ಸಮರ ಚಿತ್ರಕಥಾ


Team Udayavani, Dec 17, 2021, 6:30 AM IST

ಸಮರ ಚಿತ್ರಕಥಾ

ಪ್ರವಾಹದ ಬಾಂಬ್‌ಗೆ ಆಟಿಕೆಗಳಂತೆ ತೇಲಿದೆವು! :

1971ರಲ್ಲಿ ಪಾಕಿಸ್ಥಾನವು ಬಡ ಬಾಂಗ್ಲಾದ ಮೇಲೆರಗಿ ಬಂದಾಗ, ನಾನು ಮೇಜರ್‌ ಹುದ್ದೆಯಲ್ಲಿದ್ದೆ. ಅವತ್ತು ಡಿಸೆಂಬರ್‌ 1. ಯುದ್ಧದ ಮುನ್ಸೂಚನೆ ಸಿಕ್ಕ ಕೂಡಲೇ ನಾನಿದ್ದ ಕುಮಾನ್‌ 12 ಯುನಿಟ್‌ನಿಂದ ಸುಮಾರು 500 ಕಿ.ಮೀ. ದೂರದ ಭಾರತ- ಬಾಂಗ್ಲಾ ಗಡಿಗೆ ಸ್ಥಳಾಂತರ ಆಗಬೇಕಾಯಿತು. ಎಲ್ಲದಕ್ಕೂ ಮೊದಲು ಅಖೌರಾ ಸನಿಹದ ಬ್ರೋಕನ್‌ ಬ್ರಿಡ್ಜ್ ಪ್ರದೇಶದ ಮೇಲೆ ಆಕ್ರಮಣಕ್ಕೆ ಸಜ್ಜಾಗಬೇಕಾಗಿತ್ತು.

ಆದರೆ ಡಿ.2ರ ರಾತ್ರಿ ನಾವು ಉಹಿಸಿರದ ಘಟನೆ ನಡೆದಿತ್ತು. ಯಾರಿಗೂ ಕಿಂಚಿತ್ತೂ ಅರಿವಿಗೆ ಬಾರದಂತೆ ಪಾಕ್‌ ಸೇನೆ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿತು. ಸಾಲದ್ದಕ್ಕೆ, ಅಣೆಕಟ್ಟೆಯ ದ್ವಾರಗಳನ್ನು ತೆರೆದು, ಪ್ರವಾಹದ ಬಾಂಬ್‌ ಅನ್ನು ಛೂ ಬಿಟ್ಟಿತು. ನಮ್ಮವರು ಆಟಿಕೆಗಳಂತೆ ನಮ್ಮ ಕಣ್ಣೆದುರೇ ತೇಲಿಕೊಂಡು ಹೋಗುತ್ತಿದ್ದರು. ನಾನು ಧೈರ್ಯ ಮಾಡಿ ಅದೇ ನಾಲೆಯಲ್ಲಿ 2-3 ಕಿ.ಮೀ.ಗಳವರೆಗೆ ಚಲಿಸಿ, ಒಂದು ಬಿದಿರಿನ ಸೇತುವೆ ದಾಟಿ, ದೂರದಲ್ಲಿ ನಿಂತಿದ್ದ ನನ್ನ ತುಕಡಿಯನ್ನು ಸೇರಿದ್ದೆ.

60ರಷ್ಟು ಸಂಖ್ಯಾಬಲ ಹೊಂದಿದ್ದ ನಾವು ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸುತ್ತಿರುವಾಗಲೇ, ನಮ್ಮ ಮಧ್ಯೆ ಹಠಾತ್ತನೆ ಒಂದು ಬಾಂಬ್‌ ಬಂದು ಬಿತ್ತು. ದೇವರ ಕೃಪೆಯಿಂದ ಅದು ಸಿಡಿಯದೆ, ಅಲ್ಲೇ ನಿಷ್ಕ್ರಿಯವಾಯಿತು. ಸನಿಹವಿದ್ದ ನಾಗರಿಕರನ್ನು ರಕ್ಷಿಸುತ್ತಾ ನಾವು ಅತ್ಯಂತ ಜಾಗರೂಕತೆಯಿಂದ ಶತ್ರುಗಳು ಸ್ಫೋಟಕಗಳನ್ನು ಅಡಗಿಸಿ­ಟ್ಟಿದ್ದ ಮೈನ್‌ಫೀಲ್ಡ್‌ನಲ್ಲಿ ಮುಂದೆ ಸಾಗಿದೆವು. ಹಾಗೆ ನೋಡಿದರೆ ಆ ಹೊತ್ತಿಗೆ ನಮ್ಮ ತುಕಡಿಯಲ್ಲಿನ ಸೈನಿಕರ ಸಂಖ್ಯೆ ತೀರಾ ಕಡಿಮೆ. ಆದರೂ ಶತ್ರುಗಳ ಮಶೀನ್‌ ಗನ್‌ಗಳನ್ನು ಲೆಕ್ಕಿಸದೆ, ಪ್ರತ್ಯುತ್ತರ ನೀಡಿದ್ದೆವು.

