ಅಕ್ಷಯ ತೃತೀಯ ಸಂತಸ, ಸಮೃದ್ಧಿಯ ಹಬ್ಬ
Team Udayavani, May 3, 2021, 9:38 PM IST
ಹಬ್ಬಗಳು ನಮ್ಮ ದೈನಂದಿನ ಬದುಕಿನ ಏಕತಾನತೆಯನ್ನು ಮರೆಸುತ್ತವೆ. ಬದುಕಿಗೆ ಹೊಸ ಉÇÉಾಸ ತುಂಬಿಕೊಟ್ಟು, ಜೀವನೋತ್ಸಾಹ ಹೆಚ್ಚಿಸುತ್ತವೆ. ಇಂಥ ಒಂದು ಹಬ್ಬ “ಅಕ್ಷಯ ತೃತೀಯ’. ಇದು ಸಮೃದ್ಧಿಯ ಪ್ರತೀಕವಾಗಿ ಆಚರಿಸಲ್ಪಡುವ ಹಬ್ಬ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಅಕ್ಷಯ ತೃತೀಯ. ಇದನ್ನು ತ್ರೇತಾಯುಗದ ಆದಿ ಎನ್ನಲಾಗುತ್ತದೆ. ಈ ದಿವಸ ಯಾವುದೇ ಶುಭಕಾರ್ಯಗಳನ್ನು ಮಾಡಿದರೂ ಅದು ಯಶಸ್ವಿಯಾಗಿ ನಡೆದು, ಅಕ್ಷಯ ಫಲಗಳನ್ನು ನೀಡುವುದೆಂಬ ನಂಬಿಕೆ ಜನಮನದಲ್ಲಿದೆ.
ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ಮುತ್ತು, ರತ್ನ… ಇತ್ಯಾದಿ, ಬೆಲೆಬಾಳುವ ವಸ್ತುಗಳ ಖರೀದಿ, ಗೃಹಪ್ರವೇಶ, ಭೂಮಿ ಪೂಜೆ, ವ್ಯಾಪಾರ ವಹಿವಾಟಿನಲ್ಲಿ ಹಣ ತೊಡಗಿಸಿ ಕಾರ್ಯ ಪ್ರಾರಂಭಿಸಿದರೆ ಉತ್ತರೋತ್ತರ ಅಭಿವೃದ್ಧಿ ಹೊಂದುತ್ತಾ, ಕೈಗೊಂಡ ಕೆಲಸಗಳೆಲ್ಲವೂ ಅಕ್ಷಯವಾಗುವುದೆಂದು ನಂಬಲಾಗಿದೆ. ರೈತರು ಹೊಲದಲ್ಲಿ ಮೊಟ್ಟ ಮೊದಲು ಉತ್ತುಬಿತ್ತುವುದಕ್ಕೂ ಇದು ಪುಣ್ಯ ಮುಹೂರ್ತ. ಹೊಸ ಉದ್ಯಮ, ಉದ್ಯೋಗಗಳನ್ನು ಪ್ರಾರಂಭಿಸಲು ಇದಕ್ಕಿಂತ ಪ್ರಶಸ್ತ ದಿನ ಮತ್ತೂಂದಿಲ್ಲ.
