Politics ವ್ರತವಾಗಿ ಸ್ವೀಕರಿಸಿದ ಮಹಾನ್‌ ಮುತ್ಸದ್ದಿ


Team Udayavani, Dec 25, 2023, 7:30 AM IST

1-eqewqew

ರಾಜಕಾರಣವೆಂಬ ಚದುರಂ ಗದಾಟದಲ್ಲಿ ಸನ್ನಡತೆ ಅದರಲ್ಲೂ ಪ್ರಾಮಾಣಿಕತೆಯಿಂದ ಹೆಜ್ಜೆ ಹಾಕು ವ, ನುಡಿದಂತೆ ನಡೆಯುವುದು ಅಷ್ಟೊಂದು ಸುಲಭದ ಮಾತೇನಲ್ಲ. ಆದರೆ ಎಂತಹ ಸಂದಿಗ್ಧ ಸಮಯ ದಲ್ಲೂ ನಂಬಿದ ತತ್ತÌಗಳಲ್ಲಿ ರಾಜಿ ಮಾಡಿಕೊಳ್ಳದೆ ರಾಜಕೀಯದ ಶತ್ರು ಗಳಿಂದಲೂ ವೈಯಕ್ತಿಕ ಟೀಕೆಗೊ ಳಗಾಗದ ಒಬ್ಬನೇ ಒಬ್ಬ ನಾಯಕ ದೇಶದ ರಾಜಕಾರಣದಲ್ಲಿ ಶಾಶ್ವತವಾಗಿ ಕಂಡು ಬಂದಿದ್ದರೆ ಅದು ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಮಾತ್ರ.

ಸಂಸದೀಯ ನಡವಳಿಕೆಯನ್ನು ಚಾಚು ತಪ್ಪದೆ ಪಾಲಿಸಿ, ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲದೆ, ರಾಜಧರ್ಮವನ್ನು ಬದುಕಿನುದ್ದಕ್ಕೂ ಪಾಲಿಸಿದ ಅಟಲ್‌ ಬಿಹಾರಿ ವಾಜಪೇಯಿ ರಾಜಕಾರಣವೆಂಬ ಕಣಜಕ್ಕೆ ಅಮೃತದ ಬಳ್ಳಿ ನೆಟ್ಟವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯನ್ನು ಒಡ ಲೊಳಗೆ ಬಿತ್ತಿಕೊಂಡ ವಾಜಪೇಯಿ ಸಾರ್ವಜನಿಕ ಜೀವನದಲ್ಲಿ ದೃಢ ಹೆಜ್ಜೆ ಇಟ್ಟವರು. ಕಾವ್ಯಮಯ ವಾದ ಭಾಷೆ, ಪ್ರಾಸಬದ್ಧ ಮಾತು, ಚಾಟಿಯೇಟಿನಂತಹ ನುಡಿ, ನೆಲದ ಮಣ್ಣಿನ ಸೊಗಡು ಎದುರಾಳಿಗಳಿಗೆ ಚುಚ್ಚಿದರೂ ಬೆಚ್ಚನೆ ಅನುಭವ ಕೊಡುವ ಅರ್ಥಗರ್ಭಿತ ಹೃದಯ ಮುಟ್ಟುವ ವಾಕ್ಯ ಅಟಲ್‌ಜೀಯವರಿಗೆ ಕರಗತ.

ವಾಜಪೇಯಿಯವರು 1924 ಡಿಸೆಂ ಬರ್‌ 25 ರಂದು ಮಧ್ಯಪ್ರದೇಶದ ಗ್ವಾಲಿ ಯರ್‌ನಲ್ಲಿ ಜನಿಸಿ ಭಾರತಾಂಬೆಯ ಮಡಿಲು ಸೇರಿದರು. ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣದೇವಿಯವರು ತಮ್ಮ ಆದರ್ಶ ಜೀವನದ ಬದುಕಿನ ದಾಂಪತ್ಯದಲ್ಲಿ ಪಡೆದ ಶ್ರೇಷ್ಠ ಪುತ್ರರತ್ನ ಅಟಲ್‌ ಎಂದು ನುಡಿದಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಅಟಲ್‌ಜೀ ಜೈಲು ಸೇರಿದ್ದರು. ಅನಂತರ ನಡೆದ 1977ರ ಚುನಾವಣೆಯಲ್ಲಿ ಜಯ ಪ್ರಕಾಶ ನಾರಾಯಣರ ಕರೆಯಂತೆ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಅನ್ನು ವಿರೋಧಿಸಲೋಸುಗ ತಾವೇ ಕಟ್ಟಿ ಬೆಳೆಸಿದ ಜನಸಂಘವನ್ನು ವಿಸರ್ಜಿಸಿ ವ್ಯಕ್ತಿಗಿಂತ ಪಾರ್ಟಿ ಮುಖ್ಯ, ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಪಾರ್ಟಿಗಿಂತ ದೇಶ ಮುಖ್ಯ ಎಂದು ಅಟಲ್‌ಜೀ ಜನ ಸಂಘದ ವಿಸರ್ಜನೆಗೆ ಕಾರಣ ಕೊಟ್ಟಿದ್ದರು. ಈ ನಾಡಿನ ವ್ಯಕ್ತಿ ಸ್ವಾತಂತ್ರÂ, ವಾಕ್‌ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಕಸಿದು ಕೊಂಡ ಕಾಂಗ್ರೆಸ್‌ನ್ನು ಸೋಲಿಸಿ ಭಾರ ತದ ಮಹಾಜನತೆ ಜನತಾ ಪಕ್ಷವನ್ನು ಗೆಲ್ಲಿಸಿದ್ದರು. ಅಂದಿನ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ ಯವರ ಸಚಿವ ಸಂಪುಟದಲ್ಲಿ ಅಟಲ್‌ಜೀ ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದರು. ಅವರ ವಿದೇಶಾಂಗ ನೀತಿಗಳು ಇಂದಿಗೂ ಕೇವಲ ರಾಷ್ಟ್ರ ಮಾತ್ರವಲ್ಲದೆ ಇಡೀ ವಿಶ್ವಕ್ಕೇ ಮಾದರಿಯಾಗಿವೆ.

