೇವಲ ಶೇ 25 ಅಗ್ನಿವೀರರನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.

ಮೊದಲನೆಯದಾಗಿ ಅಗ್ನಿವೀರರ‌ ಬಳಕೆ ಮತ್ತು ಸೇವೆಗಳ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ಯುದ್ಧದ ಸಾಮರ್ಥ್ಯದ ಮೇಲೆ ಅವರ ಪ್ರಭಾವದ ಮೇಲೆ ಪ್ರಶ್ನೆಗಳನ್ನು ಎತ್ತಿರುವುದರಿಂದ ರಕ್ಷಣ ಪಡೆಗಳ ಮೇಲೆ ಯೋಜನೆಯ ಸಂಭವನೀಯ ಪರಿಣಾಮವನ್ನು ಪರಿಗಣಿಸೋಣ. ಭಾರ ತೀಯ ವಾಯು ಸೇನೆಯು ತಂತ್ರಜ್ಞಾನ-ಕೇಂದ್ರಿತ ಆಧುನಿಕ ವಾಯುಪಡೆಯಾಗಿದ್ದು, ಎಲ್ಲಾ ಯುದ್ಧರಂಗಗಳು, ಉಪಕರ ಣಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳು ಜಾಲದ (ನೆಟ್‌ವರ್ಕ್‌) ಪರಿಸರದಲ್ಲಿ ಕಾರ್ಯನಿರ್ವಹಿಸುತ್ತವೆ. ಭಾರತೀಯ ವಾಯು ಸೇನೆಗೆ ಸಮಕಾಲೀನ ತಂತ್ರಜ್ಞಾನದ ಜ್ಞಾನವನ್ನು ಹೊಂದಿರುವ ಯುವ ಮತ್ತು ಹೊಂದಿಕೊಳ್ಳಬಲ್ಲ ಮನಸ್ಸುಗಳು ಬೇಕಾ ಗುತ್ತವೆ, ಇದರಿಂದಾಗಿ ಅವರಿಗೆ ಉದಯೋನ್ಮುಖ ನವೀನ ತಂತ್ರಜ್ಞಾನಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯ ದಲ್ಲಿ ತರಬೇತಿ ನೀಡಬಹುದು. ಮೇಲಾಗಿ ಉದಯೋನ್ಮುಖ ತಂತ್ರ ಜ್ಞಾನಗಳ ಕ್ರಿಯಾಶೀಲ ಅವಧಿಯು ಸಂಕುಚಿತಗೊಳ್ಳು ತ್ತಿರುವುದರಿಂದ ಮತ್ತು ದಿನ ಕಳೆದಂತೆ ಕಡಿಮೆಯಾಗುತ್ತಿರು ವುದರಿಂದ, ದೀರ್ಘಾವಧಿಯ ನೇಮಕಾತಿಗಳಿಗೆ ಹೋಲಿಸಿದರೆ ಅಲ್ಪಾವಧಿಗೆ ಆಗಾಗ್ಗೆ ನಡೆಸುವ ನೇಮಕಾತಿಗಳು ಹೆಚ್ಚು ತಾರ್ಕಿಕವಾಗಿರುತ್ತವೆ.

