ಆಧುನಿಕ ಆಕಾಶದಲ್ಲಿ ಪ್ರಾಚೀನ ಅವಕಾಶ! ಇಂದಿನಿಂದ ಮೂರುದಿನಗಳ ಆಕಾಶ ತಣ್ತೀ ಕಾರ್ಯಾಗಾರ

ಪ್ರಾಚೀನ-ಆಧುನಿಕ ವಿಜ್ಞಾನಗಳನ್ನು ಬೆಸೆಯಲು ಕೇಂದ್ರ ಸರ್ಕಾರ ವಿಶೇಷ ಯತ್ನ

Team Udayavani, Nov 5, 2022, 7:30 AM IST

ಆಧುನಿಕ ಆಕಾಶದಲ್ಲಿ ಪ್ರಾಚೀನ ಅವಕಾಶ! ಇಂದಿನಿಂದ ಮೂರುದಿನಗಳ ಆಕಾಶ ತಣ್ತೀ ಕಾರ್ಯಾಗಾರ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಆಧುನಿಕ ಭಾರತದ ಇತಿಹಾಸದಲ್ಲೇ ಮೂರು ದಿನಗಳ ವಿಶಿಷ್ಟ ಕಾರ್ಯಾಗಾರ ನಡೆಸುತ್ತಿದೆ. ಇದರ ಹೆಸರೇ ಆಕಾಶ ತತ್ವ ಅಥವಾ ಆಕಾಶ್‌ ಫಾರ್‌ ಲೈಫ್! ಪ್ರಾಚೀನ ಮತ್ತು ಆಧುನಿಕ ವಿಜ್ಞಾನಗಳನ್ನು ಬೆಸೆಯುವುದು ಇದರ ಉದ್ದೇಶ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರ ಸಂಸ್ಥೆ ವಿಜ್ಞಾನ ಭಾರತಿ ಇದರ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

“ಆಕಾಶ ತಣ್ತೀ’ ಯಾವಾಗ? ಎಲ್ಲಿ?
ಉತ್ತರಾಖಂಡದ ಡೆಹರಾಡೂನ್‌ನಲ್ಲಿ ನ.5,6,7ಕ್ಕೆ ಆಕಾಶ ತಣ್ತೀ ಅಥವಾ ಆಕಾಶ್‌ ಫಾರ್‌ ಲೈಫ್ ಸಮ್ಮೇಳನ ನಡೆಯಲಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯಕ ಖಾತೆ ಸ್ವತಂತ್ರ ಸಚಿವ ಜಿತೇಂದ್ರ ಸಿಂಗ್‌ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಸಂಘ ಪರಿವಾರದ ಅಂಗಸಂಸ್ಥೆ ವಿಜ್ಞಾನ ಭಾರತಿಯೂ ಇದರ ಆಯೋಜನೆಯಲ್ಲಿ ಮುಖ್ಯಪಾತ್ರವಹಿಸಿದೆ. ಒಟ್ಟು 35 ಮಂದಿ ತಜ್ಞರು ಪ್ರಾಚೀನ ಮತ್ತು ಆಧುನಿಕ ವಿಜ್ಞಾನಗಳ ವಿವಿಧ ಆಯಾಮಗಳ ಕುರಿತು ಮಾತನಾಡಲಿದ್ದಾರೆ.

