ತೆಂಕಣದ ಗಾಳಿ ಬೀಸಿದ ಸಾಹಿತ್ಯ ಶ್ರೇಷ್ಠ ಪಂಜೆ ಮಂಗೇಶರಾಯ…!
ಪಂಜೆ ಮಂಗೇಶರಾಯರ ಒಟ್ಟಾರೆ ಬದುಕನ್ನು ದರ್ಶಿಸುವ ಸಂಪೂರ್ಣ ಮಾಹಿತಿ
Team Udayavani, Feb 22, 2021, 12:00 PM IST
ಪಂಜೆ ಮಂಗೆಶರಾಯರ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಸಣ್ಣ ಕಥೆ, ಸಣ್ಣ ಕವನಗಳ ಮೂಲಕ ಹೊಸ ಸಾಹಿತ್ಯದ ಹರಿಕಾರರೆಂದು ಖ್ಯಾತ ನಾಮರಾದವರು. ಶಿಶು ಗೀತೆಗಳ ಜನಕ ಎಂದು ಕರೆಸಿಕೊಳ್ಳುವ ಪಂಜೆ ಮಂಗೇಶರಾಯರ ಜನ್ಮ ದಿನವಿಂದು. ಅವರ ಒಟ್ಟಾರೆ ಬದುಕನ್ನು ದರ್ಶಿಸುವ ಸಂಪೂರ್ಣ ಮಾಹಿತಿ ನಿಮಗಾಗಿ…
ಪಂಜೆ ಮಂಗೇಶರಾಯರು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಣ್ಣ ಕಥೆಗಳನ್ನು ರಚಿಸಿದವರು. ಕವಿಶಿಷ್ಯ ಕಾವ್ಯನಾಮದಿಂದ ಖ್ಯಾತರಾದವರು. ಕನ್ನಡ ಭಾಷೆಯ ಅಧ್ಯಾಪಕರಾಗಿ, ಶಾಲಾ ಇನ್ಸ್ ಪೆಕ್ಟರಾಗಿ, ಪರೀಕ್ಷಾಧಿಕಾರಿಗಳಾಗಿ, ದುಡಿದ ಪ್ರಾತಃಸ್ಮರಣೀಯ ಸಾಹಿತಿಗಳೋರ್ವರಲ್ಲಿ ಪಂಜೆ ಮಂಗೇಶರಾಯರು, ಶಿಶು ಸಾಹಿತ್ಯದಲ್ಲಿ ಅಪಾರ ಮುತುವರ್ಜಿಯ ಸೇವೆ ಸಲ್ಲಿಸಿದವರು.
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಹತ್ತಿರವಿರುವ ಪಂಜ ಎಂಬಲ್ಲಿ ಮಂಗೇಶರಾಯರ ಪೂರ್ವಜರು ನೆಲೆಕಂಡಿದ್ದರು. ರಾಯರ ಮುತ್ತಜ್ಜ ದಾಸಪ್ಪಯ್ಯನವರ ಅಕಾಲ ಮರಣದ ನಂತರ ಅವರ ಪತ್ನಿ ತನ್ನ ಕುಟುಂಬದೊಡನೆ ನೇತ್ರಾವತಿ ನದಿಯ ದಡದಲ್ಲಿರುವ ಬಂಟವಾಳದಲ್ಲಿ ಬಂದು ನೆಲೆಸಿದರು.
ಓದಿ: ಅಕ್ರಮ ಗಾಂಜಾ ಸಾಗಾಟ: ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್, 300 ಕೆಜಿ ಗಾಂಜಾ ಜಪ್ತಿ
ಬಳಿಕ ಈ ಕುಟುಂಬದವರನ್ನು ಪಂಜೆ ಎಂದು ಕರೆಯುವುದು ರೂಢಿಯಾಯಿತು. ದಾಸಪ್ಪಯ್ಯವರ ಒಬ್ಬನೇ ಮಗ ವಿಟ್ಠಲನವರಿಗೆ ಮೂವರು ಪುತ್ರರು. ಅವರಲ್ಲೊಬ್ಬರು ರಾಮಪ್ಪಯ್ಯನವರು. ಅವರ ಏಳು ಮಂದಿ ಮಕ್ಕಳಲ್ಲಿ ಎರಡನೆಯವರು ಮಂಗೇಶರಾಯರು. ಬಂಟವಾಳದಲ್ಲಿ ಒಂದು ಮನೆಯಿತ್ತು ಮತ್ತು ವ್ಯವಸಾಯದ ಸ್ವಲ್ಪ ಭೂಮಿ ಇತ್ತು.
ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಲ್ಲಿ 1974 ಫೆಬ್ರುವರಿ 22 ರಂದು ಜನಿಸಿದರು. ಇವರ ತಾಯಿಯ ಹೆಸರು ಶಾಂತಾದುರ್ಗಾ. ಬಂಟ್ವಾಳದಲ್ಲಿಯೇ ಅವರ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದರು.
1890ರಲ್ಲಿ ರಾಮಪ್ಪಯ್ಯನವರು ತೀರಿಕೊಂಡಾಗ ಮಂಗೇಶರಾಯರಿಗೆ ಹದಿನಾರು ವರ್ಷ. ಮಂಗಳೂರಿನಲ್ಲಿ ಓದುತ್ತಿದ್ದರು.ಅಣ್ಣ ಮದ್ರಾಸ್ (ಈಗಿನ ಚೆನ್ನೈ) ನಲ್ಲಿ ಓದುತ್ತಿದ್ದುದರಿಂದ ಸಂಸಾರದ ಜವಾಬ್ದಾರಿ ಇವರ ಮೇಲೆ ಬಿತ್ತು. 1894 ರಲ್ಲಿ ಇವರ ಮದುವೆ ಖ್ಯಾತನಾಮರಾದ ಬೆನಗಲ್ ರಾಮರಾವ್ ಅವರ ತಂಗಿ ಭವಾನಿಬಾಯಿಯವರೊಂದಿಗೆ ನಡೆಯಿತು. ಈಗಿನ ಪಿಯುಸಿ ಎರಡನೆಯ ವರ್ಷಕ್ಕೆ ತತ್ಸಮವಾದ, ಕಾಲೇಜಿನ ಮೊದಲ ವರ್ಷದ ಎಫ್.ಏ.(ಆರ್ಟ್ಸ್) ತರಗತಿಯಲ್ಲಿ ಉತ್ತೀರ್ಣರಾದರು.ಬಳಿಕ ಇವರು 1896 ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತ ಹುದ್ದೆ ಪಡೆದರು.
ಇದಕ್ಕಾಗಿ ಅವರು ಕನ್ನಡ ವಿಶಿಷ್ಟ ಪರೀಕ್ಷೆಯಲ್ಲಿ ಪಾಸಾದರು. ನಂದಳಿಕೆ ಲಕ್ಷ್ಮೀನಾರಾಯಣರು (ಮುದ್ದಣ ಕವಿ) ಸಹೋದ್ಯೋಗಿಯಾಗಿ ದುಡಿದರು. ಮಂಜೇಶ್ವರದ ಗೋವಿಂದ ಪೈಯವರು ಶಿಷ್ಯರಾಗಿದ್ದರು. ಬಿ.ಎ ಪದವಿಯನ್ನು ಪಡೆದ ಬಳಿಕ ಮದ್ರಾಸಿನಲ್ಲಿ ಎಲ್ ಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮರಳಿ ಬಂದು ಮಂಗಳೂರು ಕಾಲೇಜಿನ ಉಪಾಧ್ಯಾಯ ವೃತ್ತಿಯನ್ನು ಮುಂದುವರೆಸಿದರು. ಅನತಿ ಕಾಲದಲ್ಲೇ ಮಂಗಳೂರಿನ ವಿದ್ಯಾ ಇಲಾಖೆಯಲ್ಲಿ ಸಬ್ ಅಸಿಸ್ಟಂಟ್ ಶಾಲಾ ಇನ್ಸ್ ಪೆಕ್ಟರಾಗಿ ನೇಮಕಗೊಂಡರು. ಆಮೇಲೆ ಟ್ರೈನಿಂಗ್ ಶಾಲೆಯ ಅಧ್ಯಾಪಕರೂ ಆದರು. ಶಾಲಾ ಇನ್ಸ್‌ಪೆಕ್ಟರಾಗಿದ್ದಾಗ ಉಪಾಧ್ಯಾಯರನ್ನು ಗೌರವದಿಂದ ಬಹುವಚನದಲ್ಲಿ ಮಾತಾಡಿಸಿ, ಮಕ್ಕಳ ಮನಸ್ಸನ್ನು ಆಕರ್ಷಿಸುವ ರೀತಿಯಲ್ಲಿ ಪಾಠ ಹೇಳುವ ಕ್ರಮವನ್ನು ನಯವಾಗಿ ತಿಳಿಹೇಳುವ ಅವರ ಕ್ರಮವೇ ಹೊಸ ತರಹದ್ದಾಗಿದ್ದು, ಇನ್ಸ್ ಪೆಕ್ಟರ್ ಅಂದರೆ ಕಳವನ್ನು ಪತ್ತೆಹಚ್ಚಲು ಬರುವ ಪೊಲೀಸರಲ್ಲ ಎಂದು ಉಪಾಧ್ಯಾರ ಮನೋಭಾವನೆ ಬದಲಾಯಿತು. ಅವರ ಆಗಮನವನ್ನು ಎದುರು ನೊಡುವ, ತಮ್ಮಲ್ಲಿನ ಸಂದರ್ಶನದ ಬಳಿಕ ಮುಂದಿನ ಊರಿಗೆ ಅವರನ್ನು ಮುಟ್ಟಿಸುವ ಉತ್ಸಾಹ ಉಪಾಧ್ಯಾಯರಲ್ಲಿ ಕಾಣಿಸತೊಡಗಿತು.
1921ರಲ್ಲಿ ಅವರನ್ನು ಕೊಡಗಿನ ಶಾಲಾ ಇನ್ಸ್‌ಪೆಕ್ಟರಾಗಿ ವರ್ಗಾವಣೆಗೊಂಡಾಗ, ಅಲ್ಲಿ ತುಸು ಅಸಡ್ಡೆಯಿಂದ ಕೊಡಗಿನ ಜನತೆ ಇವರನ್ನು ಕಂಡರು. ಇನ್ಸ್‌ಪೆಕ್ಟರ್ ಜೆ ಎ ಯೇಟ್ಸನ ಹೊಸ ರೀತಿಯ ಪಾಠಕ್ರಮವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯಗತ ಮಾಡುವದರಲ್ಲಿ ಹೆಚ್ಚಿನ ಶ್ರಮವಹಿಸಿದ್ದರು. ಎರಡು ವರ್ಷಗಳ ನಂತರ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾರನ್ನಾಗಿ ಪಂಜೆಯವರನ್ನು ನೇಮಿಸಲಾಯಿತು. ಅದುವರೆಗೆ ಆ ಶಾಲೆಯ ಮುಖ್ಯೋಪಾಧ್ಯಾರಾಗಿ ಆಂಗ್ಲರೇ ಇದ್ದಿದ್ದರು, ಹೊಸದಾಗಿ ನೇಮಕಗೊಂಡ ದೇಶೀಯ ಮುಖ್ಯೋಪಾಧ್ಯಾಯ ಮಂಗೇಶರಾಯರನ್ನು ಸ್ಥಳೀಯ ಸಹೋದ್ಯೋಗಿಗಳು ತಾತ್ಸಾರದಿಂದ ಕಂಡರು. 1929 ರವರೆಗೆ ಅವರು ಈ ಹುದ್ದೆಯಲ್ಲಿದ್ದು, ನಿವೃತ್ತರಾದರು.
