Bangla Politics; ಬಾಂಗ್ಲಾ-ಪಾಕ್‌ ಭಾಯಿ ಭಾಯಿ! ಪಾಕ್‌ ಪರ ನೀತಿ ಅನುಸರಿಸುತ್ತಿರುವ ಬಾಂಗ್ಲಾ


Team Udayavani, Dec 10, 2024, 10:57 AM IST

ಬಾಂಗ್ಲಾ-ಪಾಕ್‌ ಭಾಯಿ ಭಾಯಿ! ಪಾಕ್‌ ಪರ ನೀತಿ ಅನುಸರಿಸುತ್ತಿರುವ ಬಾಂಗ್ಲಾ

53 ವರ್ಷಗಳ ಹಿಂದೆ ಬಾಂಗ್ಲಾದೇಶವು (ಅಂದಿನ ಪೂರ್ವ ಪಾಕಿಸ್ಥಾನ) ಭಾರತದ ನೆರವಿನೊಂದಿಗೆ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಅಂದಿನಿಂದ ತೀರಾ ಇತ್ತೀಚಿನ ದಿನಗಳವರೆಗೂ ಬಾಂಗ್ಲಾ ಮತ್ತು ಭಾರತದ ನಡುವೆ ಅತ್ಯುತ್ತಮ ಬಾಂಧವ್ಯವಿತ್ತು. ಆದರೆ ವಿದ್ಯಾರ್ಥಿಗಳ ಕ್ರಾಂತಿಗೆ ಶೇಖ್‌ ಹಸೀನಾ ಸರಕಾರ ಪದಚ್ಯುತಗೊಂಡ ಬಳಿಕ ಎಲ್ಲ ಲೆಕ್ಕಾಚಾರಗಳು ಬದಲಾಗುತ್ತಿವೆ. ಬಾಂಗ್ಲಾ ಈಗ ಭಾರತಕ್ಕಿಂತ ಪಾಕಿಸ್ಥಾನದತ್ತ ಹೆಚ್ಚು ಒಲುವು ತೋರುತ್ತಿದೆ. ಇದು ಸಹಜವಾಗಿಯೇ ಭಾರತದ ಪಾಲಿಗೆ ಒಳ್ಳೆಯ ನಡೆಯಲ್ಲ. ಆ ಕುರಿತು ಇಲ್ಲಿದೆ ಮಾಹಿತಿ.

ಅವಾಮಿ ಲೀಗ್‌ನ ಶೇಖ್‌ ಹಸೀನಾ ಸರಕಾರದ ಪತ­ನದ ಬಳಿಕ ಬಾಂಗ್ಲಾ ದೇಶದ ಒಟ್ಟು ಚಿತ್ರಣವೇ ಬದ­ಲಾ­ಗುತ್ತಿದೆ. ಜಾತ್ಯತೀತ ತತ್ತÌಗಳನ್ನಾಧರಿಸಿ ರಚನೆ­ಯಾಗಿದ್ದ ಆ ದೇಶವು ಈಗ ಇಸ್ಲಾಮಿಕ್‌ ಮೂಲಭೂತವಾದಿ ರಾಷ್ಟ್ರವಾಗುವತ್ತ ನಿಧಾನವಾಗಿ ಹೆಜ್ಜೆ ಇಡುತ್ತಿದೆ. ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಂತರ ಸರಕಾರ ನೀತಿಗಳು, ಅನುಸರಿಸುತ್ತಿರುವ ಕ್ರಮಗಳು ಈ ಮಾತನ್ನು ಪುಷ್ಟೀಕರಿಸುತ್ತಿವೆ. ವಿಶೇಷವಾಗಿ ಪಾಕಿಸ್ಥಾನದತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ ಭಾರತ ದೃಷ್ಟಿಯಿಂದ ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ­ಪಡುತ್ತಿದ್ದಾರೆ. ಪಾಕಿಸ್ಥಾನಕ್ಕೆ ಅನುಕೂಲವಾಗುವ ಅನೇಕ ನಿರ್ಧಾರಗಳನ್ನು ಬಾಂಗ್ಲಾ ಮಧ್ಯಾಂತರ ಸರಕಾರ ಕೈಗೊಳ್ಳುತ್ತಿದೆ. ದೇಶಕ್ಕೆ ಭೇಟಿ ನೀಡುವವರಿಗೆ ವೀಸಾ ನೀಡಿಕೆಯಲ್ಲಿ ರಿಯಾಯಿತಿ ಸೇರಿ ಹಲವು ರೀತಿಯ ನೆರವುಗಳನ್ನು ನೀಡಲು ತೀರ್ಮಾನಿಸಿದೆ. ಜತೆಗೆ ಮಿಲಿಟರಿ ಸಹಭಾಗಿತ್ವ, ನೇರ ವಿಮಾನಯಾನ ಸಂಪರ್ಕ ಸೇರಿ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳಲು ಮುಂದಾ­ಗಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ಭಾರತವು ಭಾರೀ ಎಚ್ಚರಿಕೆಯಿಂದಲೇ ಗಮನಿಸುತ್ತಿದೆ.

