ಗಣರಾಜ್ಯ ಹಬ್ಬಕ್ಕೆ ಆಸಿಯಾನ್‌ ಅತಿಥಿಗಳು


Team Udayavani, Jan 25, 2018, 6:51 AM IST

588774.jpg

25 ವರ್ಷಗಳ ಬಾಂಧವ್ಯವೊಂದನ್ನು ಸಾರುವಂತೆ, ಇದೇ ಮೊದಲ ಬಾರಿಗೆ 10 ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂಥ ಗಣರಾಜ್ಯ ದಿನಾಚರಣೆಗೆ ಭಾರತೀಯರು ಸಾಕ್ಷಿಯಾಗಲಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್‌)ದ ನಾಯಕರನ್ನು ಗಣರಾಜ್ಯ ದಿನಕ್ಕೆ ಪ್ರಧಾನಿ ಮೋದಿ ಅವರು ಆಹ್ವಾನಿಸಿದ್ದಾರೆ. ಈ ಗಣ್ಯರ ಆಗಮನದ ಮೂಲಕ ಪ್ರಧಾನಿ ಮೋದಿ ಅವರ “ಆ್ಯಕ್ಟ್ ಈಸ್ಟ್‌ ಪಾಲಿಸಿ’ಗೂ ಬಲ ಬರಲಿದ್ದು, ಆಸಿಯಾನ್‌ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಮತ್ತೂಂದು ಕಡೆ, ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನಾದ ಪ್ರಾಬಲ್ಯವನ್ನು ತಡೆಯುವಂಥ ಕೆಲಸಕ್ಕೂ ಇದು ಪರೋಕ್ಷವಾಗಿ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಆಸಿಯಾನ್‌ ಜತೆಗಿನ ಭಾರತದ ಸಂಬಂಧ, ಈ ಬಾರಿ ಗಣರಾಜ್ಯದ ವೈಶಿಷ್ಟéಗಳ ಮಾಹಿತಿ ಇಲ್ಲಿದೆ..

ಪಾಲ್ಗೊಳ್ಳುವಿಕೆಗೆ 2 ಕಾರಣಗಳು

ಒಂದು ಆರ್ಥಿಕ ಕಾರಣವಾದರೆ, ಮತ್ತೂಂದು ರಕ್ಷಣೆಗೆ ಸಂಬಂಧಿಸಿದ್ದು.  ಆಸಿಯಾನ್‌ ಜೊತೆ ಭಾರತವು ಸಂಬಂಧ ವೃದ್ಧಿಸಿಕೊಳ್ಳಲು ನೆರೆರಾಷ್ಟ್ರ ಚೀನಾದ ಆಕ್ರಮಣಕಾರಿ ಹಾಗೂ ವಿಸ್ತರಣಾ ಪ್ರವೃತ್ತಿಯೂ ಕಾರಣ. ಚೀನಾದಿಂದ ಅಂತರ ಕಾಯ್ದುಕೊಳ್ಳಬೇಕೆಂದರೆ, ಆಸಿಯಾನ್‌ ದೇಶಗಳಿಗೆ ಭಾರತ ಬೇಕು, ಅಂತೆಯೇ ಭಾರತಕ್ಕೆ ಆಸಿಯಾನ್‌ ದೇಶಗಳು ಬೇಕು. ಆಸಿಯಾನ್‌ ಹಾಗೂ ಭಾರತವು ಪ್ರಾದೇಶಿಕ ಸಮೂಹವನ್ನು ರಚಿಸಿಕೊಳ್ಳಲು ಇದೂ ಒಂದು ಕಾರಣ. ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲೂ ಈ ಬಂಧ ಅತ್ಯಗತ್ಯ.

ಆಸಿಯಾನ್‌ ರಾಷ್ಟ್ರಗಳ ಒಕ್ಕೂಟ

1961: ಜು.31ರಂದು ಸ್ಥಾಪನೆಗೊಂಡ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ. ಫಿಲಿಪ್ಪೀನ್ಸ್‌, ಫೆಡರೇಷನ್‌ ಆಫ್ ಮಲಯಾ ಮತ್ತು ಥಾಯ್ಲೆಂಡ್‌ ಆರಂಭಿಕ ಸದಸ್ಯ ರಾಷ್ಟ್ರಗಳು. 