ಸತತ ಐದು ತಾಸುಗಳ ಕಾದಾಟದ ಆ ಕ್ಷಣ ಇನ್ನೂ ನನಗೆ ನೆನಪಿದೆ. ಗ್ರೆನೇಡ್‌ಗಳನ್ನು ಸಿಡಿಸುತ್ತಿದ್ದ ಬಂಕರ್‌ಗಳ ಹೊಡೆದಾಟ ಅಬ್ಬಬ್ಟಾ! 1000 ಸೈನಿಕರ ಒಂದು ಬೆಟಾಲಿಯನ್‌ ಮಾಡಬಹುದಾದ ಕೆಲಸವನ್ನು ನಮ್ಮ ಚಿಕ್ಕ ತಂಡ ಡಿ.3ರ ಬೆಳಗ್ಗೆ ಪೂರ್ಣಗೊಳಿಸಿದ್ದರ ಬಗ್ಗೆ ಈಗಲೂ ನನಗೆ ಹೆಮ್ಮೆಯಿದೆ.

ಬಳಿಕ ಡಿ.6-7ರಂದು 40 ಕಿಲೋ ಭಾರದ ಶಸ್ತ್ರಾಸ್ತ್ರಗಳನ್ನು ಬೆನ್ನ ಮೇಲೆ ಹೇರಿಕೊಂಡು ಕೋಮಿಲ್ಲಾ , ಆಕ್ಸಿಸ್‌, ದೌಡ್ಕಂಡಿ ಪ್ರದೇಶ, ಮೇಘನಾ ನದಿಗಳನ್ನು ದಾಟಿ ಸುದೀರ್ಘ‌ 40 ಕಿ.ಮೀ. ಪಯಣಿಸಿ, ಢಾಕಾ ಮುಟ್ಟಿದೆವು. ಪ್ರಮುಖ ಬಂದರು ಪ್ರದೇಶವಾಗಿದ್ದ ದೌಡ್ಕಂಡಿಯನ್ನು ವಶಕ್ಕೆ ತೆಗೆದುಕೊಂಡೆವು. ಡಿ.16ರ ವೇಳೆಗೆ ಪಾಕ್‌ನ 93,000 ಸೈನಿಕರನ್ನು ಯುದ್ಧ ಕೈದಿಗಳನ್ನಾಗಿಸುವಲ್ಲಿ ಕೊನೆಗೂ ಸಫ‌ಲರಾದೆವು.

ಮೇಜರ್‌ ಜನರಲ್‌ ಕೆ.ಪಿ. ನಂಜಪ್ಪ,  ಮಡಿಕೇರಿ

.

ಜೀವ ಉಳಿಸುವ ಪುಣ್ಯದ ಕೆಲಸ  :

ನಾನು ಭಾರತ­ಪಾಕಿಸ್ಥಾನ ಯುದ್ಧದ ವೇಳೆ ವೈದ್ಯಕೀಯ ಸಹಾ­ಯಕನಾಗಿ ಕೆಲಸ ನಿರ್ವ­­ಹಿ­ಸುವ ಅವ­ಕಾಶ ಸಿಕ್ಕಿತ್ತು. ಸೇನೆಯ ಒಂದಿಷ್ಟು ಸಿಬಂದಿ ಗಾಯಾಳುಗಳನ್ನು ನಾವಿದ್ದ ಬೊಗ್ರಾ ಕ್ಯಾಂಪ್‌ಗೆ ಕರೆದು­ಕೊಂಡು ಬರುತ್ತಿದ್ದರು. ಆಗ ನಾವು ತತ್‌ಕ್ಷಣ ಪ್ರಥಮ ಚಿಕಿತ್ಸೆ ನೀಡಿ ತಂಡದ ವೈದ್ಯರ ಸಲಹೆ ಮೇರೆಗೆ ಇಂಜಕ್ಷನ್‌, ಸಲಾಯಿನ್‌, ಬ್ಯಾಂಡೇಜ್‌ ಹಚ್ಚುತ್ತಿ­ದ್ದೆವು. ಯುದ್ಧ ದಲ್ಲಿ ಗಾಯ­ಗೊಂಡ ಸೈನಿಕರಷ್ಟೇ ಅಲ್ಲ, ವೈರಿಗಳ ದಾಳಿಯಿಂದ ಕಟ್ಟಡಗಳು ಕುಸಿದು ಗಾಯಗೊಂಡ ವೈರಿಗಳಿಂದ ದೌರ್ಜನ್ಯ, ಹಲ್ಲೆಗೊಳಗಾದ ಸಾವಿ ರಾರು ಜನರಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವ ಕಾರ್ಯ ಮಾಡಿದೆವು. ಜೀವಗಳನ್ನು ಉಳಿಸುವ ಪುಣ್ಯದ ಕೆಲಸ ಮಾಡುವ ಅವಕಾಶ ದೊರಕಿತು. -ಎಂ.ಎಂ. ಕಮ್ಮಾರ್‌, ಮಾಜಿ ಯೋಧ, ದಾವಣಗೆರೆ

.