ಪಾಕಿಸ್ಥಾನದವರಿಗೆ ವೀಸಾ ರಹಿತ ಪ್ರವೇಶ

ಶೇಖ್‌ ಹಸೀನಾ ನೇತೃತ್ವದ ಸರಕಾರದ ಅವಧಿಯಲ್ಲಿ ಪಾಕಿಸ್ಥಾನದ ಜತೆಗೆ ಬಾಂಗ್ಲಾದೇಶಕ್ಕೆ ಹೇಳಿಕೊಳ್ಳುವಂಥ ಬಾಂಧವ್ಯ ಇರಲಿಲ್ಲ. ಜತೆಗೆ ಪಾಕಿಸ್ಥಾನ ಮೂಲದ ನಾಗರಿಕರು ಬಾಂಗ್ಲಾ ದೇಶಕ್ಕೆ ಪ್ರವೇ­ಶಿಸಬೇಕಾಗಿದ್ದರೆ ಸರಕಾರದಿಂದ ಅನುಮತಿ ಪಡೆಯಬೇಕಾಗಿತ್ತು. ಆದರೆ ಈಗ ಸರಕಾರ ಬದಲಾಗಿದೆ ಮತ್ತು ನಿಯಮಗಳೂ ಬದಲಾಗುವ ಹಂತದಲ್ಲಿದೆ. ಅಲ್ಲಿನ ಮಧ್ಯಾಂತರ ಸರಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದ ಪ್ರಕಾರ ಪಾಕಿಸ್ಥಾನದವರು ಬಾಂಗ್ಲಾದೇಶ ಪ್ರವೇಶ ಮಾಡಬೇಕಾದರೆ ವೀಸಾ ರಹಿತ ಮತ್ತು ಯಾವುದೇ ಅಡೆತಡೆ ಇಲ್ಲದೆ ಪ್ರವೇಶಿಸಬಹುದು ಎಂದಿದೆ. ಜತೆಗೆ ಜಗತ್ತಿನ ಪ್ರಮುಖ ದೇಶಗಳಲ್ಲಿರುವ ತನ್ನ ರಾಯಭಾರ ಕಚೇರಿಗಳಿಗೆ ಈ ನಿಟ್ಟಿನಲ್ಲಿ ಸಂದೇಶವನ್ನೂ ರವಾನಿಸಿ, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಕಟ್ಟಪ್ಪಣೆಯನ್ನೂ ವಿಧಿಸಿದೆ.

