ಪಿಎಫ್ಐನ ವಿವಾದಾತ್ಮಕ ಇತಿಹಾಸ
Team Udayavani, Sep 23, 2022, 7:00 AM IST
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ… ಹಲವಾರು ಕಾರಣಗಳಿಂದ ದೇಶಾದ್ಯಂತ ಸುದ್ದಿಯಲ್ಲಿರುವ ಸಂಘಟನೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಪಿಎಫ್ಐ ಎಂದೇ ಇದು ಗುರುತಿಸಿಕೊಂಡಿದೆ. 2006ರಲ್ಲಿ ಕೇರಳದಲ್ಲಿ ಜನ್ಮತಾಳಿದ ಈ ಸಂಘಟನೆ, ಬಹುಬೇಗನೇ ಹೆಮ್ಮರವಾಗಿ ಬೆಳೆದಿದೆ. ಉತ್ತರ ಭಾರತಕ್ಕಿಂತಲೂ, ದಕ್ಷಿಣ ಭಾರತದಲ್ಲೇ ಇದರ ಆಳ ಮತ್ತು ಅಗಲ ಹೆಚ್ಚು. ಈಗ ಇದೇ ಸಂಘಟನೆಗೆ ಸೇರಿದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ದಾಳಿ ನಡೆಸಿದೆ. ಹಾಗಾದರೆ ಏನಿದು ಸಂಘಟನೆ? ಈ ಮಟ್ಟದ ದಾಳಿ ನಡೆಸಿದ್ದು ಏಕೆ? ಈ ಕುರಿತಂತೆ ಒಂದು ಸಮಗ್ರ ನೋಟ ಇಲ್ಲಿದೆ…
ಏನಿದು ಪಿಎಫ್ಐ? :
2006ರಲ್ಲಿ ಕೇರಳದ ನ್ಯಾಶನಲ್ ಡೆಮಾಕ್ರೆಟಿಕ್ ಫ್ರಂಟ್, ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಸರಾಯಿ ಸಂಘಟನೆಗಳು ಸೇರಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆಯನ್ನು ಕಟ್ಟಿಕೊಂಡವು. 2007ರ ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ನಡೆದ ಎಂಪವರ್ ಇಂಡಿಯಾ ಕಾನ್ಫರೆನ್ಸ್‌ನಲ್ಲಿ ಈ ಸಂಘಟನೆಯ ರಚನೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ಭಾರತದ ಅವಗಣಿಸಲ್ಪಟ್ಟ ಸಮುದಾಯದ ಧ್ವನಿಯಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳುತ್ತಲೇ ಹುಟ್ಟಿಕೊಂಡ ಈ ಸಂಘಟನೆ, ಕರ್ನಾಟಕದಲ್ಲೇ ಇದ್ದ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ) ನಿಷೇಧದ ಅನಂತರ ಪ್ರವರ್ಧಮಾನಕ್ಕೆ ಬಂದಿತು. ಈ ಸಂಘಟನೆಯ ಬೇರುಗಳು ಹೆಚ್ಚಾಗಿದ್ದರೂ ಇದುವರೆಗೆ ಇದರ ಅಡಿಯಲ್ಲಿ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡಲಾಗಿಲ್ಲ. ಆದರೆ ಈ ಸಂಘಟನೆಯ ಹೆಸರನ್ನು ಬಳಸಿಕೊಂಡು ಮುಸ್ಲಿಮರ ಮತ ಸೆಳೆಯಲು ಕೆಲವು ರಾಜಕೀಯ ಪಕ್ಷಗಳು ಯತ್ನಿಸುತ್ತಿವೆ ಎಂಬ ಮಾತುಗಳಿವೆ.
ಪಿಎಫ್ಐ ಚುನಾವಣೆಗೆ ಸ್ಪರ್ಧಿಸದಿದ್ದರೂ ಇದರ ಅಡಿಯಲ್ಲೇ 2009ರಲ್ಲಿ ಹುಟ್ಟಿಕೊಂಡ ಮತ್ತೂಂದು ಸಂಘಟನೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜಕೀಯಕ್ಕೆ ಕಾಲಿಟ್ಟಿತು. ಇದು ಮುಸ್ಲಿಮರು, ದಲಿತರು ಮತ್ತು ಸಮಾಜದಲ್ಲಿ ಅವಗಣಿಸಲ್ಪಟ್ಟ ಇತರ ಸಮುದಾಯಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿತು.
