ಜತೆಗಿರದ ಜೀವ ಎಂದಿಗೂ ಜೀವಂತ


Team Udayavani, Oct 29, 2022, 6:15 AM IST

ಜತೆಗಿರದ ಜೀವ ಎಂದಿಗೂ ಜೀವಂತ

ಕರುನಾಡಿನ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಈಗ ಅಪ್ಪು ನಮ್ಮೊಂದಿಗಿಲ್ಲ ಎಂಬುದನ್ನು ಬಿಟ್ಟರೆ, ಅಪ್ಪು ನಮ್ಮೆಲ್ಲರ ಮನದೊಳಗಿಲ್ಲ ಎಂಬುದು ಮಾತ್ರ ಸುಳ್ಳು. ಏಕೆಂದರೆ ಅಪ್ಪು ನೆನಪಿಸಿಕೊಳ್ಳದ ದಿನವೇ ಇಲ್ಲ. ವಿಶೇಷವೆಂದರೆ ಅಪ್ಪು ಸಮಾಧಿ ಇರುವ ಬೆಂಗಳೂರಿನ ಕಂಠೀರವ ಸ್ಟುಡಿಯೋ ಇಂದಿಗೂ ಅಪ್ಪು ಅಭಿಮಾನಿಗಳ ಪಾಲಿಗೆ ಪುಣ್ಯ ಕ್ಷೇತ್ರವೇ ಆಗಿಬಿಟ್ಟಿದೆ. ಇಂಥ ಅಪ್ಪುವನ್ನು ನಾಡಿನ ಉದ್ದಗಲಕ್ಕೂ ವರ್ಷಪೂರ್ತಿ ನೆನಪಿಸಿಕೊಳ್ಳಲಾಗಿದೆ, ಈಗಲೂ ನೆನಪಿಸಿಕೊಳ್ಳಲಾಗುತ್ತಿದೆ…

ಬೆಂಗಳೂರು
ಅಪ್ಪು ಗುಡಿ
ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಪ್ಪಟ ಅಭಿಮಾನಿಯೊಬ್ಬ ತನ್ನ ಸ್ನೇಹಿತರ ಜತೆಗೂಡಿ”ಅಪ್ಪು ಗುಡಿ’ ಹೆಸರಿನ ಸಣ್ಣ ದೇವಾಲಯ ನಿರ್ಮಿಸಿದ್ದಾನೆ. ಕೆಂಗೇರಿ ಸಮೀಪದ ಜ್ಞಾನಭಾರತೀ 1ನೇ ಬ್ಲಾಕ್‌ನಲ್ಲಿ ಚಿಕ್ಕದಾಗಿ ಚೊಕ್ಕದಾಗಿ ನಿರ್ಮಿಸಿರುವ ಸುಂದರವಾದ ಗುಡಿಯೊಳಗೆ ಅಪ್ಪು ಭಾವಚಿತ್ರವನ್ನಿಟ್ಟು ಪ್ರತಿ ದಿನ ದೀಪ ಹಚ್ಚಿ ಪೂಜೆ ಮಾಡಲಾಗುತ್ತಿದೆ. ಪುನೀತ್‌ ಅಪ್ಪಟ ಅಭಿಮಾನಿಯಾಗಿರುವ ಸಂತೋಷ್‌ ಈ ಗುಡಿಯ ರೂವಾರಿ. ದಿನದ 24 ಗಂಟೆಯೂ ಇಲ್ಲಿ ದೀಪ ಉರಿಯುತ್ತಿರುತ್ತದೆ.ಪುನೀತ್‌ ರಾಜ್‌ಕುಮಾರ್‌ ರಸ್ತೆ: ಕೆಂಗೇರಿಯಿಂದ ಬನ್ನೇರುಘಟ್ಟಕ್ಕೆ ತೆರಳುವ ಜೆಡಿಮರ ಸಿಗ್ನಲ್‌ಬಳಿಯ ರಸ್ತೆಗೆ “ಪುನೀತ್‌ ರಾಜ್‌ಕುಮಾರ್‌ ರಸ್ತೆ’ ಎಂದು ಅಧಿಕೃತವಾಗಿ ಸರಕಾರದಿಂದ ನಾಮಕರಣ ಮಾಡಲಾಗಿದೆ. ಉಳಿದಂತೆ ಬೆಂಗಳೂರಿನ ವಿವಿಧೆಡೆ ಅಭಿಮಾನಿಗಳು ತಮ್ಮ ಮನೆಯ ಸುತ್ತ-ಮುತ್ತಲಿನ ಹತ್ತಾರು ರಸ್ತೆಗಳಿಗೆ ಪುನೀತ್‌ ರಾಜ್‌ಕುಮಾರ್‌ ಹೆಸರಿಟ್ಟಿರುವ ಉದಾ ಹರಣೆಗಳಿವೆ.

