ಆ್ಯನಿ ಎರ್ನಾಕ್ಸ್ ಜೀವನಾನುಭವವೇ ಆಕೆಯ ಶಕ್ತಿ
ಸಾಹಿತ್ಯ ಕ್ಷೇತ್ರದಲ್ಲಿ ವಿಶ್ವ ಶ್ರೇಷ್ಠ ಪ್ರಶಸ್ತಿಗೆ ಪಾತ್ರವಾದ ಫ್ರೆಂಚ್‌ನ ಮೊದಲ ಮಹಿಳೆ
Team Udayavani, Oct 9, 2022, 6:30 AM IST
ಫ್ರೆಂಚ್ ಲೇಖಕಿ ಆ್ಯನಿ ಎರ್ನಾಕ್ಸ್ 2022ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಲೇಖಕಿಯ ಬದುಕೇ ಒಂದು ಬೃಹತ್ ಕಾದಂಬರಿಗಾಗುವಷ್ಟು ಸರಕನ್ನು ಹೊಂದಿದೆ. ತಮ್ಮ ಜೀವನದುದ್ದಕ್ಕೂ ನೋವನ್ನುಂಡು ಅದನ್ನೇ ತನ್ನ ಸಾಹಿತ್ಯ ಕೃಷಿಗೆ ಬಂಡವಾಳವನ್ನಾಗಿಸಿಕೊಂಡ ಈಕೆ ಹಲವು ಅಮೂಲ್ಯ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಹಾಗೆಂದು ಈಕೆಯ ಕೃತಿಗಳಿಗೆ ಇದೇ ಮೊದಲ ಬಾರಿಗೆ ಪ್ರಶಸ್ತಿ, ಪುರಸ್ಕಾರ, ಗೌರವಗಳು ಲಭಿಸಿದ್ದಲ್ಲ. ಆದರೆ ಈ ಎಲ್ಲ ಪ್ರಶಸ್ತಿ, ಪುರಸ್ಕಾರಗಳಿಗೆ ಕಲಶಪ್ರಾಯವೆಂಬಂತೆ ನೊಬೆಲ್ ಪ್ರಶಸ್ತಿ ಲಭಿಸಿದೆ. ಆ್ಯನಿ ಎರ್ನಾಕ್ಸ್‌ನ ಜೀವನ, ಆಕೆ ಅನುಭವಿಸಿದ ಸಂಕಷ್ಟಗಳು, ಆಕೆಯ ಸಾಹಿತ್ಯ ಸೇವೆ, ಕೃತಿಗಳ ಕಥಾವಸ್ತು, ಪ್ರಮುಖ ಕೃತಿಗಳು, ಪ್ರಶಸ್ತಿಗಳು…ಹೀಗೆ ಎರ್ನಾಕ್ಸ್‌ನ ಜೀವನಗಾಥೆಯತ್ತ ವಿದ್ಯಾ ಇರ್ವತ್ತೂರು ಬೆಳಕು ಚೆಲ್ಲಿದ್ದಾರೆ.
ಬಾಲ್ಯ, ಅಸಮಾನತೆಯ ನಡುವೆ ಕಳೆದುಹೋಗಿತ್ತು. ಯೌವ್ವನ ತಾರತಮ್ಯದ ಮಧ್ಯೆ ಸೊರಗಿ ಹೋಯಿತು. ಸಂಕಷ್ಟಗಳೇ ಎದುರಾಗಿದ್ದರೂ ಮತ್ತೆ ಎದ್ದು ನಿಲ್ಲಲು ಪ್ರೇರಣೆಯಾಗಿದ್ದು ಆಕೆಯ ಜೀವನಾನುಭವಗಳೇ…ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ನೋಡಿದರೂ ಅದ್ಯಾವುದೂ ಬರೆವಣಿಗೆಗೆ ಅಡ್ಡಿಯಾಗಲಿಲ್ಲ. ಬದಲಿಗೆ ಅದುವೇ ಶಕ್ತಿ ತುಂಬಿತ್ತು, ಅದಮ್ಯ ಚೇತನವಾಯಿತು. ಜೀವನದ ಕಠಿನ ಸತ್ಯಗಳು ಎದೆಗುಂದಿಸಲಿಲ್ಲ ಅದನ್ನೇ ಪ್ರೇರಣೆಯಾಗಿಸಿಕೊಂಡು ಮುನ್ನೆಡೆದುದರಿಂದ ಇಂದು ಫ್ರೆಂಚ್‌ನ ಖ್ಯಾತ ಲೇಖಕಿ ಆ್ಯನಿ ಎರ್ನಾಕ್ಸ್ ಅವರು ವಿಶ್ವ ಶ್ರೇಷ್ಠ ನೊಬೆಲ್ ಪ್ರಶಸ್ತಿಗೆ ಭಾಜನರಾಗುವಂತಾಯಿತು.
