ರಾಜಕಾರಣಿಯಾಗಿ ಬೆಳೆಯುವುದಕ್ಕಿಂತ ಬೆಳೆದು ರಾಜಕಾರಣಿಯಾಗಬೇಕು


Team Udayavani, Mar 17, 2019, 12:30 AM IST

q-3.jpg

ಪ್ರಸ್ತುತ ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ ಆಗು ಹೋಗುಗಳ ಪರಿವೆಯಿಲ್ಲದೆ ಯಾವುದೇ ಸಂಗತಿಗಳನ್ನೂ ಆಳುವವರು ನಿಭಾಯಿಸಲಾಗದು. ಕಣ್ಣೀರು ಒರೆಸಲು ಬದ್ಧರಾದವರು ಕಣ್ಣೀರು ಹಾಕಬಾರದು. ಅದು ನಗೆಗೀಡಾಗಲೂಬಹುದು. ರಾಜಕಾರಣ ಜನಪ್ರಿಯತೆಯ ಅಗ್ನಿಪರೀಕ್ಷೆಯೂ ಅಲ್ಲ, ಅದಕ್ಕೆ ಜನಪ್ರಿಯತೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳಲೂ ಬೇಕಿಲ್ಲ.

ಯಾರಾದರೂ ರಾಜಕಾರಣಿಯಾಗಬಹುದೇ? -ಈ ಪ್ರಶ್ನೆ “ಮಿಲಿಯನ್‌ ಡಾಲರ್‌’ನದ್ದಾಗಬೇಕಿಲ್ಲ. ಸಾಮಾನ್ಯ ಪ್ರಜ್ಞೆಗೇ ಇದಕ್ಕೆ ಖರೆ ಉತ್ತರವಿದೆ. ಓ ಚುನಾವಣೆ ಬರುವುದೇ ತಡ ರಾಜಕೀಯ ಪಕ್ಷಗಳಲ್ಲಿ ಏನೆಲ್ಲ ಸಂಭ್ರಮ, ಸಡಗರಗಳು. ಗೆಲ್ಲಲು ಹುನ್ನಾರಗಳು.  “ನೀವು ನಿಲ್ಲಿ’, “ಟಿಕೆಟ್‌ ನನಗೆ ಕೊಡಿ’, “ನನಗೆ ಬೇಡ, ನನ್ನ ಸಹೋದರನನ್ನು ನಿಲ್ಲಿಸಿ’, “ನನಗೆ ಟಿಕೆಟ್‌ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗುವೆ’, “ಟಿಕೆಟ್‌ಗಾಗಿ ಈ ಪಕ್ಷ ಸೇರಿದ್ದೇನೆ’ ಮುಂತಾದ ಅಂಬೋಣಗಳು, ಆಟಾಟೋಪಗಳು. ಚುನಾವಣೆಗೆ ನಿಲ್ಲುವುದೆಂದರೆ ಮಕ್ಕಳಾಟವಲ್ಲ. ರಾಜಕಾರಣಿಗೆ ಕನಿಷ್ಠ ಅರ್ಹತೆಗಳಾದರೂ ಬೇಕಾಗುತ್ತವೆ. ಆಳಾಗಬಲ್ಲವರು ಮಾತ್ರ ಅರಸರಾಗಬಲ್ಲರು. ಅಮೆರಿಕದ  ಖ್ಯಾತ ಪತ್ರಕರ್ತ, ವ್ಯಂಗ್ಯಚಿತ್ರಕಾರರಾಗಿದ್ದ ಕಿನ್‌ ಹಬ್ಬರ್ಡ್‌ (1838-1930) ನಮಗೇನೋ ಅತ್ಯುತ್ತಮ ಅಭ್ಯರ್ಥಿಯನ್ನು ಚುನಾಯಿಸಬೇಕೆಂದಾಸೆ, ಆದರೆ ಅಂಥವರು ಎಂದೂ ಸ್ಪರ್ಧಿಸುವುದೇ ಇಲ್ಲವಲ್ಲ! ಎಂದು ವ್ಯಂಗ್ಯವಾಡಿದ್ದಾರೆ. 