1967 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌ ರಾಷ್ಟ್ರಗಳು ಘೋಷಣೆ ಅಂಗೀಕರಿಸಿದವು.

1984 : ಜ.7ರಂದು ಬ್ರೂನೈ ಸದಸ್ಯ ರಾಷ್ಟ್ರವಾಯಿತು. 
ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ, ರಾಜಕೀಯ, ಭದ್ರತೆ, ಮಿಲಿಟರಿ, ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಮತ್ತು ಏಷ್ಯಾದ ಇತರ ರಾಷ್ಟ್ರಗಳ ನಡುವೆ ಸಮಾನ ಚಿಂತನೆಗಳ ಹಂಚುವಿಕೆ ಅದರ ಉದ್ದೇಶ

ಆಸಿಯಾನ್‌ ಮತ್ತು ಭಾರತ
 1992  ಭಾರತವು ಆಸಿಯಾನ್‌  ರಾಷ್ಟ್ರಗಳ ಒಕ್ಕೂಟ ಪ್ರವೇಶಿಸಿದ್ದು.

2003  ಅಕ್ಟೋಬರ್‌ 8: ಒಪ್ಪಂದಕ್ಕೆ ಸಹಿ ಹಾಕಿದ್ದು. ಇಂಡೋನೇಷ್ಯಾದ ಬಾಲಿಯಲ್ಲಿ. 

2012  ಡಿಸೆಂಬರ್‌ 20-21: ನವದೆಹಲಿಯಲ್ಲಿ ಇತ್ತೀಚಿನ ಆಸಿಯಾನ್‌ ರಾಷ್ಟ್ರಗಳ ಸಮ್ಮೇಳನ

25 ಆಸಿಯಾನ್‌ ಜತೆಗಿನ ಭಾರತದ ಸಂಬಂಧದ ಸಮಯ 

8  3.6 ವರ್ಷದಲ್ಲಿ ಮೋದಿ ಭೇಟಿ ನೀಡಿದ ಆಸಿ ಯಾನ್‌ ರಾಷ್ಟ್ರಗಳು

ಈ ವರ್ಷದ ಗಣರಾಜ್ಯೋತ್ಸವ

69 ನೇ ಗಣ ರಾಜ್ಯೋತ್ಸವ
10  ಮುಖ್ಯ ಅತಿಥಿಗಳು
700  ವಿದ್ಯಾರ್ಥಿಗಳಿಂದ (ಅತಿಥಿ ರಾಷ್ಟ್ರಗಳ) ಕಾರ್ಯಕ್ರಮ
113  ಬಿಎಸ್‌ಎಫ್ ಮಹಿಳಾ ಸಿಬ್ಬಂದಿ ಸಾಹಸ ಪ್ರದರ್ಶನ
100 ಏಜೆನ್ಸಿಗಳಿಂದ ಗಣರಾಜ್ಯ ದಿನಕ್ಕೆ ಸಿದ್ಧತೆ
100  ಅಡಿ- ಅಗಲದ ವೇದಿಕೆ ನಿರ್ಮಾಣ
22 ಮಂದಿ. ವೇದಿಕೆ ಯಲ್ಲಿ ಆಸೀನ ರಾಗುವ ಗಣ್ಯರು
9  ಪ್ರತಿ ಆಸಿಯಾನ್‌ ನಾಯಕನ ಬೆಂಗಾವಲು ಪಡೆಗೆ ಮೀಸಲಿಟ್ಟ ಕಾರುಗಳ ಸಂಖ್ಯೆ
3   ದಿನಗಳು. ಆಸಿಯಾನ್‌ ನಾಯಕರು ತಂಗಲಿರುವುದು

