ಅಂಬೇಡ್ಕರ್‌, ಬುದ್ಧ ಮತ್ತು ದಮ್ಮ


Team Udayavani, Apr 14, 2018, 1:30 AM IST

2.jpg

ಬುದ್ಧನ ದುಃಖ ಲೌಖೀಕ ದುಃಖವೇ ಹೊರತು ಜನ್ಮಾಂತರಗಳದ್ದಲ್ಲ. ಅದು ಮನಸ್ಸಿಗೆ ಅಂಟಿಕೊಳ್ಳುವ ವಿಕಾರಗಳೇ ಹೊರತು ಬೇರೇನೂ ಅಲ್ಲ. ಹುಟ್ಟು ಕೂಡ ಒಂದು ದುಃಖ ಅನ್ನುವ ಕಲ್ಪನೆ, ಬೌದ್ಧ ಧ‌ರ್ಮದ ನಂತರ ಸೇರಿರಬೇಕು ಎಂದು ಅಂಬೇಡ್ಕರ್‌ ಅಭಿಪ್ರಾಯ ಪಡುತ್ತಾರೆ. ಹುಟ್ಟು ಒಂದು ದುಃಖ ಎಂದಾದರೆ ಜೀವನಕ್ಕೆ ಅರ್ಥವಲ್ಲ. 

ಸ್ವತಂತ್ರ ಭಾರತಕ್ಕೆ ಅಂಬೇಡ್ಕರ್‌ ನೇತೃತ್ವದಲ್ಲಿ ಒಂದು ಸಂವಿಧಾನ ವನ್ನು ರಚಿಸಲಾಯಿತು ಎಂಬುದು ನಿಜ. ಆದರೆ ಇದರಿಂದಲೇ ಶ್ರೇಣೀಕೃತವಾದ ಭಾರತೀಯ ಸಮಾಜದಲ್ಲಿ ದಲಿತರಿಗೆ, ಶೋಷಿತರಿಗೆ ಆತ್ಮಗೌರವ ಮತ್ತು ಮಾನವೀಯ ಘನತೆಯಿಂದ ಬದುಕಲು ಸಾಧ್ಯವಾದೀತೆ ಎಂದು ಅಂಬೇಡ್ಕರ್‌ ಚಿಂತಿಸಿದ್ದರು. ಏಕೆಂದರೆ ಭಾರತದಲ್ಲಿ ಕೇವಲ ರಾಜಕೀಯ ಮತ್ತು ಆರ್ಥಿಕ ಬದಲಾವಣೆ ತರುವುದರ ಮೂಲಕ ಸಮಾಜದಲ್ಲಿ ಸಮಾನತೆ ಬರುವುದು ಅಸಾಧ್ಯ. ಈ ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಸ್ಥಾನಗಳು ಬಹಳ ಪ್ರಭಾವಶಾಲಿಗಳಾಗಿವೆ. ಇಲ್ಲಿನ ಸಂತರು ,ಫ‌ಕೀರರು ಯಾವುದೇ ಅಧಿಕಾರ ಮತ್ತು ಆಸ್ತಿ ಇಲ್ಲದೇ ಜನರ ಮೇಲೆ ಅಗಾಧ ಪ್ರಭಾವ ಬೀರಬಲ್ಲರು ಎನ್ನುತ್ತಾರೆ ಅಂಬೇಡ್ಕರ್‌. 