ನಿಷ್ಠುರ ಸಲಹೆಯೆಂದರೆ ಏಕಾಏಕಿ ಸಂಸತ್ತಿಗೆ ನಿಲ್ಲುವುದಕ್ಕಿಂತ ಮೊದಲು ಜಿಲ್ಲಾ ಪರಿಷತ್ತು, ನಂತರ ವಿಧಾನ ಸಭೆಗೆ ಪ್ರಜಾಸೇವೆ ನಿಮಿತ್ತ ಸ್ಪರ್ಧೆಗಿಳಿದು ಆಯ್ಕೆಯಾಗಿ ಅನುಭವ ಗಳಿಸುವುದು ಒಳ್ಳೆಯದು. ರಾಜಕಾರಣಿಯಾಗಿ ಬೆಳೆಯುವುದಕ್ಕಿಂತಲೂ ಬೆಳೆದು ರಾಜಕಾರಣಿಯಾಗಬೇಕು. ಉಮೇದುವಾರರೇ, ನೀವು ಸಾರ್ವಜನಿಕ ವ್ಯಕ್ತಿಯಾಗ ಹೊರಟಿದ್ದೀರಿ. ಸಮಾಜ ನಿಮ್ಮ ಚಲನವಲನ, ಚಾರಿತ್ರದ ಬಗ್ಗೆ ಹದ್ದಿನ ಕಣ್ಣಿರಿಸಿರುತ್ತದೆ ಎನ್ನುವುದನ್ನು ಮರೆಯಬೇಡಿ. ಜನಪ್ರತಿನಿಧಿಯೆಂದರೆ ಜನರ ಆಶೋತ್ತರಗಳ, ಕನಸುಗಳ ಪ್ರತಿನಿಧಿ. ದೇಶ, ನಾಡು, ನುಡಿ, ಇತಿಹಾಸ, ಪರಂಪರೆ, ನಮ್ಮ ಸಂವಿಧಾನ, ನೆಲ, ಜಲ ಇತ್ಯಾದಿ ಬಗ್ಗೆ ಉಮೇದುವಾರರೇನೂ ಪಾರಂಗತರಾಗಬೇಕಿಲ್ಲ, ಆ ನಿಟ್ಟಿನಲ್ಲಿ ಕಿಂಚಿತ್ತಾದರೂ ಅರಿವಿರಬೇಕು. ಎಷ್ಟಾದರೂ ಭಾವೀ ಶಾಸನ ರೂಪಕರು ಅವರು. ನಾಳೆ ಗಂಭೀರ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲಕ್ಕೂ ಕಾರ್ಯಾಂಗವನ್ನೇ ಅವಲಂಬಿಸುವಂತಾಗ ಬಾರದು. ಹಾಗೆ ನೋಡಿದರೆ ಕಾರ್ಯಾಂಗವನ್ನು ಮುನ್ನಡೆ ಸಬೇಕಾದವರೇ ಅವರು. 

ಮಂತ್ರಿಗಿರಲಿ, ಜನಪ್ರನಿಧಿಗೇ ಅವಶ್ಯವಾಗಿ ಎಲ್ಲ ಸಂಗತಿ, ವಿದ್ಯಮಾನಗಳ ಸ್ಥೂಲ ಪರಿಚಯವಿರಬೇಕು. ಇಲ್ಲವಾದರೆ ತಂತಮ್ಮ ಕರ್ತವ್ಯ ನಿರ್ವಹಿಸಲು ಧೈರ್ಯ, ಆತ್ಮವಿಶ್ವಾಸವೇ ಇರದು. ಹೇಗೆ ನಿರ್ಣಯಿ ಸಿದರೆ ಹೇಗೋ ಎಂಬ ಅಸ್ಪಷ್ಟತೆ ಆಡಳಿತವನ್ನು ಅಷ್ಟರಮಟ್ಟಿಗೆ ದುರ್ಬಲವಾಗಿಸುತ್ತದೆ. ಒಂದಷ್ಟು ಸಾಧ್ಯತೆಗಳನ್ನು ಪರಿಶೀಲಿಸೋಣ. ನೀರಾವರಿ ಸಚಿವರಿಗೆ ನೀರಿನ ಪ್ರಮಾಣ, ಅದರ ಹರಿವಿನ ಮಾಪನ ತಿಳಿದಿದ್ದರೆ ತಾನೆ ಜಲಾಶಯಗಳ ಸಂಗ್ರಹವೆಷ್ಟು, ಎಷ್ಟು ಹೊಲ ಗದ್ದೆಗಳಿಗೆ ವಿತರಿಸಬ ಹುದೆಂದು ತೀರ್ಮಾನಿಸಲು ಆದೀತು. ಒಂದು ಟಿ.ಎಂ.ಸಿ. ಅಥವಾ ಸಿ.ಸಿ. ನೀರೆಂದರೆಷ್ಟು ಅವರಿಗೇ ಗೊತ್ತಿಲ್ಲದಿದ್ದರೆ ಹೇಗೇ?!  7 ಐ.ಎ.ಎಸ್‌./ಐ.ಪಿ.ಎಸ್‌. ಅಧಿಕಾರಿಗಳನ್ನು ಮೂರು ಜಿಲ್ಲೆಗಳಿಗೆ ಎಷ್ಟು ಬಗೆಯಲ್ಲಿ ನಿಯೋಜಿಸಲು ಸಾಧ್ಯವೆನ್ನುವುದನ್ನು “ಪರ್ಮಿಟೇಶನ್ಸ್‌ ಅಂಡ್‌ ಕಾಂಬಿನೇಶನ್ಸ್‌ ‘ ಬಳಸಿ ಲೆಕ್ಕಿಸುವ ಅತಿ ಸರಳ ಗಣಿತ ತಿಳಿವಳಿಕೆ ರಾಜಕಾರಣಿಗೆ ಇರಬೇಕು. 

