ನೀವೂ ಭೂ ಒಡೆಯ ಆಗಿ…ಇಲ್ಲಿದೆ ಮಾಹಿತಿ!
Team Udayavani, Dec 27, 2022, 7:45 AM IST
ಡಾ| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯು ಪರಿಶಿಷ್ಟ ಜಾತಿ- ಪಂಗಡ ನಿಗಮದ ಪ್ರತಿಷ್ಠಿತ ಯೋಜನೆಯಾಗಿದೆ. ಈ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಭೂಮಿಯನ್ನು ಖರೀದಿಸಿ ಶೇ.50 ಸಹಾಯಧನದೊಂದಿಗೆ ನೀಡಲಾಗುವುದು. ಆದಿಕರ್ನಾಟಕ, ಆದಿ ದ್ರಾವಿಡ ಸಹಿತ ಇತರ ಉಪಜಾತಿಗೆ ಸೇರಿರುವ ಅರ್ಹರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಪ್ರತೀ ವರ್ಷ ಎಪ್ರಿಲ್ ಬಳಿಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ನಿಗದಿತ ಅವಧಿಯಲ್ಲಿ ಕಡ್ಡಾಯವಾಗಿ ಆನ್‌ಲೈನ್ ಸುವಿಧ ವೆಬ್‌ಸೈಟ್ ಅಥವಾ ಆ್ಯಪ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗೆ ಬೇಕಾಗುವ ದಾಖಲೆ ಏನು?
1. ಅರ್ಜಿದಾರರ ಭಾವಚಿತ್ರ
2. ಜಾತಿ- ಆದಾಯ ಪ್ರಮಾಣ ಪತ್ರ
3. ಪಡಿತರ ಚೀಟಿ/ ಮತದಾರರ ಗುರುತಿನ ಚೀಟಿ/ ಆಧಾರ್ ಕಾರ್ಡ್ ಪ್ರತಿ
4. ಯೋಜನಾ ವರದಿ/ ದರ ಪಟ್ಟಿ
ಯಾವ್ಯಾವ ಜಿಲ್ಲೆ
ಅವರು ಅರ್ಹರು?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ. ಇತರ ಎಲ್ಲ ಜಿಲ್ಲೆಗಳು.
ಯೋಜನೆ ಜಾರಿಗೊಳಿಸಿರುವ ನಿಗಮಗಳು ಯಾವುವು?
1. ಅಂಬೇಡ್ಕರ್ ಅಭಿವೃದ್ಧಿ ನಿಗಮ
2. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ
ಯಾರ್ಯಾರು ಅರ್ಹರು?
ಪರಿಶಿಷ್ಟ ಜಾತಿ-ಪಂಗಡ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರು ಆಗಿರಬೇಕು(ಕಳೆದ 15 ವರ್ಷದಿಂದ ರಾಜ್ಯದ ನಿವಾಸಿ ಆಗಿರಬೇಕು).
ಈ ಯೋಜನೆಗೆ ಜಮೀನು ಮಾರಾಟ ಮಾಡುವ ಭೂ ಮಾಲಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು.
8 ವರ್ಷದಿಂದ 50 ವರ್ಷ ವಯೋಮಿತಿ ಹೊಂದಿರಬೇಕು.
ಕುಟುಂಬದ ಯಾವುದೇ ಸದಸ್ಯರು ಸರಕಾರಿ/ ಅರೆ ಸರಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿ ಇರಬಾರದು.
ಈ ಹಿಂದೆ ಕುಟುಂಬದವರು ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
ಅರ್ಜಿದಾರರ ವಾರ್ಷಿಕ ವರಮಾನ ಗ್ರಾಮೀಣ ಭಾಗಕ್ಕೆ 1.5 ಲಕ್ಷ ರೂ. ಹಾಗೂ ನಗರ ನಿವಾಸಿಗಳಿಗೆ 2 ಲಕ್ಷ ರೂ. ಮಿತಿಯಲ್ಲಿರಬೇಕು.
ಸಿಗುವ ಸೌಲಭ್ಯ
ಈ ಯೋಜನೆಯಡಿ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಘಟಕ ವೆಚ್ಚ 15 ಲಕ್ಷ ರೂ.ಗಳಲ್ಲಿ ಲಭ್ಯವಾಗುವಷ್ಟು ಖುಷ್ಕಿ ಅಥವಾ ತರಿ/ ಭಾಗಾಯ್ತು ಜಮೀನನ್ನು ಖರೀದಿಸಿ ನೀಡಲಾಗುತ್ತದೆ. (ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಘಟಕದ ವೆಚ್ಚ 20 ಲಕ್ಷ ರೂ. ಆಗಿದೆ.) ಇದರಲ್ಲಿ ಶೇ.50ರಷ್ಟು ಸಹಾಯಧನ ಸಿಗುತ್ತದೆ. ಉಳಿದ ಶೇ.50 ಸಾಲವಾಗಿರುತ್ತದೆ. ಈ ಸಾಲವನ್ನು 10 ವಾರ್ಷಿಕ ಸಮ ಕಂತುಗಳಲ್ಲಿ ಶೇ.6ರ ಬಡ್ಡಿದರದಲ್ಲಿ ಮರು ಪಾವತಿ ಮಾಡಬೇಕಿದೆ. ಫಲಾನುಭವಿಯು ವಾಸಿಸುವ ಸ್ಥಳದಿಂದ ಗರಿಷ್ಠ 10 ಕಿ.ಮೀ.ವ್ಯಾಪ್ತಿಯೊಳಗೆ ಜಮೀನನ್ನು ಖರೀದಿಸಿ ನೀಡಲಾಗುತ್ತದೆ.
-ಹರೀಶ್, ಹಾಡೋನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.