ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ
Team Udayavani, Jul 17, 2021, 7:08 PM IST
ಕತಾರ್ :ಅಜಾದಿ ಕಾ ಅಮೃತ್ ಮಹೋತ್ಸವ್‌ನ ಪ್ರಯುಕ್ತ ಭಾರತೀಯ ಸಾಂಸ್ಕೃತಿಕ ಕೇಂದ್ರವು ವಿಶ್ವ ಪರಿಸರ ದಿನದ ಅಂಗವಾಗಿ ಹಲವಾರು ಚಟುವಟಿಕೆಗಳನ್ನು ನಡೆಸಿದ್ದು ಇದರ ಸಮಾರೋಪದ ಅಂಗವಾಗಿ ಬಹುಮಾನ, ಮೆಚ್ಚುಗೆ ಪ್ರಮಾಣ ಪತ್ರಗಳ ವಿತರಣೆ ಸಮಾರಂಭ ಜೂ. 28ರಂದು ಐಸಿಸಿಯ ಅಶೋಕ ಹಾಲ್‌ನಲ್ಲಿ ನಡೆಯಿತು.
ಐಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಅತಿಥಿ ಯಾಗಿ ದೋಹ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ| ಆರ್. ಸೀತಾರಾಮನ್ ಪಾಲ್ಗೊಂಡಿದ್ದರು.
ಐಸಿಸಿಯ ಮೊದಲ ಕಾರ್ಯ ದರ್ಶಿ, ಸಂಯೋಜನಾ ಅಧಿಕಾರಿ ಎಸ್. ಕ್ಸೇವಿಯರ್ ಧನರಾಜ್ ಅವರು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು. ಬಳಿಕ ಐಸಿಸಿ ಅಧ್ಯಕ್ಷ ಪಿ.ಎನ್ ಬಾಬು ರಾಜನ್ ಅವರೊಂದಿಗೆ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಪರಿಸರ ದಿನದ ಪ್ರಯುಕ್ತ ಒಂದು ವಾರ ಐಸಿಸಿ ಮತ್ತು ಎಒ(ಅO’s) ನ ಸೇರಿ ನಿರ್ವಹಿಸಿದ ಚಟುವಟಿಕೆಗಳಲ್ಲಿ ಮಾಮುರಾ ಪಾರ್ಕ್‌ನಲ್ಲಿ ಗಿಡಗಳ ನೆಡುವಿಕೆ ಕಾರ್ಯಕ್ರಮವನ್ನು ಕತಾರ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಉದ್ಘಾಟಿಸಿದ್ದರು. ಎಸ್. ಕ್ಸೇವಿಯರ್ ಧನರಾಜ್ ಮತ್ತು ಭಾರತೀಯ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಪದ್ಮ ಕರ್ರಿ ಅವರು ಪಾಲ್ಗೊಂಡು ಭಾರತೀಯ ಶಾಲೆಗಳಿಗೆ ಸಸಿಗಳನ್ನು ವಿತರಿಸಿದರು. ಈ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಗಳನ್ನೂ ನಡೆಸಲಾಗಿತ್ತು.
ಮುಕ್ತಾಯ ಸಮಾರಂಭದಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿ, ನಿರ್ವಹಿಸಿದ್ದ ಸಾರ್ವಜನಿಕ ಸಂಪರ್ಕ ಮತ್ತು ಕಚೇರಿ ಆವರಣದ ಮುಖ್ಯಸ್ಥ ಅನಿಶ್ ಜಾರ್ಜ್ ಮ್ಯಾಥೊÂ ಅವರು ಸ್ಪರ್ಧೆಯ ವಿಜೇತರನ್ನು ಘೋಷಿಸಿದರು. ಶುಭಶ್ರೀ ಗಣೇಶನ್ ಪ್ರಥಮ, ಫಹೀಮಾ ಅಬ್ದುಲ್ ಕರೀಮ್ ದ್ವಿತೀಯ, ಮಿಫ್ತಾಹ್ ಉಲ್ ಫಲಾಹ್ ತೃತೀಯ ಸ್ಥಾನಗಳಿಸಿದ್ದರು.