ಎಲ್ಲಿಯವರೆಗೆ ಧರ್ಮ ಮತ್ತು ಶಾಸ್ತ್ರ ಗ್ರಂಥಗಳು ಮೌಡ್ಯ, ಅಸಮಾನತೆ ಮತ್ತು ಶ್ರೇಣೀಕೃತ ಮನಸ್ಸುಗಳನ್ನು ತಿರಸ್ಕರಿಸ ಲಾರವೋ ಅಲ್ಲಿಯವರೆಗೆ ಸಮಾಜದಲ್ಲಿ ಸಮಾನತೆ ಸಾಧ್ಯವಿಲ್ಲ. ಬದಲಾವಣೆಗೆ ಒಪ್ಪದ ಶಾಸ್ತ್ರಗ್ರಂಥ ಮತ್ತು ಧರ್ಮಶಾಸ್ತ್ರಗಳನ್ನು ತ್ಯಜಿಸುವುದೇ ಆಗ ಉಳಿಯುವ ದಾರಿ ಎಂದರು ಅಂಬೇಡ್ಕರ್‌. ಆದರೆ ಅಂಬೇಡ್ಕರ್‌ಗೆ ಆಧುನಿಕತೆಯನ್ನು ನೈತಿಕತೆಯ ನಿಯಂತ್ರ ಣಕ್ಕೆ ಒಳಪಡಿಸಲು ಒಂದು ಸದ್ಧರ್ಮದ ಅವಶ್ಯಕತೆ ಇತ್ತು. ಹೀಗಾಗಿ ಅವರು ಪೂರ್ತಿಯಾಗಿ ಧರ್ಮವನ್ನೇ ತಿರಸ್ಕರಿಸಲಿಲ್ಲ.

ಸ್ವಾತಂತ್ರ್ಯಾ ನಂತರ ಅಂಬೇಡ್ಕರ್‌ ಹೆಚ್ಚು ಹೆಚ್ಚು ಧರ್ಮಗಳ ತೌಲನಿಕ ಅಧ್ಯಯನ ನಡೆಸಿದರು. ಕಟ್ಟಕಡೆಗೆ ಹಿಂದೂ ಸಹಿತ ಎಲ್ಲಾ ಧರ್ಮಗಳನ್ನು ತಿರಸ್ಕರಿಸಿ ಬುದ್ಧ ಮತ್ತು ಅವನ ದಮ್ಮಕ್ಕೆ ಮನಸೋತರು. ತಮ್ಮ ಜೀವಿತದ ಕೊನೆಯ ಅವಧಿಯಲ್ಲಿ ಬುದ್ಧನ ಮೂಲ ತತ್ವಗಳನ್ನು ಅರಸುತ್ತಾ ಹೋಗಿ “ಬುದ್ಧ ಮತ್ತು ದಮ್ಮ’ ಎಂಬ ಕೃತಿಯನ್ನು 1956ರಲ್ಲಿ ರಚಿಸಿದರು. ಅದೇ ವರ್ಷ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಈ ಕೃತಿ ವಿದ್ವತ್‌ ವಲಯದಲ್ಲಿ ಜನಪ್ರಿಯವಾದರೂ ಜನಸಾಮಾನ್ಯರಿಗೆ ಅಂಬೇಡ್ಕರ್‌ ಶೋಧಿಸಿದ ಬುದ್ಧನನ್ನು ಪರಿಚಯಿಸುವುದು ಈ ಲೇಖನದ ಕೆಲಸ.

ಎಲ್ಲರೂ ಬುದ್ಧ “ಶಾಂತಿ’ ಮತ್ತು “ಅಹಿಂಸೆ’ ಬೋಧಿಸಿದ ಎಂದಾಗ ಅಂಬೇಡ್ಕರ್‌, “ಬುದ್ಧ ಸಮಾನತೆಯನ್ನು ಬೋಧಿಸಿ ದನೇ?’ “ಬುದ್ಧ ಸ್ವಾತಂತ್ರ್ಯವನ್ನು ಬೋಧಿಸಿದನೆ?’ “ಬುದ್ಧ ಭಾತೃತ್ವವನ್ನು ಬೋಧಿಸಿದನೆ?’ “ಬುದ್ಧ ಪ್ರೀತಿ ಮತ್ತು ನ್ಯಾಯವನ್ನು ಬೋಧಿಸಿದನೆ?’ “ಬುದ್ಧ ಕಾರ್ಲ್ ಮಾರ್ಕ್ಸ್ಗೆ ಉತ್ತರಿಸಬಲ್ಲನೇ?’  ಎಂದು ಪ್ರಶ್ನಿಸಿದರು. ತೃಪ್ತಿಕರ ಉತ್ತರ ಕಂಡುಕೊಂಡಾಗ ಅಂಬೇಡ್ಕರ್‌ ಬುದ್ಧನಿಗೆ ಮನಸೋತರು. ಬುದ್ಧ ತನ್ನ ದಮ್ಮದಲ್ಲಿ ಚರ್ಚಿಸುವ ದುಃಖ ಮತ್ತು ಮಾರ್ಕ್ಸ್ ಚರ್ಚಿಸುವ ಶೋಷಣೆಗೆ ಸಾಮ್ಯತೆ ಇದೆ ಎಂದರು ಅಂಬೇಡ್ಕರ್‌.

