ಪ್ಲಾಸ್ಟಿಕ್‌ಗೆ ಪರ್ಯಾಯ ಬಯೋಪ್ಲಾಸ್ಟಿಕ್
Team Udayavani, Mar 12, 2021, 7:58 PM IST
ವಿಶ್ವಾದ್ಯಂತ ಇಂದು ಇರುವ ಬಹುದೊಡ್ಡ ಸವಾಲು ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್. ಇದರ ಬಳಕೆಯನ್ನು ಕಡಿಮೆಗೊಳಿಸಲು ಎಲ್ಲ ದೇಶಗಳು ಪ್ರಯತ್ನಿಸುತ್ತಿದೆಯಾದರೂ ಸಂಪೂರ್ಣ ನಿಯಂತ್ರಿಸುವುದು ಅಸಾಧ್ಯವೆಂದೇ ಪರಿಗಣಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ಲಾಸ್ಟಿಕ್ ನಮ್ಮ ದಿನ ಬಳಕೆಯ ಅಗತ್ಯವೆಂದೇ ಪರಿಗಣಿತವಾಗಿರುವುದು.
ಕೈ ಚೀಲ, ಪ್ಲೇಟ್, ಕಪ್, ಹೀಗೆ ಒಂದಲ್ಲ ಒಂದು ರೀತಿಯ ರೂಪ ತಾಳುವ ಪ್ಲಾಸ್ಟಿಕ್ ನಮ್ಮ ದಿನಬಳಕೆಯ ಅಗತ್ಯತೆಯಲ್ಲಿ ಸೇರಿಕೊಂಡಿದೆ. ಹೀಗಾಗಿ ಇದರ ನಿರ್ಮೂಲನೆಯೇ ಅಸಾಧ್ಯವೇನೋ ಎನ್ನುವ ಯೋಚನೆಯಲ್ಲಿರುವಾಗಲೇ ಭಾರತದ ಪಂಜಾಬ್ ಮೂಲದ ಸಿಡ್ನಿಯ ವಿದ್ಯಾರ್ಥಿನಿಯೊಬ್ಬಳು ನಡೆಸಿದ ಸಂಶೋಧನೆ ಜಗತ್ತಿನ ಗಮನ ಸೆಳೆದಿದೆ.
ಆಸ್ಟ್ರೇಲಿಯಾದಲ್ಲಿ ನಿತಿನ್ ಹಾಗೂ ಆಷಿಮಾ ಎಂಬವರ ಮಗಳಾಗಿ ಜನಿಸಿದ ಆಂಜಲೀನ ಅರೋರ, 2019ರಲ್ಲಿ ಸಿಡ್ನಿ ಬಾಲಕಿಯರ ಹೈಸ್ಕೂಲ್‌ನಿಂದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾದ ಪ್ರತಿಭಾವಂತ ವಿದ್ಯಾರ್ಥಿನಿ. ಪ್ರಸ್ತುತ ಮೆಡಿಕಲ್ ಡಿಗ್ರಿಯ ಎರಡನೇ ವರ್ಷದಲ್ಲಿ ಓದುತ್ತಿದ್ದಾಳೆ.
ಈಗಾಗಲೇ ಪ್ಲಾಸ್ಟಿಕ್ ಕೈ ಚೀಲಕ್ಕೆ ಪರ್ಯಾಯವಾಗಿ ಸಿಗಡಿಯ (ಶ್ರೀಂಪ್) ಕವಚ ಮತ್ತು ಜೇಡ ನೇಯುವ ಬಲೆಯ ದಾರದಿಂದ ಹಗುರವಾದ ಮತ್ತು ದೃಢವಾದ ಬಯೋಪ್ಲಾಸ್ಟಿಕ್ ತಯಾರಿ ಮಾಡುವುದರಲ್ಲಿ ಯಶಸ್ವಿಯಾಗಿರುವ ಈಕೆ 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಈ ಕುರಿತು ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಳು.