ಅಕ್ಷಯ ತೃತೀಯಕ್ಕೂ, ಚಿನ್ನ ಖರೀದಿಗೂ ಏನು ಸಂಬಂಧ ಎನ್ನುವ ಕುರಿತು ಹಿಂದೊಮ್ಮೆ ಓದಿದ ಒಂದು ಪೌರಾಣಿಕ ಹಿನ್ನೆಲೆ ನೆನಪಾಗುತ್ತಿದೆ. ಅಕ್ಷಯ ತೃತೀಯದಂದು, ಮನುಜ ಕುಲವನ್ನು ಮೋಹಕ್ಕೊಳಪಡಿಸುವ ಬಂಗಾರ ಎಂಬ ಅಮೂಲ್ಯ ಲೋಹ ಈ ಭೂಮಿಯಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತಂತೆ. ಜಂಬೂ ಎಂದರೆ ಸಂಸ್ಕೃತದಲ್ಲಿ ನೇರಳೆ ಹಣ್ಣು ಎಂದರ್ಥ. ಜಂಬೂ ಎಂಬುದು ನದಿಯ ಹೆಸರೂ ಹೌದು. ಜಂಬೂ ನದಿಯ ತೀರದಲ್ಲಿ ವಿಪುಲವಾಗಿದ್ದ ಜಂಬೂ ವೃಕ್ಷಗಳಿಂದ, ನೇರಳೆ ಹಣ್ಣಿನ ರಸ ಹರಿದು, ಅದು ಅಲ್ಲಿಯ ಮಣ್ಣು, ನೀರು, ಸೂರ್ಯ ರಶ್ಮಿಯೊಂದಿಗೆ ಸೇರಿ ಬಂಗಾರದ ನಿಕ್ಷೇಪವಾಯಿತು ಎಂದು ಪುರಾಣಗಳಲ್ಲಿ ಉÇÉೇಖವಿದೆ. ನೇರಳೆ ಹಣ್ಣಿನ ಗಾಢ ಬಣ್ಣದ ರಸವು ನಿಸರ್ಗದೊಂದಿಗೆ ಮಿಳಿತವಾಗಿ ಮಿನುಗುವ ಬಂಗಾರವಾಯಿತು ಎಂಬುದೇ ಎಂತಹ ಸುಂದರ ಕಲ್ಪನೆ. ಇಲ್ಲಿ ನಂಬಿಕೆಗಳ ಪಾಲು ಹೆಚ್ಚು !
ಜಗದ್ಗುರು ಶಂಕರಾಚಾರ್ಯರು ಒಮ್ಮೆ ಬಡ ದಂಪತಿಗಳ ಮನೆಗೆ ಭಿಕ್ಷೆಗೆ ಬರುತ್ತಾರೆ. ಆದರೆ, ಗುರುವಿಗೆ ನೀಡಲು ಅವರ ಮನೆಯಲ್ಲಿ ಯಾವ ಉತ್ತಮ ಪದಾರ್ಥವೂ ಇರುವುದಿಲ್ಲ. ಮನೆಯಾಕೆ ತಮ್ಮಲ್ಲಿದ್ದ ಒಣ ನೆಲ್ಲಿಕಾಯಿಯನ್ನೇ ಭಕ್ತಿಯಿಂದ ಶಂಕರರಿಗೆ ಅರ್ಪಿಸುತ್ತಾಳೆ. ಅವರ ಭಕ್ತಿಗೊಲಿದ ಶಂಕರರು ಕನಕಧಾರಾ ಸ್ತೋತ್ರವನ್ನು ರಚಿಸಿ, ದೇವಿ ಮಹಾಲಕ್ಷಿ$¾àಯಲ್ಲಿ ಆ ದಂಪತಿಯ ದಾರಿದ್ರ್ಯ ನಿವಾರಣೆಗಾಗಿ ಪ್ರಾರ್ಥಿಸುತ್ತಾರೆ. ಆಗ ಆ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿಗಳ ಮಳೆ ಸುರಿಯಿತೆಂಬ ಮತ್ತೂಂದು ಪ್ರತೀತಿಯೂ ಅಕ್ಷಯ ತೃತೀಯದೊಂದಿಗೆ ಬಂಗಾರದ ನಂಟು ಬೆಸೆದುಕೊಳ್ಳಲು ಕಾರಣವಾಗಿರಬಹುದು.
ಪ್ರತಿ ಹಬ್ಬಗಳಿಗೂ ಅದರದ್ದೇ ಆದ ಮಹತ್ವವಿದೆ. ಅದರಲ್ಲೂ ಅಕ್ಷಯ ತೃತೀಯವಂತೂ ವೈಶಿಷ್ಟ್ಯಗಳ ಸರಮಾಲೆಯನ್ನೇ ಧರಿಸಿದೆ. ಬಡತನದಲ್ಲಿ ಬೆಂದು ಬಸವಳಿದಿದ್ದ ಕುಚೇಲ ತನ್ನ ಪ್ರಿಯ ಸಖನಾದ ಶ್ರೀಕೃಷ್ಣನ ಬಳಿ ಹೋಗಿ ತನ್ನಲ್ಲಿದ್ದ ಹಿಡಿ ಅವಲಕ್ಕಿಯನ್ನು ಕೊಟ್ಟಾಗ, ಶ್ರೀ ಕೃಷ್ಣ ಅದನ್ನೇ ಪ್ರೀತಿಯಿಂದ ಸ್ವೀಕರಿಸಿ, ಬಾಲ್ಯದ ಗೆಳೆಯನಿಗೆ ಸಕಲ ಸಂಪತ್ತನ್ನು ಕರುಣಿಸಿದ್ದು ಇದೇ ಅಕ್ಷಯ ತೃತೀಯದಂದು.
