ಪರ ಸಂಗ ಕಾನೂನಿನ ಸುತ್ತಮುತ್ತ
Team Udayavani, Feb 15, 2018, 3:15 AM IST
ನಮ್ಮ ದೇಶದ ದಂಡ ಸಂಹಿತೆಯ ಕರಡು ಪ್ರತಿ ಸಿದ್ಧಪಡಿಸುವ ಕಾಲದಲ್ಲಿ ಪರ ಸ್ತ್ರೀ ಸಂಗ ಕ್ರಿಮಿನಲ್ ಅಪರಾಧವಾಗಿರಲಿಲ್ಲ. ಅದೊಂದು ಕೇವಲ ಸಿವಿಲ್ ಅಪರಾಧ ಎಂದು ಕರಡು ಸಿದ್ಧಪಡಿಸಿದ ಸಮಿತಿಯ ಅಭಿಪ್ರಾಯವಾಗಿತ್ತು. ಆನಂತರ ಕರಡು ಪ್ರತಿಯನ್ನು ಪರಿಷ್ಕರಿಸಿದಾಗ ಇದನ್ನು ನೀಚ ಅಪರಾಧವೆಂದು ಪರಿಗಣಿಸಿ ಪುರುಷನಿಗೆ ಶಿಕ್ಷೆ ವಿಧಿಸಿದರು.
ಭಾರತದ ಪ್ರಾಚೀನ ಗ್ರಂಥ ಮನುಸ್ಮತಿ ಪರಸ್ತ್ರೀ ಸಂಗ ಪವಿತ್ರ ವೈವಾಹಿಕ ಸಂಸಾರವನ್ನು ಭಂಗಗೊಳಿಸುವ ನೀಚ ಅಪರಾಧ
ವೆಂದು ಪರಿಗಣಿಸುತ್ತದೆ (ಮನುಸ್ಮತಿ ಶ್ಲೋಕ 360, 364, 380 ಇತ್ಯಾದಿ). ಇಂತಹ ಪ್ರಕರಣಗಳಲ್ಲಿ ಪುರುಷನಿಗೆ ಸಂದರ್ಭಕ್ಕೆ ಅನು ಗುಣವಾಗಿ ಮರಣದಂಡನೆಯನ್ನೂ ವಿಧಿಸಬಹುದು ಎನ್ನುತ್ತದೆ ಮನುಸ್ಮತಿ. ಆದರೆ ಆರೋಪಿಯೊಂದಿಗೆ ಸಹಕರಿಸಿದ ಸ್ತ್ರೀಗೆ ಕೇವಲ ಛಡಿಯೇಟು ಮಾತ್ರ ಶಿಕ್ಷೆ. ಇಸ್ಲಾಮೀ ಕಾನೂನು ಕೂಡಾ ಸ್ತ್ರೀಯ ಮಟ್ಟಿಗೆ ಮೃದು ಧೋರಣೆ ಹೊಂದಿದೆ. ಬೈಬಲ್‌ನಲ್ಲಿ (ಜಾನ್:8) ಈ ಅಪರಾಧಕ್ಕೆ ಸಂಬಂಧಿಸಿ ಒಂದು ಸಣ್ಣ ನೀತಿಕತೆ ಇದೆ. ಒಂದು ದಿನ ಪರ ಸಂಗದ ಅಪರಾಧದಲ್ಲಿ ಸಿಲುಕಿದ ಸ್ತ್ರೀಯೊಬ್ಬಳನ್ನು ಜನರು ಏಸುವಿನ ಮುಂದೆ ಎಳೆದು ತಂದು ನಿಲ್ಲಿಸಿ ಆಕೆಗೆ ಯಾವ ಶಿಕ್ಷೆ ವಿಧಿಸಬಹುದು? ಆಗ ರೂಢಿಯಲ್ಲಿರುವ ನಿಯಮದಂತೆ ಕಲ್ಲೆಸೆದು ಕೊಲ್ಲಬಹುದೆ ಎಂದು ಕೇಳಿದರು. ಆಗ ಏಸು ನಿಮ್ಮಲ್ಲಿ ಯಾವನಾದರೂ ಈ ತನಕ ಅಪರಾಧ ಮಾಡ ದಿರುವವನು ಮೊದಲ ಕಲ್ಲು ಆಕೆಯ ಮೇಲೆ ಎಸೆಯಬಹುದು ಎಂದು ಮಾರ್ಮಿಕ ಉತ್ತರವಿತ್ತರು. ಈ ತೀರ್ಪಿನ ಅರ್ಥ ಗ್ರಹಿಸಿ ಆಕೆಯನ್ನು ಅಲ್ಲಿಯೇ ಬಿಟ್ಟು ಅವರೆಲ್ಲರೂ ಹೊರಟು ಹೋದರು. ಏಸು ಆಕೆಯನ್ನು ಹೃತೂ³ರ್ವಕ ಕ್ಷಮಿಸಿ ಇನ್ನು ಮುಂದೆ ಯಾವುದೇ ಪಾಪ ಕೃತ್ಯ ಮಾಡಬೇಡ ಎಂದು ಬುದ್ಧಿ ಹೇಳಿದರು.