ಯುದ್ಧ ವಿಮಾನಗಳ ಮಾಹಿತಿ ನೀಡುತ್ತಿದ್ದೆ :

ನಾನು ವಾಯು­ಪಡೆ­ಯ­ಲ್ಲಿದ್ದು ಭಾರತ-­ಪಾಕಿಸ್ಥಾನ ಯುದ್ಧ ಸಂದರ್ಭದಲ್ಲಿ ವೈರಿ ರಾಷ್ಟ್ರಗಳ ಕಡೆಯಿಂದ ಬರುವ ಯುದ್ಧ ವಿಮಾನಗಳ ಮಾಹಿತಿ­ಯನ್ನು ಭಾರತೀಯ ಸೇನೆಗೆ ರವಾನಿಸುವ ಕಾರ್ಯ ದಲ್ಲಿ ತೊಡಗಿಕೊಂಡಿದ್ದೆ. ಆಗ ಪಾಕಿಸ್ಥಾನದಲ್ಲಿ ಸೈಬರ್‌ ಜೆಟ್‌, ಮಿರೆಜ್‌ ಹಾಗೂ ಸ್ಟಾರ್‌ ಫೈಟರ್‌ಗಳೆಂಬ ಯುದ್ಧ ವಿಮಾನಗಳಿದ್ದವು. ಬಾಲಾಕೋಟ್‌ ಹತ್ತಿರದ ಬೇರೆ ಬೇರೆ ಬೆಟ್ಟ ಗುಡ್ಡಗಳಲ್ಲಿನ ಗುಪ್ತ ಸ್ಥಳದಲ್ಲಿ ಅಡಗಿ ಕುಳಿತು ಯಾವ ನಮೂನೆಯ ವಿಮಾನ, ಎಷ್ಟು ವೇಗದಲ್ಲಿ, ಯಾವ ದಿಕ್ಕಿನೆಡೆಗೆ ಬರುತ್ತಿದೆ ಎಂಬ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಕಳುಹಿಸುತ್ತಿದ್ದೆವು. ಯುದ್ಧ ಸಂದರ್ಭದಲ್ಲಿ ಪಾಕಿಸ್ಥಾನದಿಂದ ಬರು ತ್ತಿರುವ ಯುದ್ಧವಿಮಾನಗಳ ಮಾಹಿತಿ ನೀಡಿದ್ದೆ. ಅದು ನಿಗದಿತ ಸ್ಥಳ ತಲುಪಲು ಮೂರುವರೆ ನಿಮಿಷ ಬೇಕಿತ್ತು. ಮಾಹಿತಿ ಆಧರಿಸಿ ನಮ್ಮ ಯೋಧರು ವೈರಿಗಳ ಎರಡು ವಿಮಾನಗಳನ್ನು ಹೊಡೆದುರುಳಿಸಿದರು. – ಮನೋಹರ ಎಸ್‌. ಮಹೇಂದ್ರಕರ್‌, ಮಾಜಿ ಯೋಧ, ದಾವಣಗೆರೆ

(ನಿರೂಪಣೆ: ವಾಣಿ ಭಟ್ಟ)

ಟಾಪ್ ನ್ಯೂಸ್

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ

Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

ರುಚಿ ಹೆಚ್ಚಿಸುವ ವಿಷ: ತಿಂಡಿಗಳಿಗೆ ಬಳಸುವ ಕೃತಕ ಬಣ್ಣ, ರುಚಿಕಾರಕಗಳಿಂದ ಪ್ರಾಣಕ್ಕೆ ಕುತ್ತು

When will American astronauts return from space?

NASA; ಅಂತರಿಕ್ಷದಲ್ಲೇ ಅತಂತ್ರ! ಬಾಹ್ಯಾಕಾಶದಿಂದ ಅಮೆರಿಕದ ಗಗನಯಾತ್ರಿಗಳು ಮರಳೋದು ಯಾವಾಗ?

Bajaj Bruzer is the world’s first CNG bike

Bajaj Bruzer; ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಬ್ರೂಝರ್‌

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

ಸಾಂಪ್ರದಾಯಿಕ ಪ್ರಯೋಗಾಲಯ ಮೀರಿ ಬಹು-ಶಿಸ್ತಿನ ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಕ್ರಾಂತಿ

Ajit Doval is India’s James Bond!

Spy Master; ಅಜಿತ್‌ ದೋವಲ್‌ ಭಾರತದ ಜೇಮ್ಸ್‌ಬಾಂಡ್‌!

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

1-sa-dsadsa

Mangaluru; ಮಣ್ಣುಕುಸಿತದಿಂದ ಸಾವನ್ನಪ್ಪಿದ ಕಾರ್ಮಿಕನ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.