ಅಲ್ಪಾವಧಿ ನೇಮಕಾತಿ ಆಕಾಂಕ್ಷಿಗಳಿಗೆ ಮತ್ತು ನಾಲ್ಕು ವರ್ಷಗಳ ಅವಧಿಯ ಅನಂತರ ಸೇವೆ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಹಿಂದಿನ ವ್ಯವಸ್ಥೆಯಲ್ಲಿ ಅಂತಹ ಯಾವುದೇ ಆಯ್ಕೆ ಲಭ್ಯವಿರಲಿಲ್ಲ. ಇದರ ಪರಿಣಾಮವಾಗಿ ಒಂದು ಕಡೆ ಯುವಕರ ಒಂದು ವರ್ಗ ಕನಿಷ್ಠ 15-20 ವರ್ಷಗಳ ಬಾಧ್ಯತೆಯ ಕಾರಣದಿಂದಾಗಿ ಸೇನೆಗೆ ಸೇರುವ ಆಯ್ಕೆಯನ್ನು ಮಾಡಲು ಹಿಂಜರಿಯುತ್ತಿತ್ತು ಮತ್ತು ಮತ್ತೂಂದೆಡೆ, ಸೇನೆಯು ಉದಯೋನ್ಮುಖ ತಂತ್ರ ಜ್ಞಾನ ಗಳಲ್ಲಿ ಹಿರಿಯರಿಗೆ / ವರಿಷ್ಠರಿಗೆ ಮರು – ಕೌಶಲದ ತರಬೇತಿ ನೀಡುವಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಯುವಕರನ್ನು ಆಗಾಗ್ಗೆ ಸೇರಿಸಿಕೊಳ್ಳುವುದು ಮತ್ತು ಯೋಧರ ಸರಾಸರಿ ವಯಸ್ಸಿನ ಕಡಿತವು ರಕ್ಷಣ ಪಡೆಗಳಿಗೆ ಉತ್ತಮ ವಾಗಿರುತ್ತದೆ. ಭಾರತೀಯ ವಾಯು ಪಡೆಯಲ್ಲಿ ಸಾಮಾನ್ಯ ವಾಗಿ ಏರ್‌ ವಾರಿಯರ್ಸ್‌ ಎಂದು ಕರೆಯಲ್ಪಡುವ ಯೋಧರ ಸರಾಸರಿ ವಯಸ್ಸಿನ ಕಡಿತವು ರಕ್ಷಣ ಪಡೆಗಳಿಗೆ ಪ್ರಮುಖ ಪ್ರಯೋಜನವಾಗಿದೆ. ವಾಸ್ತವವಾಗಿ, ಅಸ್ತಿತ್ವದಲ್ಲಿರುವ ವ್ಯವಸ್ಥೆಗೆ ಹೋಲಿಸಿದರೆ ತರಬೇತಿ ಅವಧಿ, ಮಾದರಿಗಳು ಮತ್ತು ಅಗ್ನಿವೀರರ ವಿವರಗಳನ್ನು ಪರಿಷ್ಕರಿಸುವ ಆವಶ್ಯಕತೆಯಿದೆ.

ರಕ್ಷಣ ಪಡೆಗಳು ರಾಷ್ಟ್ರೀಯ ರಕ್ಷಣೆಯ ಕಟ್ಟಕಡೆಯ ಭದ್ರಕೋಟೆಗಳಾಗಿವೆ ಮತ್ತು ಸೇವಾ ಮುಖ್ಯಸ್ಥರ ದೂರದೃಷ್ಟಿ ಮತ್ತು ಯೋಜನೆಯ ಬಗ್ಗೆ ಯಾರಿಗೂ ಯಾವುದೇ ಸಂದೇಹವಿರಕೂಡದು. ರಕ್ಷಣ ಪಡೆಗಳು, ಈಗ, ತರಬೇತಿ ಮಾದರಿಗಳು ಮತ್ತು ಕಾರ್ಯಾಚರಣೆಯ ಬಳಕೆ ಸೇರಿದಂತೆ ಹೊಸ ಯೋಜನೆಯ ಎಲ್ಲ ಆಯಾಮಗಳ ಬಗ್ಗೆ ಚರ್ಚಿಸಿ ರಬೇಕು. ಯಾವುದೇ ಮಟ್ಟದಲ್ಲಿ ದುರ್ಬಲವಾಗಿರುವಂತೆ ಮಾಡುವುದಿಲ್ಲ. ಭಾರತದ ಎಲ್ಲ ನಾಗರಿಕರು ಅವರಿಗೆ ಅಗತ್ಯವಿ¨ªಾಗ ರಕ್ಷಣ ಪಡೆಗಳು ತಮ್ಮನ್ನು ತಾವು ಪ್ರತಿ ಬಾರಿಯೂ ಮತ್ತು ಪ್ರತೀ ಅಂಶದಲ್ಲೂ ತಾವೇನೆಂಬುದನ್ನು ಸಾಬೀತುಪಡಿಸುತ್ತವೆ ಎನ್ನುವ ಭರವಸೆ ಹೊಂದಿರಬೇಕು.

