ಅಯೋಧ್ಯೆ: ಭರದಿಂದ ನಡೆಯುತ್ತಿದೆ ಮಂದಿರ ಕಾಮಗಾರಿ
Team Udayavani, Aug 6, 2021, 6:20 AM IST
ಅಯೋಧ್ಯೆ ರಾಮಜನ್ಮಭೂಮಿ ನಿವೇಶನ ದಲ್ಲಿ ನಿರ್ಮಿಸುತ್ತಿರುವ ಮಂದಿರಕ್ಕೆ ಕಳೆದ ವರ್ಷ ಆ. 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿ ಒಂದು ವರ್ಷ ಕಳೆದಿದ್ದು ಈ ಅವಧಿಯಲ್ಲಿ ಕೊರೊನಾ ಸೋಂಕಿನ ಅಡೆತಡೆಗಳ ನಡುವೆಯೂ ಪ್ರಾಥಮಿಕ ಹಂತದ ಕೆಲಸಗಳು ಭರದಿಂದ ಸಾಗಿವೆ. ಮಂದಿರ ನಿರ್ಮಾಣಕ್ಕಾಗಿ ಒಟ್ಟು 3,000 ಕೋ.ರೂ. ನಿಧಿ ಸಂಗ್ರಹವಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರ ಅಯೋಧ್ಯಾ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿತ್ತು. ವಾಸ್ತ ವದಲ್ಲಿ ಮಂದಿರ ನಿರ್ಮಾಣದ ಪೂರ್ಣ ಹೊಣೆ ಟ್ರಸ್ಟಿನದು. ಆದರೆ ನಾಲ್ಕು ದಶಕಗಳಿಂದ ಮಂದಿರ ನಿರ್ಮಾಣಕ್ಕಾಗಿ ಪರಿಶ್ರಮ ಪಟ್ಟ ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್ ಕಾರ್ಯಕರ್ತರು ನಿಧಿ ಸಮರ್ಪಣೆಯಲ್ಲಿ ತೊಡಗಿಕೊಂಡ ಕಾರಣ ದೇಶ, ವಿದೇಶಗಳಲ್ಲಿ ಉತ್ತಮ ಸ್ಪಂದನ ದೊರಕಿತು. ಇದರಲ್ಲಿ ಜನಸಾಮಾನ್ಯರ ಹತ್ತು ರೂ.ಗಳ ದೇಣಿಗೆ ಪ್ರಮಾಣ ಬಲು ದೊಡ್ಡದು.
ಸಾವಿರ ವರ್ಷದ ಬಾಳಿಕೆ ಗುರಿ:
ಸಾವಿರ ವರ್ಷ ಭದ್ರವಾಗಿರುವ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆಯ ಬಳಿಕ ಮಣ್ಣು ಪರೀಕ್ಷೆ ನಡೆಸಲಾಯಿತು. ಮಣ್ಣು ದುರ್ಬಲ ವಾಗಿತ್ತು. ಮರಳು ಮತ್ತು ಹಳೆ ಮಂದಿರ ಅವಶೇಷಗಳು ಮಾತ್ರ ದೊರಕಿದ್ದವು. ರೂರ್ಕಿ, ಹೈದರಾಬಾದ್, ಚೆನ್ನೈ ಐಐಟಿ, ಟಾಟಾ ಸಂಸ್ಥೆಯವರು ಪರೀಕ್ಷೆ ನಡೆಸಿ ಹಾರುಬೂದಿ, 20 ಎಂಎಂ ಮತ್ತು 10 ಎಂಎಂ ಜಲ್ಲಿ, ಜಲ್ಲಿ ಪುಡಿ, ಅಡ್‌ಮಿಕÏ$cರ್, ಅತೀ ಕಡಿಮೆ ಪ್ರಮಾಣದಲ್ಲಿ ಸಿಮೆಂಟ್ (ಶೇ.2.5) ಮಿಶ್ರಣವನ್ನು 425 ಅಡಿ ಉದ್ದ ಮತ್ತು 325 ಅಡಿ ಅಗಲದ ಜಾಗದಲ್ಲಿ 40 ಅಡಿ ಆಳದಲ್ಲಿ ತುಂಬಿಸುವ ಕೆಲಸ ಆರಂಭಿಸ ಲಾಯಿತು. ಇದಕ್ಕಾಗಿ 40 ಅಡಿ ಮಣ್ಣನ್ನು ಹೊರಗೆ ಹಾಕಿ ವಿಶಿಷ್ಟ ಮಿಶ್ರಣ ತುಂಬಿಸುವ ಕೆಲಸ ಅರ್ಧಾಂಶಕ್ಕಿಂತ ಹೆಚ್ಚು ನಡೆದಿದೆ.
