ಬೆಳಗಾವಿಯಲ್ಲಿ ಈಗ “ಸಕ್ಕರೆ ಸಾಲ’ದ ಶೂಲ
Team Udayavani, May 12, 2022, 6:20 AM IST
ಮಾಜಿ ಸಚಿವ ರಮೇಶ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲದ ಹೊರೆ ಹಾಗೂ ಆರ್ಥಿಕ ದಿವಾಳಿ ಸುದ್ದಿ ಈಗ ಗಡಿ ಜಿಲ್ಲೆ ಬೆಳಗಾವಿಯಷ್ಟೇ ಅಲ್ಲ, ಇಡೀ ರಾಜ್ಯದ ತುಂಬಾ ಸದ್ದು ಮಾಡುತ್ತಿದೆ. ವಿಶೇಷ ಸಂಗತಿ ಎಂದರೆ ಈ ಸಾಲದ ವಿಷಯಕ್ಕೆ ಈಗ ರಾಜಕೀಯ ಸೇರಿಕೊಂಡಿರುವುದು ಕುತೂಹಲದ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ವಕ್ತಾರರು ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಸಾಲದ ಹೊರೆ ನೂರಾರು ಕೋಟಿ ಇದ್ದರೂ ಅದನ್ನು ಪಾವತಿ ಮಾಡದ ಕಾರ್ಖಾನೆಯ ರಕ್ಷಣೆಗೆ ಸರಕಾರದ ನಿಂತಿದೆ ಎಂಬ ಆರೋ ಪ ಮಾಡಿದ್ದು ರಾಜ್ಯದ ತುಂಬೆಲ್ಲ ಚರ್ಚೆಗೆ ವೇದಿಕೆ ಮಾಡಿಕೊಟ್ಟಿತು. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಈ ಕಾರ್ಖಾನೆಯ ವಿರುದ್ಧ ಅದರಲ್ಲೂ ಇದರ ಮಾಲಕರಾಗಿರುವ ರಮೇಶ ಜಾರಕಿಹೊಳಿ ವಿರುದ್ಧ ತಿರುಗಿ ಬಿದ್ದಿದ್ದರು. ಈ ಮೂಲಕ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲದ ವಿಷಯ ರಾಜಕೀಯ ಬಣ್ಣ ಪಡೆದುಕೊಂಡಿತು.
ಕಾರ್ಖಾನೆಯು ವಿವಿಧ ಡಿಸಿಸಿ ಬ್ಯಾಂಕ್‌ಗಳಿಂದ 600 ಕೋಟಿ ಸಾಲ ಮಾಡಿದ ಮೇಲೆ ಅದನ್ನು ಇದು ವರೆಗೆ ಪಾವತಿ ಮಾಡಿಲ್ಲ. ಕಾರಣ ಇದರ ಆಸ್ತಿ ಮುಟ್ಟು ಗೋಲು ಹಾಕಿಕೊಳ್ಳಬೇಕು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಪತ್ರ ಬರೆದು ಒತ್ತಾಯ ಮಾಡಿದ್ದರೂ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕಾಂಗ್ರೆಸ್ ಮುಖಂಡರ ದೂರು.
ಜಿಲ್ಲಾಧಿಕಾರಿಗಳು ಸರಕಾರದ ಒತ್ತಡದಿಂದ ಯಾವು ದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮೇಲಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಹಕಾರ ಸಚಿವ ಸೋಮಶೇಖರ ಅವರು ರಮೇಶ ಜಾರಕಿಹೊಳಿ ರಕ್ಷ ಣೆಗೆ ನಿಂತಿದ್ದಾರೆ. ಈ ಮೂಲಕ ರೈತರಿಗೆ ವಂಚನೆ ಮಾಡಿ ದ್ದಾರೆ ಎಂಬುದು ಕಾಂಗ್ರೆಸ್ ಮುಖಂಡರ ನೇರ ಅರೋಪ.
