ಜೇನು ನೊಣಗಳ ಸಂತತಿ ಕಡಿಮೆಯಿಂದ ಆಹಾರ ಉತ್ಪಾದನೆ ಇಳಿಕೆ
Team Udayavani, Jul 29, 2020, 8:20 PM IST
ಕ್ಯಾಲಿಫೋರ್ನಿಯಾ: ಆಹಾರ ಉತ್ಪಾದನೆ ಅಥವಾ ಹೊಸ ಸಸ್ಯ ಬೆಳವಣಿಗೆಗೆ ಕೆಲವೊಂದು ಜೀವಿಗಳ ಉಪಸ್ಥಿತಿ ಬಹಳ ಮುಖ್ಯವಾಗಿರುತ್ತದೆ.
ಉದಾಹರಣೆಗೆ ಹೂ ಅರಳಲು, ಪರಾಗಸ್ಪರ್ಶ ನಡೆಯಲು ಚಿಟ್ಟೆಗಳು ಹೇಗೆ ಅಗತ್ಯವೋ ಅದೇ ರೀತಿ ಕೆಲವು ಉತ್ಪಾದನೆಗಳಿಗೆ ಇನ್ನು ಕೆಲವು ಜೀವಿಗಳು ಅಗತ್ಯವಾಗಿರುತ್ತವೆ.
ಆ ಜೀವಿಗಳ ಸಂಖ್ಯೆ ಕಡಿಮೆಯಾದಂತೆ ಆಯಾ ಸಸ್ಯ ಉತ್ಪಾದನೆಗಳೂ ಕಡಿಮೆಯಾಗುತ್ತದೆ.
ಇದೀಗ ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾದುದರಿಂದ ಹಣ್ಣುಗಳ ಉತ್ಪಾದನೆಯೂ ಕಡಿಮೆಯಾಗಿದೆ ಎಂಬ ಆತಂಕಕಾರಿ ಅಂಶವೊಂದು ಹೊರಬಿದ್ದಿದೆ. ಈ ಬೆಳವಣಿಗೆಗೆ ಹಲವಾರು ಕಾರಣಗಳನ್ನು ಪಟ್ಟಿಮಾಡಲಾಗಿದೆ.
ಜೇನುನೊಣಗಳ ಸಂತತಿ ಅಭಿವೃದ್ಧಿಯಾಗದಿದ್ದರೆ ಮುಕ್ಕಾಲು ಭಾಗದಷ್ಟು ಆಹಾರ ಉತ್ಪಾದನೆಯಲ್ಲಿ ಕುಸಿತ ಉಂಟಾಗಬಹುದೆಂಬ ಆತಂಕವನ್ನು ತಜ್ಞರು ಹೊರಹಾಕಿದ್ದಾರೆ.
ಮಾರಕವಾದ ಆಧುನಿಕ ಕೃಷಿ ತಂತ್ರ
ಜೇನುನೊಣಗಳ ಪ್ರಮುಖ ಆಹಾರವೇ ಹೂಗಳ ಮಕರಂದ. ಆ ಕಾರಣಕ್ಕಾಗಿಯೇ ಅವುಗಳು ಕೃಷಿ ಭೂಮಿಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಆದರೆ ಇತ್ತೀಚೆಗಿನ ಬದಲಾದ ಕೃಷಿ ಪದ್ದತಿಯಿಂದ ಅವುಗಳ ಜೀವನ ಕ್ರಮವೇ ಬದಲಾಗಿದೆ. ಕೃಷಿಯಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಹೆಚ್ಚಾಗುತ್ತಿರುವುದು ಇದಕ್ಕೆ ಮತ್ತೂಂದು ಪ್ರಮುಖ ಕಾರಣವಾಗಿದೆ.
ಅಮೆರಿಕ 13 ರಾಜ್ಯಗಳಲ್ಲಿ ನಡೆದ ಸಂಶೋಧನೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಇದರಲ್ಲಿ 5 ರಾಜ್ಯಗಳಲ್ಲಿ ಜೇನುನೊಣಗಳ ಕೊರತೆಯೇ ಆಹಾರ ಉತ್ಪಾದನೆ ಕಡಿಮೆಯಾಗಲು ಕಾರಣ ಎಂಬುದನ್ನು ನಿರೂಪಿಸುತ್ತವೆ. ಸೇಬು ಹಾಗೂ ಚೆರ್ರಿ ಉತ್ಪಾದನೆ ಕುಂಠಿತಗೊಳ್ಳಲು ಕೂಡ ಇದೇ ಪ್ರಮುಖ ಕಾರಣವಾಗಿದೆ. ಅಮೆರಿಕ, ಸ್ವೀಡನ್ ಮತ್ತು ಕೆನಡಾ ವಿಜ್ಞಾನಿಗಳು ಜಂಟಿಯಾಗಿ ಇದರ ಬಗ್ಗೆ ಸಂಶೋಧನೆ ನಡೆಸಿ 131 ಕೃಷಿ ಭೂಮಿಗಳಲ್ಲಿ ಜೇನುನೊಣಗಳ ಉಪಸ್ಥಿತಿಯ ಬಗ್ಗೆ ತಿಳಿದುಕೊಂಡಿದ್ದಾರೆ.
ಪರಾಗಸ್ಪರ್ಶದಲ್ಲಿ ಕಾಡು ಜೇನುನೊಣಗಳು ಇತರ ಜೇನುನೊಣಗಳಿಗಿಂತ ಅತಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಅಮೆರಿಕದಲ್ಲಿ ವಿನಾಶದ ಭೀತಿಯಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಈ ಕಾಡು ಜೇನುನೊಣಗಳು ಕೂಡ ಸೇರಿಕೊಂಡಿವೆ.
ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ ಪರಾಗಸ್ಪರ್ಶದಲ್ಲಿ ಉಂಟಾಗುವ ಆಹಾರ ಉತ್ಪನ್ನಗಳ ಪ್ರಮಾಣ ಅಗಾಧವಾಗಿದೆ. ಪರಾಗಸ್ಪರ್ಶದ ಕೊರತೆಯು ಕೆಲವು ಹಣ್ಣು ಅಥವಾ ತರಕಾರಿಗಳು ದುಬಾರಿಯಾಗಲು ಕಾರಣವಾಗಬಹುದು. ಆದರೆ ಅಕ್ಕಿ, ಜೋಳ, ರಾಗಿಗಳಿಗೆ ಇದು ಅನ್ವಯವಾಗುವುದಿಲ್ಲ. ಅವುಗಳಿಗೆ ಗಾಳಿಯ ಮೂಲಕವೇ ಪರಾಗಸ್ಪರ್ಶ ನಡೆಯುತ್ತವೆ ಎಂದಿದೆ.
ಪ್ರಸ್ತುತ ಕೃಷಿ ತೀವ್ರವಾಗುತ್ತಿದೆ ಮತ್ತು ಜೇನುನೊಣಗಳು ಸೀಮಿತ ಸಂಖ್ಯೆಯಲ್ಲಿವೆ. ಈಗ ಅಷ್ಟೇನೂ ತೊಂದರೆ ಇಲ್ಲದಿದ್ದರೂ ಮುಂದೊಂದು ದಿನ ಅಪಾಯದ ಹಂತವನ್ನು ದಾಟಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.