ಸಿದ್ಧಾರ್ಥನ ಸಂನ್ಯಾಸ
ಸಾಮಾನ್ಯವಾಗಿ ಸಿದ್ಧಾರ್ಥ ಒಮ್ಮೆ ಒಬ್ಬ ರೋಗಿ, ಒಬ್ಬ ವೃದ್ಧ, ಒಂದು ಶವ ಮತ್ತು ಸಂನ್ಯಾಸಿಯನ್ನು ನೋಡಿ ಪರಿವ್ರಾಜಕನಾದ ಎಂಬ ನಂಬಿಕೆ ಇದೆ. ಅಂಬೇಡ್ಕರ್‌ ಪ್ರಕಾರ ಸಿದ್ದಾರ್ಥ ಶಾಕ್ಯ ಮತ್ತು ಕೋಲಿಯ ಗಣಸಂಘದ ನಡುವೆ ಇದ್ದ ರೋಹಿಣಿ ನದಿ ನೀರಿನ ಜಗಳದಲ್ಲಿ ರಕ್ತಪಾತವಾಗುವುದನ್ನು ತಪ್ಪಿಸಲು ಪರಿವ್ರಾಜಕನಾದ ಎಂದು ಹೇಳುತ್ತಾರೆ.

ಬುದ್ಧ ಮಾರ್ಗದಾತನೇ ಹೊರತು ಮೋಕ್ಷದಾತ ಅಲ್ಲ
ಬುದ್ಧ ಎಲ್ಲಿಯೂ ತನ್ನ ಜ್ಞಾನ ಮಾನವನಿಂದ ಮಾನವನ ಮಾರ್ಗದರ್ಶನಕ್ಕಾಗಿಯೇ ಇದೆ ಹೊರತು, ಮಾನವನಿಗೆ ಮೋಕ್ಷ ಕೊಡಿಸುವುದಕ್ಕಾಗಿ ಇದೆ ಎಂದು ಹೇಳಿಲ್ಲ ಎಂದು ಅಂಬೇಡ್ಕರ್‌ ಅಭಿಪ್ರಾಯಪಡುತ್ತಾರೆ.

ಬುದ್ಧ ದೇವರಲ್ಲ, “ದಮ್ಮ’ ದೇವವಾಣಿಯಲ್ಲ
ಇತರ ಧರ್ಮಗಳ ಪ್ರವಾದಿಗಳಂತೆ ಅಥವಾ ಅವತಾರ ಪುರುಷರಂತೆ ಬುದ್ಧ ತನ್ನನ್ನು ದೈವತ್ವಕ್ಕೆ ಏರಿಸಿಕೊಳ್ಳಲಿಲ್ಲ ಮತ್ತು ತನ್ನ ಜ್ಞಾನ ದೇವವಾಣಿಯಿಂದ ಗಳಿಸಿದ್ದಲ್ಲ, ಅದು ಬೌದ್ಧಿಕ ಶ್ರಮದ ಫ‌ಲವಾಗಿದೆ ಎಂದು ತಿಳಿಸುತ್ತಾರೆ.