ಸೂಪರ್ ಮಾರ್ಕೆಟ್‌ಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಜನರು ಖರೀದಿ ಮಾಡುತ್ತಿರುವುದನ್ನು ನೋಡಿ ಈ ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಯೋಪ್ಲಾಸ್ಟಿಕ್ ಯಾಕೆ ತಯಾರಿ ಮಾಡಬಾರದು ಎನ್ನುವ ಯೋಚನೆ ಆಂಜ ಲೀ ನ ಳಿಗೆ ಹೊಳೆದಿತ್ತು. ಈ ನಿಟ್ಟಿನಲ್ಲಿ ಅವಿರತವಾಗಿ ಸಂಶೋಧನೆ ನಡೆಸಿ ಬಯೋಪ್ಲಾಸ್ಟಿಕ್ ತಯಾರಿ ಮಾಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.
ಪ್ರಕೃತಿಯ ರಕ್ಷಣೆಯ ಕಾರ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸ್ಟ್ರೇಲಿಯಾದ ವಲ್ಡ…ì ವೈಡ್ ಫಂಡ್ ಫಾರ್ ನೇಚರ್ (WWF) ಸಂಸ್ಥೆಯ ಪ್ರಕಾರ ನಾವು ಬಳಸುವ ಪ್ಲಾಸ್ಟಿಕ್ ಬಾಟಲ…, ಕಪ್ ಕರಗಲು 450 ವರ್ಷಗಳು, ಪ್ಲಾಸ್ಟಿಕ್ ಸ್ಟ್ರಾಗಳು ಕರಗಲು 200 ವರ್ಷಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಕರಗಲು ಸುಮಾರು 20 ವರ್ಷಗಳೇ ಬೇಕಾಗುತ್ತವೆ. ಆದರೆ ಈಗಿರುವ ಪ್ಲಾಸ್ಟಿಕ್‌ಗಿಂತ 1.5 ದಶ ಲಕ್ಷದಷ್ಟು ವೇಗವಾಗಿ ಅಂದರೆ ಸುಮಾರು 33 ದಿನಗಳಲ್ಲಿ ಬಯೋಪ್ಲಾಸ್ಟಿಕ್ ಕರಗುತ್ತದೆ ಎನ್ನಲಾಗಿದೆ.
ಜನರಿಗೆ ಪ್ರಯೋಜನ ಕಾರಿಯಾ ಗುವುದು ಮಾತ್ರವಲ್ಲದೆ ಪರಿಸರಕ್ಕೆ ಹಾನಿ ಯನ್ನುಂಟು ಮಾಡದ ಯಾವುದಾದರೂ ವಸ್ತು ಇರಲೇಬೇಕೆಂದು ಆಲೋಚನೆ ಮಾಡಿದಾಗಲೇ ಹೊಳೆದದ್ದು ಬಯೋಡೀ ಗ್ರೇಡಬಲ್ ಪ್ಲಾಸ್ಟಿಕ್ ವಿಚಾರ ಎನ್ನುತ್ತಾಳೆ ಆಂಜಲೀನ. ಪ್ರಶಸ್ತಿಗಳು ಆಂಜಲೀನಳ ಈ ಅನ್ವೇಷಣೆಗೆ 2018ರಲ್ಲಿ ಇನೋವೇಟರ್ ಟು ಮಾರ್ಕೆಟ್ ಪ್ರಶಸ್ತಿ, ಬಿಲಿಟನ್ ಫೌಂಡೇಶನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಪ್ರಶಸ್ತಿಗಳು ದೊರತಿರುವುದಲ್ಲದೆ ಇಂಟೆಲ್ ಇಂಟರ್‌ನ್ಯಾಷನಲ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಫೇರ್‌ನಲ್ಲಿ 81 ದೇಶಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ 4ನೇ ಸ್ಥಾನ ಪಡೆದಿದ್ದಾಳೆ. ಅಮೆರಿಕದ ಅರಿಜೋನ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇತನವನ್ನೂ ಗಳಿಸಿದ್ದಾಳೆ. ಟೆಡ್ ಟಾಕ್‌ನಲ್ಲಿ ತನ್ನ ಸಾಧನೆಯ ಪಯಣವನ್ನು ಎಲ್ಲರೊಂದಿಗೂ ಹಂಚಿಕೊಂಡಿರುವ ಆಂಜಲೀನಳ ಈ ಸಾಧನೆ ಇಂದಿನ ಯುವತಿಯರಿಗೆ ಬಹು ದೊಡ್ಡ ಸ್ಫೂರ್ತಿಯಾಗಿದೆ.
ತ್ರಿಷಾ ಶಂಕರ್,
ಸಿಡ್ನಿ, ಆಸ್ಟ್ರೇಲಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.