ಬೆಳಗಾವಿ
ಪುನೀತ ರಸ್ತೆ, ವೃತ್ತ, ಉದ್ಯಾನ
ಬೆಳಗಾವಿಯ ಅನೇಕ ಕಡೆಗೆ ರಸ್ತೆ, ವೃತ್ತಗಳು, ಬಸ್‌ ನಿಲ್ದಾಣಗಳಿಗೆ ಅಪ್ಪು ಹೆಸರಿಡಲಾಗಿದೆ. ತಾಲೂಕಿನ ಮರೀಕಟ್ಟಿ ಗ್ರಾಮದಲ್ಲಿ ಪುನೀತ್‌ ರಾಜಕುಮಾರ ಗಲ್ಲಿ ಎಂದು ನಾಮಕರಣ ಮಾಡಲಾಗಿದೆ. ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಪುನೀತ್‌ ರಾಜಕುಮಾರ ಬಸ್‌ ನಿಲ್ದಾಣ ಎಂದು ನಾಮಕರಣ ಮಾಡಿದ್ದು, ಅಪ್ಪು ಪುಣ್ಯಸ್ಮರಣೆಯ ದಿನವಾದ ಶನಿವಾರ ಅ ಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

ಯಲಬುರ್ಗಾ
ಪುನೀತ್‌ ಪುತ್ಥಳಿ
ಯಲಬುರ್ಗಾ ಪಟ್ಟಣದಲ್ಲಿ ದಿ| ಪುನೀತ್‌ ಪುತ್ಥಳಿ ಸ್ಥಾಪಿಸುವ ಜತೆಗೆ ಹೃದಯ ಭಾಗದಲ್ಲಿ ವೃತ್ತಕ್ಕೂ ಹೆಸರಿಡಲಾಗಿದೆ. ಡಾ|ಪುನೀತ್‌ ರಾಜಕುಮಾರ 3 ಅಡಿ ಕಂಚಿನ ಪುತ್ಥಳಿಯನ್ನು ಅಪ್ಪು ಹುಡುಗರ ಸಂಘದವರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿ, ಸಂಭ್ರಮದಿಂದ ಪ್ರತಿಷ್ಠಾಪಿಸಿದ್ದಾರೆ.

ಸಿದ್ದಾಪುರ
ಪುನೀತ್‌ ರಾಜಕುಮಾರ ಕಾಲೋನಿ
ಕೊಪ್ಪಳ ಜಿಲ್ಲೆಯ ಸಿದ್ದಾಪುರದಲ್ಲಿ ಪುನೀತ್‌ ಸವಿ ನೆನಪಿಗಾಗಿ ಗ್ರಾಮದ ಸಂತೆ ಮಾರುಕಟ್ಟೆಗೆ |ಅಪ್ಪು ಸಂತೆ ಮಾರುಕಟ್ಟೆ ಎಂದು ನಾಮಕರಣ ಮಾಡಿದ್ದಾರೆ. ಸಮೀಪದ ಪ್ರಗತಿ ನಗರದ (ಮರಳಿ ಫ್ಯಾಕ್ಟರಿಯಲ್ಲಿ)ಗ್ರಾಮಸ್ಥರು ಪುನೀತ್‌ ರಾಜಕುಮಾರ ಅವರ ಹೆಸರು ಅಜರಾಮರವಾಗಿಸಲು ಗ್ರಾಮದ ಕಾಲೋನಿಯೊಂದಕ್ಕೆ ಪುನೀತ್‌ ರಾಜಕುಮಾರ ಹೆಸರಿಟ್ಟಿದ್ದಾರೆ.

ಹುಣಸಗಿ
ಪುನೀತ್‌ ವೃತ್ತ
ಹುಣಸಗಿಯಲ್ಲಿ ಪುನೀತ್‌ ಅಭಿಮಾನಿಗಳು ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪ್‌ ಮುಖ್ಯರಸ್ತೆಯಲ್ಲಿ ಪುನೀತ್‌ ಅವರ ವೃತ್ತಸ್ಥಾಪಿಸಿದ್ದಾರೆ.