ಬಾಂಗ್ಲಾಕ್ಕೆ ಸ್ನೇಹಹಸ್ತ ಚಾಚಿದ್ದ ಪಾಕಿಸ್ಥಾನ

ಅಚ್ಚರಿಯ ವಿಚಾರವೆಂದರೆ ಬಾಂಗ್ಲಾದೇಶ ಪಾಕಿಸ್ಥಾನ ನಾಗರಿ­ಕರಿಗೆ ಯಾವುದೇ ತನಿಖೆ, ತಪಾಸಣೆ, ನಿಯಮ ಇಲ್ಲದೆ ಬಾಂಗ್ಲಾ­ದೇಶ ಪ್ರವೇಶಕ್ಕೆ ಅನುವು ಮಾಡಿಕೊಡುವುದಕ್ಕಿಂತ ಮೊದಲು ಸೆಪ್ಟಂಬರ್‌ನಲ್ಲಿ ಪಾಕಿಸ್ಥಾನವೇ ಬಾಂಗ್ಲಾದೇಶದ ನಾಗರಿಕರಿಗೆ ವೀಸಾ ರಹಿತ ಪ್ರವೇಶ ಪ್ರಕಟಿಸಿತ್ತು. ಇದರಿಂದಾ­ಗಿಯೇ ಬಾಂಗ್ಲಾ ದೇಶ ಸರಕಾರ ಸ್ಫೂರ್ತಿಗೊಂಡು ಪಾಕಿಸ್ಥಾನದವರಿಗೆ ಮುಕ್ತ ಪ್ರವೇಶಕ್ಕೆ ಆಹ್ವಾನ ನೀಡಿದೆ ಎಂಬ ವಿಶ್ಲೇಷಣೆಗಳೂ ಇವೆ. ಆದರೆ ವಾಸ್ತವದಲ್ಲಿ ಭಾರತದ ಸ್ನೇಹಕ್ಕಿಂತಲೂ ಪಾಕಿಸ್ಥಾನದ ಬಾಂಧವ್ಯ ವನ್ನು ಹೆಚ್ಚು ಗಟ್ಟಿಗೊಳಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಪಾಕಿಸ್ಥಾನದಿಂದ ಶಸ್ತ್ರಾಸ್ತ್ರ ಖರೀದಿ!

2 ದೇಶಗಳ ನಡುವೆ ರಕ್ಷಣ ಬಾಂಧವ್ಯ ಎನ್ನುವುದು ಏರಿಳಿತದ ಭಾಗವಾಗಿಯೇ ಇತ್ತು. 1983ರಿಂದ 1990ರ ನಡುವೆ ಬಾಂಗ್ಲಾ­ದೇಶದ ಅಧ್ಯಕ್ಷರಾಗಿದ್ದ ಹುಸೈನ್‌ ಮೊಹಮ್ಮದ್‌ ಇರ್ಷಾದ್‌ ಅವಧಿಯಲ್ಲಿ ಕೊಂಚ ಪ್ರಗತಿ ಕಂಡಿತ್ತು. ಈ ಅವಧಿಯಲ್ಲಿ ಪಾಕಿಸ್ಥಾನ ಸರಕಾರ ಜೆ-6 ಯುದ್ಧ ವಿಮಾನಗಳನ್ನು ಬಾಂಗ್ಲಾದೇಶದ ವಾಯುಪಡೆಗೆ ಉಡುಗೊರೆಯಾಗಿ ನೀಡಿತ್ತು. ಬದಲಾಗಿರುವ ಸರಕಾರದಲ್ಲಿ ಮತ್ತೆ ಸಂಬಂಧ ಚಿಗುರುವ ಸಾಧ್ಯತೆಗಳಿವೆ. ಅದಕ್ಕೆ ಪೂರಕ ಬೆಳವಣಿಗೆಗಳೂ ನಡೆದಿವೆ. ಶೇಖ್‌ ಹಸೀನಾ ನೇತೃತ್ವದ ಸರಕಾರ ಪತನಗೊಂಡ 3 ವಾರಗಳಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಬಾಂಗ್ಲಾದೇಶ ಪಾಕ್‌ಗೆ ಮನವಿ ಮಾಡಿತ್ತು. ನಮ್ಮ ದೇಶದ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿ ಪ್ರಕಾರ 40,000 ಸುತ್ತುಗಳಷ್ಟು ಗುಂಡು, ಯುದ್ಧ ಟ್ಯಾಂಕ್‌ಗಳಿಗೆ ಪೂರೈಕೆ ಮಾಡುವ 2,000 ಮದ್ದುಗುಂಡು­ಗಳು, 40 ಟನ್‌ ಆರ್‌ಡಿಎಕ್ಸ್‌, ಭಾರೀ ಪ್ರಮಾಣದಲ್ಲಿ ಹಾನಿ ಉಂಟು ಮಾಡುವ 2,900 ಸ್ಫೋಟಕಗಳನ್ನು ಪೂರೈಸಬೇಕು ಎಂದು ಪಾಕಿಸ್ಥಾನಕ್ಕೆ ಬಾಂಗ್ಲಾದೇಶ ಮನವಿ ಮಾಡಿತ್ತು.