ಎಲ್ಲ ಜನಾಂಗಗಳ ಧಾರ್ಮಿಕ ಚರಿತ್ರೆಗಳನ್ನು ಆಮೂಲಾಗ್ರ ಪರಿಶೀಲಿಸಿದರೆ ಪುರಾತನ ಕಾಲದಿಂದಲೂ ಪರಸಂಗಕ್ಕೆ ಸಂಬಂಧ ಪಟ್ಟ ನಿಯಮಗಳು ಸ್ತ್ರೀಯರ ಕುರಿತು ಮೃದು ಧೋರಣೆ ಅನುಸರಿಸಿರುವುದು ತಿಳಿದು ಬರುತ್ತದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 497 ಆರೋಪಿ ಪುರುಷನಿಗೆ 5 ವರ್ಷಗಳ ಕಾಲ ಜೈಲುವಾಸ ಮತ್ತು ಜುಲ್ಮಾನೆ ವಿಧಿಸುತ್ತದೆ.ಆದರೆ ಈ ಕಾರ್ಯದಲ್ಲಿ ಸಹಕರಿಸಿದ ಸ್ತ್ರೀ ಯಾವುದೇ ಶಿಕ್ಷೆ ಅಥವಾ ದಂಡನೆಗೆ ಅರ್ಹಳಲ್ಲ ಎಂದು ಘೋಷಿಸುತ್ತದೆ.
ಈ ಧೋರಣೆಗೆ ಕಾರಣವೇನು?: ದಂಡ ಸಂಹಿತೆಯಲ್ಲಿ ಉಲ್ಲೇಖೀಸಿರುವ ಅಪರಾಧದ ಮುಖ್ಯಾಂಶ ಸ್ತ್ರೀ ವಿವಾಹಿñ ೆಯಾಗಿರುತ್ತಾ, ಗಂಡನ ಅನುಮತಿ ಅಥವಾ ತಿಳಿವಳಿಕೆ ಇಲ್ಲದೆ ಪರ ಪುರುಷನೊಡನೆ ಈ ಕೃತ್ಯದಲ್ಲಿ ಭಾಗಿಯಾಗುವುದು. ಒಂದು ವಿಧದಲ್ಲಿ ಇದು ಸೊತ್ತು ಕಳ್ಳತನದಂತೆ ಭಾಸವಾಗುತ್ತದೆ. ಕಳ್ಳತನದಲ್ಲಿ ಒಳಗಾಗುವ ಸೊತ್ತು ನಿರ್ಜಿàವ ವಾಗಿರುವುದಾದರೆ, ಇದರಲ್ಲಿ ಸಮ ಚಿತ್ತ ಉಳ್ಳ ಸಜೀವ ಸ್ತ್ರೀ. ಇಷ್ಟು ಮಾತ್ರ ಎದ್ದುಕಾಣುವ ವ್ಯತ್ಯಾಸ. ಇಂಗ್ಲೆಂಡಿನಲ್ಲಿ ಕ್ರಿ.ಶ. 1707ರಲ್ಲಿ ಲಾರ್ಡ್ ಚೀಫ್ ಜಸ್ಟೀಸ್ ಜಾನ್ ಹೋಲ್ಟ್ ಎಂಬವರು ಈ ಅಪರಾಧವನ್ನು ಸೊತ್ತಿನ ಮೇಲಿನ ಅತಿ ಉಗ್ರ ಅತಿಕ್ರಮಣವೆಂದು ಅಭಿಪ್ರಾಯಪಟ್ಟರೆ, ಭಾರತ ಹಾಗೂ ಇತರ ದೇಶಗಳಲ್ಲೂ ಪವಿತ್ರ ವೈವಾಹಿಕ ಸಂಸಾರವನ್ನು ಭಗ್ನಗೊಳಿಸುವ ನೀಚ ಕೃತ್ಯವೆಂದು ಇಂದಿಗೂ ಅಭಿಪ್ರಾಯ ಪಡುತ್ತಾರೆ.