ಇದರ ಪ್ರಾಥಮಿಕ ಪಾಲುದಾರರು ದೇಶದ ಯುವಕರು. ಯುವಕರ ಆಕಾಂಕ್ಷೆಗಳು ಹಾಗೂ ಆಸಕ್ತಿಗಳನ್ನು ಪರಿಗಣಿ ಸೋಣ. 10ನೇ ಅಥವಾ 12ನೇ ತರಗತಿಯಲ್ಲಿ ತೇರ್ಗಡೆಯಾದ ಯುವಕರಿಗೆ ಉತ್ತಮ ಕಾರ್ಪೊರೇಟ್‌ ಕಂಪೆನಿಗಳು ನೀಡುವ ಆರ್ಥಿಕ ಪ್ಯಾಕೇಜ್‌ಗಿಂತ ಸರಕಾರವು ಘೋಷಿಸಿದ ಆರ್ಥಿಕ ಪ್ಯಾಕೇಜ್‌ ಹೆಚ್ಚಾಗಿದೆ. ಹೊಸದಾಗಿ ನೇಮಕಗೊಂಡವರಿಗೆ ತಿಂಗಳಿಗೆ 30,000 ರೂ. ಮತ್ತು ಹೆಚ್ಚುವರಿಯಾಗಿ ರೂ. 9000 ವನ್ನು ಅವರ ಸೇವಾ ನಿಧಿಗೆ ಸರಕಾರವು ಪ್ರತೀ ತಿಂಗಳು ಕೊಡುಗೆ ನೀಡುತ್ತದೆ. ಹೆಚ್ಚುವರಿಯಾಗಿ ಪ್ರತೀ ವರ್ಷ, ಸಂಬಳದಲ್ಲಿ ಸುಮಾರು ಶೇ. 10ರಷ್ಟು ಏರಿಕೆಯಾಗುತ್ತಿತ್ತು. ವಸತಿ, ವೈದ್ಯಕೀಯ ಸೌಲಭ್ಯಗಳು ಇತ್ಯಾದಿಗಳನ್ನು ಒಳಗೊಂ ಡಂತೆ ದಿನನಿತ್ಯದ ಹೆಚ್ಚಿನ ಆವಶ್ಯಕತೆಗಳನ್ನು ರಕ್ಷಣ ಪಡೆಗಳಿಂದ ನೋಡಿಕೊಳ್ಳಲಾಗುತ್ತದೆ ಆದ್ದರಿಂದ ಅಗ್ನಿವೀರ ಇವುಗಳಿಗೆ ಯಾವುದೇ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಆದಾಯದ ಅತ್ಯಂತ ಕಡಿಮೆ ಭಾಗವು ದೈನಂದಿನ ವೆಚ್ಚಕ್ಕೆ ಖರ್ಚಾಗುವುದರಿಂದ, ಸಂಬಳದ ಹೆಚ್ಚಿನ ಭಾಗವನ್ನು ಉಳಿಸಬಹುದು. ಇದಲ್ಲದೆ ನಾಲ್ಕು ವರ್ಷಗಳು ಪೂರ್ಣಗೊಂಡ ಅನಂತರ ಸೇವಾ ನಿಧಿ ಖಾತೆಯ ಅವಧಿ ಮುಗಿಯುತ್ತಿದ್ದಂತೆ ಪ್ರತಿ ಅಗ್ನಿವೀರನಿಗೆ 11 ಲಕ್ಷ ರೂ. ಸಿಗುತ್ತದೆ.