47 ವರ್ಷ ಬಳಿಕ ಸಮುದ್ರ ಮಾರ್ಗ ಸಕ್ರಿಯ

2 ದೇಶಗಳ ನಡುವೆ ವಾಣಿಜ್ಯಿಕ ಬಾಂಧವ್ಯಗಳು ಇದ್ದವಾದರೂ ಅದು ನೇರವಾಗಿ ಮತ್ತು ಗಣನೀಯ ಪ್ರಮಾಣದಲ್ಲಿ ಇರಲಿಲ್ಲ. ಶೇಖ್‌ ಹಸೀನಾ ನೇತೃತ್ವದ ಸರಕಾರದ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಏನೂ ಇರಲಿಲ್ಲ. ಆದರೆ ಮಧ್ಯಾಂತರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ನೇರವಾಗಿ ಸಮು­ದ್ರದ ಮೂಲಕ ಸರಕು ಸಾಗಣೆ ಮಾಡುವ ನಿಟ್ಟಿನಲ್ಲಿ 2 ದೇಶಗಳು ಒಂದು ಹೆಜ್ಜೆ ಮುಂದಿರಿಸಿವೆ. ಕರಾಚಿಯಿಂದ ಬಾಂಗ್ಲಾದೇಶದ ಚಿತ್ತಗಾಂಗ್‌ ಬಂದರಿಗೆ ಹಡಗೊಂದು ಬಂದಿತ್ತು. 47 ವರ್ಷ­ಗಳಲ್ಲಿಯೇ ಮೊದಲ ಬಾರಿಗೆ 2 ದೇಶಗಳ ನಡುವೆ ನೇರವಾಗಿ ಸಮುದ್ರದ ಮೂಲಕ ವ್ಯಾಪಾರ ಬಾಂಧವ್ಯಕ್ಕೆ ವೇದಿಕೆ ಸೃಷ್ಟಿಯಾ­ಗಿದೆ. ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಅನುಷ್ಠಾನಗೊಳಿಸಲು ಸಹಮತವೂ ವ್ಯಕ್ತವಾಗಿದೆ.

ನೋಟಿಂದ ಹಸೀನಾ ತಂದೆ ಚಿತ್ರ ಮಾಯ!

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರು ಶೇಖ್‌ ಹಸೀನಾ ಅವರ ತಂದೆ ಮುಜಿಬುರ್‌ ರೆಹಮಾನ್‌. ಆ ಕಾರಣಕ್ಕಾಗಿ ಅವರನ್ನು ಬಂಗಬಂಧು ಎಂದು ಕರೆಯಲಾ ಗುತ್ತದೆ. ಬಾಂಗ್ಲಾ ಕರೆನ್ಸಿಗಳಲ್ಲಿ ರೆಹಮಾನ್‌ ಅವರ ಭಾವಚಿತ್ರಗಳಿದ್ದವು. ಆದರೆ ಮಧ್ಯಾಂತರ ಸರಕಾರವು ಇದೀಗ ಅವರ ಭಾವಚಿತ್ರ ಹೊರತಾದ ಹೊಸ ಕರೆನ್ಸಿ ಮುದ್ರಿಸುತ್ತಿದೆ. ಈ ಮೂಲಕ ತನ್ನದೇ ದೇಶದ ಐತಿಹಾಸಿಕ ಕುರುಹುಗಳನ್ನು ಅಳಿಸಿ ಹಾಕುತ್ತಿದೆ. ಇದು ಕೂಡ ಪಾಕ್‌ ಪ್ರೇರಿತ ನಡೆ ಎನ್ನಲಾಗುತ್ತಿದೆ.

