ಬೆಳಕಿನ ಹಬ್ಬ: ಕುಂದಗನ್ನಡದ ಸಂಸ್ಕೃತಿಯಲ್ಲಿ ಬಲಿಪಾಡ್ಯಮಿ


Team Udayavani, Nov 5, 2021, 10:17 AM IST

ಬೆಳಕಿನ ಹಬ್ಬ- ಕುಂದಗನ್ನಡದ ಸಂಸ್ಕೃತಿಯಲ್ಲಿ ಬಲಿಪಾಡ್ಯಮಿ

ತೆಕ್ಕಟ್ಟೆ: ಭಾರತೀಯ ಧರ್ಮ ಸಂಸ್ಕೃತಿಗಳಿಗೆ ಅದರದೆಯಾದ ಇತಿಹಾಸಸಗಳಿವೆ , ಅದರಂತೆ ಈ ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು ಬದುಕನ್ನೇ ಸುಂದರಗೊಳಿಸಿ ವೆ. ನಮ್ಮ ಹಿರಿಯರು ಕೆಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ . ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿಯಾಗಿ, ಸೂರ್ಯ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿಯಾಗಿ, ಪ್ರಕೃತಿಯ ಉಲ್ಲಾಸಮಯ ದಿನಗಳ ಆರಂಭವನ್ನು ವಸಂತ ಋತುಮಾನ ಆಗಮನವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನದಂದು ಬಲಿಪಾಡ್ಯಮಿ ಆಚರಿಸಲಾಗುತ್ತದೆ.

ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಸಮಸ್ತ ಲೋಕಗಳನ್ನು ಗೆದ್ದು ತನ್ನ ವಶದಲ್ಲಿಟ್ಟುಕೊಂಡು ಅಟ್ಟಹಾಸ ಮೆರೆಯುತ್ತಿದ್ದ , ಮಹಾದಾನಿಯೂ ಆಗಿರುವ ಬಲಿ ಚಕ್ರವರ್ತಿ ಒಮ್ಮೆ ದೊಡ್ಡ ಯಾಗವೊಂದನ್ನು ಕೈಗೊಳ್ಳುತ್ತಾನೆ. ಯಾಗದ ಪುಣ್ಯ ಪ್ರಾಪ್ತಿಗಾಗಿ ಬೇಡಿದವರಿಗೆ ಬೇಡಿದ ದಾನವನ್ನು ನೀಡುವ ನಿರ್ಧಾರವನ್ನು ಕೈಗೊಂಡ ಇವನ ಗರ್ವವನ್ನು ಮುರಿಯಲು ಮಹಾವಿಷ್ಣುವು ವಾಮನ ರೂಪ ತಾಳಿ ಬಂದು ಮೂರು ಹೆಜ್ಜೆಯನ್ನು ಭೂಮಿಯನ್ನು ದಾನವಾಗಿ ಕೇಳುತ್ತಾನೆ.

ಇದನ್ನೂ ಓದಿ:- 1.5 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ಕದ್ದ 5 ಚೋರರ ಬಂಧನ;1589 ಮೊಬೈಲ್ ಗಳು ವಶಕ್ಕೆ

ಬಲಿಯ ಒಪ್ಪಿಗೆಯ ಮೇರೆಗೆ ಒಂದು ಹೆಜ್ಜೆಯನ್ನು ಭೂಮಿಯ ಮೇಲೂ , ಒಂದು ಹೆಜ್ಜೆಯನ್ನು ಆಕಾಶದ ಮೇಲೂ, ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟು ಮುಕ್ತಿ ಕರುಣಿಸುತ್ತಾನೆ. ಮುಂದೆ ವರ್ಷದಲ್ಲಿ ಒಮ್ಮೆ ಬಲಿ ಚಕ್ರವರ್ತಿಯನ್ನು ನೆನೆದು ಈ ಭೂಮಿಯಲ್ಲಿ ಸರ್ವ ಸಮೃದ್ಧಿಯಾಗಲೆಂದು ಗ್ರಾಮೀಣ ಕೃಷಿಕರು ಹೊಲಗಳಲ್ಲಿ ಹೂವು ನೈವೇದ್ಯಗಳನ್ನು ಅರ್ಪಿಸಿ ಮಹಾರಾಜರನ್ನು ಕೂಗಿ ಕರೆಯುವ ಪದ್ದತಿ ಇಂದಿಗೂ ಜೀವಂತವಾಗಿದೆ. ಹತ್ತು ಹಲವು ಹಬ್ಬಗಳನ್ನು ರೂಪಿಸಿದ್ದಾರೆ.