ಪ್ರಸ್ತುತ ಸಾಮಾಜಿಕ, ಭಾಷಿಕ, ಸಾಂಸ್ಕೃತಿಕ ಆಗು ಹೋಗುಗಳ ಪರಿವೆಯಿಲ್ಲದೆ ಯಾವುದೇ ಸಂಗತಿಗಳನ್ನೂ ಆಳುವವರು ನಿಭಾಯಿಸಲಾಗದು. ಕಣ್ಣೀರು ಒರೆಸಲು ಬದ್ಧರಾದವರು ಕಣ್ಣೀರು ಹಾಕ ಬಾರದು. ಅದು ನಗೆಗೀಡಾಗಲೂಬಹುದು. ರಾಜ ಕಾರಣ ಜನಪ್ರಿಯ ತೆಯ ಅಗ್ನಿಪರೀಕ್ಷೆಯೂ ಅಲ್ಲ, ಅದಕ್ಕೆ ಜನಪ್ರಿಯತೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳಲೂ ಬೇಕಿಲ್ಲ.ಸರಿ, ನಾಮಪತ್ರ ಸಲ್ಲಿಸಿದ್ದಾಯಿತೆನ್ನಿ. ಈಗ ಪ್ರಚಾರ. ಉಮೇದುವಾರರು ಯಾವುದೇ ಆವೇಶ, ಉದ್ವೇಗ ಕ್ಕೊಳಗಾಗಬಾರದು. ಈಡೇರಿಸಲಾಗದ ಭರವಸೆ, ಆಶ್ವಾಸನೆಗಳನ್ನು ನೀಡಬಾರದು. ಕುಡಿ ಯಲೂ ನೀರಿಲ್ಲದ ಸ್ಥಳಗಳಲ್ಲಿ ಈಜು ಕೊಳ ನಿರ್ಮಿಸಿಕೊಡುತ್ತೇನೆ ಎನ್ನುವುದು ಅದೆಷ್ಟು ಬಾಲಿಶ? ಅದು ಹಾಗಿರಲಿ ತೀರ ಪ್ರದೇಶವಲ್ಲವೆನ್ನುವುದನ್ನು ಮರೆತು ಖಂಡಿತವಾಗಿ ಬಂದರು ಕಟ್ಟೆ ಕಟ್ಟಿಸೋಣ ಎಂದು ಭರವಸೆಯಿತ್ತರೆ ಅದೆಂಥ ನಗೆಪಾಟಲು? ಚುನಾವಣೆಗೆ ನಿಂತು ನಿರೀಕ್ಷೆಗೂ ಮೀರಿದ ಅಧಿಕ ಮತಗಳನ್ನೂ ಗಳಿಸಬ ಹುದು. ಆದರೆ ಅಧಿಕಾರ ಸೂತ್ರ ಹಿಡಿದು ಯಶಸ್ವಿಯಾಗುವುದು ಮುಖ್ಯ. ಜನರು ಕೊಟ್ಟ ಕುದರೆಯೇರಿ ಸೈ ಎನ್ನಿಸಿಕೊಂಡಾಗಲೇ ಪಡೆದ ಮತಗಳ ಸಾರ್ಥಕ್ಯ. ಒಂದಷ್ಟು ವಿಪರ್ಯಾಸಗಳನ್ನು ಅವಲೋಕಿಸೋಣ. ಇನ್ನೂ ಅಧಿಕೃತ ಜಯ ಘೋಷಣೆಯ ಪತ್ರ ಬರಲಿಕ್ಕಿಲ್ಲ ಅಭಿಮಾನಿಗಳ ಮೇರೆ ಮೀರಿದ ಉತ್ಸಾಹ, ಇನ್ನು ಸ್ವರ್ಗವನ್ನೇ ತಮ್ಮ ನೇತಾರರು ನಿರ್ಮಿಸಿಯಾರೆಂಬ ಭ್ರಮೆ ಸಲ್ಲದು. ಅದ್ದೂರಿಯಾಗಿ ಜಯಶಾಲಿಗಳ ಮೆರವಣಿಗೆ, ಹಾರ ತುರಾಯಿ ಅರ್ಪಣೆಗೆ ಎಗ್ಗಿಲ್ಲ. ಹಿಂದೆ ಹೊಗಳುಭಟರ ಪಡೆ. ಈಗಷ್ಟೇ ಆಯ್ಕೆಯಾಗಿ ದ್ದಾರೆ. ಸ್ವಲ್ಪ ತಮ್ಮ ಕರ್ತವ್ಯ ಗಳೇನೇನು ಪರಿಚಯಿಸಿಕೊಳ್ಳಲಿ ಎನ್ನುವುದಲ್ಲ. ಬರೀ ಸನ್ಮಾನ, ಸತ್ಕಾರ, ಅಭಿನಂದನೆಗಳ ಮಹಾಪೂರವೇ. ಗೆದ್ದರೆ ಎಲ್ಲವೂ ಕೈಗೂಡಿದ ಹಾಗೆ ಎನ್ನುವ ಧೋರಣೆ! 