ಮಂಗಳೂರು
ಪುನೀತ್‌ ಹೆಸರು ನಾಮಕರಣ
ಮಂಗಳೂರಿನ ಕುಡುಪು ಬಳಿಯ ಗೃಹ ನಿರ್ಮಾಣ ಮಂಡಳಿಯ ಒಳ ರಸ್ತೆಗೆ ಡಾ| ಪುನೀತ್‌ ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರು ನಿಧನದ ಬಳಿಕ ಅವರ ಸ್ಮರಣಾರ್ಥ ಈ ಹೆಸರು ಇಡಲಾಗಿದೆ. ಹಲವು ಸಮಯಗಳಿಂದ ಇಲ್ಲಿ ಒಳ ರಸ್ತೆಯೊಂದಿತ್ತು. ಪುನೀತ್‌ ಅವರು ಮಾಡಿದ ಸೇವಾ ಕಾರ್ಯಗಳನ್ನು ನೆನಪಿಸುವ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳು ರಸ್ತೆಯೊಂದಕ್ಕೆ ಪುನೀತ್‌ ಅವರ ಹೆಸರು ಇಟ್ಟಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಹೆಸರಿನ ಚಟುವಟಿಕೆ
1.ಕಳೆದ ವರ್ಷ ಡಿ. 18 ಮತ್ತು 19ರಂದು ಪುಂಜಾಲಕಟ್ಟೆ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ವತಿಯಿಂದ ಕಬಡ್ಡಿ ಪಂದ್ಯಾಟದ ಜತೆಗೆ ಇಬ್ಬರು ಸಾಧಕ ಯುವಕರಿಗೆ ಪುನೀತ್‌ ರಾಜ್‌ಕುಮಾರ್‌ ಯುವರತ್ನ ಪ್ರಶಸ್ತಿ ನೀಡಲಾಗಿತ್ತು.
2. ಕಳೆದ ವರ್ಷ ಡಿ. 5ರಂದು ಕಳೆದ ಕಂಬಳ ಋತುವಿನ ಪ್ರಥಮ ಕಂಬಳವಾದ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಕಿರಣ್‌ ಕುಮಾರ್‌ ಮಂಜಿಲ ಮತ್ತು ಯಶೋಧರ ಮಹಾಬಲ ಪೂಜಾರಿ ಸಹೋದರರ ನೇತೃತ್ವದಲ್ಲಿ ಬೆಂಗಳೂರು ದೊಡ್ಮನೆ ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿ ಬಳಗದವರು ಪುನೀತ್‌ ಹೆಸರಿನಲ್ಲಿ ಕೋಣಗಳನ್ನು ಓಡಿಸಿದ್ದರು.

ರಾಯಚೂರು
ಅಪ್ಪು ಹೆಸರಲ್ಲಿ ಧಾಬಾ
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸಿಂಧನೂರು ರಸ್ತೆಯಲ್ಲಿ ಅಪ್ಪು ಅಭಿಮಾನಿಗಳಾದ ಬಸವರಾಜ ಹೊಸಮನಿ ಹಾಗೂ ಭಾಷಾ ಅಪ್ಪು ಡಾಬಾ ಹೆಸರಿನಲ್ಲಿ ಧಾಬಾ ಆರಂಭಿಸಿದ್ದಾರೆ. ಧಾಬಾ ಹೊರಗಡೆ-ಒಳಗಡೆ ಪುನೀತ್‌ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಧಾಬಾದಲ್ಲಿ ಅಪ್ಪು ಮೆನು ಪ್ರಸಿದ್ಧಿಯಾಗಿದ್ದು, ಅಪ್ಪುಗೆ ಇಷ್ಟವಾದ ಆಹಾರ ಪದಾರ್ಥಗಳಿಗೆ ಗ್ರಾಹಕರು ಬೇಡಿಕೆ ಇಡುತ್ತಾರೆ.