“ಆಕಾಶ್‌ ಫಾರ್‌ ಲೈಫ್’ ಉದ್ದೇಶವೇನು?
ಭಾರತೀಯ ಯುವಜನತೆಗೆ ವಿಜ್ಞಾನವೆಂದರೆ ಆಧುನಿಕ ವಿಜ್ಞಾನವೇ ಕಣ್ಮುಂದೆ ಬರುತ್ತದೆ. ಪ್ರಾಚೀನ ಭಾರತದಲ್ಲೂ ವಿಜ್ಞಾನವಿತ್ತು ಎಂದು ತಿಳಿಸುವುದು ಮತ್ತು ಆಧುನಿಕ-ಪ್ರಾಚೀನ ವಿಜ್ಞಾನಗಳನ್ನು ಬೆಸೆಯುವುದು ಇದರ ಮುಖ್ಯ ಉದ್ದೇಶ. ಎಲ್ಲಕ್ಕಿಂತ ಮುಖ್ಯವಾಗಿ ಆಕಾಶ ತಣ್ತೀದ ಬಗ್ಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗುತ್ತದೆ. ನಿರ್ದಿಷ್ಟವಾಗಿ ಏನೆಲ್ಲ ನಡೆಯುತ್ತದೆ, ಆಕಾಶ ತಣ್ತೀವೆಂದರೆ ಯಾವ ರೀತಿಯಲ್ಲಿ ಪರಿಭಾವಿಸಲಾಗಿದೆ ಎನ್ನುವುದೆಲ್ಲ ಖಚಿತವಾಗಿಲ್ಲ.

ಇಸ್ರೋ ಕೂಡ ಈ ಸಮ್ಮೇಳನಕ್ಕೆ ಕೈಜೋಡಿಸಿದೆ. ಇಸ್ರೋ ಕಳಿಸುವ ಉಪಗ್ರಹಗಳು, ಇನ್ನಿತರೆ ಅಂತರಿಕ್ಷ ನೌಕೆಗಳೆಲ್ಲ ಆಕಾಶವನ್ನೇ ಆಧಾರವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಆಕಾಶದ ಬಗ್ಗೆ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಏನೆಲ್ಲ ಹೇಳಲಾಗಿದೆ, ಅದು ವರ್ತಮಾನ ವಿಜ್ಞಾನಕ್ಕೆ ಹೇಗೆ ಸಹಾಯಕವಾಗುತ್ತದೆ ಎಂಬ ಚರ್ಚೆಗಳೂ ನಡೆಯಲಿವೆ.

ಸಮ್ಮೇಳನಕ್ಕೆ ಕರ್ನಾಟಕದ ಕೆಲ ವಿಜ್ಞಾನಿಗಳ ವಿರೋಧ
ಮೂರು ದಿನಗಳ ಸಮ್ಮೇಳನಕ್ಕೆ ಕೆಲ ವಿಜ್ಞಾನಿಗಳು ಅಪಸ್ವರ ಎತ್ತಿದ್ದಾರೆ. ಮುಖ್ಯವಾಗಿ ಈ ವಿರೋಧ ಕರ್ನಾಟಕದಿಂದಲೇ ಕೇಳಿಬಂದಿದೆ. ರಾಜ್ಯದ ಐಎಂಎಫ್ಎಸ್‌ (ಕರ್ನಾಟಕ ಚಾಪ್ಟರ್‌ ಫಾರ್‌ ದಿ ಇಂಡಿಯಾ ಮಾರ್ಚ್‌ ಫಾರ್‌ ಸೈನ್ಸ್‌ ), ಈ ಸಮ್ಮೇಳನಕ್ಕೆ ಇಸ್ರೋ ಕೂಡ ಕೈಜೋಡಿಸಿರುವುದಕ್ಕೆ ಸಿಟ್ಟಾಗಿದೆ. “ಪ್ರಾಚೀನ ಭಾರತೀಯರ ಕೊಡುಗೆಗಳ ಬಗ್ಗೆ ನಮಗೂ ಗೌರವವಿದೆ. ಆದರೆ ಅವರ ತಣ್ತೀಗಳನ್ನು ಆಧುನಿಕ ವಿಜ್ಞಾನಕ್ಕೆ ಸಮಾನ ಎಂದು ಬೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ. ಆಕಾಶ, ಭೂಮಿ, ನೀರು… ಇವನ್ನೆಲ್ಲ ಮುಖ್ಯವಾದ ಅಂಶಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ವಿಜ್ಞಾನ ಪುಸ್ತಕಗಳಿಂದ ಅವೆಂದೋ ಅಳಿಸಿ ಹೋಗಿವೆ’ ಎಂದು ಐಎಂಎಫ್ಎಸ್‌ ಹೇಳಿದೆ.

