ಚಿತ್ರಕಲಾ ನಿಪುಣ ಬಿ.ಜಿ. ಮಹಮ್ಮದ್‌

Team Udayavani, Oct 30, 2022, 6:05 AM IST

ಚಿತ್ರಕಲಾ ನಿಪುಣ ಬಿ.ಜಿ. ಮಹಮ್ಮದ್‌

ಪುಟ್ಟದಾದ ಅಟ್ಟದಂತಹ ಒಂದನೇ ಮಹ ಡಿ ಯ ಕಟ್ಟಡದಲ್ಲಿ ಚಿತ್ರಕಲಾ ಶಾಲೆಯನ್ನು ಆರಂಭಿಸಿದವರು ಬೋಳಾರ ಗುಲಾಂ ಮಹಮ್ಮದ್‌. ಪೆನ್ಸಿಲ್‌, ಚಾರ್‌ಕೋಲ್‌, ಜಲವರ್ಣ, ತೈಲವರ್ಣ, ಅಕ್ರಿ ಲಿಕ್‌ ಮಾಧ್ಯಮಗಳಲ್ಲಿ ಚಿತ್ರರಚಿಸುವ ನೈಪುಣ್ಯ ಹೊಂದಿದ್ದರು.ಅವರು 1953ರಲ್ಲಿ ಕಲಾ ಶಾಲೆಯನ್ನು ಆರಂಭಿಸಿದಾಗ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲದೆ ಉಪನ್ಯಾಸಕರು, ವೈದ್ಯರು,ವಕೀಲರು, ಎಂಜಿನಿಯರ್‌ಗಳು, ಉದ್ಯೋಗಸ್ಥರು, ಗೃಹಿಣಿಯರು ಬಿಡುವು ಮಾಡಿ ಚಿತ್ರಕಲೆ ಅರಿಯಲು ಮುಂದಾದರು. ಮಹಮ್ಮದ್‌ ವಿವಿಧ ವಯೋ ಮಾನದವರಿಗೆ ಅವರವರ ಕಲಿಕಾ ಆಸಕ್ತಿಯನ್ನು ಅವಲೋ ಚಿಸಿ ಚಿತ್ರ ರಚನೆಗೆ ಮಾರ್ಗದರ್ಶನ ನೀಡಿದರು. ಭಾರತೀಯ ಚಿತ್ರಕಲಾ ಪರಂಪರೆಯ ಆಳವಾದ ಜ್ಞಾನ ಮತ್ತು ತಳ ಹದಿಯು ಅವರ ಕಲಾ ಸಂಪತ್ತಾಗಿತ್ತು. ವಿದ್ಯಾರ್ಥಿ ಸಮುದಾಯಕ್ಕೆ ಜ್ಞಾನವನ್ನು ಧಾರೆ ಎರೆದರು.

“ಆರ್ಟ್‌ ಮಾಸ್ಟರ್‌” ಎಂಬ ಗೌರವಕ್ಕೆ ಪಾತ್ರ ರಾಗಿ ಮಂಗಳೂರು ನಗರವನ್ನು ಸೀಮಿತವಾಗಿಟ್ಟುಕೊಳ್ಳದೆ ಕಲಾಸಕ್ತಿಯ ವಿದ್ಯಾರ್ಥಿಗಳ ಸಮಯ- ಅವಕಾಶಕ್ಕೆ ಸ್ಪಂದಿಸಿದರು. ತಮ್ಮ ಬಿಜಿಎಂ ಕಲಾಶಾಲೆಯ ಮೂಲಕ ಕಲಾ ಸಕ್ತಿಗೆ ತಕ್ಕಂತೆ ವಿವಿಧ ಮಾಧ್ಯಮಗಳಲ್ಲಿ ಚಿತ್ರಕಲೆಯ ಅರಿವು ಮೂಡಿಸಿದ ಹೆಗ್ಗಳಿಕೆ ಅವರದು. ರೇಖೆಗಳ ಚಿತ್ರ, ನಿಸರ್ಗದ ಚಿತ್ರಣ, ಏಳು ಬಣ್ಣಗಳ ಬಳಕೆ, ಸಂಯಮ, ಲೋಪ ದೋಷ ಗಳ ತಿದ್ದುವಿಕೆ… ಹೀಗೆ ಮಹಮ್ಮದ್‌ ಅವರು ಕಲಾ ವಿದ್ಯಾರ್ಥಿ ಸಮುದಾಯದ ವರಿಗೆ ನಾನಾ ಬಗೆಯ ಚಿತ್ರಗಳ ರಚನೆಗೆ ಪ್ರೇರಣೆ ನೀಡಿದ್ದರು. ವೃತ್ತಿಪರ ಚಿತ್ರಕಲಾವಿದರಾಗಲು ಬೆಂಬಲಿಸಿದರು. ಚಿತ್ರಕಲಾ ಪರೀಕ್ಷೆಗಳಲ್ಲಿ ಅಗ್ರ ಮಾನ್ಯ ಸ್ಥಾನ ಗಳಿಸಲು ಮಾರ್ಗದರ್ಶನ ನೀಡಿದರು.