ಚಿಕ್ಕಬಳ್ಳಾಪುರ
ಮಾದರಿ ತಂಗುದಾಣ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ-ಹೊಸ ಕೋಟೆ ಮಾರ್ಗದಲ್ಲಿರುವ ಮಳಮಾಚನ ಹಳ್ಳಿ ಗ್ರಾಮದಲ್ಲಿ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನಲ್ಲಿ ಮಾದರಿ ಬಸ್‌ ತಂಗುದಾಣವನ್ನು ಅಭಿವೃದ್ಧಿಗೊಳಿಸಿದ್ದಾರೆ. ಇಡೀ ತಂಗುದಾಣವನ್ನು ಕನ್ನಡ ಧ್ವಜ ವರ್ಣದ ಅರಿಶಿನ ಮತ್ತು ಕುಂಕುಮ ಬಣ್ಣದಿಂದ ಕಂಗೊಳಿಸಲಾಗಿದೆ. ಶಿಡ್ಲಘಟ್ಟ ನಗರದ ಓಟಿ ವೃತ್ತ ಹಾಗೂ ಮಯೂರ ಸರ್ಕಲ್‌ ಬಳಿ ಇರುವ ರಸ್ತೆಗೆ ಪುನೀತ್‌ ರಾಜ್‌ಕುಮಾರ್‌ ಅವರು ಹೆಸರಿಡಲು ನಗರಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಶಿವಮೊಗ್ಗ
ಎಲ್ಲೆಲ್ಲೂ ಅಪ್ಪು ಹೆಸರು
ಶಿವಮೊಗ್ಗದ ಹೊಸಮನೆ ಬಡಾವಣೆಯ ತುಂಗಾ ಕಾಲುವೆಯ ರಸ್ತೆಗೆ ಪುನೀತ್‌ ರಾಜಕುಮಾರ್‌ ಹೆಸರು ನಾಮಕರಣ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನ ಮಲೆಶಂಕರ, ಪುರದಾಳು, ಶೆಟ್ಟಿಹಳ್ಳಿ, ಕಲ್ಕೊಪ್ಪದಲ್ಲಿ ಸರ್ಕಲ್‌ಗ‌ಳಿಗೆ ಪುನೀತ್‌ ಹೆಸರು ಇಡಲಾಗಿದೆ. ಹಣಗೆರೆಕಟ್ಟೆ, ಕೆರೆಹಳ್ಳಿ ಸರ್ಕಲ್‌ಗ‌ಳಲ್ಲಿ ಪುತ್ಥಳಿ ಸ್ಥಾಪಿಸಲಾಗಿದೆ.

ಭದ್ರಾವತಿ
ಅಪ್ಪುಗೆ ಅಭಿಮಾನಿಗಳ ಅಪೂರ್ವ ಗೌರವ
ಭದ್ರಾವತಿಯಲ್ಲಿ ಅಪ್ಪು ಹೆಸರಿನಲ್ಲಿ ರಸ್ತೆ, ಪುತ್ಥಳಿ ಸ್ಥಾಪನೆ, ವೃತ್ತಕ್ಕೆ ಅವರ ಹೆಸರನ್ನಿಡುವ ಮೂಲಕ ತಮ್ಮ ಗೌರವ ಪೂರ್ವಕ ಅಭಿಮಾನವ ಮೆರೆಯುತ್ತಿದ್ದಾರೆ. ನ್ಯಾಯಾಲಯದ ರಸ್ತೆಯ ನಿರ್ಮಲಾ ಅಸ್ಪತ್ರೆ ತಿರುವಿನಲ್ಲಿರುವ ಶ್ರೀ ಕನಕ ಆಟೋ ನಿಲ್ದಾಣದವರು ತಮ್ಮ ಆಟೋ ನಿಲ್ದಾಣದ ಆವರಣದಲ್ಲಿ ಪುನೀತ್‌ ರಾಜ್‌ಕುಮಾರ್‌ ಪುತ್ಥಳಿ ಸ್ಥಾಪಿಸಿದ್ದಾರೆ.

ಪುನೀತ್‌ ಪುತ್ಥಳಿ
ವಿವಿಧ ಸಂಘಗಳ ಅಡಿಯಲ್ಲಿ ರಾಜಕುಮಾರ… ಚಿತ್ರದ ಭಂಗಿಯ 2.5 ಅಡಿ ಎತ್ತರದ ಡಾ| ಪುನೀತ್‌ ರಾಜ್‌ಕುಮಾರ್‌ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ನಿಟುವಳ್ಳಿಯ ಮಣಿಕಂಠ ವೃತ್ತದ ಸಮೀಪ ಮತ್ತೂಂದು ಪುತ್ಥಳಿ ಸ್ಥಾಪಿಸಲಾಗಿದೆ. ಸಿದ್ದರಾಮೇಶ್ವರ ವೃತ್ತದಲ್ಲಿರುವ ಉದ್ಯಾನವನಕ್ಕೆ ಡಾ| ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನಿಡಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ ಅಪ್ಪು ಹೆಸರಿನಲ್ಲಿ ನೇತ್ರದಾನಕ್ಕೂ ಹೆಚ್ಚಿನ ನೋಂದಣಿಯಾಗಿದೆ.