ಇಲ್ಲಿ ಸಾಲದ ವಿಷಯಕ್ಕಿಂತ ರಮೇಶ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆ ಅರ್ಥಿಕವಾಗಿ ದಿವಾಳಿಯಾಗಿದೆ. ಇದರ ಹೆಸರಿನಲ್ಲಿರುವ ನೂರಾರು ಕೋಟಿ ಸಾಲವನ್ನು ತುಂಬದೇ ಅದರಿಂದ ಪಾರಾಗುವ ಯತ್ನ ನಡೆದಿದೆ ಎಂಬ ಆರೋಪ ಚರ್ಚಿತ ವಿಷಯ.
ಇದಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಸಹಕಾರ ಸಚಿವ ಸೋಮಶೇಖರ, ಅಪೆಕ್ಸ್ ಬ್ಯಾಂಕಿ ನಿಂದ ಕೇವಲ ರಮೇಶ ಜಾರಕಿಹೊಳಿ ಮಾತ್ರ ಸಾಲ ಪಡೆದಿಲ್ಲ. ಶಾಸಕಿ ಲಕ್ಷ್ಮೀ ಹೆಬ್ಟಾಳಕರ, ಬಂಡೆಪ್ಪ ಕಾಶೆಂ ಪುರ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಸಾಲ ಪಡೆದಿ ದ್ದಾರೆ. ಈ ಸಾಲದ ಪ್ರಮಾಣ 6,000 ಕೋಟಿ ಇದೆ. ಸಾಲ ಪಡೆದವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳುವ ಮೂಲಕ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲದ ಹೊರೆ, ಅದರ ವಸೂಲಾತಿಗೆ ಬಿಗಿ ಕ್ರಮ ಕೈಗೊಳ್ಳುವ ವಿಷಯ ದೊಡ್ಡದಾಗಿ ಬೆಳೆಯದಂತೆ ಜಾಣತನ ಮೆರೆದಿದ್ದಾರೆ.
ಆದರೆ ರೈತ ಮುಖಂಡರ ಪ್ರಕಾರ ಯಾವುದೇ ಸಕ್ಕರೆ ಕಾರ್ಖಾನೆ ನಷ್ಟದಲ್ಲಿರಲು ಅಥವಾ ಆರ್ಥಿಕವಾಗಿ ದಿವಾಳಿಯಾಗಲು ಸಾಧ್ಯವೇ ಇಲ್ಲ. ತಮ್ಮ ವೈಯಕ್ತಿಕ ಸಾಲದ ಹೊರೆಯನ್ನು ಸಕ್ಕರೆ ಕಾರ್ಖಾನೆ ಮೇಲೆ ಹಾಕಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ರೈತರ ಬಾಕಿ ಹಣ ಪಾವತಿ ತಪ್ಪಿಸಿಕೊಳ್ಳಲು ಈ ತಂತ್ರ ಹೂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಎಲ್ಲ ಪಕ್ಷದವರು ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ ಎಂದು ಹೇಳಿ ಇದನ್ನು ಮರೆಸಲು ಪ್ರಯತ್ನಿಸಿರುವ ಸಹಕಾರ ಸಚಿ ವರು, ಈ ಸಾಲವನ್ನು ವಸೂಲಿ ಮಾಡಲು ವಹಿಸುವ ಕಠಿನ ಕ್ರಮದ ಬಗ್ಗೆ ಅಷ್ಟು ಗಂಭೀರವಾಗಿ ಮಾತನಾಡದೇ ಇರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ರೈತರಿಗೆ ಬಾಕಿ ಹಣ ಕೊಡುವವರೆಗೆ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ವಿರುದ್ಧ ಹೋರಾಟ ನಡೆಸು ತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕರು ಈಗ ಸಹಕಾರ ಸಚಿವರ ಉತ್ತರಕ್ಕೆ ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ-ಪ್ರತ್ಯಾ ರೋಪ ದ ನಡುವೆ ಕಾರ್ಖಾನೆಯ ನೂರಾರು ಕೋಟಿ ಸಾಲದ ಕೂಪ ಸದ್ದಿಲ್ಲದೆ ಮರೆಯಾಗುವುದೇ ಎಂಬ ಚರ್ಚೆ ಸಹ ನಡೆದಿದೆ.
– ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.