ಮಂಗಳೂರು ನಗರದಲ್ಲಿ ಚಿತ್ರಕಲಾ ಪೋಷಕರು, ಆಸಕ್ತರು, ಸ್ವತಃ ಕಲಾವಿದರು ಬೆಳೆಯಲು ಬಿ.ಜಿ.ಎಂ. ಕಲಾಶಾಲೆಯ ಕೊಡುಗೆ ಅಪಾರವಾದುದು. ಕಲಾಪ್ರಜ್ಞೆ ಮೂಡಿಸಿದ ಮಹಮ್ಮದ್‌ ಅವರು ಛಾಯಾಚಿತ್ರಗ್ರಾಹಕ ರಾಗಿಯೂ, ಕೊಳಲು ವಾದಕರಾಗಿಯೂ ಕಲಾ ಸಕ್ತಿ ಹೊಂದಿದ್ದರು. ಆಕರ್ಷಕ ಚಿತ್ರಗಳನ್ನು ರಚಿ ಸಲು ಹಲವು ಪಾಠಗಳು ಕಲಾಸಕ್ತರಿಗೆ ಇಷ್ಟವಾಗುತ್ತಿತ್ತು.

ಅಪ್ರತಿಮ ಕಲಾಶಿಕ್ಷಕ
ಚಿತ್ರ ಕಲಾವಿದರಾಗುವುದು ಸುಲಭವಲ್ಲ. ಆದರೆ ಸತತ ಪ್ರಯತ್ನ, ಬದ್ಧತೆಯಿದ್ದರೆ ಉತ್ತಮ ಚಿತ್ರಕಲಾವಿದರಾಗುವಂತೆ ಬಿ.ಜಿ.ಎಂ. ಕಲಾಶಾಲೆ ದಾರಿದೀಪವಾಗಿತ್ತು ಎಂದು ಸಸ್ಯ ಶಾಸ್ತ್ರ ಪ್ರಾಧ್ಯಾಪಕ, ಕಲಾವಿದ ಪ್ರೊ| ಅನಂತ ಪದ್ಮನಾಭ ರಾವ್‌ ನೆನಪಿಸಿಕೊಳ್ಳುತ್ತಾರೆ. ಗಣೇಶ ಸೋಮಯಾಜಿ, ಶರತ್‌ ಹೊಳ್ಳ, ನವೀನಾ ರೈ, ಶ್ರೀಲತಾ, ಸಪ್ನಾ ನೊರೊನ್ಹಾ, ಭಾರತಿ ಶೆಟ್ಟಿ (ವಿ.ಪ. ಸದಸ್ಯೆ), ಅರುಣ್‌ ಕುಮಾರ್‌ ಸುವರ್ಣ ಮುಂತಾ ದವರು “”ಮಾಸ್ಟರ್‌ ಚಿತ್ರಿ ಸುತ್ತಿದ್ದ ರೀತಿ ಈಗಲೂ ನಮಗೆಲ್ಲರಿಗೆ ವರವಾಗಿದೆ” ಎಂದೇ ಸ್ಮರಿಸುತ್ತಾರೆ. ಸೃಜನ ಶೀಲ ಕಲಾವಿ  ದರಾಗಬೇಕು ಎಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಮಹ ಮ್ಮದ್‌ ಅವರು ಚಿತ್ರಕಲೆ ಯಲ್ಲಿ ಪಳಗಿಸಲು ಪ್ರಾಮಾಣಿಕ ಯತ್ನ ಮಾಡಿದ್ದಾರೆಂಬುವುದು ಇಂದಿನ ಅವರ ಶಿಷ್ಯರ ಸದಭಿಪ್ರಾಯವಾಗಿದೆ.

