ಅಂಬಾನಿ ಪುತ್ರ ಅನಂತ್‌ನ ವಿವಾಹಕ್ಕೆ ಅಂದಾಜು 1,200 ಕೋಟಿ ವೆಚ್ಚ? ಜಗತ್ತಿನ ದುಬಾರಿ ಮದುವೆ
Team Udayavani, Jul 11, 2024, 7:30 AM IST
ವಿಶ್ವದಲ್ಲೇ ಅತ್ಯಂತ ದುಬಾರಿ ಮದುವೆಗೆ ಭಾರತ ಸಾಕ್ಷಿಯಾಗುತ್ತಿದೆ. ಮಾಧ್ಯ ಮ ಗಳ ವರ ದಿ ಗಳ ಪ್ರಕಾ ರ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಪುತ್ರನ ಮದುವೆಗೆ 1,200 ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಮದುವೆಗೆ ವೆಚ್ಚ ಮಾಡುತ್ತಿರುವುದು ಇಡೀ ಜಗತ್ತೇ ಹುಬ್ಬೇರಿಸಿ ನೋಡುವಂತೆ ಮಾಡಿದೆ, ಈ ದುಬಾರಿ ಮದುವೆಯ ಕುರಿತಂತೆ ಒಂದಷ್ಟು ಮಾಹಿತಿ ಇಲ್ಲಿದೆ.
ಭಾರತದಲ್ಲಿ ಮದುವೆ ಸಾಕಷ್ಟು ಜನರಿಗೆ ಜೀವನದ ಅತೀದೊಡ್ಡ ಸವಾಲಾಗಿರುತ್ತದೆ. ಆದರೆ ಅಂಬಾನಿ ಕುಟುಂಬ ಇದೀಗ ಮದುವೆಯಿಂದಲೇ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಇಡೀ ಜಗತ್ತೇ ಬೆರಗಾಗುವಂತೆ ಭಾರತದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಮಗನ ಮದುವೆ ಮಾಡುತ್ತಿದ್ದು, ಇದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಹಲವಾರು ಗಣ್ಯರನ್ನು ಇದಕ್ಕೆ ಆಹ್ವಾನಿಸಿದ್ದು, 5 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದೆ.
ಜು.12ರಿಂದ 14ರ ವರೆಗೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ನಡೆಯಲಿದೆ. 3 ದಿನದ ಮದುವೆ ಕಾರ್ಯಕ್ರಮ ವನ್ನು ಅಂಬಾನಿ ತಮ್ಮ ಮನೆಯಲ್ಲೇ ನಡೆಸಲಿದ್ದಾರೆ. ಮುಂಬಯಿಯಲ್ಲಿರುವ 27 ಅಂತಸ್ತಿನ ಭವ್ಯ ಮಹಲಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಹೊಂದಿಕೊಂಡಂತೇ ಇರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಸುಮಾರು 16,000 ಮಂದಿ ಒಂದೇ ಬಾರಿಗೆ ಭಾಗಿಯಾಗುವಷ್ಟು ಸ್ಥಳಾವಕಾಶವಿದೆ.
ಹಿಂದೂ ಪದ್ಧತಿಯಂತೆ ಅನಂತ್-ರಾಧಿಕಾ ವಿವಾಹ
ಅಂಬಾನಿ ತಮ್ಮ ಪುತ್ರ ಅನಂತ್ ವಿವಾಹವನ್ನು ರಾಧಿಕಾರ ಮರ್ಚಂಟ್ ಜತೆ ಹಿಂದೂ ಸಂಪ್ರದಾಯದಂತೆ ನಡೆಸುತ್ತಿದ್ದಾರೆ. 3 ದಿನಗಳ ಕಾಲ ನಡೆಯುವ ಮದುವೆ “ಅರಿಸಿನ ಶಾಸ್ತ್ರ’ದೊಂದಿಗೆ ಆರಂಭವಾಗಲಿದೆ. ಇದಾದ ಬಳಿಕ ಮೆಹಂದಿ ಶಾಸ್ತ್ರಗಳು ನಡೆಯಲಿವೆ. ಮಾಧ್ಯಮಗಳ ವರದಿ ಪ್ರಕಾರ, ಜು.12ರಂದು ವಿವಾಹ ಶಾಸ್ತ್ರಗಳು, ಜು.13ರಂದು ಆಶೀರ್ವಾದ ಕಾರ್ಯಕ್ರಮ, ಜು.14ರಂದು ಮಂಗಳ ಉತ್ಸವಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳಿಗಾಗಿ ಕುಟುಂಬದ ಎಲ್ಲರಿಗೂ ಜಗತ್ತಿನ ಪ್ರಮುಖ ವಸ್ತ್ರವಿನ್ಯಾಸಕರಿಂದ ದಿರಿಸುಗಳನ್ನು ತಯಾರಿಸಲಾಗಿದೆ.