ಅಟಲ್‌ಜೀಯವರ ಪ್ರತೀ ಹೆಜ್ಜೆ, ನಡೆನುಡಿ, ಕೆಲಸ ಕಾರ್ಯಗಳು ರಾಷ್ಟ್ರ ಮಾತ್ರ ಅಲ್ಲ ಪ್ರಪಂಚದ ಗೌರವಕ್ಕೆ ಪಾತ್ರ ವಾಗಿತ್ತು. ಪಾಕಿಸ್ಥಾನದೊಡನೆ ಯುದ್ದ ನಡೆದು ಬಾಂಗ್ಲಾ ವಿಮೋಚನೆಯಾದಾಗ ಪಾರ್ಲಿಮೆಂಟಿನಲ್ಲಿ ಮಾತಾಡಿದ ಅಟಲ್‌ಜೀ ಇಂದಿರಾ ಗಾಂಧಿಯನ್ನು ಭಾರತದ ದುರ್ಗೆ ಎಂದು ಪ್ರಶಂಸಿ ಸಿದ್ದರು. ಅಂದರೆ ರಾಷ್ಟ್ರದ ಪರವಾಗಿ ಮಾತನಾಡುವಾಗ ಪಾರ್ಟಿಯನ್ನು ಮೀರಿ ಸಮರ್ಥಿಸುವ ಶಕ್ತಿ ವಾಜಪೇಯಿಯವರಲ್ಲಿ ಮಾತ್ರ ಕಾಣಬಹುದಾಗಿತ್ತು.
1996ರಲ್ಲಿ ಪ್ರಥಮ ಬಾರಿಗೆ ಅಟಲ್‌ ಬಿಹಾರಿ ವಾಜಪೇಯಿ ಎಂಬ ಕವಿ ಹೃದ ಯದ ಕನಸುಗಾರ ಭಾರತದ ಪ್ರಧಾನಿ ಯಾಗುತ್ತಾರೆ. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳ ಕಾಲದಲ್ಲೇ ಪ್ರಧಾನಿ ಹುದ್ದೆಯನ್ನು ಅಟಲ್‌ಜೀ ತ್ಯಜಿಸುತ್ತಾರೆ. 1998ರಲ್ಲಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಟಲ್‌ಜೀಗೆ ಒಲಿಯುತ್ತದೆ. 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಅಜಾತಶತ್ರು ಅಟಲ್‌ಜೀ 1 ಮತದ ಅಂತರದಲ್ಲಿ ಬಹುಮತವನ್ನು ಕಳೆದುಕೊಂಡು ಪ್ರಧಾನಿ ಹುದ್ದೆಯಿಂದ ನಿರ್ಗಮಿ ಸುತ್ತಾರೆ. ಅವರ ವಿದಾಯ ಭಾಷಣದಲ್ಲಿ ವಾಜಪೇಯಿ ಅವರು, “ಭಾರತದ ರಾಜಕಾರಣದ ಮಾರುಕಟ್ಟೆಯಲ್ಲಿ ನೂರಾರು ಮತಗಳು ಮಾರಾಟಕ್ಕೆ ಸಿದ್ಧವಾಗಿ ನಿಂತಿವೆ. ಆದರೆ ಅಧಿಕಾರ ಉಳಿಸಿ ಕೊಳ್ಳುವುದಕ್ಕೋಸ್ಕರ ನನ್ನ ಎಡಗಣ್ಣಿ ನಿಂದಲೂ ಅಕ್ರಮ ಮತಗಳನ್ನು ಆಸೆಯ ದೃಷ್ಟಿಯಲ್ಲಿ ನೋಡಲಾರೆ’ ಎಂದಿದ್ದರು.