44 ಪದರಗಳ ಕೆಲಸ:
ಮಿಶ್ರಣ ತುಂಬಿಸುವ ವಿಧಾನವನ್ನು ರೋಲರ್ ಕಂಪ್ಯಾಕ್ಟೆಡ್ ಕಾಂಕ್ರೀಟ್ ಎಂದು ಕರೆಯುತ್ತಾರೆ. ಮಿಶ್ರಣವನ್ನು ಒಟ್ಟು 44 ಪದರಗಳಲ್ಲಿ ಹಾಕಲಾಗುತ್ತಿದೆ. ಒಂದು ಪದರ 12 ಇಂಚುಗಳಷ್ಟು ದಪ್ಪ ಇರುತ್ತದೆ. ಇದರ ಮೇಲೆ ರೋಲರ್ ಹಾಕಿದಾಗ ಅದು 10 ಇಂಚುಗಳಿಗೆ ಇಳಿಯುತ್ತದೆ. ಅಅನಂತರ ಅದರ ಮೇಲೆ ಇನ್ನೊಂದು ಪದರ ಹಾಕಬೇಕು. ಹೀಗೆ 27 ಪದರಗಳ ಕೆಲಸ ಮುಗಿದಿದೆ. 25 ಅಡಿ ಹೊಂಡ ಮಿಶ್ರಣದಿಂದ ತುಂಬಿದ್ದು ಇನ್ನು 15 ಅಡಿ ತುಂಬಬೇಕಾಗಿದೆ.
ಕಬ್ಬಿಣವಿಲ್ಲದ ಮಂದಿರ:
ಪಂಚಾಂಗಕ್ಕಿಂತ ಕೆಳಗೆ ಅಲ್ಪಪ್ರಮಾಣದಲ್ಲಿ ಸಿಮೆಂಟ್ ಬಳಸುತ್ತಾರೆ ವಿನಾ ಮೇಲ್ಭಾಗದಲ್ಲಿ ಸಿಮೆಂಟ್ ಇಲ್ಲ. ಈ ಮಿಶ್ರಣದ ಮೇಲೆ ರಾಫ್ಟ್ ನಿರ್ಮಿಸುತ್ತಾರೆ. ಇದರ ಮೇಲೆ 17 ಅಡಿಯ ಪಂಚಾಂಗ ನಿರ್ಮಾಣವಾಗಿ ಅದರ ಮೇಲೆ ಮಂದಿರ ನಿರ್ಮಾಣವಾಗಬೇಕಾ ಗಿದೆ. ಕಬ್ಬಿಣದ ಬಳಕೆ ಇಡೀ ಸಂಕೀರ್ಣದಲ್ಲಿ ಇರುವುದಿಲ್ಲ.
ಕರ್ನಾಟಕದ ಕಲ್ಲು ಬಳಕೆ:
ಮಂದಿರವನ್ನು ರಾಜಸ್ಥಾನದ ಮಕರಾನ, ಭರತ್‌ಪುರ ಜಿಲ್ಲೆಯ ಬನ್ಸಿಪಹಾಡ್ ಪಿಂಕ್ ಸ್ಟೋನ್‌ನಿಂದ (ಗುಲಾಬಿ ಬಣ್ಣದ ಶಿಲೆ) ನಿರ್ಮಿಸಲಾಗುತ್ತದೆ. ಪಂಚಾಂಗ ನಿರ್ಮಾಣಕ್ಕೆ ಕರ್ನಾಟಕ (ಚಿಕ್ಕಬಳ್ಳಾಪುರ) ಮತ್ತು ಆಂಧ್ರ ಪ್ರದೇಶದ ಕಲ್ಲುಗಳನ್ನು ಒಂದೆರಡು ದಿನಗಳಲ್ಲಿ ಅಯೋಧ್ಯೆಗೆ ರವಾನಿಸಲಾಗುವುದು.