ಪಂಚಭೂತಗಳೆಂದರೇನು?
ಭಾರತೀಯ ವೇದಗ್ರಂಥಗಳು, ಪುರಾಣಗಳು, ಮಾಂತ್ರಿಕ, ತಾಂತ್ರಿಕ ಗ್ರಂಥಗಳಲ್ಲಿ ಪಂಚಭೂತಗಳ ಪ್ರಸ್ತಾಪ ಬೇಕಾದಷ್ಟಿದೆ. ಪೃಥ್ವಿ (ಭೂಮಿ), ಅಪ್‌ (ನೀರು), ತೇಜ (ಬೆಂಕಿ), ವಾಯು, ಆಕಾಶ… ಹೀಗೆ ಅದನ್ನು ವರ್ಣಿಸಲಾಗಿದೆ. ಇದನ್ನು ಇನ್ನೂ ಸರಳೀಕರಿಸುವುದಾದರೆ ಮಣ್ಣು, ನೀರು, ಬೆಂಕಿ, ಗಾಳಿ ಮತ್ತು ಶಬ್ದದಿಂದ ತುಂಬಿಕೊಂಡಿರುವ ಆಕಾಶವೆಂದು ಹೇಳಬಹುದು. ಇಡೀ ಸೃಷ್ಟಿಕ್ರಿಯೆಯನ್ನು ತೆಗೆದುಕೊಂಡರೆ ಈ ಅಂಶಗಳಿಲ್ಲದೇ ಸೃಷ್ಟಿಯಾಗಿರುವುದು ಕಂಡುಬರುವುದಿಲ್ಲ. ಮಣ್ಣಾಗಲೀ, ನೀರಾಗಲೀ ಇವುಗಳ ಸೃಷ್ಟಿಗೆ ವಿಜ್ಞಾನದ ಪ್ರಕಾರ ಇನ್ನೊಂದು ಧಾತು ಕಾರಣ. ಹಾಗಂತ ಈ ಐದು ಮುಖ್ಯಸಂಗತಿಗಳ ಅಸ್ತಿತ್ವವನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಇವನ್ನು ಮುಖ್ಯವಾಗಿ ಪರಿಗಣಿಸಲಾಗಿದೆ.

ಇಲ್ಲಿ ಮಣ್ಣೆಂದರೆ ಗಂಧ ಅಂದರೆ ವಾಸನೆ, ನೀರೆಂದರೆ ರಸ, ಬೆಂಕಿಯೆಂದರೆ ರೂಪ, ಗಾಳಿಯೆಂದರೆ ಸ್ಪರ್ಶ, ಆಕಾಶವೆಂದರೆ ಶಬ್ದದ ಗುಣಗಳನ್ನು ಪ್ರತಿಧ್ವನಿಸುತ್ತವೆ ಎಂದೂ ಹೇಳಲಾಗುತ್ತದೆ. ಬೆಂಕಿಯ ಸ್ಪರ್ಶದಿಂದಲೇ ರೂಪಾಂತರವಾಗುವುದು, ಎಲ್ಲೆಲ್ಲಿ ರಸವಿರುತ್ತದೋ ಅಲ್ಲಿ ನೀರಿದ್ದೇ ಇರುತ್ತದೆ. ಆಕಾಶವೆಂದರೆ ಸಂಪೂರ್ಣ ಶಬ್ದದಿಂದಲೇ ತುಂಬಿಕೊಂಡಿರುವುದು. ಹೀಗಾಗಿ ಪಂಚಭೂತಗಳ ಮೂಲಗುಣವನ್ನು ಗಮನಿಸಬೇಕು ಎನ್ನುತ್ತಾರೆ. ಕೆಲವರು ಆಗಸದಲ್ಲಿ ನಿಶ್ಶಬ್ದವಿದೆಯಲ್ಲ ಎಂದು ಕೇಳಬಹುದು. ಆದರೆ ಅದು ಶಬ್ದದ ಇನ್ನೊಂದು ರೂಪ ಎನ್ನುವುದನ್ನು ಮರೆಯಬಾರದು. ಆ ನಿಶ್ಶಬ್ದವನ್ನು ಕೇಳಿಸಿಕೊಳ್ಳುವ ಗ್ರಹಣಶಕ್ತಿ ಯೋಗಾವಸ್ಥೆಯಲ್ಲಿದ್ದಾಗ ಬರುತ್ತದೆ. ಅದು ಯೋಗವಿಜ್ಞಾನ ಎಂದು ಅಧ್ಯಾತ್ಮ ಚಿಂತಕರು ವಿವರಿಸುತ್ತಾರೆ.