ವಿಶೇಷ ಏನು?
ವಿಶ್ವ ಸಾಹಿತ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಪರಿಗಣಿಸಲ್ಪಟ್ಟಿರುವ ನೊಬೆಲ್ ಪುರಸ್ಕಾರಕ್ಕೆ ಫ್ರೆಂಚ್ ಲೇಖಕಿ ಆ್ಯನಿ ಎರ್ನಾಕ್ಸ್ ಪಾತ್ರವಾಗಿರು ವುದು ಮಾತ್ರವಲ್ಲ ಈ ಪ್ರಶಸ್ತಿಯನ್ನು ಗೆದ್ದ 17ನೇ ಮತ್ತು ಫ್ರೆಂಚ್‌ನ ಪ್ರಥಮ ಮಹಿಳಾ ಬರೆಹಗಾರ್ತಿ ಎನ್ನುವ ಖ್ಯಾತಿಯೂ ಇವರದ್ದಾಗಿದೆ.
ಮಹತ್ವ ಯಾಕೆ ?
ಸರಿಸುಮಾರು ಎಂಟು ವರ್ಷಗಳ ಬಳಿಕ ಫ್ರೆಂಚ್ ಸಾಹಿತ್ಯ ವಿಭಾಗಕ್ಕೆ ನೊಬೆಲ್ ಪ್ರಶಸ್ತಿ ಲಭಿಸಿರುವುದು ಈ ಬಾರಿಯ ವಿಶೇಷ. 2014ರಲ್ಲಿ ಪ್ಯಾಟ್ರಿಕ್ ಮೊಡಿಯಾನೊ ಅವರ ಬಳಿಕ 82 ವರ್ಷದ ಆ್ಯನಿ ಎರ್ನಾಕ್ಸ್ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿ ಸಿಕ್ಕಂತಾಗಿದೆ.
ಪ್ರಶಸ್ತಿ ಪ್ರದಾನ ಯಾವಾಗ?
ಸ್ವೀಡಿಶ್‌ನ ಸಂಶೋಧಕ, ಉದ್ಯಮಿ, ಎಂಜಿನಿಯರ್ ಅಲೆøಡ್ ನೊಬೆಲ್ ಅವರ ಹೆಸರಿನಲ್ಲಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಎರ್ನಾಕ್ಸ್ ಅವರಿಗೆ 10 ಮಿಲಿಯನ್ ಸ್ವೀಡಿಶ್ ಕ್ರೋನರ್‌ನೊಂದಿಗೆ (ಸುಮಾರು 9,00,000 ಡಾಲರ್) ಡಿಸೆಂಬರ್ 10ರಂದು ಪ್ರದಾನ ಮಾಡಲಾಗುತ್ತದೆ.
ಯಾವ್ಯಾವ ಕೃತಿಗಳು?