ಹಾಗಿರುವುದಾದರೆ ಬುದ್ಧಿ ಪೂರ್ವಕ ಸಹಕರಿಸಿರುವ ಸ್ತ್ರೀಗೆ ಕಾನೂನು ಏಕೆ ಔದಾರ್ಯ ತೋರಿಸಿದೆ? ನಮ್ಮ ದೇಶದ ದಂಡ ಸಂಹಿತೆಯ ಕರಡು ಪ್ರತಿ ಸಿದ್ಧಪಡಿಸುವ ಕಾಲದಲ್ಲಿ ಪರ ಸ್ತ್ರೀ ಸಂಗ ಕ್ರಿಮಿನಲ್ ಅಪರಾಧವಾಗಿರಲಿಲ್ಲ. ಅದೊಂದು ಕೇವಲ ಸಿವಿಲ್ ಅಪರಾಧ ಎಂದು ಕರಡು ಸಿದ್ಧಪಡಿಸಿದ ಸಮಿತಿಯ ಅಭಿಪ್ರಾಯವಾಗಿತ್ತು. ಆನಂತರ ಕರಡು ಪ್ರತಿಯನ್ನು ಪರಿಷ್ಕರಿಸಿ ದಾಗ ಇದನ್ನು ನೀಚ ಅಪರಾಧವೆಂದು ಪರಿಗಣಿಸಿ ಪುರುಷನಿಗೆ ಶಿಕ್ಷೆ ವಿಧಿಸಿದರು. ಅಂದಿನ ಭಾರತದ ಸ್ತ್ರೀಯರ ಕುರಿತು ಸಮಿತಿ ಬಹಳ ಅನುಕಂಪ ತೋರಿ, ಆಕೆಗೆ ಯಾವುದೇ ಶಿಕ್ಷೆ ವಿಧಿಸಲಿಲ್ಲ. ಇದಕ್ಕೆ ಕಾರಣವನ್ನು ವರದಿಯಲ್ಲಿ ಕಾಣಿಸಿದ್ದಾರೆ. ಈ ದೇಶದ ರೂಢಿಯಂತೆ ಪುರುಷನು ಹಲವು ಪತ್ನಿಯರನ್ನು ಹೊಂದಿರ ಬಹುದು. ಬಹುಪತ್ನಿಯರ ದಾಂಪತ್ಯದಲ್ಲಿ ಪತ್ನಿ ಏಕಾಂಗಿಯಾ ಗಿರುವ ಸಂದರ್ಭ ಹೆಚ್ಚಿರುತ್ತದೆ.