ಐಸಿಸಿಯ ಆಂತರಿಕ ಚಟುವಟಿಕೆ ಗಳ ಮುಖ್ಯಸ್ಥ ಮೋಹನ್ ಕುಮಾರ್ ಅವರು, ವಿಮಾ ಯೋಜನೆಯ ಬಗ್ಗೆ ವಿವರಗಳನ್ನು ಘೋಷಿಸಿದರು. ಸುತ್ತಮುತ್ತಲಿನ ಹಸುರು ಕಾಪಾಡಲು ಕೆಲಸ ಮಾಡುವ ಭಾರತೀಯ ತೋಟಗಾರರನ್ನು ಗುರುತಿಸಿ 30 ವಿಮಾ ಪ್ರಮಾಣ ಪತ್ರಗಳನ್ನು ವಿತರಿಸಿದ್ದಲ್ಲದೆ ಕತಾರ್ ಒಲಿಂಪಿಕ್ ಸಮಿತಿ ಮತ್ತು ಕತಾರ್ ಕರಾಟೆ ಫೆಡರೇಶನ್‌ನಿಂದ ಕತಾರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಟಿಯಾರಾ ಬಕ್ಷಿ, ಸಿವಾಡಾ ಮನು ಅವರಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು.
ಅO’s ನ ಮುಖ್ಯಸ್ಥರಾದ ಸಜೀವ್ ಸತ್ಯಸೀಲನ್ ಅವರು ಪ್ರತಿ ಅಂಗಸಂಸ್ಥೆಯು ಮಾಡಿದ ಚಟುವಟಿಕೆಗಳು, ಭಾಗವಹಿಸಿದವರ ಮತ್ತು ಗಮನಾರ್ಹವಾಗಿ ಕೊಡುಗೆ ನೀಡಿದವರ ಬಗ್ಗೆ ವಿವರಣೆ ನೀಡಿದರು.
ಕತಾರ್ ತುಳುಕೂಟಕ್ಕೆ ಪ್ರಶಸ್ತಿ
ನಾನ್-ರೆಸಿಡೆಂಟ್ ವರ್ಕಲಾ ಅಸೋಸಿಯೇಷನ್, ಕರ್ನಾಟಕ ಸಂಘ ಕತಾರ್, ತುಳು ಕೂಟ ಕತಾರ್, ಕೇರಳ ವುಮೆ®Õ… ಇನಿಶಿಯೇಟಿವ್ ಕತಾರ್, ಬಂಟ್ಸ್ ಕತಾರ್ ಇವುಗಳ ಪೈಕಿ ತುಳು ಕೂಟ ಕತಾರ್ ವಾರಾಂತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ರೀತಿ, ಕಾರ್ಯವೈಖರಿಯನ್ನು ಪ್ರಶಂಸಿಸಿ ಅತ್ಯುತ್ತಮ ತಂಡ ಎಂದು ಘೋಷಿಸಿ ಫಲಕವನ್ನು ನೀಡಲಾಯಿತು.
ತುಳುಕೂಟ ಕತಾರ್ ವಿಶ್ವ ಪರಿಸರ ದಿನಾಚರಣೆಯನ್ನು “ಒOY Oಊ ಎಐVಐNಎ ಗಉಉಓ ದಾನದಲ್ಲಿರುವ ಧನ್ಯತೆ ಸಪ್ತಾಹ’ ಎಂಬ ಶೀರ್ಷಿಕೆಯೊಂದಿಗೆ ಮೇ 30ರಿಂದ ಜೂನ್ 5ರ ವರೆಗೆ 7 ದಿನಗಳ ಕಾಲ ಆಚರಿಸಿದ್ದು 90ಕ್ಕೂ ಅಧಿಕ ಸಸಿಗಳನ್ನು ಕೂಟದ ಸದಸ್ಯರ ಮೂಲಕ ವಿವಿಧ ಸ್ಥಳಗಳಲ್ಲಿ ನೆಟ್ಟು ಪೋಷಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ತುಳುಕೂಟದ ಕತಾರ್ ಪರವಾಗಿ ಅಧ್ಯಕ್ಷೆ ಚೈತಾಲಿ ಎಸ್. ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ನವಿನ್ ಶೆಟ್ಟಿ ಇರಾವಿಯಲ್ ಪ್ರಶಸ್ತಿ ಸ್ವೀಕರಿಸಿದರು. ಐಸಿಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ಧನ್ಯವಾದ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.