ಪಂಚೋಪಚಾರ ಪೂಜೆ!
ಭಾರತೀಯ ಪೂಜಾಕ್ರಮದಲ್ಲಿ ಪಂಚೋಪಚಾರ, ಷೋಡಶೋಪಚಾರ ಪೂಜಾಕ್ರಮಗಳಿವೆ. ಪಂಚೋಪಚಾರವೆಂದರೆ ಗಂಧ (ಪರಿಮಳ), ಪುಷ್ಪ (ಸೌಂದರ್ಯ), ಧೂಪ (ವಾಯುಗುಣ), ದೀಪ (ಬೆಳಕಿನ ಗುಣ), ನೈವೇದ್ಯ (ಆಹಾರ, ಮಣ್ಣಿನಗುಣ). ಇನ್ನು ಷೋಡಶವೆಂದರೆ 16 ರೀತಿಯಲ್ಲಿ ದೇವರನ್ನು ಅರ್ಚಿಸುವುದು. ಇವೆಲ್ಲ ಮೇಲ್ನೋಟಕ್ಕೆ ಯಾವುದೋ ದೇವರ ಪೂಜಾವಿಧಾನಗಳಂತೆ ಕಂಡರೂ, ಆಂತರ್ಯದಲ್ಲಿ ಬೇರೆಯದ್ದೇ ಆದ ವಿಚಾರವನ್ನು ಸೂಚಿಸುತ್ತವೆ. ಸೃಷ್ಟಿಗೆ ಎರಡು ರೂಪಗಳಿವೆ. ಅದನ್ನು ವಿಜ್ಞಾನ ಕೂಡ ಒಪ್ಪುತ್ತದೆ. ಒಂದು ಕಣ್ಣಿಗೆ ಕಾಣುತ್ತದೆ, ಇನ್ನೊಂದು ಕಾಣುವುದಿಲ್ಲ. ಇದನ್ನು ಆಧ್ಯಾತ್ಮಿಕ ಭಾಷೆಯಲ್ಲಿ ಸಾಕಾರ, ನಿರಾಕಾರ ಎನ್ನಲಾಗುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ವಸ್ತು (ಸಾಕಾರ), ಪರಮಾಣು (ಪ್ರೋಟಾನ್‌, ಎಲೆಕ್ಟ್ರಾನ್‌,ನ್ಯೂಟ್ರಾನ್‌ಗಳಿಂದ ಕೂಡಿರುವುದು-ನಿರಾಕಾರ) ಎನ್ನಲಾಗುತ್ತದೆ. ಯಾವುದರಿಂದ ಈ ಸೃಷ್ಟಿ ಈ ರೂಪ ಪಡೆದಿದೆಯೋ, ಅದನ್ನು ಮೊದಲು ಅದರ ಗುಣಗಳ ಮೂಲಕವೇ ಪೂಜಿಸುವುದು. ಇನ್ನೊಂದು ರೀತಿಯಲ್ಲಿ ಅದನ್ನು ಅರಿಯಲು ಯತ್ನಿಸುವುದು. ನಂತರ ಅದರ ಮೂಲವಾದ ಅಣುವಿನ ಹಂತಕ್ಕೆ ತಲುಪುವುದು. ಹೀಗೆ ನೋಡುವುದಾದರೆ ಜಗತ್ತಿನ ಮೂಲಸ್ವರೂಪವನ್ನು ಅರಿಯುವುದಕ್ಕೆ ಹಿಂದಿನ ಋಷಿಗಳು ಕಂಡುಕೊಂಡಿರುವ ಮಾರ್ಗವಿದು. ಇದು ಪೂಜಾಕ್ರಮವೆಂದು ಸಾಂಪ್ರದಾಯಿಕವಾಗಿ ಕರೆಸಿಕೊಂಡಿದ್ದರೂ, ಇದರ ಹಿಂದೆ ಸೃಷ್ಟಿಯ ಮೂಲರಚನೆಯ ಅನ್ವೇಷಣೆಯೇ ಇದೆ ಎಂದು ಯೋಗಿಗಳು ಹೇಳುತ್ತಾರೆ!