1999ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾಗಿ 5 ವರ್ಷಗಳ ಕಾಲ ಅಧಿಕಾರ ಚುಕ್ಕಾಣಿ ಹಿಡಿದು ಎನ್‌ಡಿಎ ಸರಕಾರವನ್ನು ಯಶಸ್ವಿ ಯಾಗಿ ನಡೆಸಿದ್ದರು. ವಾಜಪೇಯಿ ಅಧಿಕಾರದ ಅವಧಿಯಲ್ಲಿ ಭಾರತ ಜಗತ್ತೇ ಬೆರಗಾಗುವಂತೆ ರಾಜಸ್ಥಾನದ ಪೋಖ್ರಾ ನ್‌ನಲ್ಲಿ ಸರಣಿ ಪರಮಾಣು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣ, ಸರ್ವ ಶಿಕ್ಷಣ ಅಭಿಯಾನ ಅಟಲ್‌ಜೀ ಅವರ ದೂರದೃಷ್ಟಿಯ ಯೋಜ ನೆಗಳಾಗಿದ್ದವು.

ಭಾರತ ಕಂಡ ಶ್ರೇಷ್ಠ ಸಂಸದೀಯ ಪಟು, ಭಾರತದ ವೃತ್ತಿ ರಾಜಕಾರ ಣವನ್ನು ವ್ರತದ ರಾಜಕಾರಣವಾಗಿ ಪರಿವರ್ತಿ ಸಿದ, ನುಡಿದಂತೆ ನಡೆದ ಮತ್ತು ಜಾತಿ, ಧರ್ಮ, ವರ್ಗವನ್ನು ಮೀರಿ ಹಿಂದುತ್ವದ ವಿಚಾರಧಾರೆ ಯೊಂದಿಗೆ ಬೆಳೆದರೂ ದೇಶಕ್ಕಾಗಿ ದುಡಿ ಯುತ್ತಿರುವ ಅಬ್ದುಲ್‌ ಕಲಾಂರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಕಾರ್ಗಿಲ್‌ ಯುದ್ಧ ದಲ್ಲಿ ಕಾಲು ಕೆದರಿ ಬಂದ ಪಾಕಿಸ್ಥಾನಕ್ಕೆ ಬುದ್ಧಿ ಕಲಿಸುವಾಗ ಅಡ್ಡ ಬಂದ ಅಮೆರಿಕದಂತಹ ಬಲಾಡ್ಯ ರಾಷ್ಟ್ರಗಳು ರಾಜಿ ಸಂಧಾನಕ್ಕೆ ಕರೆದಾಗ ಭಾರತದ ಇಂಚು ನೆಲವೂ ಅನ್ಯರ ವಶವಾಗ ಬಿಡೆವು ಎಂಬ ತಾಕೀತಿ ನೊಂದಿಗೆ ಯುದ್ಧ ಗೆದ್ದ ಮಹಾನ್‌ ಮುತ್ಸದ್ದಿಯ 99ನೇ ಜನ್ಮದಿನವಿಂದು.
ವಾಜಪೇಯಿ ಕನಸು ಕಂಡಿದ್ದ “ಸಮರ್ಥ ಭಾರತ, ಸಮೃದ್ಧ ಭಾರತ, ಶಕ್ತಿಶಾಲಿ ಭಾರತ, ಸ್ವಾಭಿಮಾನಿ ಭಾರತ’ ಈಗ ನನಸಾಗುತ್ತಿದ್ದು ಅವರು ಪ್ರತಿಪಾ ದಿಸುತ್ತಲೇ ಬಂದಿದ್ದ 370ನೇ ವಿಧಿ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ತ್ರಿವಳಿ ತಲಾಖ್‌ ರದ್ಧತಿ, ರಾಮ ಮಂದಿರ ನಿರ್ಮಾಣವೂ ಸೇರಿದಂತೆ ಅಟಲ್‌ ಆಶಯಗಳೆಲ್ಲವೂ ಒಂದೊಂದಾಗಿ ಕಾರ್ಯರೂಪಕ್ಕೆ ಬರುತ್ತಿರುವ ಇಂದಿನ ದಿನಗಳನ್ನು ಕಂಡು ಅಟಲ್‌ ಆತ್ಮ ಸಂಭ್ರಮಿಸಬಹುದೇನೋ.

 ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರು

ಟಾಪ್ ನ್ಯೂಸ್

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MM-Singh1

Tribute Dr.Singh: ಡಾ.ಮನಮೋಹನ್‌ ಸಿಂಗ್‌ ಆಡಳಿತದ ಜನಪರ ಯೋಜನೆಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.