ಎರ್ನಾಕ್ಸ್ ಅವರು 1970ರ ಬಳಿಕಸುಮಾರು 20 ಕೃತಿಗಳಲ್ಲಿ ಲಾ ಪ್ಲೇಸ್ (1983), ಎ ವುಮೆನ್ಸ್ ಸ್ಟೋರಿ (1988), ಸಿಂಪಲ್ ಪ್ಯಾಶನ್ (1991), ಐ ರಿಮೈನ್ ಇನ್ ಡಾರ್ಕ್‌ನೆಸ್ (1998), ಶೇಮ್ (1998), ಎ ಗರ್ಲ್ಸ್ ಸ್ಟೋರಿ (2016), ಹ್ಯಾಪನಿಂಗ್(2001), ದಿ ಇಯರ್ (2008), ಥಿಂಗ್ಸ್ (2010) ಹೆಚ್ಚು ಜನಪ್ರಿಯತೆ ಗಳಿಸಿದೆ. ಆಧುನಿಕ ಫ್ರಾನ್ಸ್‌ನ ಸಾಮಾಜಿಕ ಜೀವನ ಮತ್ತು ಅತ್ಯಂತ ಸೂಕ್ಷ್ಮ ಒಳನೋಟವಿರುವ ಅವರ 20ಕ್ಕೂ ಹೆಚ್ಚು ಪುಸ್ತಕಗಳು ಫ್ರಾನ್ಸ್‌ನಲ್ಲಿ
ಶಾಲಾ ಪಠ್ಯಗಳಾಗಿವೆ.
ಯಾರೀಕೆ ಎರ್ನಾಕ್ಸ್?
ಉತ್ತರ ಫ್ರಾನ್ಸ್‌ನ ನಾರ್ಮಂಡಿಯ ಯೆಟಾಟ್ ಎನ್ನುವ ಪುಟ್ಟ ನಗರದಲ್ಲಿ ವಾಸಿಸುತ್ತಿದ್ದ ಮಧ್ಯಮ ವರ್ಗದ ಕುಟುಂಬದಲ್ಲಿ 1940ರಲ್ಲಿ ಜನಿಸಿದ ಎರ್ನಾಕ್ಸ್‌ನ ಹೆತ್ತವರು ಕಿರಾಣಿ ಅಂಗಡಿ ಹಾಗೂ ಕೆಫೆಯನ್ನು ನಡೆಸುತ್ತಿದ್ದರು. ಶಿಕ್ಷಕಿಯಾಗಬೇಕು ಎನ್ನುವ ಉದ್ದೇಶದಿಂದ ರೂಯೆನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿದ ಎರ್ನಾಕ್ಸ್ ಅವರು, ಬಳಿಕ ಲಂಡನ್‌ನಲ್ಲಿ ಸಾಹಿತ್ಯ ಅಧ್ಯಯನ ನಡೆಸಿದರು. ಕಾಲೇಜಿನಲ್ಲಿರುವಾಗಲೇ ಅವರು ತಮ್ಮ ಮೊದಲ ಕಾದಂಬರಿಯನ್ನು ಬರೆದರು. ಆದರೆ ಪ್ರಕಾಶಕರಿಂದ ತಿರಸ್ಕರಿಸಲ್ಪಟ್ಟಿತು. 30ರ ಹರೆಯದಲ್ಲಿ ಫಿಲಿಪ್ಪೆ ಎರ್ನಾಕ್ಸ್ ಅವರನ್ನು ವಿವಾಹವಾಗಿ ಇಬ್ಬರು ಗಂಡು ಮಕ್ಕಳಾದ ಬಳಿಕ ಮತ್ತೆ ಬರೆವಣಿಗೆಯನ್ನು ಪ್ರಾರಂಭಿಸಿದರು. 1980ರಲ್ಲಿ ಎರ್ನಾಕ್ಸ್ ದಂಪತಿ ವಿಚ್ಛೇದನ ಪಡೆದರು. 1977ರಿಂದ 2000ದ ವರೆಗೆ ಫ್ರೆಂಚ್ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು.