ಪುನೀತ್‌ ಪ್ರತಿಮೆ ಅನಾವರಣ
ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ರೋಟರಿ ವೃತ್ತದಲ್ಲಿ ಪುನೀತ್‌ರಾಜ್‌ಕುಮಾರ್‌ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಜತೆಗೆ ವೃತ್ತಕ್ಕೂ ಪುನೀತ್‌ ರಾಜ್‌ಕುಮಾರ್‌ ಎಂದು ನಾಮಕರಣ ಮಾಡಿದ್ದು, ಅದೇ ರೀತಿ ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೂ ಪುನೀತ್‌ ರಾಜ್‌ಕುಮಾರ್‌ ಎಂದು ನಾಮಕರಣ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯ ಬಸವೇಶ್ವರ ವೃತ್ತದಲ್ಲಿ, ಕೂಡ್ಲಿಗಿ ಪಟ್ಟಣ ದಲ್ಲಿ, ಬಸ್‌ ನಿಲ್ದಾಣದ ಪಾದಗಟ್ಟಿ ಬಳಿ ಪುನೀತ್‌ ಪುತ್ಥಳಿ ಅನಾವರಣ ಮಾಡಲಾಗಿದೆ. ಹಡಗಲಿ ಪುರಸಭೆ ವ್ಯಾಪ್ತಿಯ ಉದ್ಯಾನವನಕ್ಕೆ ಪುನೀತ್‌ ಹೆಸರಿಡಲಾಗಿದೆ. ಕಂಪ್ಲಿ ಪಟ್ಟಣದ ಸೋಮಪ್ಪನ ಕೆರೆ ಬಳಿಯ ಬಸ್‌ ತಂಗುದಾಣಕ್ಕೆ ಪುನೀತ್‌ ನಾಮಕರಣ ಮಾಡಲಾಗಿದೆ. ಕಂಪ್ಲಿ ತಾಲೂಕಿನ ಮೆಟ್ರಿ, ದೇವಲಾಪುರ, ರೆಗುಲೇಟರಿ ಕ್ಯಾಂಪ್‌, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ಚಿಕ್ಕಜಾಯಿಗನೂರು, ಜವುಕು ಸೇರಿ ಹಲವು ಗ್ರಾಮಗಳಲ್ಲಿ ಅಭಿಮಾನಿಗಳೇ ರಸ್ತೆ, ಉದ್ಯಾನವನಗಳಿಗೆ ಅಪ್ಪು ನಾಮಫಲಕಗಳನ್ನು ಅಳವಡಿಸಿದ್ದಾರೆ. ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿನ ಖಾಸಗಿ ಲೇಔಟ್‌ನಲ್ಲಿ ಉದ್ಯಾನವನಕ್ಕೆ ಪುನೀತ್‌ ರಾಜ್‌ಕುಮಾರ್‌ ಹೆಸರು ನಾಮಕರಣ, ಪುತ್ಥಳಿಯನ್ನೂ ಪ್ರತಿಷ್ಠಾಪಿಸಲಾಗಿದೆ.

ಯಳಂದೂರು
ಪುನೀತ್‌ ಹೆಸರು ಅಜರಾಮರ
ಪಟ್ಟಣದ ಯುವಕರ ತಂಡವು ಯಳಂದೂರು ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಶಿಥಿಲವಾಗಿ, ಪ್ರಯಾಣಿಕರು ಕೂರದೇ ಗಬ್ಬು ನಾರುತ್ತಿದ್ದ ಬಸ್‌ ತಂಗುದಾಣವನ್ನು ಸುಂದರ ಮಾಡಿ ಅದಕ್ಕೆ ಪುನ ದಿನವಾದ ಮಾ.17ರಂದು ಅವರ ಹಿರಿಯ ಸಹೋದರ ನಟ ಡಾ| ಶಿವರಾಜ ಕುಮಾರ್‌ ಅನಾವರಣಗೊಳಿಸಿದ್ದಾರೆ.