ಬುದ್ಧನ ದಮ್ಮ ಪ್ರಶ್ನಾತೀತ ಅಲ್ಲ
ಬುದ್ಧನ ಜ್ಞಾನ ಮಾನವ ಗಳಿಸಿದ ಜ್ಞಾನವಾಗಿರುವ ಕಾರಣ ಮತ್ತು ಅದು ಅಪೌರುಷೇಯ ಮತ್ತು ಅಶರೀರವಾಣಿ ಅಲ್ಲದ ಕಾರಣ ಬುದ್ಧನ ಚಿಂತನೆಗಳು ವಿಮರ್ಶೆಗೆ, ವಿಶ್ಲೇಷಣೆಗೆ ಮತ್ತು ಪ್ರಶ್ನೆಗೆ ಒಳಪಡಬಹುದಾಗಿದೆ.

ದೇವರ ಅಸ್ತಿತ್ವ
ಬುದ್ಧ ದೇವರ ಅಸ್ತಿತ್ವದ ಬಗ್ಗೆ ನಿರಂತರವಾಗಿ ಚರ್ಚಿಸುವುದು ನಿಷ್ಪಲ ಎಂದು ಸಾರಿದ. ಬುದ್ಧಿಗೆ, ವಿಚಾರಕ್ಕೆ ನಿಲುಕದ ವಿಷಯ ವನ್ನು ಚರ್ಚಿಸುತ್ತಾ ಬಡಿದಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಬುದ್ಧ ದೇವರ ಪರಿಕಲ್ಪನೆ ಬಗ್ಗೆ ಮೌನವಹಿಸಿದ. ಮನುಷ್ಯನಿಗೆ ದೇವರಿಗಿಂತ ದಮ್ಮ (ಋಜುತನ)ದ ಅವಶ್ಯಕತೆ ಇದೆ ಎಂದ.

ಬುದ್ಧ ಮತ್ತು ದುಃಖದ ಪರಿಕಲ್ಪನೆ
ಬುದ್ಧನ ದುಃಖ ಲೌಖೀಕ ದುಃಖವೇ ಹೊರತು ಜನ್ಮಾಂತರ ಗಳದ್ದಲ್ಲ. ಅದು ಮನಸ್ಸಿಗೆ ಅಂಟಿಕೊಳ್ಳುವ ವಿಕಾರಗಳೇ ಹೊರತು ಬೇರೇನೂ ಅಲ್ಲ. ಹುಟ್ಟು ಕೂಡ ಒಂದು ದುಃಖ ಅನ್ನುವ ಕಲ್ಪನೆ, ಬೌದ್ಧ ಧ‌ರ್ಮದ ನಂತರ ಸೇರಿರಬೇಕು ಎಂದು ಅಂಬೇಡ್ಕರ್‌ ಅಭಿಪ್ರಾಯ ಪಡುತ್ತಾರೆ. ಹುಟ್ಟು ಒಂದು ದುಃಖ ಎಂದಾದರೆ ಜೀವನಕ್ಕೆ ಅರ್ಥವಲ್ಲ. ಜೀವನದಲ್ಲಿ ದುಃಖಗಳಿವೆ ಆದರೆ ಅದಕ್ಕೆ ಪರಿಹಾರ ಮಾರ್ಗಗಳಿವೆ ಎಂದು ಬೋಧಿಸಿದ್ದೇ ಬುದ್ಧನ ಶ್ರೇಷ್ಠತೆ. ಆದ್ದರಿಂದ ಭೌದ್ದ ಧರ್ಮ ನಿರಾಶವಾದ ಬೋಧಿಸುವುದಿಲ್ಲ. 