ಭಾರತಕ್ಕೆ ಆತಂಕ ಏಕೆ?

ಬಾಂಗ್ಲಾದೇಶ ಮತ್ತು ಪಾಕಿಸ್ಥಾನಗಳು ಸೌಹಾರ್ದಯುತ­ವಾಗಿ ಕಾನೂನು ಚೌಕಟ್ಟಿನಲ್ಲಿ ಏನೇ ನಡೆಸಿದರೂ ಭಾರತಕ್ಕೆ ತಲೆಬಿಸಿ ಇರುವುದಿಲ್ಲ. ಆದರೆ ಹೇಳಿ ಕೇಳಿ ಪಾಕಿಸ್ಥಾನ ನಮ್ಮ ದೇಶದ ವಿರುದ್ಧ ಸದಾ ಕತ್ತಿ ಮಸೆಯುವ ದೇಶ. ಬಾಂಗ್ಲಾ­ದೇಶದಲ್ಲಿ ಸದ್ಯ ಇರುವ ಮಧ್ಯಾಂತರ ಸರಕಾ ರವೂ ಅದೇ ನಿಲುವು ಹೊಂದುತ್ತಾ ಇರುವುದು ಸವಾಲಿನ ಅಂಶವಾಗಿದೆ. ಜತೆಗೆ ಅಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾಕರ ಮೇಲೆ ದಾಳಿ ಹೆಚ್ಚುತ್ತಿರುವುದರಿಂದ 2 ದೇಶಗಳು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಲು ಹೊರಟಿರುವ ಸಮ್ಮಿಳನ ಆತಂಕಕಾರಿ. ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ಥಾನ ಪ್ರೇರಿತ ದಾಳಿ, ಅನಪೇಕ್ಷಿತ ಘಟನೆಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಕೃತ್ಯಗಳನ್ನು ನಡೆಸಲು ಆರಂಭಿಸಿದರೆ ಅದು ನಿಜಕ್ಕೂ ಊಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ತಂದೊಡ್ಡಲಿದೆ.

ಭಾರತದಲ್ಲಿ ಹಸೀನಾ: ಬಾಂಗ್ಲಾಗೆ ಅಪಥ್ಯ

ಕಳೆದ ಆಗಸ್ಟ್‌ ತಿಂಗಳಲ್ಲಿ ಬಾಂಗ್ಲಾ ದೇಶವು ಕ್ಷಿಪ್ರ ಕ್ರಾಂತಿಗೆ ಕಾರಣವಾಯಿತು. ಉದ್ಯೋಗದಲ್ಲಿನ ಮೀಸಲಾತಿ ತಾರತಮ್ಯ ಕುರಿತು ಶುರುವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಶೇಖ್‌ ಹಸೀನಾ ಸರಕಾರವನ್ನು ಕಿತ್ತೂಗೆಯುವಲ್ಲಿ ಯಶಸ್ವಿಯಾಯಿತು. ಆಗ ದೇಶ ತೊರೆದ ಶೇಖ್‌ ಹಸೀನಾ ಈಗ ಭಾರತದಲ್ಲಿದ್ದಾರೆ. ಈ ಸಂಗತಿ ಕೂಡ ಬಾಂಗ್ಲಾ ಮಧ್ಯಾಂತರ ಸರಕಾರಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ, ನಿಧಾನವಾಗಿ ಬಾಂಗ್ಲಾದೇಶ, ಭಾರತಕ್ಕೆ ಪ್ರತಿಕೂಲವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಇದೇ ಕಾರಣಕ್ಕೆ, ಬಾಂಗ್ಲಾದೇಶದಲ್ಲಿನ ಹಿಂದೂಗಳು ಮತ್ತು ಅವರ ಆರಾಧಾನ ಸ್ಥಳಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ.

ಸದಾಶಿವ.ಕೆ.

ಟಾಪ್ ನ್ಯೂಸ್

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.