ರಾಮಾಯಣದಲ್ಲಿ ಪುಷ್ಪಕ ವಿಮಾನ, ಮಹಾಭಾರತದಲ್ಲಿ ಹೆಲಿಕಾಪ್ಟರ್‌ಗಳು!
ವಿಮಾನವನ್ನು ಆಧುನಿಕ ಕಾಲದಲ್ಲಿ ಮೊದಲು ಹಾರಿಸಿದ್ದು 1903ರಲ್ಲಿ. ವಿಲ್ಬರ್‌ ರೈಟ್‌, ಅರ್ವಿಲ್‌ ರೈಟ್‌ ಸಹೋದರರ ಸಂಶೋಧನೆಯ ಫ‌ಲವಿದು. ಆದರೆ ಭಾರತದಲ್ಲಿ ರಾಮಾಯಣದಲ್ಲಿ ಅಗತ್ಯವಿದ್ದಷ್ಟು ಹಿಗ್ಗುವ, ಕುಗ್ಗುವ ಪುಷ್ಪಕ ವಿಮಾನದ ಪ್ರಸ್ತಾಪವಿದೆ. ಮಹಾಭಾರತದಲ್ಲೂ ಇದೆ. ಧರ್ಮರಾಜ ಇಂದ್ರಪ್ರಸ್ಥದಲ್ಲಿ ರಾಜಸೂಯಯಾಗ ಮಾಡಿದ್ದಾಗ, ಬೇರೆಬೇರೆ ದೇಶಗಳಿಂದ ಬಂದಿದ್ದ ರಾಜರು ತಮ್ಮ ವಿಮಾನಗಳನ್ನು ಇಳಿಸಲೆಂದೇ ಅರಮನೆಗಳ ಮೇಲೆ ಸ್ಥಳಾವಕಾಶ ಮಾಡಲಾಗಿತ್ತು ಎಂಬ ವರ್ಣನೆಗಳಿವೆ! ಇವು ಈಗಿನ ಹೆಲಿಕಾಪ್ಟರ್‌ಗಳನ್ನು ಹೋಲುತ್ತವೆ. ಇವನ್ನು ಕೇವಲ ಕಲ್ಪನೆಗಳು ಎಂದು ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಹಲವಾರು ವಿಜ್ಞಾನಿಗಳೇ ಬಹುಹಿಂದೆ ತಂತ್ರಜ್ಞಾನ ಬಹಳ ಉನ್ನತಮಟ್ಟಕ್ಕೆ ಬೆಳೆದು, ಈಗ ಅಧಃಪತನಗೊಂಡಿರಬಹುದೆಂಬ ಸಂಶಯಗಳನ್ನು ಹೊಂದಿದ್ದಾರೆ.

