ಪ್ರತಿಭಾ ಪ್ರದರ್ಶನ ನೋಂದಣಿ ಪ್ರಕ್ರಿಯೆ ಆರಂಭ
Team Udayavani, Apr 21, 2021, 1:06 PM IST
ನ್ಯೂಯಾರ್ಕ್ :ಆಗಸ್ಟ್ 27, 28 ಹಾಗೂ 29ರಂದು ಭಾಷೆ- ಭಾಂಧವ್ಯ- ಭರವಸೆ ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ 6ನೇ ನಾವಿಕ (ನಾವು ವಿಶ್ವ ಕನ್ನಡಿಗರು) ವಿಶ್ವ ಕನ್ನಡ ಸಮಾವೇಶದ ಸಿದ್ಧತೆ ಆರಂಭವಾಗಿದೆ. ಈ ಪ್ರಯುಕ್ತ ವಿವಿಧ ವರ್ಚುವಲ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಲಿಚ್ಚಿಸುವವರು ನೋಂದಣಿ ಮಾಡಿಕೊಳ್ಳಬಹುದು.
ಅನಿವಾಸಿ ಕನ್ನಡಿಗರ ರಂಗ ಪ್ರತಿಭಾ ಪ್ರದರ್ಶನಕ್ಕೊಂದು ಅವಕಾಶ ನೀಡುವ ಸಲುವಾಗಿ “ರಂಗ ನಾವಿಕ’ ವಿಶ್ವ ಕನ್ನಡಿಗರ ವರ್ಚುವಲ್ ಕನ್ನಡ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವವರು www.nvks21.com/drama,, ಸಂಗೀತ ಪ್ರತಿಭಾ ಪ್ರದರ್ಶನಕ್ಕೆ “ಸ್ವರ ನಾವಿಕ’ ವಿಶ್ವ ಕನ್ನಡಿಗರ ವರ್ಚುವಲ್ ಸಂಗೀತೋತ್ಸವದಲ್ಲಿ ಭಾಗವಹಿಸುವವರು www.nvks21.com/music, ನೃತ್ಯ ಪ್ರತಿಭಾ ಪ್ರದರ್ಶನಕ್ಕೆ “ನೃತ್ಯ ಕಲಾ ನಾವಿಕ’ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು www.nvks21.com/dance, , ಸಂಗೀತ ಹಬ್ಬ “ನಾವಿಕ ಕೋಗಿಲೆ’ ಯಲ್ಲಿ ಪಾಲ್ಗೊಳ್ಳುವವರು ಹಾಗೂ “ಕ್ಷಣ ನಾವಿಕ’ ಒಂದು ನಿಮಿಷದ ಟಿಕ್‌ಟಾಕ್ ವಿಡಿಯೋ ಮಾಡುವವರಿಗೆ ಒಂದು ಅವಕಾಶದಲ್ಲಿ ಪಾಲ್ಗೊಳ್ಳುವವರು, “ನಾವಿಕ ಅಂತ್ಯಾಕ್ಷರಿ’ ವಿಶ್ವ ಕನ್ನಡಿಗರ ವರ್ಚುವಲ್ ಅಂತ್ಯಾಕ್ಷರಿ ಸ್ಪರ್ಧೆಯಲ್ಲಿ ಭಾಗವಹಿಸುವವರು www.nvks21.com/competitions,, ವಿಶ್ವ ಕನ್ನಡಿಗರ ಶಾರ್ಟ್ ಫಿಲ್ಮಂ ಸ್ಪರ್ಧೆ ಕಿರು ಚಲನಚಿತ್ರೋತ್ಸವದಲ್ಲಿ ಭಾಗವಹಿಸುವವರು www.nvks21.com/shortfilms ನಲ್ಲಿ ಎಪ್ರಿಲ್ 30ರೊಳಗೆ ಹಾಗೂ “ಛಾಯಾ ನಾವಿಕ’ ಛಾಯಾಚಿತ್ರಗ್ರಹಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು www.nvks21.com/competitions ನಲ್ಲಿ ಜೂನ್ 30ರೊಳಗೆ ನೋಂದಣಿ ಮಾಡಿಕೊಳ್ಳಬಹುದು.