ಹಣಕಾಸಿನ ಪ್ರಯೋಜನಗಳ ಜತೆಗೆ ಈ ಯೋಜನೆಯು ಯುವಜನರ ಇತರ ಆಕಾಂಕ್ಷೆಗಳನ್ನು ಪೂರೈಸುತ್ತದೆ, ಇದರಲ್ಲಿ ಹೆಮ್ಮೆ, ಸ್ವಾಭಿಮಾನ, ಕೌಶಲಗಳ ಉನ್ನತೀಕರಣ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳು ಸೇರಿವೆ. ಶಿಕ್ಷಣ ಸಚಿವಾಲಯವು ಈಗಾಗಲೇ ಹೊರ ತಂದಿರುವಂತೆ, ಯುಜಿಸಿ ಮತ್ತು ಇಗ್ನೊ (IGNOU) ಗಳು ರಾಷ್ಟ್ರೀಯ ಶಿಕ್ಷಣ ನೀತಿ 2020ರ ನಿಬಂಧನೆಗಳನ್ನು ಗರಿಷ್ಠ ಗೊಳಿಸಲು ಅಗ್ನಿವೀರರಿಗೆ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಉನ್ನತೀಕರಿಸಲು ಕಾರ್ಯವಿಧಾನ ಮತ್ತು ಆಯ್ಕೆಗಳನ್ನು ರೂಪಿಸುತ್ತವೆ. ಇದು ಖಾಯಂ ಸೇವೆಗಳಿಗೆ ನೇಮಕವಾಗದ ವರಿಗೆ ಮತ್ತೂಂದು ಉದ್ಯೋಗಾವಕಾಶವನ್ನು ಸುಗಮಗೊಳಿ ಸುತ್ತದೆ. ಗೃಹ ಸಚಿವಾಲಯವು ಈಗಾಗಲೇ ಈ ಯುವ ಮತ್ತು ನುರಿತ ನಾಗರಿಕರನ್ನು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ ನೇಮಿಸಿ ಕೊಳ್ಳುವ ಯೋಜನೆಯನ್ನು ಹೊರತರುವ ಪ್ರಕ್ರಿಯೆ ಯಲ್ಲಿದೆ. ಅವರು ಸರಕಾರಿ ವಲಯ, ಉದ್ಯಮ, ಐಟಿ ವಲಯ ಮತ್ತು ಕಾರ್ಪೊರೇಟ್‌ ಜಗತ್ತಿನಲ್ಲಿ ಯೋಗ್ಯವಾದ ಉದ್ಯೋಗವನ್ನು ಹುಡುಕುವ ಅಥವಾ ಅವರ ಸೇವಾ ನಿಧಿಯನ್ನು ಬಳಸಿಕೊಂಡು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವ ಆಯ್ಕೆಗಳನ್ನು ಹೊಂದಿರುತ್ತಾರೆ.

ಕೊನೆಯದಾಗಿ ಅಗ್ನಿಪಥ ಯೋಜನೆಯು ರಾಷ್ಟ್ರ ನಿರ್ಮಾಣಕ್ಕೆ ಅದ್ಭುತವಾದ ಅಮೂರ್ತ ಕೊಡುಗೆಯನ್ನು ನೀಡುತ್ತದೆ. ಯುವ ಮತ್ತು ಪ್ರಭಾವಶಾಲಿ ಮನಸ್ಸಿನಲ್ಲಿ ಶಿಸ್ತು, ಪ್ರಾಮಾಣಿಕತೆ, ಉತ್ಸಾಹ, ಸಾಂ ಕ‌ ಉತ್ಸಾಹ, “ತನಗಿಂತ ಸೇವೆ ಮಿಗಿಲು, ದೇಶ ಮೊದಲು’ ಎನ್ನುವ ಮನೋಭಾವದ ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ರಾಷ್ಟ್ರ ನಿರ್ಮಾಣ ಕಾಯಕಕ್ಕೆ ಹಲವು ರೀತಿಯಲ್ಲಿ ಮಹತ್ವದ ಕೊಡುಗೆ ನೀಡುತ್ತದೆ.

ನನ್ನ ಅಭಿಪ್ರಾಯದಲ್ಲಿ, ಈ ಯೋಜನೆಯು ರಾಷ್ಟ್ರದ ರಕ್ಷಣ ಪಡೆಗಳಿಗೆ ಮತ್ತು ಯುವವರ್ಗಕ್ಕೆ ಎರಡಕ್ಕೂ ಅನುಕೂಲವಾಗಿದೆ ಮತ್ತು ಉನ್ನತ ಮಟ್ಟದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಅದರ ಕೊಡುಗೆ ಅದ್ಭುತವಾಗಿರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

– ನಿ| ಏರ್‌ ಚೀಫ್ ಮಾರ್ಷಲ್‌ ಆರ್‌ ಕೆ ಎಸ್‌ ಭದೌರಿಯಾ ,  ಭಾರತೀಯ ವಾಯುಪಡೆಯ ನಿಕಟಪೂರ್ವ ಮುಖ್ಯಸ್ಥ

ಟಾಪ್ ನ್ಯೂಸ್

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

17-ckm

Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

14-uv-fusion

UV Fusion: ಕೈ ಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.