ಚಿತ್ರಕಲಾ ಪ್ರಾತ್ಯಕ್ಷಿಕೆಗಳಿಂದ ಚಿತ್ರಕಲೆ ಸಾರುವ ಸಂದೇಶ ಮತ್ತು ಮಹತ್ವದ ಅರಿವು ಮೂಡಿಸಿ  ದ್ದಾರೆ. ಚಿತ್ರಪ್ರದರ್ಶನಗಳನ್ನು ಏರ್ಪಡಿಸಿ ಎಳೆಯರಿಗೆ ಸದಾ ಪ್ರೇರಕಶಕ್ತಿ ಆಗಿದ್ದರು. ನಿಸರ್ಗದ ಚಿತ್ರಣವನ್ನು ವರ್ಣಚಿತ್ರಗಳಲ್ಲಿ ಮೂಡಿಸಲು ಮಹಮ್ಮದ್‌ ಅವರ ಸ್ಪರ್ಶವು ಮರೆ ಯ ಲಾಗದು ಎನ್ನುತ್ತಾರೆ ಖ್ಯಾತ ಛಾಯಾ ಚಿತ್ರಗ್ರಾಹಕ ಯಜ್ಞ ಅವರು. ಚಿತ್ರಕಲೆಯ ಹವ್ಯಾಸ ಬೆಳೆಸಿಕೊಂಡವರು ಜೀವನದಲ್ಲಿಯೂ ಯಶಸ್ಸು ಗಳಿಸುತ್ತಾರೆ ಎನ್ನುತ್ತಿದ್ದರು ಬಿ.ಜಿ.ಎಂ. ಅವರ ಇಬ್ಬರು ಪುತ್ರರಾದ ಶಬ್ಬೀರ್‌ ಅಲಿ, ಶಮೀರ್‌ ಅಲಿಯವರು ತಂದೆಯಂತೆ ಮಂಗಳೂ ರಿನ ಕೊಟ್ಟಾರ ಮತ್ತು ಕದ್ರಿ ಪ್ರದೇಶ ದಲ್ಲಿ ಚಿತ್ರಕಲಾಶಾಲೆಯನ್ನು ತೆರೆದಿದ್ದಾರೆ.

ಜನ್ಮಶತಮಾನೋತ್ಸವ: ಶಿಷ್ಯರಿಂದ ಸ್ಮರಣೆ ಬಿ.ಜಿ. ಮಹಮ್ಮದ್‌ ಅವರು 90 ವರ್ಷಗಳು ಬದುಕಿ, 2010ರ ಜನವರಿ 26ರಂದು ನಿಧನ ಹೊಂದಿದರು. ಅವರ ಶಿಷ್ಯರು ಅವರ ಜನ್ಮ ಶತಮಾ ನೋತ್ಸವವನ್ನು ಯೋಗ್ಯ ರೀತಿಯಲ್ಲಿ ಆಚರಿ ಸುತ್ತಿ ದ್ದಾರೆ (ಅ.28, 30). ಇದರ ಅಂಗವಾಗಿ ಚಿತ್ರಕಲಾ ಪ್ರದರ್ಶನ, ಆಶು ಚಿತ್ರಕಲಾ ಪ್ರಾತ್ಯಕ್ಷಿಕೆ, ಉಪನ್ಯಾಸ ಏರ್ಪಡಿಸ ಲಾಗಿದೆ. ಚಿತ್ರಕಲಾವಿದರಾಗಿ ಅವರಿಂದ ಪ್ರೇರಣೆ ಪಡೆದು, ಕಲಾಸಾಧನೆ ಮಾಡಿದವ ರನ್ನು ಸಮ್ಮಾನಿಸಲಿದ್ದಾರೆ. ಬಿ.ಜಿ.ಎಂ. ಪ್ರಶಸ್ತಿ ಗೌರವಗಳಿಗಾಗಿ ಚಿತ್ರಶಾಲೆ ತೆರೆದವರಲ್ಲ. ಆದರೆ ಅವರ ಶಿಷ್ಯ ಬಳಗದವರು ಖ್ಯಾತನಾಮ ರಾಗಿ, ಚಿತ್ರಕಲಿಕೆಯ ಪ್ರಸಾರಕ್ಕಾಗಿ ಪರಿಶ್ರಮಿ ಸುತ್ತಿ ದ್ದಾರೆಂಬುದು ಬಿ.ಜಿ.ಎಂ. ಪ್ರೇರಣೆ!

– ಡಾ| ಎಸ್‌.ಎನ್‌. ಅಮೃತ ಮಲ್ಲ

ಟಾಪ್ ನ್ಯೂಸ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.