ಗಜೇಂದ್ರಗಡ
ಜೋಡು ರಸ್ತೆಗೆ ನಾಮಕರಣ
ಕೋಟೆ ನಾಡು ಗಜೇಂದ್ರಗಡ ಪಟ್ಟಣದ ಪ್ರಮುಖ ರಸ್ತೆಗೆ ಅವರ ಹೆಸರು ನಾಮಕರಣ ಮಾಡಿದ ಅಭಿಮಾನಿಗಳು, ಇಂಗು ಕೆರೆಗೂ ಅವರದೇ ಹೆಸರನ್ನಿಟ್ಟು ನಾಮಫಲಕ ಅನಾವರಣಗೊಳಿಸಿದ್ದಾರೆ. ಗಜೇಂದ್ರಗಡ ಪಟ್ಟಣದಲ್ಲಿ ಜೋಡು ರಸ್ತೆಗೆ ನಟಸಾರ್ವಭೌಮ ಪುನೀತ್‌ ಹೆಸರಿಡಲಾಗಿದೆ. ಇತ್ತೀಚೆಗೆ ಸ್ಥಳೀಯ ಸಣ್ಣ ನೀರಾವರಿ ಇಲಾಖೆಯ ಬೃಹತ್‌ ಇಂಗು ಕೆರೆಗೆ ಡಾ| ಪುನೀತರಾಜಕುಮಾರ, ಗಂಧದಗುಡಿ ಇಂಗು ಕೆರೆ ಎಂದು ನಾಮಕರಣ ಮಾಡಲಾಗಿದೆ.

ಹಾವೇರಿ
ವೃತ್ತ ನಿರ್ಮಾಣ
ಕುಕನೂರುವಿನಲ್ಲಿ ಪುನೀತ್‌ ರಾಜಕುಮಾರ್‌ ಅಭಿಮಾನಿ ಬಳಗದವರು ಜವಳದ ನಗರದಲ್ಲಿ ಪುನೀತ್‌ ರಾಜಕುಮಾರ ವೃತ್ತ ನಿರ್ಮಿಸಿದ್ದಾರೆ.

ಕುಷ್ಟಗಿ
ವೃತ್ತ, ರಸ್ತೆಗೆ ಅಪ್ಪು ಹೆಸರು
ಕುಷ್ಟಗಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿ ಸರ್ವಿಸ್‌ ರಸ್ತೆಗೆ ಹೊಂದಿಕೊಂಡ ಸ್ಥಳದಲ್ಲಿ ಅಪ್ಪು ಯುವ ಬ್ರಿಗೇಡ್‌ ಸಂಘಟನೆಯವರು ಅಪ್ಪು ಭಾವಚಿತ್ರದ ಫಲಕ ಹಾಕಿದ್ದಾರೆ. ಪಟ್ಟಣದ ಹನುಮಸಾಗರ ಮಾರ್ಗದ ತಹಶೀಲ್ದಾರ್‌ ಕಚೇರಿ, ಕಾಲೇಜು ರಸ್ತೆಯಲ್ಲಿ ಅಪ್ಪು ಅಭಿಮಾನಿಗಳು ಪುನೀತ್‌ ರಾಜಕುಮಾರ ವೃತ್ತ ಅನಾವರಣಗೊಳಿ ಸಿದ್ದಾರೆ. ಕುಷ್ಟಗಿ ಸೇರಿದಂತೆ ತಾವರಗೇರಾ, ಹನುಮಸಾಗರ, ಹನುಮ ಗಿರಿ, ಯರಗೇರಾ, ಅಡವಿಬಾವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಪುನೀತ್‌ ರಾಜಕುಮಾರ ವೃತ್ತದ ನಾಮಫಲಕ ಅಳವಡಿಸಲಾಗಿದೆ.