ಪ್ರಜಾ ಪರಿಪಾಲನೆ ಆರಂಭವಾಗುವುದೇ ವಿಜಯದಿಂದ. ಭೂರಿ ಭೋಜನದ ವಿಜಯೋತ್ಸವ ದಿಂದಲ್ಲ. ಚುನಾವಣೆ ನಡೆದು ಗೆಲವು ಸಾಧಿಸಿದ ನಂತರ ಮತ ಹಾಕಿದವರು, ಮತ ಹಾಕದವರು ಎನ್ನುವ ಭೇದವಿಲ್ಲವಲ್ಲ. ಹಾಗಾಗಿ ಸರ್ವಜನರ ಸಮಷ್ಟಿ ಹಿತವೇ ಪ್ರಧಾನವಾಗುತ್ತದೆ. ಜನರೇ ಆದೇಶ ನೀಡಿದವರು ಎಂದಮೇಲೆ ಮಠ, ಮಂದಿರ, ಗುಡಿ, ಗುಂಡಾರಗಳಿಗೆ ಮೊರೆಹೋಗುವ ಅಗತ್ಯವೇನಿರದು. ಪೂಜೆ, ಪುನಸ್ಕಾರ ವೈಯಕ್ತಿಕವಾಗಿರ ಬೇಕು, ಸಾರ್ವಜನಿ ಕವಾಗಿ ಬೇಡ ಅಲ್ಲವೇ? ಭಾರತ ರತ್ನ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ವೈಚಾರಿಕ ಮತ್ತು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕೆಂದು ಒತ್ತಿ ಹೇಳಿದ್ದಾರೆ. ಹೋಮ, ಅಭಿಷೇಕ, ಅರ್ಚನೆಗಳು ಸಮೃದ್ಧಿಗೆ ಪೂರಕವಾದಾವೇ ಎನ್ನುವುದನ್ನು ಯೋಚಿಸಬೇಕು. ಕಾರ್ಯ ಕಾರಣ ಸಂಬಂಧಕ್ಕೆ ವಿರುದ್ಧವಾಗಿ ಮುಗಿಲಿನಿಂದ ಹೊನ್ನಿನ ಮಳೆ ಸುರಿದೀತು ಹೇಗೇ?