ಪತಿಯ ಪ್ರೀತಿ, ಸ್ನೇಹ, ಕೊನೆಗೆ ಸಹವಾಸದಿಂದ ಕೂಡಾ ವಂಚಿತೆಯಾಗಿ ಚಿರ ವಿರಹಿ ಆಗಿರಬೇಕಾ ಗಿರುವ ನತದೃಷ್ಟೆ ಯಾಗಿರುತ್ತಾಳೆ. ಯಾವುದೋ ವಿಷ ಘಳಿಗೆಯಲ್ಲಿ ಆಕೆ ಪರ ಪುರುಷನ ಮೋಹಕ್ಕೊಳಗಾದರೆ ಆಕೆಯನ್ನು ಶಿಕ್ಷಿಸುವುದು ನ್ಯಾಯವಲ್ಲ, ಆಕೆ ಕ್ಷಮಾಹೆì. ಭಾರತದ ಸಮಾಜದಲ್ಲಿ ಸ್ತ್ರೀಯು ಪುರುಷ ಸಮಾನ ಎಂಬ ಅರಿವು ಬರುವ ತನಕ ಆಕೆಯನ್ನು ಶಿಕ್ಷೆಗೊಳಪಡಿಸುವುದು ಗಾಯದ ಮೇಲೆ ಬರೆ ಎಳೆದಂತೆ ಎಂದು ಪರಿಷ್ಕೃತ ಕಾಯಿದೆ ಸಿದ್ಧಪಡಿಸಿದ ಸಮಿತಿಯ ಅಭಿಪ್ರಾಯ ವಿತ್ತು. ಈ ಸಮಾಜದಲ್ಲಿ ಬಹುಪತ್ನಿತ್ವ ಸಂಪೂರ್ಣ ಇಲ್ಲದಾದಾಗ ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡಬಹುದು ಎಂದು ಸೂಚಿಸಿತು. ಬಹುಶಃ ಪರಿಷ್ಕೃತ ಕಾಯಿದೆ ಸಿದ್ಧಪಡಿಸಿದ ಜಾನ್‌ರೋಮಿಲರಿಗೆ ಬೈಬಲ್‌ನ ನತದೃಷ್ಟೆ ಹೆಂಗಸಿನ ಕತೆ ನೆನಪಾಗಿರಬಹುದು.
ಸಂಸಾರ ಭಗ್ನಗೊಳಿಸುವುದನ್ನು ತಡೆಯುವ ಉದ್ದೇಶದಲ್ಲಿ ಸೆಕ್ಷನ್ 497 ಇರುವುದಾದರೂ, ಪತಿಯು ಇನ್ನೋರ್ವಳೊಡನೆ ಲೈಂಗಿಕ ಸಂಪರ್ಕ ಹೊಂದಿದರೆ, ಆತನ ಅಥವಾ ಆತನ ಪ್ರೇಯಸಿಯ ವಿರುದ್ದ ಪತ್ನಿ ಮೊಕದ್ದಮೆ ದಾಖಲಿಸಲು ಆವಕಾಶವಿಲ್ಲ. ನಮ್ಮ ಅಪರಾಧ ಸಂಹಿತೆಯ ಸೆಕ್ಷನ್ 198(2)ರ ಪ್ರಕಾರ ಈ ಅಪರಾಧದಲ್ಲಿ ಸ್ತ್ರೀಯ ಗಂಡನಲ್ಲದೆ ಇನ್ನಿತರರಿಗೆ ಮೊಕದ್ದಮೆ ದಾಖಲಿಸುವ ಅವಕಾಶವಿಲ್ಲ. ಬ್ರಿಟಿಷ್ ಕಾಯಿದೆಯ ಮೂಲ ತತ್ವದಂತೆ ಪತ್ನಿ ಪತಿಯ ಸೊತ್ತಾಗಿದ್ದರೂ ಪತಿ ಆಕೆಯ ಸೊತ್ತಲ್ಲ. ನಮ್ಮ ಕಾಯಿದೆ ದಂಡ ಸಂಹಿತೆಯ ಸೆಕ್ಷನ್ 487 ಮತ್ತು ಅಪರಾಧ ಸಂಹಿತೆಯ ಸೆಕ್ಷನ್ 198(2) ಬ್ರಿಟಿಷ್ ಕಾಯಿದೆ ತತ್ವದ ಪತ್ನಿ ಪತಿಯ ಸೊತ್ತು ಎಂಬ ಪರಿಕಲ್ಪನೆಯ ಆಧಾರದಲ್ಲಿ ಬರೆಯಲಾಗಿದೆ. ಆ ಕಾರಣದಿಂದ ಪತಿಯನ್ನು ಇನ್ನೋರ್ವ ಸ್ತ್ರೀ ವಶಪಡಿಸಿದರೆ ಪತ್ನಿ ಅಸಹಾಯಕಿ.
