ಅಮಿತನೆಂಬ ಶಾಣಕ್ಯ ಮತ್ತು ಐವರು ಮಾಸ್ಟರ್‌ ಮೈಂಡ್ಸ್‌…


Team Udayavani, May 25, 2019, 5:00 AM IST

amita

ಇದುವರೆಗೆ ಬಿಜೆಪಿ ಹೆಚ್ಚು ಗೆಲ್ಲದಿದ್ದ ಕಡೆಗಳಲ್ಲೇ ಚಮ ತ್ಕಾರ ತೋರಿದೆ. ಇದಕ್ಕೆ ಕಾರಣ, ಮೋದಿ ಮತ್ತು ಅಮಿತ್‌ ಶಾ ಅವರ ತಂತ್ರ ಗಾರಿಕೆಗಳು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಕೆಲಸ ಮಾಡಿದರು, ಅವರ ಜವಾಬ್ದಾರಿಗಳೇನಾಗಿತ್ತು ಎಂಬ ನೋಟ ಇಲ್ಲಿದೆ…

ಕೈಲಾಶ್‌ ವಿಜಯ್‌ವರ್ಗಿಯಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆರ್ಭಟಿಸಲು ಪ್ರಮುಖ ಕಾರಣ ಕೈಲಾಶ್‌ ವಿಜಯ್‌ವರ್ಗಿಯಾ. ಇಂದೋರ್‌ ಮೂಲದ ಇವರು ಬಂಗಾಳದಲ್ಲಿ ಸಂಘಟಿಸಿದ “ಹಿಂದುತ್ವ ಅಭಿಯಾನ’ ಬಿಜೆಪಿಯ ಅಭೂತಪೂರ್ವ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಅಭಿಯಾನದ ಫ‌ಲವಾಗಿ ಬಹುಪಾಲು ಹಿಂದೂ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಲಾಶ್‌ ವಿಜಯ್‌ವರ್ಗಿಯಾ, ಒಮ್ಮೆ ಇಂದೋರ್‌ ಮೇಯರ್‌, 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸ್ಪರ್ಧಿಸಿರುವ ಎಲ್ಲ ಚುನಾವಣೆ ಗಳಲ್ಲಿ ಜಯಗಳಿಸಿರುವ ಕೈಲಾಶ್‌ ಸೋಲಿಲ್ಲದ ಸರದಾರ. ಹಾಗೇ, ಅದ್ಭುತ ಸಂಘಟನಾ ಚಾತುರ್ಯ ಹೊಂದಿರುವ ಇವರು, ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ, ಯಶಸ್ವಿ ಯಾಗಿ ನಿರ್ವಹಿಸಿ ವರಿಷ್ಠರ ವಿಶ್ವಾಸ ಗಳಿಸಿ ದ್ದಾರೆ. 2014ರಲ್ಲಿ ಹರ್ಯಾಣ ಚುನಾವಣಾ ಉಸ್ತುವಾರಿ ವಹಿಸಿಕೊಂಡ ಕೈಲಾಶ್‌, ಹರ್ಯಾಣದಲ್ಲಿ 10 ಲೋಕಸಭೆ ಕ್ಷೇತ್ರಗಳ ಪೈಕಿ ಏಳು ಸ್ಥಾನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಕಾಶ್‌ ಜಾವಡೇಕರ್‌: ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ರಾಜಸ್ಥಾನದಲ್ಲಿ ಜಾದೂ ಮಾಡಿದ್ದಾರೆ. ಕಾಂಗ್ರೆಸ್‌ ಆಡಳಿತವಿರುವ ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಓಯಸಿಸ್‌ ಆದವರು ಜಾವಡೇಕರ್‌. 2018ರ ಡಿಸೆಂಬರ್‌ನಲ್ಲಷ್ಟೇ ಅಧಿಕಾರ ಕಳೆದುಕೊಂಡು ಮಂಕಾಗಿ ಕುಳಿತಿದ್ದ ಮಾಜಿ ಸಿಎಂ ವಸುಂಧರಾ ರಾಜೆ ಅವರಿಗೆ ಧೈರ್ಯ ತುಂಬಿ, ಚುನಾವಣೆಗೆ ಸಿದ್ಧಗೊಳಿಸಿದ ಜಾವಡೇಕರ್‌ ಮಾಡಿದ ಮೊದಲ ಕೆಲಸ, ರಾಜ್ಯದ ಪ್ರಬಲ ಸಮುದಾಯಗಳ ನಾಯಕ ರನ್ನು ವಿಶಸ್ವಾಸಕ್ಕೆ ತೆಗೆದುಕೊಳ್ಳುವುದು. ರಾಜಸ್ಥಾನದಲ್ಲಿ ಜಾಟ್‌ ಮತ್ತು ಗುಜ್ಜರ್‌ ಸಮುದಾಯಗಳು ಪ್ರಾಬಲ್ಯ ಹೊಂದಿದ್ದು, ಕಳೆದ ವಿಧಾನಸಭೆ ಚುನನಾವಣೆ ವೇಳೆ ಈ ಸಮುದಾಯಗಳ ನಾಯಕರನ್ನು ಕಡೆಗಣಿಸಿದ ಕಾರಣಕ್ಕೇ ಬಿಜೆಪಿ ಸೋಲನುಭಿವಿಸಿತು ಎಂಬ ಸತ್ಯವನ್ನು ವಸುಂಧರಾ ರಾಜೆಗೆ ಮನವರಿಕೆ ಮಾಡಿಕೊಟ್ಟ ಪ್ರಕಾಶ್‌ ಜಾವಡೇಕರ್‌, ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಪ್ರಬಲ ಸಮುದಾಯಗಳ ನಾಯಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾದರು.