ಬುದ್ಧನ ಅನಿತ್ಯವಾದ (All Compound things are impermanent) ಬುದ್ಧ ಸರ್ವಂ ಕ್ಷಣಿಕಂ ಎಂದ. ಅಂದರೆ ಜಗತ್ತಿನಲ್ಲಿ ಸಂಯುಕ್ತ ವಸ್ತುಗಳೆಲ್ಲಾ ನಿರಂತರ ಬದಲಾಗುತ್ತವೆ. ಜಗತ್ತನ್ನು ಮತ್ತು ಜೀವನವನ್ನು (ಬದಲಾಗದ್ದು) ಸತ್ಯ ಎಂದು ಪರಿಭಾವಿಸುವ ಮನಸ್ಸೆ ದುಃಖಕ್ಕೆ ಕಾರಣವಾಗಿದೆ. ಒಮ್ಮೆ ಈ ಜಗತ್ತು ನಿರಂತರ ಬದಲಾವಣೆಗೆ ಒಳಪಟ್ಟಿದೆ. ನಿರಂತರ ಬದಲಾವಣೆಯೇ ಈ ಜಗದ ನಿಯಮ ಎಂಬುದೇ ಅನಿತ್ಯವಾದ ಸಿದ್ಧಾಂತ. ಜಗತ್ತು ಭ್ರಮೆ ಎಂಬ ಸಿದ್ಧಾಂತಕ್ಕಿಂತ ಇದು ಭಿನ್ನವಾದದ್ದು.

ಬುದ್ಧನ ಅನಾತ್ಮವಾದ
ಈ ಜೀವ ಪಂಚಭೂತಗಳ ಸಂಯೋಗದಿಂದ ಉದ್ಭವಿಸುತ್ತದೆ ಮತ್ತು ಪಂಚಭೂತಗಳ ವಿಘಟನೆಯೊಂದಿಗೆ ನಾಶವಾಗುತ್ತದೆ. ನಾಶವಾಗದ ಆತ್ಮ ಎಂಬುದರ ಬಗ್ಗೆ ಬುದ್ಧ ತಲೆಕೆಡಿಸಿಕೊಳ್ಳಲಿಲ್ಲ. ಪಂಚಭೂತಗಳು ಸಂಯೋಜನೆಗೊಂಡಾಗ ಜೀವ ಸೃಷ್ಟಿಯಾಗು ತ್ತದೆ. ಆಗ ಜೀವದಲ್ಲಿ ಪ್ರಜ್ಞೆ (Consciousness) ಹುಟ್ಟುತ್ತದೆ. ಅದಕ್ಕಿಂತ ಭಿನ್ನವಾದ ಆತ್ಮದಲ್ಲಿ ಬುದ್ಧನಿಗೆ ನಂಬಿಕೆ ಇಲ್ಲ.

ಬುದ್ಧ ಮತ್ತು ನಿಬ್ಬಣ(ನಿರ್ವಾಣ)
ಅಂಬೇಡ್ಕರ್‌ ಪ್ರಕಾರ ಬುದ್ಧ ಹೇಳಿದ ನಿಬ್ಬಣ ಈ ಜನ್ಮದಲ್ಲೆ ಸಿದ್ಧಿಸಬಹುದಾದ ಮನಸ್ಸಿನ ಒಂದು ಶಾಂತ ಸ್ಥಿತಿ. ತನ್ನ ಎಲ್ಲಾ ವಿಕಾರಗಳನ್ನು ಮೆಟ್ಟಿನಿಂತ ಮನಸ್ಸು ಸ್ಥಿರವಾಗಿ, ಶಾಂತವಾಗಿ ಇರುವ ಸ್ಥಿತಿಯೇ ನಿಬ್ಬಣ. ಅದು ಸತ್ತ ನಂತರ ಸಿಗುವ ಮೋಕ್ಷದ ಪರಿಕಲ್ಪನೆಯಲ್ಲ.