1.ಬ್ರೂನೈ
1992ರಲ್ಲಿ ದೊರೆ ಸುಲ್ತಾನ್‌ ಹಸನ್‌ ಬೊಲ್ಕಿಯಾ ಭಾರತ ಭೇಟಿಯೊಂದಿಗೆ ಎರಡೂ ದೇಶಗಳ ಸಂಬಂಧ ಗಟ್ಟಿ ಆಯಿತು. ಆರ್ಥಿಕತೆಗೆ ಸಂಬಂಧಿಸಿ ಭಾರತ-ಬ್ರೂನೈ ನಡುವೆ 5 ಒಪ್ಪಂದಗಳಾಗಿವೆ. ನಮಗೆ ಬ್ರೂನೈಯಿಂದ ಕಚ್ಚಾತೈಲ ಪೂರೈಕೆಯಾದರೆ, ಭಾರತ ಬ್ರೂನೈಗೆ ವೃತ್ತಿಪರ,ಅರೆ-ಕುಶಲ ಕಾರ್ಮಿಕರನ್ನು ಕಳುಹಿಸಿದೆ. ಬ್ರೂನೈ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಕಾಣಸಿಗುವುದು ನಮ್ಮ ಡಾಕ್ಟರ್‌ಗಳೇ! 

2.ಸಿಂಗಾಪುರ
1965 ಆ.22ರಿಂದ ರಾಜತಾಂತ್ರಿಕ ಸಂಬಂಧವಿದೆ. ಇಲ್ಲಿ ಸುಮಾರು 3 ಲಕ್ಷ ಮಂದಿಯಷ್ಟು ಭಾರತೀಯ ಮೂಲದವರು ನೆಲೆಸಿದ್ದಾರೆ. ಆ ದೇಶದ ಜತೆ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ)ಕ್ಕೆ ಸಹಿ ಹಾಕಲಾಗಿದೆ. ಲೀ ಹೀಸಿಂಗ್‌ ಸದ್ಯ ಅಲ್ಲಿನ ಪ್ರಧಾನಿ.

3.ವಿಯೆಟ್ನಾಂ
ಸುಮಾರು 2ನೇ ಶತಮಾನದಿಂದಲೂ ಈ ದೇಶದ ಜತೆ ಬಾಂಧವ್ಯ ಇದೆ. 1972ರಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. 1975ರಲ್ಲಿ  ವಿಯೆಟ್ನಾಂಗೆ ಭಾರತ ಸರ್ಕಾರದ ವತಿಯಿಂದ ವಾಣಿಜ್ಯ  ಸಂಬಂಧಕ್ಕೆ ಸಹಿ ಹಾಕಲಾಯಿತು ಮತ್ತು “ಅತ್ಯಂತ ಸ್ನೇಹಯುತ ರಾಷ್ಟ್ರ’ ಎಂಬ ಮಾನ್ಯತೆ ನೀಡಲಾಯಿತು. ನೊಗ್ವೆನ್‌ ಕ್ಸುವಾನ್‌ ಸದ್ಯದ ಪ್ರಧಾನಿ.

4.ಕಾಂಬೋಡಿಯಾ
ಚೀನಾಗೆ ಹೋಲಿಸಿದರೆ ಕಾಂಬೋಡಿಯಾದಲ್ಲಿ ಭಾರತದ ಉತ್ಪಾದನಾ ವಲಯದ ಪ್ರಭಾವ ಕಡಿಮೆಯಿದೆ. ಆದರೆ, ಪ್ರಧಾನಿ ಮೋದಿ ಅವರು ತಮ್ಮ “ಆ್ಯಕ್ಟ್ ಈಸ್ಟ್‌ ಪಾಲಿಸಿ’ ಘೋಷಿಸಿದ ಬಳಿಕ ಭಾರತದ ಹಲವಾರು ನಿಯೋಗಗಳು ಕಾಂಬೋಡಿಯಾಗೆ ತೆರಳಿ, ಅಲ್ಲಿನ ಹೂಡಿಕೆ ಮತ್ತು ವ್ಯಾಪಾರದ ಅವಕಾಶಗಳ ಬಗ್ಗೆ ಪರಿಶೀಲಿಸಿ ಬರುತ್ತಿವೆ. ಹಾಲಿ ಪ್ರಧಾನಿ ಹೂ ಸೆನ್‌ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