ಮದುಮಕ್ಕಳಿಗೆ 640 ಕೋಟಿ ವಿಲ್ಲಾ ಗಿಫ್ಟ್
ಮದುಮಕ್ಕಳಾದ ಅನಂತ್ ಅಂಬಾನಿ ಮತ್ತು ರಾಧಿಕಾಗೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ 640 ಕೋಟಿ ರೂ. ಮೌಲ್ಯದ ವಿಲ್ಲಾವನ್ನು ಉಡುಗೊರೆಯಾಗಿ ನೀಡಿದ್ದಾರೆ. ದುಬಾೖಯಲ್ಲಿರುವ ಪಾಮ್ ಜಮೈರಾಹ್‌ನಲ್ಲಿರುವ 3000 ಚದರ ಅಡಿ ವಿಸ್ತೀರ್ಣದ ಈ ವಿಲ್ಲಾವನ್ನು ಅಂಬಾನಿ ಕುಟುಂಬ ಖರೀದಿಸಿದ್ದು, ಇದು ವಿಶಾಲವಾದ 10 ಬೆಡ್‌ರೂಮ್ ಮತ್ತು 70 ಮೀ.ನಷ್ಟು ಖಾಸಗಿ ಬೀಚ್ ಒಳಗೊಂಡಿದೆ. ಆಧುನಿಕವಾಗಿ ಒಳಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಇದು ದುಬಾೖಯಲ್ಲಿ ನಡೆದ 2ನೇ ಅತೀ ದುಬಾರಿ ನಿವಾಸ ಖರೀದಿ ಎನಿಸಿಕೊಂಡಿದೆ.
ಹಾಡಲು ಬೀಬರ್‌ಗೆ 83 ಕೋಟಿ ರೂ.!
ಮದುವೆಗೆ ಕೆಲವು ದಿನ ಬಾಕಿ ಇರುವಂತೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಾಡಲು ಜಗತ್ತಿನ ಖ್ಯಾತ ಪಾಪ್ ಹಾಡುಗಾರ ಕೆನಡಾದ ಜಸ್ಟಿನ್ ಬೀಬರ್ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಾಡಲು ಅವರೊಬ್ಬರಿಗೆ ಅಂಬಾನಿ ಕುಟುಂಬವು 83 ಕೋಟಿ ರೂ ಪಾಯಿ ನೀಡಿದೆ ಎನ್ನ ಲಾ ಗಿದೆ. ಇದು ಭಾರತದಲ್ಲಿ ಗಾಯಕನೊಬ್ಬನಿಗೆ ಒಂದು ದಿನದ ಅವಧಿಯಲ್ಲಿ ನೀಡಿದ ಗರಿಷ್ಠ ಸಂಭಾವನೆ ಎನಿಸಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಈ ವರ್ಷ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಸಹ ಭಾಗಿಯಾಗಿದ್ದರು.
ಅತಿಥಿಗಳು ಯಾರ್ಯಾರು?
ಅನಂತ್ ಅಂಬಾನಿ ಮದುವೆಗೆ ಬಾಲಿವುಡ್ ನಟರು ಹಾಗೂ ರಾಜ ಕಾರಣಿಗಳನ್ನು ಮುಕೇಶ್ ಅಂಬಾನಿ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿ ಖುದ್ದಾಗಿ ಆಹ್ವಾನಿಸಿದ್ದಾರೆ. ಇವರಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಅಜಯ್ ದೇವಗನ್, ಕಾಜೋಲ್, ಅಕ್ಷಯ್ ಕುಮಾರ್ ಅವರನ್ನು ಖುದ್ದಾಗಿ ಆಹ್ವಾನಿಸಿದ್ದಾರೆ. ಉಳಿದಂತೆ ಬಾಲಿವುಡ್‌ನ ಸೆಲೆಬ್ರಿಟಿಗಳು ಹಾಗೂ ಕ್ರಿಕೆಟ್ ಆಟಗಾರರು ಭಾಗಿಯಾಗಲಿದ್ದಾರೆ.
ಮದ್ವೆ ಇನ್ವಿಟೇಶನ್ ಬೆಲೆ ಭಾರತದ ತಲಾದಾಯಕ್ಕಿಂತ 5 ಪಟ್ಟು ಹೆಚ್ಚು!