ಸೋಮನಾಥ ಮಂದಿರದ ಶಿಲ್ಪಿಯ ಮೊಮ್ಮಗ :
ಎಲ್ ಆ್ಯಂಡ್ ಟಿ ಸಂಸ್ಥೆ ನಿರ್ಮಾಣ ಕಾಮ ಗಾರಿ ನಡೆಸುತ್ತಿದ್ದರೆ ಟಾಟಾ ಕನ್ಸಲ್ಟಿಂಗ್ ಏಜೆನ್ಸಿ ಮೇಲ್ವಿಚಾರಣೆ ನಡೆಸುತ್ತಿದೆ. ಗುಜರಾತಿನ ಸೋಮನಾಥ ದೇವಸ್ಥಾನವನ್ನು ನಿರ್ಮಿಸಿದ ಸೋಮಪುರ ಅವರ ಮೊಮ್ಮಗ ಚಂದ್ರಕಾಂತ ಸೋಮಪುರ(78) ಪ್ರಧಾನ ಶಿಲ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮೊದಲ ಅಕ್ಷರ ಧಾಮ ದೇವಸ್ಥಾನವನ್ನು ನಿರ್ಮಿಸಿದವರು.
ಮಂದಿರ ನಿರ್ಮಾಣ ಕೆಲಸ ತೃಪ್ತಿಕರ :
ಅಯೋಧ್ಯೆ ರಾಮಮಂದಿರ ನಿರ್ಮಾಣದ ಕೆಲಸ ತೃಪ್ತಿಕರವಾಗಿ ನಡೆಯುತ್ತಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ರಸ್ಟಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.
ಭೂಮಿಪೂಜೆ ಬಳಿಕ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯುತ್ತಿದೆಯೆ?
ಹೌದು. ಕೊರೊನಾ ಸೋಂಕಿನ ಹೊರತಾಗಿಯೂ ಕೆಲಸ ನಿಲುಗಡೆಯಾಗಲಿಲ್ಲ. ಭೂಮಿ ಸಮತಟ್ಟು ಮಾಡುವ ಕೆಲಸವನ್ನು ತರಾತುರಿಯಲ್ಲಿ ಮಾಡುವ ಹಾಗಿಲ್ಲ. ಕ್ಯೂರಿಂಗ್ ಕೆಲಸಕ್ಕೆ ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ. ಶಿಲ್ಪ ಕಲೆಗೆ ಸಂಬಂಧಿಸಿ ಮುಂಬಯಿಯಲ್ಲಿ ಶಿಲ್ಪಿಗಳ ಮೀಟಿಂಗ್ ನಡೆದು ಅದರ ಕೆಲಸವೂ ಮುಂದುವರಿದಿದೆ.
ಗುರಿಯ ಪ್ರಕಾರ ಮಂದಿರ ನಿರ್ಮಾಣವಾಗಿ ಪ್ರತಿಷ್ಠಾಪನೆ ನಡೆಯಲಿದೆಯೆ? ಈಗ ದರ್ಶನ ನಡೆಯುತ್ತಿದೆಯೆ?
2023ರ ಕೊನೆಯಲ್ಲಿ ಪ್ರತಿಷ್ಠಾಪನೆ ಕೆಲಸ ನಡೆಯಲಿದೆ. ಈಗ ಬಾಲಾಲಯದಲ್ಲಿ ರಾಮಲಲ್ಲಾನ ವಿಗ್ರಹವಿರಿಸಿದ್ದು ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ಈಗಲೂ ದೇಣಿಗೆ ಸಂದಾಯ ಮಾಡಬಹುದೆ?
ಅಭಿಯಾನದ ವೇಳೆ ದೇಣಿಗೆ ಹೆಚ್ಚು ಬರುತ್ತಿತ್ತು. ಅನಂತ ರವೂ ಬರುತ್ತಿದೆ. ನಮ್ಮ ಬಳಿಯೂ ದೇಣಿಗೆ ಕೊಡಲು ಬರುತ್ತಿ ದ್ದಾರೆ. ಆದರೆ ನಾವು ಹಿಂದೆಯೂ ಈಗಲೂ ನಮ್ಮ ಕೈಯಲ್ಲಿ ದೇಣಿಗೆಯನ್ನು ಸ್ವೀಕರಿ ಸುತ್ತಿಲ್ಲ. ನಾವು ಸಂಬಂಧಪಟ್ಟ ಖಾತಾ ಸಂಖ್ಯೆಯನ್ನು ಕೊಡುತ್ತೇವೆ. ಈಗಲೂ ಟ್ರಸ್ಟ್ ಖಾತೆಗೆ ದೇಣಿಗೆ ಸಂದಾಯ ಮಾಡಬಹುದು.
ಸದ್ಯ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಟ್ರಸ್ಟ್ ಮೀಟಿಂಗ್ ದಿನಾಂಕ ನಿಗದಿಯಾಗಿದೆಯೆ? ಅಯೋಧ್ಯೆಗೆ ಮತ್ತೆ ಹೋಗುವುದಿದೆಯೆ?