ಕೊಪ್ಪಳ
ರಾರಾಜಿಸುತ್ತಿದೆ ರಾಜರತ್ನನ ನಾಮಫಲಕ
ಕೊಪ್ಪಳ ನಗರದ ದುರ್ಗಾದೇವಿ ದೇವಸ್ಥಾನ ಸಮೀಪದ ಬಡಾವಣೆಯ ವೃತ್ತಕ್ಕೆ ಅವರ ಹೆಸರನ್ನಿಟ್ಟು, ಭಾವಚಿತ್ರ ಅಳವಡಿಸಲಾಗಿದೆ. ಕನಕಗಿರಿಯಲ್ಲಿ ವೃತ್ತಕ್ಕೆ ಹೆಸರು ನಾಮಕರಣ, ಗಂಗಾವತಿ ಸೇರಿ ಯಲಬುರ್ಗಾದಲ್ಲೂ ಪುತ್ಥಳಿ ಸೇರಿ ಹೆಸರು ನಾಮಕರಣ ಮಾಡಿದ್ದಾರೆ. ಇದಲ್ಲದೆ ಹಲವಾರು ಹಳ್ಳಿಗಳಲ್ಲಿ ಪುನೀತ್‌ ಅವರ ಹೆಸರು ನಾಮಕರಣ ಮಾಡಿ ಇಂದಿಗೂ ಅವರ ಮೇಲಿನ ಅಭಿಮಾನ ತೋರುತ್ತಿದ್ದಾರೆ.

ಹಾಸನ
ರಸ್ತೆಗೆ ಪುನೀತ್‌ ಹೆಸರು
ಹಾಸನದ ಸಾಲಗಾಮೆ ರಸ್ತೆಯಿಂದ ಬೇಲೂರು ರಸ್ತೆ ಸಂಪರ್ಕಿಸುವ ಅಡ್ಡ ರಸ್ತೆಗೆ ಡಾ| ಪುನೀತ್‌ ರಾಜಕುಮಾರ್‌ – ರಂಗಮಲ್ಲಮ್ಮ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ಪುನೀತ್‌ ಪುತ್ಥಳಿ
ಆನಂದಪುರ ಸಮೀಪದ ಕೆ.ಹೊಸಕೊಪ್ಪ ಗ್ರಾಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪುತ್ಥಳಿ ಸ್ಥಾಪನೆ ಮಾಡಲಾಗಿದ್ದು, ಗ್ರಾಮಸ್ಥರು ಪ್ರತಿದಿನ ಪೂಜಿಸುತ್ತಿದ್ದಾರೆ. ಹಾಗೆಯೇ ತಳಗೇರಿ ಗ್ರಾಮದಲ್ಲಿ ಭಾವಚಿತ್ರ ಇರಿಸಿ, ಕಾರಂಜಿ ಮಾಡಲಾಗಿದೆ. ಹಾಗೆಯೇ, ನರಸೀಪುರದಲ್ಲಿನ ಬಸ್‌ ನಿಲ್ದಾಣಕ್ಕೆ ಪುನೀತ್‌ ಹೆಸರು ಇಡಲಾಗಿದೆ. ಕಣ್ಣೂರು ಮುಖ್ಯ ರಸ್ತೆಗೆ ಪುನೀತ್‌ ಹೆಸರು, ದೊಡ್ಡ ಬ್ಯಾಣ ಗ್ರಾಮದಲ್ಲಿ ಪುನೀತ್‌ ಅವರ ಧ್ವಜಸ್ತಂಭ ನಿಮಾರ್ಣ ಮಾಡಲಾಗಿದೆ.

ಶಿಕಾರಿಪುರ
ಪೆಟ್ರೋಲ್‌ ಬಂಕ್‌ ರಸ್ತೆಗೆ ಪುನೀತ್‌ ಹೆಸರು
ಪಟ್ಟಣದ ಮುಖ್ಯರಸ್ತೆಯಾದ ಪೆಟ್ರೋಲ್‌ ಬಂಕ್‌ ರಸ್ತೆಗೆ ಪುನೀತ್‌ ರಾಜಕುಮಾರ್‌ ಹೆಸರು ನಾಮಕರಣ ಮಾಡಲಾಗಿದೆ. ತಾಲೂಕಿನ ಮುಡುಬ ಸಿದ್ದಾಪುರ, ಮಲ್ಲಾಪುರ, ಸಾಲೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸರ್ಕಲ್‌ ಹಾಗೂ ರಸ್ತೆಗಳಿಗೆ ಪುನೀತ್‌ ರಾಜ್‌ಕುಮಾರ್‌ ಹೆಸರಿಟ್ಟಿದ್ದು ಪುನೀತ್‌ ಭಾವಚಿತ್ರ ಅಳವಡಿಸಿರುವ ದೃಶ್ಯ ತಾಲೂಕಿನ ಹಲವೆಡೆ ಕಂಡು ಬಂದಿದೆ.

ಟಾಪ್ ನ್ಯೂಸ್

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

POLICE-5

Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.