ವಿಭಿನ್ನತೆ
ಹೆತ್ತವರು ಕಾರ್ಮಿಕ ವರ್ಗದವರಾಗಿದ್ದರಿಂದ ಜೀವನದಲ್ಲಿ ಮೊದಲ ಬಾರಿಗೆ ಎರ್ನಾಕ್ಸ್ ಸುತ್ತಮುತ್ತಲಿನ ಸಮಾಜದಿಂದ ಅವಮಾನವನ್ನು ಎದುರಿಸಬೇಕಾಯಿತು. ಇದು ಅವರ ಬರೆವಣಿಗೆಗೆ ಮೂಲ ಪ್ರೇರಣೆ. ಹೀಗಾಗಿ ಸಾಮಾಜಿಕ ಅಸಮಾನತೆಯ ಕುರಿತೇ ಅವರು ಹೆಚ್ಚಾಗಿ ತಮ್ಮ ಕೃತಿಗಳಲ್ಲಿ ಹೇಳುತ್ತಾರೆ. ತಮ್ಮ ಬರೆವಣಿಗೆಯಲ್ಲಿ ವಿಭಿನ್ನತೆಯನ್ನು ತೋರುವ ಇವರು, ಲಿಂಗ, ಭಾಷೆ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ಅಸಮಾನತೆಗಳನ್ನು ಗುರುತಿಸಿದ್ದಾರೆ. ಜೀವನವನ್ನು ವಿಭಿನ್ನ ದೃಷ್ಟಿಗಳಿಂದ ಪರಿಶೀಲನೆ ನಡೆಸಿದ್ದಾರೆ. ಇದು ಅವರ ಬರೆವಣಿಗೆಯಲ್ಲಿ ವ್ಯಕ್ತವಾಗುತ್ತದೆ ಎಂದು ನೊಬೆಲ್ ಪ್ರಶಸ್ತಿಯ ವೆಬ್‌ಸೈಟ್‌ನಲ್ಲಿ ಸ್ವೀಡಿಶ್ ಅಕಾಡೆಮಿಯ ನೊಬೆಲ್ ಸಮಿತಿಯ ಅಧ್ಯಕ್ಷ ಆಂಡರ್ಸ್ ಒಲ್ಸನ್ ಉಲ್ಲೇಖೀಸಿದ್ದಾರೆ. ಈ ಮೂಲಕ ಅವರು ಎರ್ನಾಕ್ಸ್‌ನ ಬರೆವಣಿಗೆಯ ವಿಶೇಷತೆಯ ಬಗೆಗೆ ಬೆಳಕು ಚೆಲ್ಲಿದ್ದಾರೆ. ಮಾತ್ರವಲ್ಲದೆ ಆಕೆಯ ಸಾಹಿತ್ಯ ಕೃಷಿಯ ಗುಣಗಾನ ಮಾಡಿದ್ದಾರೆ.
ಜೀವನಾನುಭವಗಳೇ ಕಥಾವಸ್ತು
1974ರಿಂದ 1990ರಲ್ಲಿ ಕ್ಲೀನ್ ಔಟ್ ಕೃತಿ ಪ್ರಕಟವಾಗುವವರೆಗೆ ಎರ್ನಾಕ್ಸ್ ಅವರ ಬರೆವಣಿಗೆಯಲ್ಲಿ ಅವರ ಸಮಕಾಲೀನರು, ಪೋಷಕರು, ಮಹಿಳೆ, ಸಾರ್ವಜನಿಕ ಸ್ಥಳಗಳಲ್ಲಿ ಎದುರಾಗುವ ಅನಾಮಧೇಯರು, ಮರೆತಿರುವ ಸಂಗತಿಗಳು, ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಅವರಿಗೆ ನೋವು ನೀಡಿದ ಘಟನೆಗಳು, ಸಾಮಾಜಿಕ ಅಸಮಾನತೆ, ಶಿಕ್ಷಣದಿಂದ ಬದಲಾದ ಜೀವನ…ಹೀಗೆ ಹಲವಾರು ವಿಷಯಗಳ ಮೇಲೆ ಅವರ ಕೃತಿಗಳು ಬೆಳಕು ಚೆಲ್ಲುತ್ತವೆ. ಆತ್ಮ ಚರಿತ್ರೆಗಳನ್ನು ಬರೆಯುವುದರಲ್ಲಿ ನಿಪುಣರಾಗಿರುವ ಆ್ಯನಿ ಎರ್ನಾಕ್ಸ್ ಅವರ ಬಹುತೇಕ ಕೃತಿಗಳು ಚಿಕ್ಕದಾಗಿದ್ದರೂ ಅವುಗಳಲ್ಲಿ ಗಂಭೀರ ಸಮಸ್ಯೆಗಳಾದ ಗರ್ಭಪಾತ, ವಿವಾಹೇತರ ಸಂಬಂಧ, ಅನಾರೋಗ್ಯ, ಪೋಷಕರ ಸಾವ ಸಹಿತ ಅವರ ಸ್ವಂತ ಜೀವನದ ಘಟನೆಗಳೇ ಕಾಣಸಿಗುತ್ತವೆ.