ದಕ್ಷ ರಾಜಕಾರಣಿ ಟೀಕೆ, ನಿಂದನೆಗಳಿಂದಲೇ ಪ್ರಭಾವಿತನಾಗಿ ಸುಧಾರಣೆಗಳಿಗೆ ಮುಂದಾಗುತ್ತಾನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ನೀವು ಪ್ರತಿನಿಧಿಸಿದ ಕ್ಷೇತ್ರ- ವಿಧಾನಸಭೆಯಿರಲಿ, ಲೋಕ ಸಭೆಯಿರಲಿ, ಮೊದಲಿದ್ದಕ್ಕಿಂತಲೂ ಚೆನ್ನಾಗಿರಬೇಕು. ಆ ಹಾದಿಯಲ್ಲಿ ನೀವು ಕರ್ತವ್ಯಬದ್ಧವಾಗಿರಬೇಕು, ಕಾರ್ಯ ಶೀಲರಾಗಬೇಕು. ರಾಜಕಾರಣದಲ್ಲಿ ಸಾಮಾಜಿಕ ಸಂಬಂಧಗಳನ್ನೊಳಗೊಂಡ ಅಧಿಕಾರ ಮತ್ತು ಹಕ್ಕುಗಳಿರುತ್ತವೆ. ಎಲ್ಲ ವರ್ಗಗಳ ಜನರಿಗೂ ಭಯ, ಅಥವಾ ಪಕ್ಷಪಾತವಿಲ್ಲದೆ, ರಾಗದ್ವೇಷರಹಿತ ವಾಗಿ ಸೇವೆ ಸಲ್ಲಿಸುತ್ತೇನೆಂಬ ಪ್ರಮಾಣ ಕೇವಲ ಔಪಚಾರಿಕವಾಗಬಾರದಲ್ಲವೇ? ರಾಜಕಾರಣ ಕಲೆ, ವಿಜ್ಞಾನ ಮತ್ತು ವಾಣಿಜ್ಯವೂ ಹೌದು. ಆಯ್ಕೆಗೊಂಡ ವರು ಯಾವುದೇ ಕಾರಣಕ್ಕೂ ಪಕ್ಷಾಂತರಕ್ಕೆ, ರಾಜೀ ನಾಮೆಗೆ ಮುಂದಾದರೆ ಅದು ಮತದಾರರಿಗೆ ಎಸ ಗುವ ವಂಚನೆಯೇ ಹೌದು. ಅಂಥವರು ಧೀರರೂ ಅಲ್ಲ, ಶೂರರೂ ಅಲ್ಲ. ಜನ ಬಯಸುವುದು ಅರ್ಥ ಪೂರ್ಣ ಪ್ರಾತಿನಿಧಿತ್ವವೇ ಪರಂತು ರಾಜೀನಾಮೆ ಅಲ್ಲ! ವಿಧಾನಸಭೆಯಿಂದ ಲೋಕ ಸಭೆಗೆ, ಲೋಕಸಭೆಯಿಂದ ವಿಧಾನಸಭೆಗೆ ಬರಬಯಸುವುದು ರಾಜಕೀಯ ಮುತ್ಸದ್ಧಿತ‌ನ ಖಂಡಿತ ಅಲ್ಲ. ಸರ್‌ ಎಂ. ವಿಶ್ವೇಶ್ವರಯ್ಯ ನವರು ಕಸ ಗುಡಿಸುವವರು ಅದೆಷ್ಟು ಆತ್ಮವಿಶ್ವಾಸ ತಳೆಯಬೇಕೆಂದರೆ ತನಗಿಂತ ಜಗತ್ತಿನಲ್ಲಿ ಚೆನ್ನಾಗಿ ಗುಡಿಸು ವವರು ಬೇರ್ಯಾರು ಇಲ್ಲವೆನ್ನಬೇಕು! ಎಂದು ಹೇಳುತ್ತಿದ್ದರು. ಹೊಣೆಗಾರಿಕೆಯಲ್ಲಿ ಮೇಲು, ಕೀಳೆನ್ನುವುದಿಲ್ಲ. ನಿಸ್ವಾರ್ಥ ಜನಸೇವೆಯೇ ರಾಜಕಾರಣಿ ಯನ್ನು ಮೆರೆಸುತ್ತದೆ. ಮತಪೆಟ್ಟಿಗೆ ಗಳು ಯಾವುದೇ ರಾಜಕಾರಣಿಯ ಭವಿಷ್ಯ ಬರೆಯವು, ಅವು ಬರೆಯುವುದು ಪ್ರಜೆಗಳ, ದೇಶದ ಭವಿಷ್ಯವನ್ನು.

ಬಿಂಡಿಗನವಿಲೆ ಭಗವಾನ್‌

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.