ಕೇರಳ ಸರಕಾರ ಅಫಿದವಿತ್ :
ಪಿಎಫ್ಐ ಹುಟ್ಟಿಕೊಂಡಿದ್ದು ಕೇರಳದಲ್ಲಿ ಎಂಬುದನ್ನು ಮೊದಲೇ ಹೇಳಲಾಗಿದೆ. ಈ ಸಂಘಟನೆಯ ಚಟುವಟಿಕೆಗಳನ್ನು ಉಲ್ಲೇಖೀಸಿ, 2012ರಲ್ಲಿ ಕೇರಳದಲ್ಲಿ ಅಧಿಕಾರದಲ್ಲಿದ್ದ ಉಮ್ಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ ಸರಕಾರ, ಅಲ್ಲಿನ ಹೈಕೋರ್ಟ್‌ಗೆ, ನಿಷೇಧಿತ ಸಿಮಿಯ ಮುಂದುವರಿದ ರೂಪವೇ ಪಿಎಫ್ಐ ಎಂದು ಮಾಹಿತಿ ನೀಡಿತ್ತು.
ಇದಾದ ಎರಡು ವರ್ಷಗಳ ಬಳಿಕ ಕೇರಳ ಸರಕಾರವು ಮತ್ತೂಮ್ಮೆ ಅಲ್ಲಿನ ಹೈಕೋರ್ಟ್‌ಗೆ ಈ ರೀತಿ ಅಫಿಡವಿಟ್ ಸಲ್ಲಿಸಿತ್ತು: “”ಮತಾಂತರಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸಮಾಜವನ್ನು ಇಸ್ಲಾಮೀಕರಣ ಮಾಡುತ್ತಿದೆ. “ಮತಾಂತರವನ್ನು ಉತ್ತೇಜಿಸುವ ಮೂಲಕ ಸಮಾಜವನ್ನು ಇಸ್ಲಾಮೀಕರಣಗೊಳಿಸುವುದು, ಇಸ್ಲಾಂನ ಲಾಭದ ದೃಷ್ಟಿಯಿಂದ ಸಮಸ್ಯೆಗಳನ್ನು ಕೋಮುವಾದೀಕರಣಗೊಳಿಸುವುದು, ನೇಮಕಾತಿ ಮತ್ತು ಅವರ ಗ್ರಹಿಕೆಯಲ್ಲಿ ಇಸ್ಲಾಂನ ವೈರಿಗಳಾಗಿರುವ ವ್ಯಕ್ತಿಗಳನ್ನು ಇನ್ನಿಲ್ಲದಂತೆ ಮಾಡಲು ಸಂಪ್ರದಾಯಬದ್ಧ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳುವುದು ಮತ್ತು ನಿರ್ವಹಿಸುವ” ಕೆಲಸ ಮಾಡುತ್ತಿದೆ.
ಇದರ ಜತೆಯಲ್ಲೇ ಕೇರಳದಲ್ಲಿನ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರ ಹತ್ಯೆ ಹಿಂದೆಯೂ ಪಿಎಫ್ಐ ಪಾತ್ರವಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಕಳೆದ 6 ವರ್ಷಗಳಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ 24 ಮಂದಿಯನ್ನು ಹತ್ಯೆ ಮಾಡಲಾಗಿದ್ದು, ಇದರಲ್ಲಿ ಏಳು ಮಂದಿಯನ್ನು ಪಿಎಫ್ಐ ಕಾರ್ಯಕರ್ತರೇ ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.
ಮೆಗಾ 2047 ಯೋಜನೆ :
2047ರ ಹೊತ್ತಿಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವ ಗುರಿಯನ್ನು ಪಿಎಫ್ಐ ಹೊಂದಿತ್ತಂತೆ. ಬಿಹಾರ ಪೊಲೀಸರು ಪಟ್ನಾದ ಹೊರವಲಯದ ಪುಲ್ವಾರಿ ಷರೀಫ್ನಲ್ಲಿ ಉಗ್ರರ ಕಾರ್ಯಾಚರಣೆ ನಡೆಸಿದಾಗ ಪಿಎಫ್ಐನ ಈ ಸಂಚು ಬಯಲಾಗಿತ್ತು. ಪಿಎಫ್ಐನ ರಹಸ್ಯ ದಾಖಲೆಯ ಬಗ್ಗೆ ಮಾತನಾಡಿದ್ದ ಪುಲ್ವಾರಿ ಷರೀಫ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಎಎಸ್‌ಪಿ ಮನೀಶ್ ಕುಮಾರ್, ಹಿಂದೂ ಸಮುದಾಯವನ್ನು ಕುಗ್ಗಿಸಿ, ಮತ್ತೂಮ್ಮೆ ಇಸ್ಲಾಂ ವೈಭವವನ್ನು ಭಾರತದಲ್ಲಿ ತರಬೇಕು ಎಂಬುದು ಈ ದಾಖಲೆಯ ಲ್ಲಿತ್ತು ಎಂದಿದ್ದರು. ಪಿಎಫ್ಐನ ದಾಖಲೆ ಯಂತೆ ಬ್ರಿಟಿಷರು ನಮ್ಮಿಂದ ಕಸಿದು ಕೊಂಡ ಅಧಿಕಾರವನ್ನು 2047ರ ಹೊತ್ತಿಗೆ ಮರುಸ್ಥಾಪಿಸಬೇಕು ಎಂಬುದು ಪಿಎಫ್ಐನ ಕನಸು ಎಂದು ಉಲ್ಲೇಖೀಸಲಾಗಿತ್ತು.