ಸೆ. 13- 14ರಂದು ಟ್ರಸ್ಟ್ ಸಭೆ ನಡೆಯಲಿದೆ. ಆದರೆ ಆಗ ಚಾತುರ್ಮಾಸ ವ್ರತ ಇರುವುದರಿಂದ ನಾವು ಭಾಗವಹಿಸುವುದು ಕಷ್ಟ. ಆದ್ದರಿಂದ ಜೂಮ್ ಮೀಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇವೆ. ಇತ್ತೀಚೆಗೆ ಹೋಗಿ ಬಂದಿದ್ದೇವೆ. ಚಾತುರ್ಮಾಸ ವ್ರತದ ಬಳಿಕ ಹೋಗಬೇಕೆಂಬ ಇರಾದೆ ಇದೆ. ಕೊರೊನಾ ಸೋಂಕಿನಿಂದಾಗಿ ಹೋಗಲು ಸಾಧ್ಯವೇ ಎಂದು ಈಗ ಹೇಳಲಾಗದು.
ಮಂದಿರದ ಎಲ್ಲ ಸಾಮಗ್ರಿ ಗಳನ್ನೂ ಜಿಎಸ್‌ಟಿ ತೆರಿಗೆ ಪಾವತಿಸುವ ಸಂಸ್ಥೆಗಳಿಂದ ಮಾತ್ರ ಖರೀದಿಸುತ್ತಿದ್ದೇವೆ. ಕಾನೂನು ಪ್ರಕಾರವೇ ಪಡೆದುಕೊಳ್ಳುತ್ತಿದ್ದೇವೆ. ಕಾನೂನು ಪ್ರಕಾರ ಇಲ್ಲದೆ ಇದ್ದರೆ ಉಚಿತವಾಗಿ ಕೊಟ್ಟರೂ ಪಡೆಯುವು ದಿಲ್ಲ. ಟ್ರಸ್ಟ್‌ಗೆ 70 ಎಕ್ರೆ ಸ್ಥಳವಿದೆ. ನಿವೇಶನದ ಈಶಾನ್ಯ ಮತ್ತು ವಾಯವ್ಯ ಕೋನದಲ್ಲಿ ಮಂದಿರ ನಿರ್ಮಾಣವಾಗು ವುದರಿಂದ ಎರಡು ಕಡೆ ಸುಮಾರು ನೂರು ಅಡಿ ಸ್ಥಳದ ಅಗತ್ಯ ಇನ್ನೂ ಇದೆ. ಇದನ್ನು ಪಡೆಯಲಿದ್ದೇವೆ. ಭೂ ಖರೀದಿಗೆ ಆನ್‌ಲೈನ್ ಪಾವತಿ ಮಾಡುತ್ತೇವೆ.– ಗೋಪಾಲ್, ವಿಹಿಂಪ ಕೇಂದ್ರೀಯ ಸಮಿತಿ ಸಹ ಕಾರ್ಯದರ್ಶಿ, ದಿಲ್ಲಿ
ಕಳೆದ ರಾಮನವಮಿ ಸಂದರ್ಭ 15ರಿಂದ 20 ಸಾವಿರ ಭಕ್ತರು ರಾಮಲಲ್ಲಾನ ದರ್ಶನಕ್ಕೆ ಬರುತ್ತಿದ್ದರು. ಮರದ ಬಾಲಾಲಯದಲ್ಲಿ ವಿಗ್ರಹವನ್ನು ಇರಿಸಿ ಪೂಜಿಸಲಾಗುತ್ತಿದೆ. ಮಂದಿರದಲ್ಲಿ ಪ್ರತಿಷ್ಠಾಪನೆ ಆಗುವ ವರೆಗೂ ಇಲ್ಲಿ ದರ್ಶನ ನಡೆಯಲಿದೆ. 1992ರ ಅಅನಂತರ ಕರಸೇವಕ ಪುರಂನಲ್ಲಿ ನಡೆಯುತ್ತಿದ್ದ ಕೆಲಸದ ಮಾದರಿಯಲ್ಲಿಯೇ ಮಂದಿರ ನಿರ್ಮಾಣವಾಗಲಿದೆ. ಎರಡು ಗೋಪುರಗಳು ಹೆಚ್ಚಿಗೆ ಬರಲಿದೆ. ತಳ ಹಂತದಿಂದ ಮೂರು ಮಹಡಿಗಳು ನಿರ್ಮಾಣವಾಗಲಿವೆ.-ಕೇಶವ ಹೆಗ್ಡೆ, ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ, ಬೆಂಗಳೂರು
-ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.