ಬೂಕರ್ ಪ್ರಶಸ್ತಿ
ಆ್ಯನಿ ಎರ್ನಾಕ್ಸ್ ಅವರ ಚೊಚ್ಚಲ ಕೃತಿ ಲೆಸ್ ಆರ್ಮೊಯೀಸ್ ವಿಡೇಸ್ 1974ರಲ್ಲಿ ಪ್ರಕಟವಾಗಿದ್ದು, 1990ರಲ್ಲಿ ಕ್ಲೀನ್ ಔಟ್ ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಿತ್ತು. ಫ್ರಾನ್ಸ್‌ನಲ್ಲಿ ಸಮಕಾಲೀನ ಶ್ರೇಷ್ಠ ಕೃತಿ ಎಂದೇ ಪರಿಗಣಿಸಲ್ಪಟ್ಟ ಇದು ಅವರ ನಾಲ್ಕನೇ ಕೃತಿಯಾಗಿದ್ದು, ಫ್ರೆಂಚ್ ಭಾಷೆಯಲ್ಲಿ 1988ರಲ್ಲಿ ಬಿಡುಗಡೆಯಾದ ಲಾ ಪ್ಲೇಸ್ ಅಥವಾ ಎ ಮ್ಯಾನ್ಸ್ ಪ್ಲೇಸ್‌ನ ಅನುವಾದಿತ ಕೃತಿಯಾಗಿದೆ. ಎರ್ನಾಕ್ಸ್ ಅವರ ಜೀವನ ಚರಿತ್ರೆ “ದಿ ಇಯರ್ಸ್’ಗೆ 2008ರಲ್ಲಿ ಫ್ರಾನ್ಸ್‌ನ ಪ್ರಿಕ್ಸ್ ರೆನಾಡೋಟ್ ಪ್ರಶಸ್ತಿ ಲಭಿಸಿದ್ದು, ಇದನ್ನು ಇಂಗ್ಲಿಷ್‌ಗೆ 2008ರಲ್ಲಿ ಅಲಿಸನ್ ಎಲ್. ಸ್ಟ್ರೇಯರ್ ಅನುವಾದಗೊಳಿಸಿದ್ದರು. ಇದು 2019ರಲ್ಲಿ ದಿ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಗಾಗಿ ಆಯ್ಕೆಯಾಗಿತ್ತು.
