Bajaj Bruzer; ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಜಾಜ್ ಬ್ರೂಝರ್
ಭಾರತದ ಬಜಾಜ್ ಆಟೋ ಕಂಪೆನಿಯಿಂದ ವಿನೂತನ ಆವಿಷ್ಕಾರ
Team Udayavani, Jul 3, 2024, 6:48 AM IST
ದ್ವಿಚಕ್ರ ವಾಹನಗಳು ಎಂದಾಕ್ಷಣ ನಮಗೆ ಸಾಧಾರಣವಾಗಿ ನೆನಪಾಗುವುದು ಪೆಟ್ರೋಲ್ ಚಾಲಿತವೋ ಅಥವಾ ಇತ್ತೀಚೆಗೆ ಜನಪ್ರಿಯ ಗೊಳ್ಳುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬಗ್ಗೆ. ಆದರೆ ಇದೀಗ ವಿಶ್ವವನ್ನೇ ಬೆರಗುಗೊಳಿಸುವಂತಹ ಒಂದು ಹೊಸ ದ್ವಿಚಕ್ರ ವಾಹನವನ್ನು ಭಾರತೀಯ ಮೋಟಾರ್ ಕಂಪೆನಿ ಬಜಾಜ್ ಬಿಡುಗಡೆ ಗೊಳಿಸಲಿದೆ. ವಿಶೇಷವೆಂದರೆ ಅದು ಕೂಡ ವಿಶ್ವದ ಪ್ರಪ್ರಥಮ ಸಿಎನ್‌ಜಿ ಬೈಕ್.
ಬಿಡುಗಡೆ ಯಾವಾಗ ?
ಬಜಾಜ್ ಆಟೋ ಈ ಹಿಂದೆ ಈ ಬಜಾಜ್ ಬ್ರೂಝರ್ ಸಿಎನ್‌ಜಿ ಬೈಕ್ ಅನ್ನು 2024ರ ಜೂನ್ 18ರಂದು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ಕಂಪೆನಿಯು ಆ ದಿನಾಂಕವನ್ನು ಮುಂದೂಡಿ ಜುಲೈ 5 ರಂದು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಕಂಪೆನಿಯು ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಬಜಾಜ್ ಎಂಡಿ ರಾಜೀವ್ ಬಜಾಜ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಭಾಗವಹಿಸಲಿದ್ದಾರೆ.
ವಿಶೇಷತೆಗಳೇನು?
ಬಜಾಜ್‌ನ ಈ ಸಿಎನ್‌ಜಿ ಬೈಕ್ ವೃತ್ತಾಕಾರದ ಎಲ್‌ಇಡಿ ಹೆಡ್‌ಲೈಟ್, ಸಣ್ಣ ಸೈಡ್ ವ್ಯೂ ಮಿರರ್‌ಗಳು, ಮುಚ್ಚಿದ ಸಿಎನ್‌ಜಿ ಟ್ಯಾಂಕ್, ಉದ್ದ ಸಿಂಗಲ್ ಸೀಟ್, ಹ್ಯಾಂಡ್ ಗಾರ್ಡ್, ಅಲಾಯ್ ವೀಲ್‌ಗಳು, ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಡಿಜಿಟಲ್ ಸ್ಪೀಡೋಮೀಟರ್‌ನಂತಹ ವೈಶಿಷ್ಟಗಳನ್ನು ಹೊಂದಿರಲಿದೆ. ಇದಲ್ಲದೇ ಒಂದಕ್ಕಿಂತ ಹೆಚ್ಚು ವಿಧಗಳ ಬೈಕ್‌ಗಳನ್ನು ತರಲಾಗುವುದು ಎಂದು ನಿರೀಕ್ಷಿಸಲಾಗಿದೆ. ಮಾಹಿತಿಯ ಪ್ರಕಾರ, ಕಂಪೆನಿಯು ತನ್ನ ಯಾವುದೇ ಪ್ರವೇಶ ಮಟ್ಟದ ಬೈಕ್‌ಗಳಲ್ಲಿ ಸಿಎನ್‌ಜಿ ತಂತ್ರಜ್ಞಾನವನ್ನು ಒದಗಿಸಬಹುದು. ಈ ಕಾರಣದಿಂದಾಗಿ, ಅದರ ಮೈಲೇಜ್ ಒಂದು ಕಿಲೋ ಸಿಎನ್‌ಜಿ ಗ್ಯಾಸ್‌ನಲ್ಲಿ 100 ಕಿ. ಮೀ. ವರೆಗೆ ಇರಲಿದೆ. 125 ಸಿಸಿ ಯ ಈ ಬೈಕ್‌ನ ಎಂಜಿನ್ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಬೈಕ್‌ನ ಬಿಡುಗಡೆಯ ಬಳಿಕವಷ್ಟೇ ಸಿಗಲಿದೆ.