ವೇದವ್ಯಾಸರು, ಮುದ್ದು ಗಣಪತಿ ಹಾಕಿದ ಕರಾರಿಗೆ ಒಪ್ಪಿ ಮಹಾಭಾರತ ಬರೆಯಲು ಆರಂಭಿಸಿದ ಶುಭ ದಿನವೂ ಇದೇ. ಪಾಂಡವರು ವನವಾಸದಲ್ಲಿದ್ದಾಗ ಶ್ರೀ ಕೃಷ್ಣನ ಆದೇಶದಂತೆ ಸೂರ್ಯದೇವನನ್ನು ಪ್ರಾರ್ಥಿಸಿ
ಅಕ್ಷಯ ಪಾತ್ರೆ ಪಡೆದಿದ್ದು ಇದೇ ದಿನ. ಕರು ನಾಡ ದೇವಿ ಚಾಮುಂಡೇಶ್ವರಿ ಮಹಿಷಾ ಸುರರನ್ನು ಸಂಹಾರ ಮಾಡಿ ಜಗತ್ತಿನ ಕಂಟಕವನ್ನು ಕಳೆದಿದ್ದೂ ಈ ದಿನವೇ.
ಮಹಾವಿಷ್ಣುವು ತನ್ನರಸಿ ಲಕ್ಷ್ಮೀಯೊಡ ಗೂಡಿ ಇದೇ ದಿನ ಗಂಗಾಪೂಜೆ ಸಲ್ಲಿಸಿದ್ದ ರಿಂದ ಗಂಗಾಸ್ನಾನಕ್ಕೂ ಮಹತ್ವವಿದೆ. ಭಗೀರಥನ ಅವಿರತ ಪ್ರಯತ್ನಕ್ಕೆ ಒಲಿದು ಗಂಗಾ ಮಾತೆಯು ಭುವಿಗೆ ಇಳಿದಿದ್ದೂ ಅಕ್ಷಯ ತೃತೀಯದ ಪುಣ್ಯದಿನವೇ.
ಅಕ್ಷಯ ತೃತೀಯ ಭೂಮಿಗೆ ಬಂಗಾರ ತಂದ ದಿನ ಮಾತ್ರವಲ್ಲ, ಬಂಗಾರಕ್ಕಿಂತಲೂ ಮಿಗಿಲಾದ ಮಹಾ ಪುರುಷರನ್ನು ಈ ಭೂಮಿಗಿತ್ತ ದಿನವೂ ಹೌದು. ದಶಾವತಾರಗಳಲ್ಲಿ ಒಂಬತ್ತನೆಯದಾದ ಪರಶುರಾಮನ ಅವತಾರವಾಗಿದ್ದು ಈ ದಿನದಂದು. ಹನ್ನೆರಡನೇ ಶತ ಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವಣ್ಣನವರ ಜನ್ಮದಿನವೂ ಇಂದೇ. ಹಿಂದೂ ಧರ್ಮದ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿದ ಛತ್ರಪತಿ ಶಿವಾಜಿ ಹುಟ್ಟಿದ ದಿನ, ಸಿಖ್ ಮತದ ಸ್ಥಾಪಕ ರಾದ ಗುರುನಾನಕರು ಜನಿಸಿದ್ದೂ ಅಕ್ಷಯ ತೃತೀಯದ ಪರಮ ಪಾವನ ದಿನದಲ್ಲಿಯೇ.