ಜನಪ್ರಿಯ ಹೊತ್ತಗೆಗಳು
ಕ್ಲೀನ್ ಔಟ್, ವಾಟ್ ದೆ ಸೇ ಗೋಸ್‌ಮತ್ತು ದಿ ಫಾಜೋನ್ ವುಮೆನ್ ಈ ಮೂರು ಆತ್ಮಚರಿತ್ರೆಗಳನ್ನು ಬರೆದ ಬಳಿಕ ಎರ್ನಾಕ್ಸ್ ಅವರ ಕಾದಂಬರಿ ಎ ಮ್ಯಾನ್ಸ್ ಪ್ಲೇಸ್ ಬಿಡುಗಡೆ ಯಾಯಿತು. ಚೊಚ್ಚಲ ಕೃತಿ ಕ್ಲೀನ್ ಔಟ್‌ನಲ್ಲಿ ತಮ್ಮ ಯೌವನ, ಮಹತ್ವಾಕಾಂಕ್ಷೆಗಳ ಬಗ್ಗೆ ಹೇಳಿದ್ದರೆ, ಬ್ಯಾಕ್ ಆಲಿಯಲ್ಲಿ ಫ್ರಾನ್ಸ್‌ನಲ್ಲಿ ಕಾನೂನು ಬಾಹಿರವಾಗಿದ್ದ ಗರ್ಭಪಾತದ ಬಗ್ಗೆ ಧ್ವನಿಯಾಗಿದ್ದಾರೆ. 1983ರಲ್ಲಿ ಪ್ರಕಟಿಸಿದ ಎ ಮ್ಯಾನ್ ಪ್ಲೇಸ್ ಕೃತಿಯಲ್ಲಿ ಅವರು ತಮ್ಮ ತಂದೆಯ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಎರ್ನಾಕ್ಸ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಕೃತಿ 2008ರಲ್ಲಿ ಪ್ರಕಟವಾದ ದಿ ಇಯರ್ಸ್. ಇದರಲ್ಲಿ ಅವರು 1940- 2000ದ ವರೆಗಿನ ಫ್ರೆಂಚ್ ಸಮಾಜ ಮತ್ತು ತಮ್ಮ ಜೀವನದ ನೆನಪುಗಳನ್ನೇ ಹಂಚಿಕೊಂಡಿದ್ದಾರೆ. ಇದರೊಂದಿಗೆ 2000ದಲ್ಲಿ ಪ್ರಕಟವಾದ ಹ್ಯಾಪನಿಂಗ್ಸ್,ಲಾಸ್ಟ್ ಇಯರ್ ಕೃತಿಗಳೂ ಹೆಚ್ಚುಜನಪ್ರಿಯಗೊಂಡಿದ್ದವು.
ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಫ್ರೆಂಚ್ ಲೇಖಕರು
ವರ್ಷ ಪುರಸ್ಕೃತರು
1901 ಸುಲ್ಲಿ ಪ್ರುದೊಮ್ಮೆ
1904 ಫ್ರೆಡರಿಕ್ ಮಿಸ್ಟ್ರಾಲ್
1915 ರೊಮೈನ್ ರೋಲ್ಯಾಂಡ್
1921 ಅನಾಟೊಲ್ ಫ್ರಾನ್ಸ್
1927 ಹೆನ್ರಿ ಬೆರ್ಗ್ಸನ್
1937 ರೋಜರ್ ಮಾರ್ಟಿನ್ ಡು ಗಾರ್ಡ್
1947 ಆ್ಯಂಡ್ರೆ ಗಿಡ್
1952 ಫ್ರಾಂಕೋಯಿಸ್ ಮೌರಿಯಾಕ್
1957 ಆಲ್ಬರ್ಟ್ ಕ್ಯಾಮಸ್
1960 ಸೇಂಟ್-ಜಾನ್ ಪರ್ಸೆ
1964 ಜೀನ್-ಪಾಲ್ ಸಾರ್ತ್ರೆ
1985 ಕ್ಲೌಡ್ ಸೈಮನ್
2000 ಗಾವೊ ಕ್ಸಿನಿjಯಾನ್
2008 ಜೀನ್-ಮೇರಿ ಗುಸ್ಟಾವ್ ಲೆ ಕ್ಲೆಜಿಯೊ
2014 ಪ್ಯಾಟ್ರಿಕ್ ಮೊಡಿಯಾನೊ
2022 ಆ್ಯನಿ ಎರ್ನಾಕ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.