ಹೊಸ ಮಾದರಿ :
ಇತ್ತೀಚಿನ ದಿನಗಳಲ್ಲಿ ಪಿಎಫ್ಐ ಬೇರೆಯದ್ದೇ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಅಂದರೆ ರೋಹಿಂಗ್ಯಾಗಳಿಗೆ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದವರಿಗೆ ಆಧಾರ್ ಕಾರ್ಡ್ ಕೊಡಿಸುವುದು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ಅಲ್ಲಿಂದ ಕಾರ್ಮಿಕರನ್ನು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಮುಸಲ್ಮಾನರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ಅವರ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
ಪಿಎಫ್ಐನ ಸ್ಪಷ್ಟನೆ :
ದೇಶಾದ್ಯಂತ ಎನ್‌ಐಎ ಮತ್ತು ಇ.ಡಿ. ನಡೆಸಿರುವ ದಾಳಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಿಎಫ್ಐ, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಇಂಥ ದಾಳಿಗಳ ಮೂಲಕ ನಮ್ಮನ್ನು ಬೆದರಿಸಲಾಗುತ್ತಿದೆ ಎಂದು ಹೇಳಿದೆ.
ಪಿಎಫ್ಐ ಮೇಲಿನ ಆರೋಪಗಳು :
2015: ಕಾಲೇಜು ಪ್ರಾಧ್ಯಾಪಕ ಟಿ.ಜೆ.ಜೋಸೆಫ್ ಅವರ ಕೈಯನ್ನು ಕತ್ತರಿಸಿದ ಕಾರಣಕ್ಕಾಗಿ ಪಿಎಫ್ಐನ 13 ಕಾರ್ಯಕರ್ತರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
2018: ಕಣ್ಣೂರಿನ ಎಬಿವಿಪಿ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಪಿಎಫ್ಐನ ಆರು ಕಾರ್ಯಕರ್ತರ ಬಂಧನ
2019: ಎರ್ನಾಕುಲಂನ ಮಹಾರಾಜ ಕಾಲೇಜಿನ ಎಸ್‌ಎಫ್ಐ ನಾಯಕ ಅಭಿಮನ್ಯು ಎಂಬಾತನ ಕೊಲೆ ಸಂಬಂಧ 9 ಕಾರ್ಯಕರ್ತರ ಸೆರೆ.
2018: ಹಾದಿಯಾ ಜಹಾನ್ ಕೇಸಿನಲ್ಲಿ ಪಿಎಫ್ಐ ಲವ್ ಜೆಹಾದ್ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು.
2021: ಅಸ್ಸಾಂನ ಡರಾಂಗ್ ಜಿಲ್ಲೆಯಲ್ಲಿನ ನಡೆದ ಹಿಂಸಾಚಾರದ ಹಿಂದೆ ಪಿಎಫ್ಐ ಕೈವಾಡವಿರುವ ಶಂಕೆ.
2020: ದಿಲ್ಲಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರದಲ್ಲಿ ಪಿಎಫ್ಐ ಕೈವಾ ಡವಿರುವ ಬಗ್ಗೆ ಪೊಲೀಸರಿಂದ ತನಿಖೆ. 2020ರ ಫೆ.23ರಂದು ನಡೆದ ಹಿಂಸಾಚಾರದಲ್ಲಿ 53 ಮಂದಿ ಪ್ರಾಣ ತೆತ್ತಿದ್ದರು.
2020: ಉತ್ತರ ಪ್ರದೇಶದ ಹತ್ರಾಸ್‌ನ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ಹೆಸರನ್ನು ಉಲ್ಲೇಖೀಸಲಾಗಿತ್ತು. ಇದೇ ಸಂಘಟನೆಯ 8 ಸದಸ್ಯರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.
2022: ಕರ್ನಾಟಕದ ಹಿಜಾಬ್ ವಿವಾದದ ಹಿಂದೆ ಪಿಎಫ್ಐ ಕೈವಾಡವಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
-ಕೃಪೆ: ನ್ಯೂಸ್18 ಆಂಗ್ಲ ವೆಬ್‌ಸೈಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.