ಭರದ್ವಾಜರ ವೈಮಾನಿಕ ಶಾಸ್ತ್ರ
ಭರದ್ವಾಜ ಮಹರ್ಷಿ ಸಪ್ತರ್ಷಿಗಳಲ್ಲೊಬ್ಬರು. ಇವರ ನಂತರದ ಪೀಳಿಗೆಯವರಿಗೆ ಇವರದ್ದೇ ಹೆಸರನ್ನಿಡಲಾಗಿದೆ. ಇವರ ಹೆಸರಿನ ಹಲವು ಇತರೆ ಋಷಿಗಳು ಪುರಾಣಗಳಲ್ಲಿ ಬಂದು ಹೋಗಿದ್ದಾರೆ. ಈ ಮಹರ್ಷಿ ಕರ್ನಾಟಕದ ಸುಬ್ಬರಾಯ ಶಾಸ್ತ್ರಿಯವರಿಗೆ 20ನೇ ಶತಮಾನದ ಆರಂಭದಲ್ಲಿ ಅಂದರೆ 1918-23ರಂದು ವೈಮಾನಿಕ ಶಾಸ್ತ್ರವನ್ನು ಅಲೌಕಿಕ ರೀತಿಯಲ್ಲಿ ಬೋಧಿಸಿದ್ದರು ಎಂಬ ಮಾತಿದೆ. ಈ ಕುರಿತು ಸಾವಿರಾರು ಶ್ಲೋಕಗಳಿರುವ ವೈಮಾನಿಕ ಶಾಸ್ತ್ರವೆಂಬ ಒಂದು ಪುಸ್ತಕವೇ ಇದೆ! ಇದನ್ನು ವಿಜ್ಞಾನಿಗಳು ನಿರಾಕರಿಸಿದ್ದರೂ, ಈಗಲೂ ಆಸಕ್ತರು ಆ ಬಗ್ಗೆ ಸಂಶೋಧನೆ ಮಾಡುತ್ತಲೇ ಇದ್ದಾರೆ.

ಭೃಗು ಮಹರ್ಷಿಯ ಪಂಚಕೋಶಗಳು
ಭೃಗು ಮಹರ್ಷಿಯ ಬಗ್ಗೆ ನಾವು ಕೇಳಿರುತ್ತೇವೆ. ಇವರ ನೆನಪಾದರೆ ಮಹಾಸಿಟ್ಟಿನ ಋಷಿ ಎಂದೇ ನಮ್ಮ ಕಲ್ಪನೆಗೆ ಬರುವುದು. ಆದರೆ ಇವರ ಭೃಗುಸಂಹಿತೆ ಬಹಳ ಅದ್ಭುತ ಎಂಬ ವರ್ಣನೆಗಳಿವೆ. ಇವರೇ ಪಂಚಕೋಶಗಳ ಬಗ್ಗೆ ಹೇಳಿರುವುದು. ತೈತ್ತಿರೀಯ ಉಪನಿಷತ್‌ನಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಕೋಶಗಳನ್ನು ವಿವರಿಸಲಾಗಿದೆ. ಇದನ್ನು ಯಾರೆಷ್ಟು ಒಪ್ಪುತ್ತಾರೋ ಬಿಡುತ್ತಾರೋ ಅದು ಬೇರೆಯ ವಿಚಾರ. ಆದರೆ ಶರೀರದಲ್ಲಿ ಆಹಾರ (ಅನ್ನ), ಉಸಿರು (ಪ್ರಾಣ), ವಿಚಾರ (ಮನಸ್ಸು), ವ್ಯವಸ್ಥಿತ ರಚನೆ (ವಿಜ್ಞಾನ), ಆನಂದವಂತೂ (ಆನಂದಮಯ) ಇರುವುದು ಹೌದು. ಗ್ರಂಥಿಗಳು ಅಥವಾ ಗ್ಲ್ಯಾಂಡ್‌ಗಳನ್ನು ಪ್ರಯೋಗಕ್ಕೊಳಪಡಿಸಿದಾಗ ಅವುಗಳಿಂದ ಆನಂದವನ್ನಾದರೂ ಸೃಷ್ಟಿಸಬಹುದು, ದುಃಖವನ್ನಾದರೂ ಉಂಟು ಮಾಡಬಹುದು ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