ಭುಪೇಂದ್ರ ಯಾದವ್‌: ಈ ಚುನಾವಣೆ ಗೆಲ್ಲಲೇಬೇಕೆಂಬ ಉದ್ದೇಶದಿಂದ ಬಿಜೆಪಿ ಕಟ್ಟಿದ ಚತುರರ ಚಾವಡಿಯ ಪ್ರಮುಖ ಆಧಾರ ಸ್ಥಂಭ ಭುಪೇಂದ್ರ ಯಾದವ್‌. ರಾಜ್ಯಸಭಾ ಸದಸ್ಯರಾಗಿರುವ ಇವ ರು ಬಿಜೆಪಿಯ ಪ್ರಚಂಡ ಜಯದ ಪ್ರಮುಖ ಸೂತ್ರದಾರ. ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ದೇಶಾ ದ್ಯಂತ ನಡೆ ಸಿದ ಸಾವಿ ರಾರು ಪ್ರಚಾರ ರ್ಯಾಲಿಗಳನ್ನು ಆಯೋಜಿಸಿದ್ದು ಇದೇ ಭುಪೇಂದ್ರ ಯಾದವ್‌. ಎಲ್ಲಿ, ಯಾವಾಗ ರ್ಯಾಲಿ ನಡೆಯ ಬೇಕು? ಯಾರೆಲ್ಲಾ ಭಾಗಿಯಾಗಬೇಕು? ಮೈದಾನ ಯಾವುದು ಎಂಬುದರಿಂದ ಹಿಡಿದು ಪ್ರಚಾರ ರ್ಯಾಲಿಗಳ ರೂಪುರೇಷೆ ಸಿದ್ಧ ಮಾಡಿದ್ದರು. ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಯಾದವ್‌, ಬಿಹಾರ ರಾಜ್ಯ ಮತ್ತು ಬಿಜೆಪಿಯ ಸಂಪೂರ್ಣ ಚುನಾವಣಾ ನಿರ್ವಹಣೆ ವಿಭಾಗದ ಪ್ರಭಾರಿಯೂ ಹೌದು. ವೃತ್ತಿಯಲ್ಲಿ ವಕೀಲರಾಗಿರುವ ಇವರು, ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಬರವಣಿಗೆ ಅಭ್ಯಾಸ, ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತಾರೆ.