ಓದಿ: ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್ 2
ಪಂಜೆಯವರು ಕನ್ನಡಕ್ಕೆ ಕೊಟ್ಟ ಸೇವೆ ಅನನ್ಯ. ಮನೆಮಾತು ಕೊಂಕಣಿಯಾದರೂ, ಊರ ಜನಬಳಕೆಯ ಭಾಷೆ ತುಳು, ಶಾಲೆಯಲ್ಲಿ ಕಲಿತದ್ದು ಕನ್ನಡ, ಉನ್ನತ ವ್ಯಾಸಂಗಗಳಲ್ಲಿ ಇಂಗ್ಲಿಷ್. ಹೀಗೆ ಹಲವಾರು ಭಾಷೆಗಳ ಪ್ರಭಾವ-ಪರಿಣಿತಿಗಳು ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮವನ್ನು ಬೀರಿದವು.
ಸಂಶೋಧನಾ ಲೇಖನಗಳು ಸಂಗ್ರಹ ‘ಪಂಚಕಜ್ಜಾಯ’, ಕಥಾಸಂಕಲನ ‘ಐತಿಹಾಸಿಕ ಕಥಾವಳಿ’, ಕಾದಂಬರಿ ‘ಕೋಟಿ ಚನ್ನಯ’, ಸಂಪಾದಿತ ಕೃತಿ ‘ಶಬ್ದಮಣಿ ದರ್ಪಣ’, ಶಿಶು ಸಾಹಿತ್ಯ ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಪುಸ್ತಕಗಳನ್ನು ಸಂಪಾದಿಸಿದರು.
1912ರಲ್ಲಿ ಮೊದಲನೆಯ, 1919ರಲ್ಲಿ ಎರಡನೆಯ ಹಾಗೂ 1927ರಲ್ಲಿ ಮೂರನೆಯ ಪದ್ಯಪುಸ್ತಕಗಳು ಹೊರಬಂದು ಪಠ್ಯಕ್ರಮದಲ್ಲಿ ಅಳವಡಿಕೆಯಾದವು. ಸ್ವತಃ ಪಂಜೆಯವರೆ ಈ ಪುಸ್ತಕಗಳಿಗಾಗಿ ಕೆಲವು ಪದ್ಯಗಳನ್ನು ರಚಿಸಿದರು.
ನಂತರದ ದಿನಗಳಲ್ಲಿ ಮ್ಯಾಕ್ ಮಿಲನ್ ಪ್ರಕಟಣ ಸಂಸ್ಥೆಯ ಕೋರಿಕೆಯಂತೆ ಕನ್ನಡದ ಪಠ್ಯ ಪುಸ್ತಕಗಳನ್ನು ಬರೆದರು. ಶಿಕ್ಷಣದ ದೃಷ್ಟಿಯಿಂದ ಹೊಸ ಮಾರ್ಗವನ್ನು ಕಂಡಕೊಂಡ ಪಾಠಪುಸ್ತಕಗಳಿವು. ಪಂಜೆಯವರು ಬರೆದ ಮಕ್ಕಳ ಸಾಹಿತ್ಯವು 22 ಶಿಶುಸಾಹಿತ್ಯವರ್ಗದ ಕಥೆಗಳನ್ನು, 18 ಶಿಶುಗೀತೆಗಳನ್ನು, 12 ಬಾಲಸಾಹಿತ್ಯ ಕಥೆಗಳನ್ನು, 11 ಬಾಲಗೀತೆಗಳನ್ನು ಒಳಗೊಂಡಿದೆ.
ಈ ಹೆಚ್ಚಿನವನ್ನು ಅವರು ’ಕವಿಶಿಷ್ಯ’ ಎಂಬ ಕಾವ್ಯ ನಾಮದೊಂದಿಗೇ ಬರೆದಿದ್ದರು. ಆಗ ಪಂಜೆ ಮಂಗೇಶರಾಯರಷ್ಟು ಪ್ರಸಿದ್ಧರಾಗಿದ್ದವರು ಇನ್ನೊಬ್ಬರಿರಲಿಲ್ಲ, ತಾನು ಕವಿಯ ಶಿಷ್ಯನಷ್ಟೇ, ಎನ್ನುವ ವಿನಯ ಅವರದಾಗಿತ್ತು.
‘ನಾಗರಹಾವೆ ಹಾವೊಳು ಹೂವೆ‘ ಇವರ ಪ್ರಸಿದ್ಧ ಬಾಲಗೀತೆ, ಕವಿತೆಯು ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಕವಿತೆಯಾಗಿದೆ. ‘ತೆಂಕಣ ಗಾಳಿಯಾಟ’(The Frolic in the wind) ಎಂಬ ಕವಿತೆಯ ರೂಪಾಂತರ. ಈ ಪದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಲ ಕರಾವಳಿಯ ಮುಂಗಾರು ಮಳೆಯನ್ನು ತರುವ ಬಿರುಗಾಳಿಯ ಬಿರುಸನ್ನು ಕವನದ ಶಬ್ದಜಾಲ, ಅದರ ಗತಿ, ಧ್ವನಿ, ಎಲ್ಲವೂ ಮೇಳೈಸಿ ಸಾಕ್ಷಾತ್ಕರಿಸುವಂತೆ ಪ್ರತಿಧ್ವನಿಸುತ್ತವೆ.
ಓದಿ: ನಕಲಿ… ನಕಲಿ… ಇಲ್ಲಿ ಎಲ್ಲವೂ ನಕಲಿ… : ಅಸಲಿಯನ್ನೂ ಮರೆಮಾಚಿಸುವ ನಕಲಿ ಜಾಲ
‘ಅಣ್ಣನ ವಿಲಾಪ” ಓ ಕಾಲ್ ಮೈ ಬ್ರದರ್ ಬ್ಯಾಂಕ್ ಟು ಮಿ ” ಎಂಬುದರ ಕನ್ನಡ ಅನುವಾದ. ಇದು ಹೊಸಗನ್ನಡದ ಮೊಟ್ಟಮೊದಲ ಶೋಕಗೀತೆಯಾಗಿದೆ. ಮಂಗೇಶರಾಯರ ಬಲಗೈಯಂತಿದ್ದ ತಮ್ಮನೊಬ್ಬನ ಅನಿರೀಕ್ಷಿತ ಸಾವಿನ ದುಃಖವನ್ನು ಬಹುಕಾಲ ಯಾರಲ್ಲೂ ತೋಡಿಕೊಳ್ಳದೆ ಎದೆಯಲ್ಲಿಟ್ಟುಕೊಂಡಿದ್ದು ನಂತರ ’ಎಲ್ಲಿ ಹೋದನು ಅಮ್ಮ’ ಎಂಬ ಸೊಲ್ಲಿನಿಂದ ಆರಂಭವಾಗುವ ಕವನವಿದು.
ಕನ್ನಡದಲ್ಲಿ ಮೊದಲ ಬಾರಿಗೆ ಕಥಾನಕವನಗಳನ್ನು ಬರೆದವರೂ ಪಂಜೆಯವರೆ. ನಕ್ಷತ್ರ ಕವಿತೆ ಜೇನ್ ಟೇಲರ್ ಅವರ ಕವಿತೆಯ ಕನ್ನಡ ಅನುವಾದ. ಡೊಂಬರ ಚೆನ್ನ ಯು ಸ್ವತಂತ್ರವಾದ ಕಥನ ಕವನ, ರಂಗಸೆಟ್ಟಿ, ನಾಗಣ್ಣನ ಕನ್ನಡಕ, ಕಡೆಕಂಜಿ (The last of the flock), ಇವರಪ್ರಸಿದ್ಧ ಕಥನ ಕವನಗಳು.
‘ಹೊಲೆಯನ ಹಾಡು’ ದಲಿತರ ಬಗೆಗೆ ಕನ್ನಡದಲ್ಲಿ ಬಂದ ಮೊದಲ ಪದ್ಯ. 1900 ರಲ್ಲಿ ಪಂಜೆಯವರು ಬರೆದ ‘ನನ್ನ ಚಿಕ್ಕ ತಾಯಿ’ ಎಂಬ ಕಥೆ ಕನ್ನಡದ ಮೊದಲ ಸಣ್ಣ ಕಥೆಯೆಂದು ಗುರುತಿಸಲ್ಪಟ್ಟಿದೆ.