ಅನಂತ್ ಅಂಬಾನಿ ಮತ್ತು ರಾಧಿಕ ಮರ್ಚೆಂಟ್ ವಿವಾಹಕ್ಕೆ ಆಹ್ವಾನ ನೀಡಲು ಮುಕೇಶ್ ಅಂಬಾನಿ ಅವರು ಮಾಡಿಸಿರುವ ಆಮಂತ್ರಣ ಪತ್ರಿಕೆಯ ಬೆಲೆ ಭಾರತೀಯನ ತಲಾದಾಯಕ್ಕಿಂತ 5 ಪಟ್ಟು ಹೆಚ್ಚು ಮೌಲ್ಯದ್ದಾಗಿದೆ. ಒಂದು ಆಮಂತ್ರಣ ಪತ್ರಿಕೆಯ ಮೌಲ್ಯ ಸುಮಾರು 6-7 ಲಕ್ಷ ರೂ.ನಷ್ಟಿದ್ದು, ಭಾರತೀಯರ ತಲಾದಾಯ 1.5 ಲಕ್ಷ ರೂ.ನಷ್ಟಿದೆ. ಭಾರತದಲ್ಲಿನ ಉದ್ಯಮಗಳಲ್ಲಿ ಪಾವತಿಸಲಾಗುವ ಸರಾಸರಿ ವೇತನ 9.45 ಲಕ್ಷ ರೂ.ನಷ್ಟಿದೆ.
ಮದುಮಗಳು ರಾಧಿಕಾ ಯಾರು?
ಅನಂತ್ ಅಂಬಾನಿ ನಾಳೆ ಕೈ ಹಿಡಿಯಲಿರುವ ರಾಧಿಕಾ ಮರ್ಚೆಂಟ್ ಧನಿಕ ಉದ್ಯಮಿ ವಿರೇನ್ ಮರ್ಚೆಂಟ್ ಪುತ್ರಿ. ವಿರೇನ್ ಅವರು ಎನ್‌ಕೋರ್ ಹೆಲ್ತ್‌ಕೇರ್ ಸಂಸ್ಥೆಯ ಒಡೆಯ. ದೇಶದ ಕೋಟ್ಯಧಿಪತಿಗಳಲ್ಲಿ ಒಬ್ಬರು. ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿರುವ ರಾಧಿಕಾ ತಂದೆಯ ಉದ್ಯಮವನ್ನು ನಡೆಸುವ ಚಾಕಚಕ್ಯತೆ ಹೊಂದಿದವರು. ಭರತನಾಟ್ಯ ಕಲಾವಿದರೂ ಹೌದು. ರಾಧಿಕಾ ಮತ್ತು ಅನಂತ್ ಬಾಲ್ಯದ ಗೆಳೆಯರು.
ಮುಂಬಯಿಯ ಹೊಟೇಲ್‌ಬುಕ್!
ಮುಂಬಯಿಯ ಬಹುತೇಕ ಎಲ್ಲ ಹೊಟೇಲ್‌ಗಳ ರೂಮುಗಳು ಬುಕ್ ಆಗಿವೆ. ಒಂದು ರಾತ್ರಿ ತಂಗುವುದಕ್ಕೆ ಕೆಲವು ಹೊಟೇಲ್‌ಗಳು 91,350 ರೂ. ಚಾರ್ಜ್ ಮಾಡುತ್ತಿವೆ! ಇನ್ನು ಸರಾಸರಿ ಹೊಟೇಲ್ ರೂಂಗಳ ಬೆಲೆ 1 ರಾತ್ರಿಗೆ 13 ಸಾವಿರ ರೂ.ನಷ್ಟಿದೆ.
ಭಾರತದ ಅಗ್ರ 10 ದುಬಾರಿ ಮದುವೆ
1. ಇಶಾ ಅಂಬಾನಿ ಮತ್ತು ಅನಂತ್ ಪಿರಾಮಲ್: 700 ಕೋಟಿ ರೂ.
2. ಸುಶಾಂತೋ ರಾಯ್ ಮತ್ತು ಸಿಮಂತೋ ರಾಯ್: 554 ಕೋಟಿ ರೂ.
3. ಬ್ರಹ್ಮಣಿ ರೆಡ್ಡಿ (ಜನಾರ್ದನ್ ರೆಡ್ಡಿ ಪುತ್ರಿ), ರಾಜೀವ್ ರೆಡ್ಡಿ: 500 ಕೋಟಿ
4. ಸೃಷ್ಟಿ ಮಿತ್ತಲ್ ಮತ್ತು ಗುಲಾಜ್ ಭೇಲ್: 490 ಕೋಟಿ ರೂ.
5. ವನೀಶಾ ಮಿತ್ತಲ್ ಮತ್ತು ಅಮಿತ್ ಭಾಟಿಯಾ: 240 ಕೋಟಿ ರೂ.
6. ಸೋನಮ್ ವಶ್ವಾನಿ ಮತ್ತು ನವೀನ್ ಫ್ಯಾಬಿಯಾನಿ: 210 ಕೋಟಿ ರೂ.
7. ಅದೆಲ್ ಖಾನ್ ಮತ್ತು ಸನಾ ಖಾನ್: 200 ಕೋಟಿ ರೂ.
8. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ: 100 ಕೋಟಿ ರೂ.
9. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ: 77 ಕೋಟಿ ರೂ.
10. ಆಕಾಶ್ ಅಂಬಾನಿ ಮತ್ತು ಶ್ಲೋಕ ಮೆಹ್ತಾ: 70 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.