5.ಮ್ಯಾನ್ಮಾರ್‌
ಮ್ಯಾನ್ಮಾರ್‌ ಜತೆಗಿನ ಭಾರತದ ಸಂಬಂಧ ಬಹಳ ಹಳೆಯದು. 1948ರಿಂದಲೂ ಆ ದೇಶದೊಂದಿಗೆ ಉತ್ತಮ ಸಂಬಂಧವಿದೆ. ವಿವಿಧ ಕ್ಷೇತ್ರಗಳಲ್ಲಿ ಒಪ್ಪಂದವೂ ಏರ್ಪಟ್ಟಿದೆ. ಆ ದೇಶದ ಸೇನೆಯ ಆಧುನೀಕರಣಕ್ಕೂ ಭಾರತ ನೆರವು ನೀಡಿದೆ. 2001ರಲ್ಲಿ ಎರಡೂ ದೇಶಗಳನ್ನು ಸಂಪರ್ಕಿಸುವ 250 ಕಿ.ಮೀ.ನ ತಮು-ಕಲೇವಾ-ಕಲೆಮ್ಯೋ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಇದನ್ನು “ಇಂಡೋ-ಮ್ಯಾನ್ಮಾರ್‌ ಫ್ರೆಂಡ್‌ಶಿಪ್‌ ರೋಡ್‌’ ಎನ್ನಲಾಗುತ್ತದೆ. ಮ್ಯಾನ್ಮಾರ್‌ ಜತೆಗಿನ ಭಾರತದ ಸಂಬಂಧದ ಹಿಂದೆ ಚೀನಾದ ಪ್ರಾಬಲ್ಯವನ್ನು ಹತ್ತಿಕ್ಕುವಂಥ ವ್ಯೂಹಾತ್ಮಕ ತಂತ್ರವೂ ಇದೆ. ಅಲ್ಲಿನ ನಾಯಕಿ ಆಂಗ್‌ ಸಾನ್‌  ಸೂಕಿ.

6.ಮಲೇಷ್ಯಾ
ಶತಮಾನಗಳಿಂದ ಆ ದೇಶದ ಜತೆ ಸಂಬಂಧ ಇತ್ತು. ಸ್ವಾತಂತ್ರಾé ನಂತರ 1957ರಲ್ಲಿ ಆ ರಾಷ್ಟ್ರದ ಜತೆ ದ್ವಿಪಕ್ಷೀಯ ಬಾಂಧವ್ಯ ಹೊಂದಲಾಗಿದೆ. ಆ ವರ್ಷದಿಂದ ಈಚೆಗೆ ಹಲವಾರು ಬಾರಿ ದ್ವಿಪಕ್ಷೀಯ ಒಪ್ಪಂದ, ನಾಯಕರ ಭೇಟಿಗಳು ನಡೆದಿವೆ. ಮೊಹಮ್ಮದ್‌ ನಜೀಬ್‌ ಬಿನ್‌ ಟುನ್‌ ಹಾಜಿ ಅಬ್ದುಲ್‌ ರಜಾಕ್‌ ಸದ್ಯದ ಪ್ರಧಾನಿ. 2009ರಿಂದ ಅಧಿಕಾರದಲ್ಲಿದ್ದಾರೆ.

7.ಥಾಯ್ಲೆಂಡ್‌
1947ರಿಂದಲೇ ಥಾಯ್ಲೆಂಡ್‌ ಜತೆ ರಾಜತಾಂತ್ರಿಕ ಸಂಬಂಧವಿದೆ. ಅಂಡಮಾನ್‌-ನಿಕೋಬಾರ್‌ ದ್ವೀಪ ಸಮೂಹದಲ್ಲಿ ಆ ದೇಶದ ಜತೆಗೆ ಅಂತಾರಾಷ್ಟ್ರೀಯ ಗಡಿ ಇದೆ. ಎರಡೂ ದೇಶಗಳ ನಾಯಕರು ಹಲವಾರು ಬಾರಿ ದ್ವಿಪಕ್ಷೀಯ ಭೇಟಿ ನಡೆಸಿದ್ದಾರೆ. ಪ್ರಯುತ್‌ ಚಾನ್‌ ಒ ಚ ಸದ್ಯ ಅಲ್ಲಿನ ಪ್ರಧಾನಿ. 