ಕಥ ಸಂಕಲನಗಳು ಕಳೆದ 20ನೇ ಶತಮಾನದ ಆದಿಯಲ್ಲಿ ಅವರ ಭಾವಂದಿರಾದ ಬೆನೆಗಲ್ ರಾಮರಾಯರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಪ್ರಕಟಗೊಳ್ಳುತ್ತಿದ್ದ ’ಸುವಾಸಿನಿ’ ಎನ್ನುವ ಒಂದು ಮಾಸಿಕ ಮತ್ತು ಅಲ್ಲಿನ ಮಿಶನೆರಿಗಳು ಪ್ರಕಾಶಿಸುತ್ತಿದ್ದ ’ಸತ್ಯ ದೀಪಿಕೆ’ಎಂಬ ವಾರಪತ್ರಿಕೆಯಲ್ಲಿ ಪಂಜೆಯವರು ಅನೇಕ ಹರಟೆ, ಕಥೆ, ಕವನ, ಇತ್ಯಾದಿಗಳನ್ನು ಬರೆದು ಪ್ರಕಟಿಸಿದ್ದರು. ಇವುಗಳಲ್ಲಿ ಅವರು ’ರಾ.ಮ.ಪಂ.’ ಮತ್ತು ’ಹರಟೆಮಲ್ಲ’ ಎಂಬ ಗುಪ್ತನಾಮವನ್ನು ಬಳಸುತ್ತಿದ್ದರು.
‘ನನ್ನ ಚಿಕ್ಕ ತಾಯಿ, ನನ್ನ ಚಿಕ್ಕ ತಂದೆ, ನನ್ನ ಹೆಂಡತಿ, ಭರತ ಶ್ರಮಣ, ಮೊದಲಾದ ಹಾಸ್ಯ, ವಿಡಂಬನೆಗಳನ್ನು ಎಷ್ಟು ನೈಪುಣ್ಯದಿಂದ ರಚಿಸುತ್ತಿದ್ದರೋ, ಅಷ್ಟೇ ಪ್ರಬುದ್ಧತೆಯಿಂದ ವೀರಮತಿ, ಪೃಥುಲಾ, ಶೈಲಿನಿ, ಮುಂತಾದ ಐತಿಹಾಸಿಕ ಕಥೆಗಳನ್ನು ಬರೆದರು. ತುಳುನಾಡಿನ ಜಾನಪದ ಕತೆ ’ಕೋಟಿ ಚನ್ನಯ’ಕಥೆಯನ್ನೂ ಬರೆದರು. ಕೊಡಗಿನವರು ಅವರನ್ನು ಉದಾರತೆಯಿಂದ ನಡೆಸಿಕೊಳ್ಳದಿದ್ದರೂ, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ, ಕೊಡವರ ಕೆಚ್ಚೆದೆಯ ಶೌರ್ಯಕ್ಕೆ ಮನಸೋತ ಪಂಜೆಯವರು ರಚಿಸಿದ ’ಹುತ್ತರಿ ಹಾಡು’ ಎಂಬ ಪದ್ಯ, “ಗುಣಕೆ ಮತ್ಸರವುಂಟೇ?” ಎಂಬವರ ಧೋರಣೆಯನ್ನೆತ್ತಿ ಸಾರುತ್ತದೆ.
“ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ…” ಎಂದು ಆರಂಭವಾಗಿ, “ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?” ಎಂದು ಸಾಗಿ, “ಅವರೇ ಸೋಲ್ ಸಾವರಿಯರು! …ಅವರೇ ಕೊಡಗಿನ ಹಿರಿಯರು!” ಎಂದು ಬಣ್ಣಿಸಿ, ’ಕವಿಶಿಷ್ಯ’ರು ತಮ್ಮ ದೊಡ್ಡತನವನ್ನು ಮೆರೆದರು!
