Anarkali Tulu Movie: ಅನರ್‌ಕಲಿ ಕೋಸ್ಟಲ್‌ವುಡ್‌ಗೆ ಶುಕ್ರದೆಸೆ!


Team Udayavani, Aug 18, 2024, 6:55 AM IST

Anarkali Tulu Movie: ಅನರ್‌ಕಲಿ ಕೋಸ್ಟಲ್‌ವುಡ್‌ಗೆ ಶುಕ್ರದೆಸೆ!

ಕೋಸ್ಟಲ್‌ನಲ್ಲಿ ತುಳು ಸಿನೆಮಾ ಸದ್ದು ಮಾಡುತ್ತಿಲ್ಲ ಎಂಬ ಸಾಮಾನ್ಯ ಅಪವಾದ ಇತ್ತೀಚೆಗೆ ಕೊಂಚ ದೂರವಾದಂತಿದೆ. ಬೆನ್ನು ಬೆನ್ನಿಗೆ ಬಂದ ಒಂದೊಂದು ಸಿನೆಮಾಗಳು ಈಗ ತುಳುವರನ್ನು ಥಿಯೇಟರ್‌ಗೆ ಕರೆ ತರುತ್ತಿದೆ. ಹೀಗಾಗಿಯೇ ಕಳೆದ 2-3 ಸಿನೆಮಾಗಳ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನಾಡಿದ್ದು ಆ.23ಕ್ಕೆ ತೆರೆ ಕಾಣುವ “ಅನರ್‌ ಕಲಿ’ ಕರಾವಳಿಗರಲ್ಲಿ ಸಾಕಷ್ಟು ನಿರೀಕ್ಷೆ  ಮೂಡಿಸಿದೆ.

ಲಕುಮಿ ಸಿನಿ ಕ್ರಿಯೇಶನ್‌ ಮತ್ತು ಲೋ ಬಜೆಟ್‌ ಪ್ರೊಡಕ್ಷನ್‌ ನಿರ್ಮಾಣದಲ್ಲಿ ಹರ್ಷಿತ್‌ ಸೋಮೇಶ್ವರ ನಿರ್ದೇಶನದಲ್ಲಿ “ಅನರ್‌ಕಲಿ’ ರೂಪುಗೊಂಡಿದೆ. ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರುಮಾರ್ಗ ಹಾಗೂ ಕಳಸ ಸಹಿತ ವಿವಿಧ ಸ್ಥಳಗಳಲ್ಲಿ 18 ದಿನಗಳಲ್ಲಿ ಶೂಟಿಂಗ್‌ ನಡೆಸಲಾಗಿದೆ. ಸೀಮಿತ ಬಜೆಟ್‌ನಲ್ಲಿ ಮಾಡಿದ ರಿಚ್‌ ಸಿನೆಮಾ ಎಂದೇ ಸದ್ಯ ಮಾತು ಕೇಳಿಬರುತ್ತಿದೆ. ಈಗಾಗಲೇ ನಡೆದ ಇದರ ಪ್ರೀಮಿಯರ್‌ ಶೋ ಹಲವರ ಮೆಚ್ಚುಗೆ ಪಡೆದದ್ದು ವಿಶೇಷ.

ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ರವಿ ರಾಮಕುಂಜ, ರಂಜನ್‌ ಬೋಳೂರು, ದೀಪಕ್‌ ರೈ ಪಾಣಾಜೆ, ಪುಷ್ಪ ರಾಜ್‌ ಸಹಿತ ಹಲವರು ಈ ಸಿನೆಮಾದಲ್ಲಿ ಕಾಮಿಡಿ ಕಮಾಲ್‌ ಮಾಡಿದ್ದಾರೆ. ದೇವದಾಸ್‌ ಕಾಪಿಕಾಡ್‌ ಗರಡಿಯಲ್ಲಿ ಪಳಗಿದ ಶೋಭರಾಜ್‌ ಈ ಸಿನೆಮಾದಲ್ಲಿ ಹೊಸ ಗೆಟಪ್‌ನಲ್ಲಿದ್ದರೆ, ಆರ್‌ಜೆ ಮಧುರ ಅವರು ಕ್ಯೂಟ್‌ ಆಗಿ ಮೋಡಿ ಮಾಡಿದ್ದಾರೆ.

“ಧರ್ಮದೈವ’ ಸಿನೆಮಾ ಈಗ 50ನೇ ದಿನದತ್ತ ಹೆಜ್ಜೆ ಇಟ್ಟಿರುವುದು ನಿರ್ಮಾಪಕರಲ್ಲಿ ಮಂದಹಾಸ ಮೂಡಿಸಿದೆ. ಹೀಗಾಗಿ ಇದೇ ತಂಡ ಹೊಸ ಸಿನೆಮಾ ಮಾಡಲು ಸಿದ್ಧತೆಯಲ್ಲಿ ತೊಡಗಿಕೊಂಡಿದೆ. “ತುಡರ್‌’ ಸಿನೆಮಾ ಈಗಾಗಲೇ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ!

ಅರ್ಜುನ್‌ ಕಾಪಿಕಾಡ್‌ ಅಭಿನಯದ “ಕಲ್ಜಿಗ’ ಸಿನೆಮಾ ಸೆ.13ರಂದು ರಿಲೀಸ್‌ ಆಗುವುದು ಪಕ್ಕಾ ಆಗಿದೆ. ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌ ತಂಡದ “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ’ ಸಿನೆಮಾ ಅ.31ರಂದು ಬಿಡುಗಡೆ ಆಗಲಿದೆ. ಇವೆರಡು ನಿರೀಕ್ಷೆಯ ಪಟ್ಟಿಯಲ್ಲಿದೆ. ರೂಪೇಶ್‌ ಶೆಟ್ಟಿ ನಿರ್ದೇಶನದ ಹೊಸ ಸಿನೆಮಾದ ಟೈಟಲ್‌ ರವಿವಾರ ಸಂಜೆ ಬಿಡುಗಡೆಯಾಗಲಿದೆ. ಅನೀಶ್‌ ಪೂಜಾರಿ ವೇಣೂರು ನಿರ್ದೇಶನ “ದಸ್ಕತ್‌’ ಹೊಸ ತುಳು ಸಿನೆಮಾ ಕೆಲವೇ ದಿನದಲ್ಲಿ ಸೆಟ್ಟೇರಲಿದೆ.

ಅಂದಹಾಗೆ, ನವೆಂಬರ್‌-ಡಿಸೆಂಬರ್‌ ಕಾಲಕ್ಕೆ ಹಲವು ತುಳು ಸಿನೆಮಾಗಳು ಶೂಟಿಂಗ್‌ ಕಾಣಲಿರುವುದು ಮತ್ತೂಂದು ಸುದ್ದಿ. ಅಂತೂ-ಇಂತೂ ನಾಡಿದ್ದಿನ “ಅನರ್‌ಕಲಿ’ ಬಳಿಕ ಬೇರೆ ಬೇರೆ ಸಿನೆಮಾಗಳ ಮೂಲಕ ಕೋಸ್ಟಲ್‌ವುಡ್‌ಗೆ ಮತ್ತೂಮ್ಮೆ ಶುಕ್ರದೆಸೆ ಆರಂಭವಾಗುವ ಲಕ್ಷಣ ಕಂಡುಬರುತ್ತಿದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.