ವಿನ್ಯಾಸದ ಗುಟ್ಟು ಸೋಶಿಯಲ್ ಮೀಡಿಯಾದಲ್ಲಿ ರಟ್ಟು !
ಬಜಾಜ್‌ನ ಸಿಎನ್‌ಜಿ ಬೈಕ್ ಬಿಡುಗಡೆಗೂ ಮುನ್ನವೇ ಹಲವಾರು ಬಾರಿ ಪರೀಕ್ಷಾರ್ಥವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲಾಗಿದೆ. ಬೈಕ್‌ನಲ್ಲಿ ಯಾವುದಾದರೂ ತಾಂತ್ರಿಕ ದೋಷವಿದೆಯೇ ಎಂದು ಪರೀಕ್ಷಿಸುವ ಜತೆಯಲ್ಲಿ ಅದರ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಕಂಪೆನಿ ಬೈಕ್ ಅನ್ನು ಸಾರ್ವಜನಿಕವಾಗಿಯೇ ಪರೀಕ್ಷೆಗೆ ಒಳಪಡಿಸಿದೆ. ಈ ವೇಳೆ ಬೈಕ್‌ನ ವಿನ್ಯಾಸದ ಬ್ಲೂಪ್ರಿಂಟ್ ಸೋರಿಕೆಯಾಗಿದೆ. ಬೈಕ್‌ನ ಚಾಸಿಸ್, ಸಿಎನ್‌ಜಿ ಮತ್ತು ಪೆಟ್ರೋಲ್ ಟ್ಯಾಂಕ್ ಬಗ್ಗೆ ಮಾಹಿತಿಯನ್ನು ಬಹಿರಂಗವಾಗಿದೆ. ಬೈಕ್‌ಗೆ ಸಿಲಿಂಡರ್ ಹಿಡಿದಿಡಲು ಬ್ರೇಸ್‌ಗಳೊಂದಿಗೆ ಡಬಲ್ ಕ್ರೇಡಲ್ ಫ್ರೇಮ್ ನೀಡಬಹುದು. ಸಿಎನ್‌ಜಿ ಸಿಲಿಂಡರ್ ಅನ್ನು ಸೀಟಿನ ಕೆಳಗೆ ಅಳವಡಿಸಲಾಗಿದೆ. ಆದರೆ ಸಿಎನ್‌ಜಿ ತುಂಬಲು ಸಹಕಾರಿ ಯಾಗಲು ನಳಿಕೆಯನ್ನು ಮುಂಭಾಗದಿಂದ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ಬ್ಯಾಕಪ್ ಉದ್ದೇಶದಿಂದ ಸಣ್ಣ ಪೆಟ್ರೋಲ್ ಟ್ಯಾಂಕ್‌ಅನ್ನು ಕೂಡ ಹೊಂದಿರಲಿದೆ.
ಬಜಾಜ್ ಬ್ರೂಝರ್‌ನ ಎರಡು ಪ್ರಮುಖ ಮಾದರಿಗಳು ಹೇಗಿರಲಿದೆ? ಬೆಲೆಯೆಷ್ಟು?
ಬಜಾಜ್ ಬ್ರೂಝರ್‌ಅನ್ನು ಎರಡು ಮಾದರಿಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಒಂದು ನಗರ ಪ್ರದೇಶಗಳಿಗೆ ಮತ್ತು ಗ್ರಾಮೀಣ ಪ್ರದೇಶಕ್ಕೆ ಹೊಂದುವಂತೆ ಆವೃತ್ತಿಯಾಗಿದೆ. ಎರಡನೆಯದು ಆಫ್ರೋಡ್ ಸವಾರಿ ಮಾಡಲರ್ಹ ವಾದ ಬೈಕ್ ಆಗಿದೆ. ಇದು ಸಂಪ್ ಗಾರ್ಡ್, ನಕಲ್ ಗಾರ್ಡ್ ಮತ್ತು ಹ್ಯಾಂಡಲ್‌ಬಾರ್‌ಬ್ರೇಸ್ ಅನ್ನು ಹೊಂದಿರಲಿದೆ.
ಬೈಕ್‌ನ ಅಂದಾಜು ಎಕ್ಸ್ ಶೋರೂಮ್ ಬೆಲೆ ಸುಮಾರು 80 ಸಾವಿರ ರೂ.ಗಳಷ್ಟು ಇರಲಿದೆ ಎಂದು ಅಂದಾಜಿಸಲಾಗಿದ್ದು, ಅನಾವರಣ ಸಮಾರಂಭದಲ್ಲಿ ಬೈಕ್‌ನ ನಿಖರ ಬೆಲೆಯನ್ನೂ ಬಹಿರಂಗಪಡಿಸಬಹುದು.
ಅವನೀಶ್ ಭಟ್, ಸವಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.