ಓದಿ: ಪೆಟ್ರೋಲಿಯಂ ಉತ್ಪಾದನಾ ಮಟ್ಟ ಕಡಿಮೆಯಾಗಿರುವುದೆ ಬೆಲೆ ಏರಿಕೆಗೆ ಕಾರಣ :ಧರ್ಮೇಂದ್ರ ಪ್ರಧಾನ್
ಇವಲ್ಲದೆ ಕಿರು ಕಾದಂಬರಿ, ಪತ್ತೇದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋದನೆ, ಹರಟೆ, ವೈಚಾರಿಕ ಲೇಖನಗಳನ್ನೂ ಸಹ ಪಂಜೆಯವರು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.
ನಂತರದ ಕೆಲವು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿತು. ಕನ್ನಡದವರಿಗಷ್ಟೇ ಪರಿಚಯವಿದ್ದ ಪಂಜೆಯಚರು ಸಾಹಿತ್ಯ ಪರಿಷತ್ತಿನ ಜನನದಿಂದ ಖ್ಯಾತಿಗಳಿಸಿದರು. ಪಂಜೆಯವರು ಸಾಹಿತ್ಯ ರಂಗದಲ್ಲಿ ಶ್ರೇಷ್ಠರಾದರು.
ಸರಸ ಮಾತುಗರಿಕೆ, ವಿನೋದ ಭಾವನೆ, ಒಳ್ಳೆಯ ಭಾಷಣಕರರು, ಉತ್ತಮ ಗಾಯಕರು ಆದ ಪಂಜೆ ಮಂಗೇಶರಾಯರ ಬಗ್ಗೆ ಕುವೆಂಪುರವರು ಬರೆದ ಈ ಪದ್ಯ ಪಂಜೆಯವರ ವ್ಯಕ್ತಿತ್ವವನ್ನು ಬಣ್ಣಿಸುತ್ತದೆ.
“ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯನಡೆಯ ಮಡಿಯಲಿ,
ನುಡಿಯ ಸವಿಯಲ್ಲಿ, ನಿಮ್ಮ ಬಗೆಹಸುಳೆ ನಗೆ
ಕೆಳೆಯೊಲುಮೆ ಹಗೆತನಕೆ ಹಗೆಕಪ್ಪುರಕೆ
ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯಸಂಗಮಿಸಿದಂತೆ ರಂಜಿಸಿದೆ ಜೀವನಸೂರ್ಯನಿಮ್ಮದೆಮ್ಮಯ ನುಡಿಯ ಗುಡಿಗೆ
ಮಂಗಳ ಕಾಂತಿಪರಿಮಳಂಗಳನಿತ್ತು, ನಿಮ್ಮ ಬಾಳಿನ ಶಾಂತಿಮತ್ತೆ ರಸಕಾರ್ಯಗಳಿಗುಪಮೆ ವೀಣಾತೂರ್ಯ !
ಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯನೆ ಮೆರೆದಿರಯ್ಯ ಚಪ್ಪಾಳೆ
ಮೂಗುದಾರನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿಚೇತನಕೆ ಕೀರ್ತಿಲೋಭಕೆ ಬಾಗಿಬಾಳ್ಬಂಡಿ
ನೊಗಕೆ ಹೆಗಲಿತ್ತವರು ನೀವಲ್ಲತೇರ್ಮಿಣಿಯ
ಸೆಳೆದಿರಲ್ಲದೆ ಮತ್ತೆ ಮಣಿದಿಲ್ಲ”
1934 ರಲ್ಲಿ ರಾಯಚೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಒಬ್ಬ ಸೂಕ್ಷ್ಮ ಸಂವೇದನೆಯ, ರಸಿಕ, ಕವಿ, ವಿಮರ್ಶಕ, ಸಾಹಿತಿಯ ಮನವೊಲಿಸಿ ಕನ್ನಡಿಗರು ಕೃತಕೃತ್ಯರಾದರು. ಪಂಜೆ ಮಂಗೇಶರಾಯರು 1937 ಅಕ್ಟೋಬರ್ 24 ರಂದು ತಮ್ಮ 63ರ ಪ್ರಾಯದಲ್ಲಿ ನಿಧನರಾದರು.
ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ
ಓದಿ: ಯತ್ನಾಳ್ ರಿಗೆ ದೆಹಲಿಗೆ ಬುಲಾವ್ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ: ಸಚಿವ ಬಿ.ಸಿ.ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.