Anant Nag; ಆಟ “ಅವನದು’…ಅಲೆದಾಟ ನಮ್ಮದು !
Team Udayavani, Aug 20, 2023, 6:00 AM IST
75 ನೇ ವಯಸ್ಸಿನಲ್ಲೂ 25 ವರ್ಷದ ಉತ್ಸಾಹ- ಹುಮ್ಮಸ್ಸು ಉಳಿಸಿಕೊಂಡವರು ನಟ ಅನಂತನಾಗ್. ಅವರ ಚಿತ್ರ ಬದುಕಿಗೆ ಈಗ 50 ವರ್ಷ. ವೃತ್ತಿ, ಬದುಕು, ಸಿನೆಮಾ, ಸಾಹಿತ್ಯ, ರಾಜಕೀಯ ಮುಂತಾದ ಸಂಗತಿಗಳ ಕುರಿತು ಅವರಿಲ್ಲಿ ಮಾತಾಡಿದ್ದಾರೆ…
ಸಂದರ್ಶನ: ಕುಸುಮಾ ಆಯರಹಳ್ಳಿ
ಸರ್, ಕಳೆದ 75 ವರ್ಷಗಳಲ್ಲಿ ನೀವು ನೋಡಿದ 75 ಮಳೆಗಾಲಗಳಲ್ಲಿ ಮರೆಯಲಾರದ ಮಳೆಗಾಲ ಯಾವುದು?
– ನಾನು ಬೆಳೆದದ್ದು ಕರಾವಳಿ. ಹಾಗಾಗಿ ಮಳೆಗಾಲ ಯಾವತ್ತಿಗೂ ಇಷ್ಟ. ಎಷ್ಟು ನೋಡಿದರೂ ನೋಡಬೇಕೆನಿಸುವ ಸಮುದ್ರದ ಹಾಗೆ, ನನಗೆ ಮಳೆಯನ್ನು ಎಷ್ಟು ನೋಡಿದರೂ ಸಾಕೆನಿಸುವುದಿಲ್ಲ. 75 ಆಗುವಾಗಲೂ ಮಳೆ ನೋಡ್ತಾ ಇದ್ರೆ ಅಷ್ಟೇ ಸಾಕೇನೋ ಅನಿಸುತ್ತೆ.
ನಿಮ್ಮ ಸಿನೆಮಾ ಪ್ರಯಣಕ್ಕೆ 50. ಬದುಕಿಗೆ 75. ಈ ಹೊತ್ತಲ್ಲಿ ತಮ್ಮ ಶಂಕರ್ ನಾಗ್‌ರನ್ನು ಹೇಗೆ ನೆನಪಿಸಿಕೊಳ್ತೀರಿ?
– ನಾನು ಬೆಳೆದ ವಾತಾವರಣದಲ್ಲಿ ಎಲ್ಲವೂ ಭಗವಂತನ ಕೈವಾಡ ಅಂತ ನಂಬಿದ್ದೇನೆ. ಕರ್ಮಸಿದ್ಧಾಂತದಲ್ಲಿ ನನ್ನ ನಂಬಿಕೆ. ಹಾಗಾಗಿ ಇದೆಲ್ಲವನ್ನೂ ನಾವು ಸ್ವೀಕರಿಸಲೇಬೇಕು. ಸಾವಿನ ದುಃಖಗಳಲ್ಲಿ ಮುಳುಗಿದರೆ ಬದುಕಿಲ್ಲ. ಹೊರಬರುವುದು ಸಹಜ ಕ್ರಿಯೆ. ಶ್ಮಶಾನ ವೈರಾಗ್ಯದ ಸ್ಥಿತಿಯಿಂದ ಹೊರಬರಲೇಬೇಕು. ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಆಗ ನಾನು “ಶಂಕರನನ್ನು ತೆಗೆದುಕೊಂಡ ಹೋದ ಆ ಭಗವಂತನನ್ನು ನಾನು ಕ್ಷಮಿಸೋದಿಲ್ಲ’ ಅಂದಿ¨ªೆ. ಆಮೇಲೆ ಬಹಳ ಯೋಚಿಸಿದೆ. ದೇವರನ್ನು ಕ್ಷಮಿಸಲು ನಾನು ಯಾರು? ಏನಾಗಬೇಕಿತ್ತೋ ಅದಾಗಿದೆ ಅನಿಸಿತು.
ನಟನಾಗಿ ಯಾವಾಗಲೂ ನಿಮ್ಮ ಬೇಡಿಕೆ ಕಡಿಮೆ ಆಗಿಲ್ಲ. ಇದಕ್ಕೆ ನೀವು ಕಂಡುಕೊಂಡ ಸೂತ್ರ ಯಾವುದು?
– ಸಿಂಪಲ್ …. ನಾನು ನಾನಲ್ಲ. ಆ ಪಾತ್ರ. ಪಾತ್ರದೊಳಗೆ ಎಷ್ಟು ನನ್ನ ಅಹಂ ಬಿಟ್ಟು ಪರಕಾಯಪ್ರವೇಶ ಮಾಡ್ತೀನೋ, ಕತೆ ಬರೆದವರ ಪಾತ್ರವಾಗ್ತೀನೋ, ಬೇರೆ ವ್ಯಕ್ತಿತ್ವವಾಗ್ತಿàನೋ ಆಗ ಪಾತ್ರ ಗೆಲ್ಲತ್ತೆ. ನನ್ನನ್ನು ತೆಗೆದುಹಾಕಿ ಇನ್ನೊಬ್ಬನ ನಕಲಾಗ್ತೀನಿ.
ಈ ನಾಡು ನಿಮಗೆ ಪ್ರೀತಿ, ಖ್ಯಾತಿ, ಜತೆ ಗೊಂದಿಷ್ಟು ಟೀಕೆ- ಟಿಪ್ಪಣಿ ಎಲ್ಲವನ್ನೂ ಕೊಟ್ಟಿದೆ. ಈ ಸುದೀರ್ಘ ಪ್ರಯಾಣ ಕೊಟ್ಟ ಅರಿವು ಯಾವುದು?
– ಇಷ್ಟೆಲ್ಲ ಆಗಿದೆ ನಿಜ. ಆದರೆ ಇದನ್ನು ನಾನು ಮಾಡಿದೆ ಅಂತ ಹೇಗೆ ಹೇಳ್ಳೋದು? ಈಗಷ್ಟೆ ಒಂದು ಪುಸ್ತಕ ಓದಿದೆ. ಅದರಲ್ಲೂ ಅದೇ ಇದೆ. ಯಾವುದನ್ನೂ ನಾನು ಮಾಡಿದೆ ಅಂದ್ಕೋ ಬೇಡ. ನಡೆಸೋ ಅವನಿಲ್ಲದಿದ್ದರೆ ಇದಾಗ್ತಿರಲಿಲ್ಲ ಅನಿಸತ್ತೆ.
(ಸಂದರ್ಶನದ ಪೂರ್ಣಪಾಠಕ್ಕೆ ಉದಯವಾಣಿ ಸಾಪ್ತಾಹಿಕ ಸಂಪದ ಇ ಪೇಪರ್ ಓದಿರಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.