ಕಾಪ್ಟರ್‌ ಪತನವಾದರೂ ಇಬ್ಬರು ಬದುಕುಳಿದೆವು


Team Udayavani, Dec 23, 2021, 7:50 AM IST

ಕಾಪ್ಟರ್‌ ಪತನವಾದರೂ ಇಬ್ಬರು ಬದುಕುಳಿದೆವು

1962ರಲ್ಲಿ ಸೇನೆಗೆ ಸೇರ್ಪಡೆಯಾಗಿ ಟೆಲಿಕಮ್ಯುನಿಕೇಷನ್‌, ಇಂಟೆಲಿಜೆನ್ಸಿ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಜಿ.ಟಿ ಆಳ್ವ ಅವರು 1971ರ ಬಾಂಗ್ಲಾ ಯುದ್ಧದಲ್ಲಿ ಹೆಲಿಕಾಪ್ಟರ್‌ ಮೇಲೆ ನಡೆದ ದಾಳಿಯಲ್ಲಿ ಪವಾಡ ಸದೃಶವಾಗಿ ಬದುಕುಳಿದವರು. ಇವರು ದ.ಕ ಜಿಲ್ಲೆಯ ನರಿಂಗಾನದವರಾಗಿದ್ದು ಮಂಗಳೂರಿನ ಲೋಹಿತ್‌ನಗರದಲ್ಲಿ ವಾಸವಾಗಿದ್ದಾರೆ.

ಸಿಎಚ್‌ಎಂ ಜಿ.ಟಿ. ಆಳ್ವ
ಬಾಂಗ್ಲಾ ಯುದ್ಧ 1971ರ ಡಿಸೆಂಬರ್‌ನಲ್ಲಿ ಔಪಚಾರಿಕವಾಗಿ ಆರಂಭವಾಗಿತ್ತು. ಆದರೆ ಅದಕ್ಕೆ ಪೂರ್ವಭಾವಿಯಾಗಿ ಸೆಪ್ಟಂಬರ್‌ನಲ್ಲಿಯೇ ನಮ್ಮ ತಯಾರಿ ನಡೆಯುತ್ತಿತ್ತು. ಪೂರ್ವ ಪಾಕಿಸ್ಥಾನದ ಗಡಿ ಬಳಿ ಇರುವ ಚಹಾ ತೋಟದಲ್ಲಿ ನಮ್ಮ ಕ್ಯಾಂಪ್‌ ಮಾಡಿದ್ದೆವು. ನಾನು ಪೂರ್ವ ಪಾಕಿಸ್ಥಾನದೊಳಗೆ ತೆರಳಿ ಅಲ್ಲಿ ಬಾಂಗ್ಲಾ ವಿಮೋಚನೆಗಾಗಿ ಹೋರಾಡುತ್ತಿದ್ದ ಮುಕ್ತಿವಾಹಿನಿಯವರ ಜತೆಗೆ ಇದ್ದು ಗೌಪ್ಯವಾಗಿಯೇ ಅಲ್ಲಿಂದ ಮಾಹಿತಿ ಸಂಗ್ರಹಿಸಿ ನೀಡುತ್ತಿದ್ದೆ. ಅದೆಷ್ಟೋ ಊರುಗಳಿಗೆ ತಿರುಗಾಡಿದ್ದೇವೆ. ಹಲವೆಡೆ ವಯರ್‌ಲೆಸ್‌ ಬಳಕೆ ಮಾಡಿದ್ದರೆ ಇನ್ನು ಕೆಲವೆಡೆ ಕೈಯಲ್ಲಿ ಯಾವುದೇ ಉಪಕರಣಗಳನ್ನು ಕೂಡ ಇಟ್ಟುಕೊಳ್ಳುವಂತಿರಲಿಲ್ಲ. ಸೈನ್ಯದ ಸಮವಸ್ತ್ರದ ಬದಲು ಸಾಮಾನ್ಯ ಉಡುಗೆಯನ್ನು ಬಳಸಿ ಗುಪ್ತಚರನಾಗಿ ಇದ್ದೆ. ಮುಕ್ತಿವಾಹಿನಿಯವರು ನನಗೆ ಅಲ್ಲಿನ ಪ್ರಮುಖ, ಆಯಕಟ್ಟಿನ ಸ್ಥಳಗಳ ಮಾಹಿತಿಯನ್ನು ನೀಡುತ್ತಿದ್ದರು. ಅದನ್ನು ಕೋಡ್‌ ವರ್ಡ್‌ನಲ್ಲಿ ನಮ್ಮ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯವರಿಗೆ ನೀಡುವ ಜವಾಬ್ದಾರಿ ನನ್ನದಾಗಿತ್ತು.