ಕರ್ನಾಟಕ ಫ್ಯೂಷನ್ ಮೂಸಿಕ್ ಸ್ಪರ್ಧೆ ಸ್ವರಲಾಪ ಹಾಗೂ ಹೇಮಂತ ತಂಡದಿಂದ ಸಂಗೀತ ರಾತ್ರಿ ಕಾರ್ಯಕ್ರಮಕ್ಕೆ ನೋಂದಣಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ವೈವಿಧ್ಯಮಯ ಕಾರ್ಯಕ್ರಮಕ್ಕೆ ತಯಾರಿ
ಇದೇ ಮೊದಲ ಬಾರಿಗೆ 3ಡಿ ತಂತ್ರಜ್ಞಾನ ವನ್ನು ಬಳಸಿ 6 ಚಾನೆಲ್‌ಗಳ ಮೂಲಕ ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವಗಳನ್ನು ಕೊಡುವ ತಯಾರಿ ನಡೆಯುತ್ತಿದ್ದು, ಮೂರು ದಿನಗಳ ಈ ಸಮ್ಮೇಳನದಲ್ಲಿ ಈಗಾಗಲೇ 110ಕ್ಕೂ ಹೆಚ್ಚು ಗಂಟೆಗಳ ವೈವಿ ಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ಆರಂಭಗೊಂಡಿದೆ.
ಪ್ರೈಮ್ ಚಾನೆಲ್ ಜತೆಗೆ ಬಿಸಿನೆಸ್ ಫೋರಂ, ವುಮೆ®Õ… – ಫೋರಂ, ಆಧ್ಯಾತ್ಮಿಕ, ಯೋಗ, ಕನ್ನಡ ಕೂಟಗಳ ಕಾರ್ಯಕ್ರಮಗಳು, ಪ್ರತಿಭಾ- ಸ್ಪರ್ಧೆಗಳು ವಿವಿಧ ಚಾನಲ್‌ಗಳಲ್ಲಿ ಪ್ರಸಾರ ವಾಗಲಿದ್ದು, ನೋಡುಗರು ತಮಗೆ ಬೇಕಾದ ಚಾನಲ್ ಅನ್ನು ಆಯ್ಕೆ ಮಾಡಿಕೊಳ್ಳ ಬಹುದು. ಲೈವ್ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡರೆ ರೆಕಾರ್ಡಿಂಗ್ ಪ್ರೋಗ್ರಾಮ್‌ಗಳನ್ನೂ ನೋಡಲು ಅವಕಾಶವಿದೆ. ಪ್ರಚಂಚದ ವಿವಿಧ ದೇಶಗಳ ನೂರಾರು ಕನ್ನಡ ಸಂಘಗಳು ಈ ಆರನೇ ನಾವಿಕ ವಿಶ್ವಕನ್ನಡ ಸಮಾವೇಶದಲ್ಲಿ ಭಾಗವಹಿಸಲಿವೆ.
ಪ್ರಖ್ಯಾತ ಗಾಯಕ ಸಹೋದರರಾದ ಪ್ರವೀಣ್ ಬಿ.ವಿ., ಪ್ರದೀಪ್ ಬಿ.ವಿ. ಮತ್ತು ಸಂಗೀತ ಕಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವ ಕನ್ನಡವೇ ಸತ್ಯ ಎಂಬ ಕಾರ್ಯಕ್ರಮದಲ್ಲಿ ಹತ್ತು ಜನ ಪ್ರಖ್ಯಾತ ಗಾಯಕರು ಮತ್ತು 10 ಜನ ಪ್ರಖ್ಯಾತ ಗಾಯಕಿಯರು ಒಟ್ಟಿಗೆ ಸೇರಿ ಕೇಳುಗರನ್ನು ಮನೋರಂಜಿಸಲಿದ್ದಾರೆ. ಫಿಟೆ°ಸ್ ವಿಭಾಗದಲ್ಲಿ ಕುಮಾರ- ಕುಮಾರ್ ಕನ್ನಡ ಗೀತೆಗಳ ಮೂಲಕ ಏರೋಬಿಕÕ… ವ್ಯಾಯಾಮ ಕಾರ್ಯ ಕ್ರಮವನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಡಲಿದ್ದಾರೆ. ಇದರೊಂದಿಗೆ ನಾವಿಕ-ನಿಮಿಷ, ಏಕ ನಾವಿಕ, ನಾವಿಕ ಕೋಗಿಲೆ, ಛಾಯಾ ನಾವಿಕ, ರಂಗ ನಾವಿಕ, ಗಾನ ನಾವಿಕ, ನೃತ್ಯ ನಾವಿಕ, ಸಿಹಿಕಹಿ ಚಂದ್ರು ನಡೆಸಿಕೊಂಡುವ ಬಾಣಸಿಗ ನಾವಿಕ, ನಾವಿಕ ಅಂತಕ್ಷರಿ ಸ್ಪರ್ಧೆ ಹೀಗೆ ಹತ್ತು ಹಲವಾರು ಸ್ಪರ್ಧೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಡಿಡಿಡಿ.nvks21.cಟಞ ಅನ್ನು ನೋಡಬಹುದು ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ವಲ್ಲೀಶ ಶಾಸ್ರ್ತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.