ಅನಿಲ್‌ ಕುಮಾರ್‌ ಜೈನ್‌: ವೃತ್ತಿಯಲ್ಲಿ ಸರ್ಜನ್‌ ಆಗಿರುವ ಅನಿಲ್‌ ಕುಮಾರ್‌ ಜೈನ್‌ ಹರ್ಯಾಣ ಮತ್ತು ಛತ್ತೀಸ್‌ಗಢ ಚುನಾವಣಾ ಉಸ್ತುವಾರಿ ವಹಿಸಲಾಗಿತ್ತು. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡಿದೆ. ಛತ್ತೀಸ್‌ಗಢ ಉಸ್ತುವಾರಿಯಾಗಿ ನೇಮಿಸುವ ಸಂದರ್ಭದಲ್ಲಿ ಅನಿಲ್‌ ಜೈನ್‌ ಅವರಿಗೆ ರಾಜ್ಯದಲ್ಲಿ ಮತ್ತೂಮ್ಮೆ ಬಿಜೆಪಿ ನೆಲೆ ಗಟ್ಟಿಗೊಳಿಸುವ ಮತ್ತು ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಟಾರ್ಗೆಟ್‌ ನೀಡಲಾಗಿತ್ತು. ಅದರಂತೆ ತಮ್ಮದೇ ಆಪ್ತರ ಮತ್ತು ನಂಬಿಕಸ್ತರ ಒಂದು ತಂಡ ಕಟ್ಟಿಕೊಂಡು ಚುನಾವಣಾ ಕಣಕ್ಕಿಳಿದ ಜೈನ್‌, ಚುನಾವಣಾ ಪೂರ್ವದಲ್ಲೇ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದರು. ಬಳಿಕ ಪ್ರಮುಖ ನಾಯಕರನ್ನು ವಿಶಸ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಮೂಲೆ ಮೂಲೆಯಲ್ಲೂ ಬಿಜೆಪಿ ಹಾಗೂ ಮೋದಿ ಅಲೆ ಏಳುವಂತೆ ಮಾಡಿದರು. ಪರಿಣಾಮ 11 ಲೋಕಸಭಾ ಕ್ಷೇತ್ರಗಳ ಪೈಕಿ 9ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಅದೇ ರೀತಿ ಹರ್ಯಾಣ ದಲ್ಲೂ ಜೈನ್‌ ಜಾದೂ ನಡೆದಿದ್ದು, ಹತ್ತ ರಲ್ಲೂ ಗೆದ್ದಿ ದೆ.

ಸುನಿಲ್‌ ಬನ್ಸಲ್‌: 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸಿ, ಯಾದವ್‌ಗಳ ಹಿಡಿತದಲ್ಲಿದ್ದ ಉತ್ತರ ಪ್ರದೇಶವನ್ನು ಯೋಗಿ ಕೈಗೆ ನೀಡಿದ್ದು ಸುನಿಲ್‌ ಬನ್ಸಲ್‌. ಆರ್‌ಎಸ್‌ಎಸ್‌ನ ಶಿಸ್ತಿ ನ ಕಾರ್ಯಕರ್ತ ರಾಗಿರುವ ಇವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಪರಮಾಪ್ತ. ಈ ಹಿಂದಿನ ಎರಡು ಚುನಾವಣೆಗಳಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬನ್ಸಲ್‌ಗೆ ಈ ಬಾರಿ ಯೋಗಿ ರಾಜ್ಯದಲ್ಲಿ ದೊಡ್ಡ ಸವಾಲೇ ಎದುರಾಗಿತ್ತು. ಪ್ರತಿಪಕ್ಷಗಳು ಸೃಷ್ಟಿಸಿದ್ದ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸಿ ಸಾಧ್ಯವಾದಷ್ಟು ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಬನ್ಸಲ್‌ ಮೇಲಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ 40 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಚುನಾವಣಾ ಪೂರ್ವದ ಸಮೀಕ್ಷೆಗಳು ಹೇಳಿದ್ದವು. ಆದರೆ ಇವೆ ಲ್ಲ ವನ್ನೂ ಇವರು ಸುಳ್ಳು ಮಾಡಿ ದ್ದಾರೆ.

ಟಾಪ್ ನ್ಯೂಸ್

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Yadgiri: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

priyank-kharge

Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2011

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

rajani-kanth

ಮೋದಿಯೂ ವರ್ಚಸ್ವಿ ನಾಯಕ

smruthi-irani

ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Asshivrda

ಮಾಜಿ ರಾಷ್ಟ್ರಪತಿ ಪ್ರಣಬ್ ರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Lalu-head-scratch-700

ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

1-geeta

Udupi; ಬೃಹತ್ ಗೀತೋತ್ಸವ: ಭಗವದ್ಗೀತಾ ಯಜ್ಞ ಸಂಪನ್ನ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Court-1

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಕೊ*ಲೆ ಪ್ರಕರಣ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.