ಅಕ್ಷಯ ತದಿಗೆಯು ಬಿರುಬೇಸಗೆಯ ವೈಶಾಖ ಮಾಸದಲ್ಲಿ ಬರುವುದರಿಂದ ಈ ದಿನ, ಗುರು-ಹಿರಿಯರನ್ನು, ಬಂಧು-ಮಿತ್ರರನ್ನು ಮನೆಗಳಿಗೆ ಆಹ್ವಾನಿಸಿ ಪಾನಕ, ಪನಿವಾರಗಳನ್ನು ಕೊಟ್ಟು, ಯಥಾಶಕ್ತಿ ದಾನಧರ್ಮಾದಿ ಗಳನ್ನು ಮಾಡುವ ಸಂಪ್ರದಾಯ
ವಿದೆ. ಮಾವಿನ ಹಣ್ಣು ಈ ಸಮಯದಲ್ಲಿ ಅಧಿಕವಾಗಿ ಲಭ್ಯವಿರುವುದರಿಂದ ಆ ಹಣ್ಣನ್ನು, ತಾಂಬೂಲ, ದಕ್ಷಿಣೆ ಯೊಂದಿಗೆ ದಾನವಾಗಿ ಕೊಡುವ ಪದ್ಧತಿಯೂ ಇದೆ. ಈಗ ಕೊರೊನಾ ಮಹಾಮಾರಿಯ ಅಬ್ಬರ ಎÇÉೆಲ್ಲೂ ಮಿತಿಮೀರಿ ಹಬ್ಬದ ಎಲ್ಲ ಆಚರಣೆಗಳಿಗೂ ಕಡಿವಾಣ ಹಾಕಿದೆ. ಈ ಸಂಕಟ ಸಮಯದಲ್ಲಿ ಹೊರಗೆಲ್ಲ ಸುತ್ತಾಡಿ, ಆಪತ್ತನ್ನು ಆಹ್ವಾನಿಸಿಕೊಳ್ಳುವ ಬದಲು, ಮನೆಯೊಳಗಿನ ಸುರಕ್ಷಿತ ಆವರಣದಲ್ಲಿ ಕುಳಿತು ದೇವರ ಧ್ಯಾನ,
ಮನಸ್ಸಿಗೆ ನೆಮ್ಮದಿ ಕೊಡುವ ಮಂತ್ರ ಸ್ತೋತ್ರಗಳ ಪಾರಾಯಣ ಮಾಡ ಬಹುದು. ಈ ದಿನದಂದು ಮಾಡುವ ಜಪ- ತಪಗಳಿಗೂ ಅಧಿಕ ಫಲವಿದೆ. ಸಾಲಸೋಲ ಮಾಡಿ ಕೈಗೆಟುಕದಂತೆ ಮೇಲೇರಿ ಕುಳಿತಿರುವ ಚಿನ್ನ ಖರೀದಿಸುವ ಹಂಬಲ ನಮಗೇಕೆ? ಈ ಬದುಕು ಪ್ರತಿನಿತ್ಯವೂ ನಮಗೆ ತಂದುಕೊಡುವ ಅಸಂಖ್ಯ ಸಣ್ಣಪುಟ್ಟ ಖುಷಿಗಳೇ ದೊಡ್ಡ ಉಡುಗೊರೆಯಲ್ಲವೇ? ಈ ಭೂಮಿಯ ಮೇಲಿನ ಬಡತನ ನೀಗಿ, ನಗು- ನೆಮ್ಮದಿಗಳು ಅಕ್ಷಯವಾಗಿರಲಿ. ಪ್ರಪಂಚದ ಎಲ್ಲ ಜೀವರಾಶಿಗಳಿಗೆ ಆರೋಗ್ಯ-ನೆಮ್ಮದಿಯನ್ನು ಈ ಅಕ್ಷಯ ತೃತೀಯ ತುಂಬಿ ತರಲೆಂದು ಹಾರೈಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Mahayuti: ಈ ಬಾರಿ ನಾನು ದೇವೇಂದ್ರ ಫಡ್ನವೀಸ್ ಹೆಸರು ಸೂಚಿಸಿ ಋಣ ತೀರಿಸಿದೆ: ಶಿಂಧೆ
Toll: ವರ್ಷದಲ್ಲೇ 438 ಕೋ.ರೂ. ಟೋಲ್ ಶುಲ್ಕ ಸಂಗ್ರಹ
Electricity Price Hike: ಮೂರು ವರ್ಷದ ವಿದ್ಯುತ್ ದರ ಒಂದೇ ಬಾರಿ ಏರಿಕೆ?
Puttur: ಎಪ್ರಿಲ್, ಮೇ ಬಿಸಿಲ ತಾಪ: ಹಲವೆಡೆ ಅಡಿಕೆ ಮರ ಖಾಲಿ!
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.