8.ಫಿಲಿಪ್ಪೀನ್ಸ್‌
ಚಾರಿತ್ರಿಕವಾಗಿ ಶತಮಾನಗಳಿಂದ ಬಾಂಧವ್ಯ ಇದ್ದರೂ 1949ರ ನ.26ರಂದು ರಾಜತಾಂತ್ರಿಕ ಬಾಂಧವ್ಯ ಶುರುವಾ­ಯಿತು. ವ್ಯಾಪಾರ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಇಲ್ಲಿನ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಜನಪದ ಸಂಸ್ಕೃತಿಯ ಮೇಲೂ ಭಾರತದ ಪ್ರಭಾವ ಸಾಕಷ್ಟಿದೆ. ರೋಡ್ರಿಗೋ ಡುಟರ್ಟೆ ಅವರು ಸದ್ಯ ಫಿಲಿಪ್ಪೀನ್ಸ್‌ನ ಅಧ್ಯಕ್ಷರಾಗಿದ್ದಾರೆ.

9. ಇಂಡೋನೇಷ್ಯಾ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಭಾರತದ ಜತೆ ಇಂಡೋನೇಷ್ಯಾ ಕೂಡ ಇದೆ. ಭಾರತ ಮತ್ತು ಇಂಡೋನೇಷ್ಯಾದ ಸಂಬಂಧ ರಾಮಾಯಣ ಕಾಲದಿಂದಲೂ ಇದೆ ಎಂಬ ಮಾತಿದೆ. ರಾಮಾಯಣದಲ್ಲಿ ಬರುವ “ಯವದ್ವೀಪಾ’ ಇರುವುದು ಜಾವಾದಲ್ಲಿ. ಇದಲ್ಲದೆ, ಎರಡೂ ದೇಶಗಳ ನಡುವೆ ಆರ್ಥಿಕ ಸಂಬಂಧವೂ ಉತ್ತಮವಾಗಿದೆ. ಈಗ ಜೋಕೋ ವಿಡೋಡೋ ಅವರು ಇಂಡೋನೇಷ್ಯಾದ ಅಧ್ಯಕ್ಷರಾಗಿದ್ದಾರೆ.

10.ಲಾವೋಸ್‌
ಭಾರತ ಮತ್ತು ಲಾವೋಸ್‌ನದ್ದು 60 ವರ್ಷಗಳ ಹಿಂದಿನ ಬಾಂಧವ್ಯ. ಹಲವು ಕ್ಷೇತ್ರಗಳಲ್ಲಿ ಸಹಕಾರದ ಒಪ್ಪಂದ ನಡೆದಿದೆ. ಅಲ್ಲಿ ನೀರಾವರಿ ಮತ್ತು ಜಲವಿದ್ಯುತ್‌ ಯೋಜನೆಗಾಗಿ ಭಾರತ ಹಣಕಾಸಿನ ನೆರವನ್ನೂ ನೀಡಿದೆ. ಅಲ್ಲಿನ ರಕ್ಷಣಾ ಪಡೆಗಳಿಗೆ ಭಾರತ 50 ಪ್ಯಾರಾಚೂಟ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಅಲ್ಲಿ ಭಾರತವು ಸೂರ್ಯ ಕಿರಣ್‌ ಏರ್‌ಶೋ ಕೂಡ ಆಯೋಜಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಸಿಗಬೇಕೆಂಬ ಭಾರತದ ಪ್ರಯತ್ನಕ್ಕೆ ಲಾವೋಸ್‌ ಬೆಂಬಲ ನೀಡುತ್ತಲೇ ಬಂದಿದೆ. ಬೌನ್‌ಹ್ಯಾಂಗ್‌ ವೊರಾಚಿತ್‌ ಅವರು ಲಾವೋಸ್‌ನ ಸದ್ಯದ ಅಧ್ಯಕ್ಷ.

ಹಲೀಮತ್‌ ಸಅದಿಯಾ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

books-colomn

Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ

Agriculture: ಕಂದಕೂರು ಗ್ರಾಮ- ನಿವೃತ್ತರ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ

science-AI-2

ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ

16

Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.