ಬುದ್ಧ ಮತ್ತು ಪುರ್ನಜನ್ಮ
ಅಂಬೇಡ್ಕರ್‌ ಹೇಳುವಂತೆ ಬುದ್ಧನ ಪ್ರಕಾರ ಪುರ್ನಜನ್ಮ ಎಂದರೆ ಸತ್ತವನ ಆತ್ಮ ಪುನಃ ಹುಟ್ಟುವುದಿಲ್ಲ. ಮಗದೊಮ್ಮೆ ಪಂಚಭೂತಗಳು ಹೊಸದಾಗಿ ಸಂಯೋಜನೆಗೊಂಡಾಗ ಹೊಸ ಸೃಷ್ಟಿಯಾಗಿ ಮನುಷ್ಯ ಹುಟ್ಟುತ್ತಾನೆ ಎನ್ನುವ ಅರ್ಥದ ಪುನರ್‌ಜನ್ಮದಲ್ಲಿ ಬುದ್ಧನಿಗೆ ನಂಬಿಕೆ ಇತ್ತು.

ಬುದ್ಧ ಮತ್ತು ಅಹಿಂಸೆ
ಬುದ್ಧ ಮಧ್ಯಮ ಮಾರ್ಗಿ ಅಹಿಂಸೆಗೆ ಅರ್ಥಪೂರ್ಣವಾದ ವ್ಯಾಖ್ಯಾನವನ್ನು ಕೊಟ್ಟ. ಹಿಂಸೆ ಮಾಡುವ ಇಚ್ಚೆ (will to kill)  ಇರಲೇ ಬಾರದು ಮತ್ತು ಹಿಂಸೆಯನ್ನು ಬಯಸಬಾರದು. ಆದರೆ ಕ್ರೌರ್ಯ ಮತ್ತು ದುಷ್ಟತೆಯನ್ನು ಸಜ್ಜನರು ಎದುರಿಸುವಾಗ ದೌರ್ಜನ್ಯವನ್ನು ತಡೆಯಲು(need to kill) ಹಿಂಸೆಯನ್ನು ಬಳಸಲೆಬಾರದೆಂದು ಬುದ್ಧ ಹೇಳಲಿಲ್ಲ. ಈ ಅಹಿಂಸಾ ಸಿದ್ಧಾಂತ ವಾಸ್ತವಿಕ ಪ್ರಪಂಚದಲ್ಲಿ ಪ್ರಾಯೋಗಿಕವೂ ಹೌದು.

ವರ್ಣ ವ್ಯವಸ್ಥೆ ಮತ್ತು ಬುದ್ಧ
ಮನುಷ್ಯನನ್ನು ಅವನ ಜನ್ಮದಿಂದ ಉಚ್ಚ-ನೀಚನೆಂದು ವರ್ಗೀಕ ರಿಸಿ ಸಮಾಜದಲ್ಲಿ ಅ ಪ್ರಕಾರ ಮಾನವನಿಗೆ ಬೆಲೆ ಕಟ್ಟುವುದು ಕ್ಷುದ್ರತೆಯ ಲಕ್ಷಣವೆಂದು ಬುದ್ಧ ವಿರೋಧಿಸಿದ. ಕೆಳವರ್ಗಗಳಿಂದ ಬಂದ ಉಪಾಲಿ, ಸುನೀತ ಸೋಪಕ, ಸುಮಂಗಲಿ, ಮುಂತಾ ದವರನ್ನು ಬುದ್ಧ ತನ್ನ ಸಂಘಕ್ಕೆ ಸೇರಿಸಿಕೊಂಡಿದ್ದ. ನೀತಿರಹಿತ ಭೋಗ ಜೀವನವನ್ನು ಬುದ್ಧ ವಿರೋಧಿಸಿದ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ ಆದುದರಿಂದ ಬುದ್ಧ ಭೋಗವಿಲಾಸದ ಜೀವನ ನಡೆಸುವುದರ ವಿರುದ್ಧವಿದ್ದ.