ಆಯುರ್ವೇದ, ಯೋಗವಿದ್ಯಾ ವಿಜ್ಞಾನ
ಆಯುರ್ವೇದ ಶಾಸ್ತ್ರದ ಪಿತಾಮಹ ಧನ್ವಂತರಿ, ಕಾಲಾಂತರದಲ್ಲಿ ಸುಶ್ರುತ, ಚರಕ, ವಾಗ½ಟರಂತಹ ಮಹಾಮಹಾ ಆಯುರ್ವೇದಾಚಾರ್ಯರು ಗಿಡಮೂಲಿಕೆಗಳ ಔಷಧೀಯ ಶಕ್ತಿಯನ್ನು ಪತ್ತೆ ಮಾಡಿದರು. ಭಾರತದಲ್ಲೀಗ ಅದೇ ಒಂದು ವೈದ್ಯಶಾಸ್ತ್ರವಾಗಿ ಬೆಳೆದಿದೆ. ಸುಶ್ರುತ ಚರಕ ಸಂಹಿತೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗರ್ಭದಲ್ಲೇ ಸತ್ತಿರುವ ಮಗುವನ್ನು ಹೊರತೆಗೆಯುವ ತಂತ್ರವೂ ಇದೆ. ಇದಕ್ಕೆ ಶಲ್ಯ ಚಿಕಿತ್ಸೆ ಎಂದೇ ಕರೆಯಲಾಗುತ್ತದೆ! ಇನ್ನು ಉಸಿರಾಟವನ್ನು ನಿಯಂತ್ರಿಸುವ, ಏಕಾಗ್ರತೆಯನ್ನು ಹೆಚ್ಚಿಸುವ, ಶರೀರಕ್ಕೆ ಅತ್ಯುತ್ತಮ ವ್ಯಾಯಾಮವನ್ನು ನೀಡುವ ಅಷ್ಟಾಂಗಯೋಗ ಪ್ರಸ್ತುತ ಜಗತ್ತಿನಲ್ಲೇ ಅತ್ಯಂತ ಜನಪ್ರಿಯವಾಗಿದೆ. ಇದು ನಿರ್ಣಾಯಕವಾಗಿ ಒಂದು ಶರೀರ-ಮನೋ ವಿಜ್ಞಾನ ಎನ್ನಬಹುದು.

ಅಸ್ತ್ರಶಸ್ತ್ರಗಳ ಬಗ್ಗೆ ನಿಮಗೇನನಿಸುತ್ತದೆ?
ಪೌರಾಣಿಕ ಗ್ರಂಥಗಳಲ್ಲಿ ಆಗ್ನೇಯಾಸ್ತ್ರ, ಸರ್ಪಾಸ್ತ್ರ, ವರುಣಾಸ್ತ್ರ, ವಾಯುವ್ಯಾಸ್ತ್ರ, ಪಾಶುಪತಾಸ್ತ್ರ, ನಾರಾಯಣಾಸ್ತ್ರ, ಬ್ರಹ್ಮಾಸ್ತ್ರ,ಹೀಗೆ ನೂರಾಯೆಂಟು ಅಸ್ತ್ರಗಳ ಮಾಹಿತಿಯಿದೆ. ಇವನ್ನೆಲ್ಲ ಮಂತ್ರಗಳನ್ನು ಉಚ್ಚರಿಸಿ ಜಾಗೃತ ಮಾಡಿ, ಸಣ್ಣ ಕಡ್ಡಿಯನ್ನು ಬಳಸಿಯಾದರೂ ಪ್ರಯೋಗಿಸಬಹುದಿತ್ತು. ಆದರೆ ಅದನ್ನು ಹೇಗೆ ಮಾಡುತ್ತಿದ್ದರು ಎಂಬ ವಿವರಣೆಗಳು ಈ ಗ್ರಂಥಗಳಲ್ಲಿ ಸಿಗುವುದಿಲ್ಲ. ಹಾಗಂತ ಅವನ್ನೆಲ್ಲ ಮೂಢನಂಬಿಕೆಗಳು ಎಂದು ಸುಮ್ಮನೆ ಬಿಟ್ಟಿಲ್ಲ. ಹಲವರು ಅವುಗಳ ಕುರಿತು ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಈಗಿನ ಅಣುಬಾಂಬಿನ ಇನ್ನೊಂದು ರೂಪವಿರಬಹುದೇ ಅವು ಎಂಬ ಚಿಂತನೆಗಳಿವೆ.

-ಕೆ.ಪೃಥ್ವಿಜಿತ್‌

ಟಾಪ್ ನ್ಯೂಸ್

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.