ಪಾಕ್‌ ಸೈನಿಕರ ಕಣ್ಣಿಗೆ ಬಿದ್ದಿದ್ದರೆ ಜೀವನಪರ್ಯಂತ ಜೈಲಿನಲ್ಲಿರಬೇಕಿತ್ತು. ಬಳಿಕ ಚಿತ್ತಗಾಂಗ್‌ ಬಳಿಯ ನಮ್ಮ ಕ್ಯಾಂಪ್‌ ಕೇಂದ್ರೀಕರಿಸಿಕೊಂಡಿದ್ದೆವು. ಪೂರ್ವ ಪಾಕಿಸ್ಥಾನದ 4 ಜಿಲ್ಲೆಗಳನ್ನು ಆಕ್ರಮಿಸುವ ಆದೇಶ ನಮಗೆ ನೀಡಲಾಗಿತ್ತು. ಡಿ.12ರಂದು ಆ 4 ಜಿಲ್ಲೆಗಳನ್ನು ಕೂಡ ಗೆದ್ದುಕೊಂಡೆವು. ಪಾಕ್‌ ಸೈನಿಕರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಅವರನ್ನು ಅಲ್ಲಲ್ಲಿ ಇದ್ದ ಶಾಲೆ, ಇತರ ಕಟ್ಟಡಗಳಲ್ಲಿ ಕೂಡಿಹಾಕಿದ್ದೆವು. ಡಿ.12ರ ತಡರಾತ್ರಿ 2 ಗಂಟೆಗೆ ನನಗೆ ಬಂದ ತುರ್ತು ಸಂದೇಶದಂತೆ ನಾನು ಹೊರಟಿದ್ದೆ.

ಹೆಲಿಕಾಪ್ಟರ್‌ನಲ್ಲಿ ವಾಯುಪಡೆಯ ಮೂವರು ಮತ್ತು ಇತರ ಇಬ್ಬರು ಸೈನಿಕರು 8 ಮೌಂಟೇನ್‌ ಡಿವಿಜನ್‌ ಕಡೆಗೆ ಹೊರಟಿದ್ದೆವು. ಹೊರಟು ಸುಮಾರು 40 ನಿಮಿಷಗಳಾದಾಗ ನಮ್ಮ ಹೆಲಿಕಾಪ್ಟರ್‌ನಲ್ಲಿ ಭಾರೀ ಸುದ್ದು ಕೇಳಿತು. ಏನಾಯಿತೆಂದು ಗೊತ್ತಾಗಿಲ್ಲ. ನಾನು ಎಲ್ಲಿಗೆ ಎಸೆಯಲ್ಪಟ್ಟಿದ್ದೆಂದೇ ಗೊತ್ತಿಲ್ಲ. ಎಷ್ಟೋ ದಿನಗಳ ಕಾಲ ಕೋಮಾದಲ್ಲಿದ್ದೆ. ಎಚ್ಚರವಾದಾಗ ಹೆಲಿಕಾಪ್ಟರ್‌ನ ಪೈಲಟ್‌ ಸಹಿತ ಒಟ್ಟು 3 ಮಂದಿ ಮೃತಪಟ್ಟಿದ್ದರು ಎಂಬ ಮಾಹಿತಿ ಸಿಕ್ಕಿತು. ನನ್ನ ಕೈ ಕಾಲುಗಳು ತುಂಡಾಗಿ ಮರು ಜೋಡಣೆಯಾದವು. ಮೂರೂವರೆ ತಿಂಗಳು ಆಸ್ಪತ್ರೆಯಲ್ಲಿದ್ದು ಅನಂತರ ಮನೆಗೆ ಬಂದಿದ್ದೆ. ಕೈಕಾಲುಗಳ ಸ್ವಾದೀನ ಕಳೆದುಕೊಂಡಿದ್ದರೂ ಮಾನಸಿಕವಾಗಿ ಪೂರ್ಣ ಸದೃಢನಾಗಿದ್ದರಿಂದ ಸೇನೆ ಮತ್ತೆ ನನಗೆ ಅವಕಾಶ ನೀಡಿತು.

ಈ ಹಿಂದೆ ಗುಪ್ತಚರ ಮತ್ತು ಟೆಲಿಕಮ್ಯುನಿಕೇಶನ್‌ ವಿಭಾಗದಲ್ಲಿ ಸಲ್ಲಿಸಿದ ಸೇವೆಗೆ ಪ್ರಶಂಸೆಯೂ ಲಭಿಸಿತು. ಗುಣಮುಖನಾದ ಮೇಲೆ ಮತ್ತೆ ಡೆಹ್ರಾಡೂನ್‌ನಲ್ಲಿ ಸೇವೆ ಸಲ್ಲಿಸಿದೆ. ಬಾಂಗ್ಲಾ ಯುದ್ಧದ ವೇಳೆ ನನಗೆ 29 ವರ್ಷ. ಈಗ 80 ವರ್ಷ. ದೇಶದ ವಿವಿಧೆಡೆ ಸೇವೆ ಸಲ್ಲಿಸಿ ಕಂಪನಿ ಹವಾಲ್ದಾರ್‌ ಮೇಜರ್‌ ಆಗಿದ್ದೆ. ವೈರ್‌ಲೆಸ್‌ ಆ್ಯಂಡ್‌ ಲೈನ್‌ ಆಪರೇಟಿಂಗ್‌, ಸಿಫ‌ರ್‌, ಇಂಟೆಲಿಜೆನ್ಸಿ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಈಗಲೂ ಕೈ ಕಾಲುಗಳಲ್ಲಿ ರಾಡ್‌ಗಳಿವೆ. 1982ರಲ್ಲಿ ವೈದ್ಯಕೀಯ ಕಾರಣಗಳಿಂದ ಸ್ವಯಂ ನಿವೃತ್ತಿ ಪಡೆದೆ.

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.