ಬಡತನ ಆದರ್ಶೀಕರಣವನ್ನು ಬುದ್ಧ ಮಾಡಲಿಲ್ಲ
ನ್ಯಾಯಯುತ ಮಾರ್ಗದಲ್ಲಿ (ಬಿಕ್ಕುಗಳಿಗೆ ಅಲ್ಲ) ಸಂಪತ್ತನ್ನು ಗಳಿಸಿ ಸುಖ, ನೆಮ್ಮದಿಯಿಂದ ಬದುಕಿ, ಇತರರಿಗೂ ಸಹಾಯ ಮಾಡುವುದೇ ಶ್ರೇಷ್ಠ ಜೀವನ ಎಂಬುದು ಬುದ್ಧನ ಉಪದೇಶ. ಭಿಕ್ಷುಗಳು ಸ್ವಯಂ ಉದ್ಧಾರವಾಗಿ ಸಮಾಜ ಸೇವೆಯಲ್ಲಿ ತೊಡ ಗಬೇಕೇ ಹೊರತು ಪುರೋಹಿತಶಾಹಿಯಾಗಿ ಮಾರ್ಪಾಡಾಗಬಾರ ದೆಂದು ಬುದ್ಧನ ನೀತಿಯಾಗಿತ್ತೆಂದು ಅಂಬೇಡ್ಕರ್‌ ಅಭಿಮತ. ಸುದೀರ್ಘ‌ವಾಗಿ ಬುದ್ಧನನ್ನು ಅವನ ಮೂಲ ಬೋಧನೆಗಳನ್ನು ಚರ್ಚಿಸಿದ ಅಂಬೇಡ್ಕರ್‌ ಕಟ್ಟ ಕಡೆಗೆ “ದಮ್ಮವೆಂದರೇನು?’ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ: “”ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಡುವುದು ದಮ್ಮ, ಈ ಜನ್ಮದಲ್ಲೆ ಪರಿಪೂರ್ಣತೆಯನ್ನು ಸಾಧಿಸುವುದು ದಮ್ಮ, ಜೀವನದಲ್ಲಿ ನಿಬ್ಬಣ (ಸ್ಥಿರ ಮತ್ತು ಶಾಂತ ಪರಿಜ್ಞಾನವುಳ್ಳ ಮನಸ್ಸು)ವನ್ನು ಪಡೆಯುವುದು ದಮ್ಮ,  ತೃಷ್ಣೆಯನ್ನು ತ್ಯಜಿಸುವುದು ದಮ್ಮ, ಸಂಯುಕ್ತ ವಸ್ತುಗಳೆಲ್ಲಾ ಅನಿತ್ಯವಾಗಿರುತ್ತದೆ ಎಂದು ತಿಳಿಯುವುದು ದಮ್ಮ, ವಿದ್ಯೆಯನ್ನು ಎಲ್ಲರಿಗೂ ತೆರೆದಿಡುವುದು ದಮ್ಮ, ಬರಿ ವಿದ್ಯೆ ಆಭರಣ ಮಾತ್ರ, ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿ ನಡೆಯುವುದು ಪ್ರಜ್ಞೆ 

(ಪ್ರಜ್ಞೆ ಎಂದರೆ ವಿಚಾರಧರ್ಮ),ವಿದ್ಯೆಯ ಜೊತೆ ಪ್ರಜ್ಞೆ ಬೆಳೆಸುವುದು ದಮ್ಮ.’ ಪ್ರಜ್ಞೆ ಶೀಲವನ್ನು (ಶೀಲ ಎಂದರೆ ಆಚಾರ ಧರ್ಮ) ಬೆಳೆಸುವಂತಿರಬೇಕು , ಜ್ಞಾನಕ್ಕಿಂತ ಶೀಲವೇ ಶ್ರೇಷ್ಠ ಎಂದ ಬುದ್ಧ. ಪ್ರಜ್ಞೆ ಮತ್ತು ಶೀಲ ಕರುಣೆಯನ್ನು (ಮಾನವರಲ್ಲಿ ಪ್ರೀತಿ) ಬೆಳೆಸುವಂತಿರಬೇಕು. ಇನ್ನು ಮುಂದಕ್ಕೆ ಹೋಗಿ ಶೀಲ ಮೈತ್ರಿ (ಸರ್ವ ಜೀವಿಗಳಲ್ಲಿ)ಯನ್ನು ಬೆಳೆಸುವಂತಿರಬೇಕು ಅದೇ ದಮ್ಮ.