ಆತನ ವಿರುದ್ಧ ಪ್ರೇಯಸಿಯ ಪತಿ (ಇದ್ದರೆ) ಮಾತ್ರ ಮೊಕದ್ದಮೆ ಹೂಡಬಹುದು. ಉದಾಹರಣೆಗೆ ಪತ್ನಿಯು ಪರ ಪುರುಷನೊಂದಿಗೆ ಸಂಗ ಮಾಡಿದರೆ ಅದು ಅಪರಾಧ. ಪರ ಪುರುಷನ ವಿರುದ್ಧ ಪತಿ ದೂರು ದಾಖಲಿಸ ಬಹುದು. ಇದೇ ವೇಳೆ ಪತಿಯು ಪರ ಸ್ತ್ರೀ ಸಂಗ ಮಾಡಿದರೆ ಅವನ ವಿರುದ್ಧ ಪತ್ನಿ ದೂರು ದಾಖಲಿಸಲು ಸಾಧ್ಯವಿಲ್ಲ. ಇಲ್ಲಿ ಪತ್ನಿ ಪತಿಯ ಸೊತ್ತು.ಆದರೆ ಪತಿಯ ಮೇಲೆ ಪತ್ನಿಗೆ ಈ ಅಧಿಕಾರವಿರುವುದಿಲ್ಲ. ಇದು ನಮ್ಮ ಕಾನೂನಿನಲ್ಲಿರುವ ವಿಪರ್ಯಾಸ. ಸ್ತ್ರೀ ಮತ್ತು ಪುರುಷ ಸಮಾನರು ಎಂಬುದು ನಮ್ಮ ಸಂವಿಧಾನದ ತಳಹದಿ ತತ್ವವಾಗಿರುವ ಇಂದಿನ ದಿನಗಳಲ್ಲಿ, ಪತ್ನಿಯನ್ನು ಪತಿಯ ಸೊತ್ತು ಎಂಬುದಾಗಿ ಪರಿಗಣಿಸುವುದು ಕೇವಲ ಅನಾಗರಿಕ ಮನೋಭಾವ .ನಮ್ಮ ಅಪರಾಧ ಸಂಹಿತೆಯನ್ನು ರಚಿಸುವ ಕಾಲದಲ್ಲಿ ಪರಸ್ತ್ರೀ ಸಂಗವನ್ನು ಭಾರತವಲ್ಲದೆ ವಿದೇಶಗಳ ಅಪರಾಧವೆಂದು ಪರಿಗಣಿಸಲಾಗಿತ್ತು. ಈಗ ಅದನ್ನು ಕೇವಲ ಸೊತ್ತು ಅಪಹರಣದ ಸಿವಿಲ್ ಪ್ರಕರಣ ಎಂದು ಇಂಗ್ಲೆಂಡ್, ಫ್ರಾನ್ಸ್ ಮತ್ತು ಇತರ ದೇಶಗಳಲ್ಲಿ ಪರಿಗಣಿಸಲಾಗುತ್ತಿದೆ. ಸೆಕ್ಷನ್ 497 ಸರಿಯಾದ ಕಾರಣವಿಲ್ಲದೆ ಸ್ತ್ರೀ ಪುರುಷರೊಳಗೆ ತಾರತಮ್ಯ ಮಾಡುತ್ತದೆ. ಹೀಗಾಗಿ ಅದು ಅಸಾಂವಿಧಾನಿಕ. ಅದನ್ನು ರದ್ದುಪಡಿಸುವಂತೆ ಕೋರಿ ಸವೊìàತ್ಛ ನ್ಯಾಯಾಲಯದಲ್ಲಿ ಈ ಮೊದಲೇ ದಾವೆ ಹೂಡಲಾಗಿತ್ತು. ಸೆಕ್ಷನ್‌ನಲ್ಲಿರುವ ತಾರತಮ್ಯ ಸಕಾರಣವಾಗಿರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ದಾವೆಯನ್ನು ತಿರಸ್ಕರಿಸಿತು. ಇತ್ತೀಚೆಗೆ ಇನ್ನೊಂದು ರಿಟ್‌ಅರ್ಜಿಯನ್ನು ಸವೊìàತ್ಛ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಸೆಕ್ಷನ್ 497 ಬರೆಯುವ ಕಾಲದ ಸಾಮಾಜಿಕ ಪರಿಸ್ಥಿತಿ ಈಗ ಇರುವುದಿಲ್ಲ. ಈಗ ಸ್ತ್ರೀಯರು ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಪುರುಷರಿಗೆ ಪ್ರತಿಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ಆದುದರಿಂದ ಹಿಂದಿನ ತೀರ್ಪುಗಳನ್ನು ನ್ಯಾಯಾಲಯ ಪುನರ್ ಪರಿಶೀಲಿಸುವುದು ಅಗತ್ಯವೆಂದು ಅರ್ಜಿದಾರರು ವಿನಂತಿಸಿಕೊಂಡಿ ದ್ದಾರೆ. ಹಿಂದಿನ ತೀರ್ಪುಗಳ ಪುನರ್ ಪರಿಶೀಲನೆಗೆ ನ್ಯಾಯಾಲಯ ಸಮ್ಮತಿಸಿ, ಕಾಯಿದೆಯ ಸಮಗ್ರ ಪರಿಶೀಲನೆಗಾಗಿ ದಾವೆಯ ವಿಚಾರಣೆಯನ್ನು ಮುಂದೂ ಡಿದೆ. ನನಗನಿಸುವಂತೆ ಪರಸ್ತ್ರೀ ಸಂಗವನ್ನು ಅಪರಾಧವೆಂದು ಪರಿಗಣಿಸದೆ ಕೇವಲ ಸಿವಿಲ್ ಅಪರಾಧ ಎಂದು ಪರಿಗಣಿಸುವುದು ಸೂಕ್ತ. ಈ ತಪ್ಪಿಗೆ ತಕ್ಕ ನಷ್ಟ ಪರಿಹಾರವನ್ನು ನ್ಯಾಯಾಲಯ ನಿರ್ಧರಿಸುವಂತಿರಬೇಕು. ಅಲ್ಲದೆ ಪತಿ ಪರ ಸ್ತ್ರೀ ಸಂಗ ಮಾಡಿದರೆ ಪತ್ನಿಗೆ ಆತನಿಂದ ಪರಿಹಾರ ಪಡೆಯುವ ಹಕ್ಕು ಇರತಕ್ಕದ್ದು. ಅಂತೆಯೇ ಪತಿಗೂ ತತ್ಸಮಾನವಾದ ಹಕ್ಕು ಕಾಯಿದೆಯಲ್ಲಿ ಇರಬೇಕು. ದಂಡ ಸಂಹಿತೆಯ ಸೆಕ್ಷನ್ 497 ಮತ್ತು ಅಪರಾಧ ಸಂಹಿತೆಯು ಸೆಕ್ಷನ್ 198ಗಳನ್ನು ಇಂದಿನ ಪರಿಸ್ಥಿತಿಗನುಗುಣವಾಗಿ ಮರು ಪರಿಶೀಲಿಸುವ ಅಗತ್ಯವಿದೆ.
– ಎ.ಪಿ.ಗೌರೀಶಂಕರ (ವಕೀಲರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.