ಇಷ್ಟೊಂದು ಒಳ್ಳೆಯ ಆಶಯ, ಸಂಭ್ರಮ ತುಂಬಿಕೊಂಡ ಹಬ್ಬಗಳು ಇತ್ತೀಚಿಗೆ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ನಿಜವಾಗಲು ವಿಷಾದಕರ. ಈ ಜಾಗತೀಕರಣ ನಡುವೆ ಹಬ್ಬಗಳೆಂದರೆ ಡಿಸ್ಕೌಂಟ್‌ ಸೇಲ್‌, ಶಾಪಿಂಗ್‌ ಸಮಯಗಳಿಗೆ ಮಾತ್ರ ಸೀಮಿತವಾಗದೆ ನಮ್ಮ ಸುಂದರ ಸಂಸೃತಿಯ ಬಗೆಗೆ ಯುವ ಸಮುದಾಯಗಳು ಅರಿತು ಬೆರೆತು ಹಬ್ಬಗಳ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆ.

ಕುಂದಗನ್ನಡದ ಸಂಸ್ಕೃತಿಯಲ್ಲಿ ಗದ್ದೆಯಲ್ಲಿ ದೀಪ ಬೆಳಗುವುದು : ಗ್ರಾಮೀಣ ರೈತರು ಬಲೀಂದ್ರನನ್ನು ಅತ್ಯಂತ ಭಕ್ತ ಭಾವದಿಂದ ಭರಮಾಡಿಕೊಳ್ಳುವ ನಿಟ್ಟಿನಿಂದ ತೆಂಗಿನ ಮರದ ಒಣಗಿದ ಕೊನೆಯಿಂದ (ಕೊಂತಳಿ)ಸಿದ್ದಪಡಿಸಿದ ದೀಪ ( ನೆಣೆ ಕೋಲು ) ಗದ್ದೆಯಲ್ಲಿ ದೀಪ ಬೆಳಗಿ ಹಿಟ್ಟು (ಗೊಡಿØಟ್ಟು ),ಹೊಸ ಬೆಳೆಯ ಅವಲಕ್ಕಿ , ವೀಳ್ಯದೆಲೆ, ಅಡಿಕೆ, ಕೆಸ್ಕಾರ್‌ ಹೂವು, ಜಂಗಮ ಸೊಪ್ಪು, ಕೂಳಿ ಹೂವು ಹಾಗೂ ಕೋಳೆ ಹೂವುಗಳನ್ನು ಕೃಷಿ ಸಂಸ್ಕೃತಿಗೆ ಪೂರಕವಾಗಿ ಸಮರ್ಪಿಸುವ ವಿಶಿಷ್ಟ ಪದ್ಧತಿ ಇದೆ.

ಗದ್ದೆಗಳಿಗೆ ದೀಪ ಬೆಳಗಿದ ಬಳಿಕ ಕೃಷಿಕ ತನ್ನ ಮನೆಯಲ್ಲಿನ  ಹೊಲಿ ರಾಶಿ (ಭತ್ತದ ರಾಶಿ)ಗೆ ಪೂಜೆ ಸಲ್ಲಿಸಿದ ಬಳಿಗೆ ನಂಬಿಕೆಯಂತೆ ಹುಲ್ಲಿನ ರಾಶಿ (ಹುಲ್ಕುತ್ರಿ) , ಗೊಬ್ಬರದ ಗುಂಡಿಗೆ ದೀಪ ಹಚ್ಚುವ ಮೂಲಕ ದೀಪಾವಳಿ ಹಬ್ಬದ ದೀಪ ಕಾಣ್‌… ಮುಂಬಪ್ಪ ಕೊಡಿ ಕಾಣ್‌…. ಎಂದು ಕುಂದಗನ್ನಡದ ಗ್ರಾಮೀಣ ಕೃಷಿಕರು ಗೋವಿನ ಮುಂದೆ ನಿಂತು ಹೇಳಿ ನಂತರ ಹೊಸ ಬೆಳೆ ಹಾಗೂ ಹಿಟ್ಟನ್ನು ಗೋವುಗಳಿಗೆ ಸಮರ್ಪಿಸುವ ಸಂಪ್ರದಾಯವಿದೆ.

– ಟಿ.ಲೋಕೇಶ್ಆಚಾರ್ಯ ತೆಕ್ಕಟ್ಟೆ.

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.