ಬುದ್ಧನ ಪ್ರಕಾರ ಧರ್ಮದ ಮಹತ್ವ ದೇವರೊಂದಿಗೆ ಮನುಷ್ಯರು ಹೊಂದಿರುವ ಸಂಬಂಧದಲ್ಲಿ ಇಲ್ಲ. ಅದು ಮನುಷ್ಯರು ಮನುಷ್ಯರ ಜೊತೆ ಹೊಂದಿರುವ ಸಂಬಂಧದಲ್ಲಿದೆ. ಎಲ್ಲರೂ ಸುಖವಾಗಿರುವಂತೆ ಮನುಷ್ಯರು ಇತರ ಮನುಷ್ಯರ ಜೊತೆ ಹೇಗೆ ವರ್ತಿಸಬೇಕು ಎಂದು ಬೋಧಿಸುವುದೇ ದಮ್ಮ. ಧರ್ಮ ಮಾನವರಿಗಾಗಿ ಇದೆಯೇ ಹೊರತು ಮನುಷ್ಯರು ಧರ್ಮಕ್ಕಾಗಿ ಇರುವುದಲ್ಲ$ಎಂಬುದು ತಿಳಿದಿರಬೇಕು. ಅಂತಿಮವಾಗಿ ಧರ್ಮದ ಧ್ಯೇಯ ಏನು ಎಂಬುದಕ್ಕೆ ಬುದ್ಧನ ಉತ್ತರ- “ಜಗತ್ತಿನಲ್ಲಿ ದುಃಖ ಇದೆ, ಇದು ಮನುಷ್ಯರು ಮನು ಷ್ಯರಿಗೆ ಮಾಡುವ ಅನ್ಯಾಯದ ಫ‌ಲ. ಅದರೆ ಅದಕ್ಕೆ ಪರಿಹಾರ ಮನುಷ್ಯನಲ್ಲೆ ಇದೆ. ಅವರು ತಮ್ಮ ದುಃಖವನ್ನು ನಿರ್ಮೂಲನೆ ಮಾಡಬೇಕಾದರೆ ಇತರರ ಜೊತೆ ಋಜುತನದಿಂದ ನಡೆದುಕೊಳ್ಳಬೇಕು. ಆ ಮೂಲಕ ಭೂಮಿಯನ್ನು ಋಜುತನದ ಸಾಮ್ರಾಜ್ಯವಾಗಿ ಮಾಡಬೇಕು. ಅಂಬೇಡ್ಕರ್‌ ಬುದ್ಧನ ದಮ್ಮಕ್ಕೆ ಕೊಟ್ಟ ನವವ್ಯಾಖ್ಯಾನವನ್ನು ಸಂಪ್ರದಾಯಸ್ಥ ಬೌದ್ಧರು ಒಪ್ಪದಿ ದ್ದರೂ ನಮ್ಮ ಸಂವಿಧಾನ ಪ್ರತಿಪಾದಿಸುವ ಮೌಲ್ಯಗಳಿಗೆ ಮತ್ತು ಬುದ್ಧನ ದಮ್ಮಕ್ಕೆ ಹೆಚ್ಚು ಸಾಮ್ಯತೆ ಇದೆ. ವಿರೋಧಾಭಾಸಗಳಿಲ್ಲ.

ಡಾ. ರಾಮದಾಸ್‌ ಪ್ರಭು

ಟಾಪ್ ನ್ಯೂಸ್

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

3-kananda-1

Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

7-bng

Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.