ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಕನ್ನಡ ಭಾಷೆಯನ್ನು ಉಳಿಸುವುದು ಕೇವಲ ಹೋರಾಟಗಾರ, ಸಾಹಿತಿ, ಸರಕಾರದ ಕೆಲಸವಲ್ಲ | ಜನಸಾಮಾನ್ಯರ ಪಾತ್ರವೇ ಎಲ್ಲಕ್ಕಿಂತ ದೊಡ್ಡದು

Team Udayavani, Nov 27, 2024, 6:55 AM IST

ಬೆಳೆ ಕನ್ನಡ: ಕನ್ನಡದ ಕೆಲಸ ಬರೀ ಸರಕಾರದ್ದಲ್ಲ, ನಮ್ಮದು ಕೂಡ!

ಕನ್ನಡಕ್ಕಾಗಿ ಕೈ ಎತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ

ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ

ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು;

ಇಂದು ಅದೆ ಗೋವರ್ಧನ ಗಿರಿಯಾಗುತ್ತದೆ

– ಇದು ರಾಷ್ಟ್ರಕವಿ ಕುವೆಂಪು ಅವರು ಕನ್ನಡಿಗರಿಗೆ ಕೊಟ್ಟ ದೀಕ್ಷಾ ನುಡಿ.

ಆದರೆ, ಕನ್ನಡಕ್ಕಾಗಿ ಕೈ ಎತ್ತುವುದು ಹೋರಾಟಗಾರರ ಕೆಲಸ, ಕೊರಳೆತ್ತುವುದು ಸಾಹಿತಿಗಳ ಕೆಲಸ, ಭಾಷೆಯನ್ನು ಉಳಿಸುವುದು ಸರಕಾರದ ಕೆಲಸ ಎಂಬಂತೆ ಯೋಚಿ ಸುತ್ತಿರುವ ಈ ಕಾಲದಲ್ಲಿ ಕನ್ನಡಕ್ಕಾಗಿ ಕಿರು ಬೆರಳು ಎತ್ತುವುದೂ ಕಷ್ಟ! ಇದಕ್ಕೆ ಮುಖ್ಯ ಕಾರಣ. ಭಾಷೆ ಎನ್ನುವುದು ವ್ಯಾವಹಾರಿಕ ಎಂಬ ಹಂತಕ್ಕೆ ಬಂದಿರುವುದು. ಹೆಚ್ಚಿನವರು “ಭಾಷೆ ಇರು ವುದು ಸಂವಹನಕ್ಕೆ. ಅದು ಯಾವ ಭಾಷೆಯಾ ದರೇನು? ನಾವು ಹೇಳಿದ್ದು ಇನ್ನೊಬ್ಬರಿಗೆ ಅರ್ಥವಾದರೆ ಸಾಕಲ್ಲವೇ’ ಎನ್ನುವಷ್ಟು ಸಿನಿಕತೆ ಪ್ರದರ್ಶಿ­ಸುತ್ತಾರೆ. ಕನ್ನಡ ಕಲಿತರೆ ಏನುಪಯೋಗ? ಉದ್ಯೋಗ ಕೊಡ್ತಾರಾ? ಕನ್ನಡವನ್ನೇ ನಂಬಿಕೊಂಡರೆ ವಿದೇಶದಲ್ಲಿ ಉದ್ಯೋಗ ಮಾಡಲಾಗುತ್ತದೆಯೇ ಎಂದೆಲ್ಲ ಪ್ರಶ್ನಿಸುತ್ತಾರೆ. ಭಾಷೆಯ ಕುರಿತ ಅರಿವು, ಭಾಷಾ ವಿಜ್ಞಾನದ ತಿಳಿವಳಿಕೆ ಕೊರತೆ, ಅಭಿಮಾನ ಶೂನ್ಯತೆ ಇದಕ್ಕೆ ಮುಖ್ಯ ಕಾರಣ. ಹಾಗಾಗಿ, ಭಾಷಾ ಬೆಳವಣಿಗೆ ನಿಟ್ಟಿನಲ್ಲಿ ಜನಸಾಮಾನ್ಯರ ಮಟ್ಟದಲ್ಲಿ ಪ್ರೀತಿಯನ್ನು ಹುಟ್ಟಿಸುವ ಕೆಲಸವನ್ನು ಮೊದಲು ಮಾಡಬೇಕಾಗಿದೆ.

ಕನ್ನಡದ ಬಗ್ಗೆ ಕೀಳರಿಮೆ ಕಳಚಬೇಕು

ಹೆಚ್ಚುತ್ತಿರುವ ಇಂಗ್ಲಿಷ್‌ ಮಾಧ್ಯಮ ಶಾಲೆಗಳು, ಇಂಗ್ಲಿಷ್‌ ಭಾಷೆ ಮಾತನಾಡಿದಾಗ ಸಿಗುವ ಗೌರವ, ತಮ್ಮ ಮಕ್ಕಳು ಇಂಗ್ಲಿಷ್‌ ಮಾತನಾಡಿದಾಗ ಸಂತೃಪ್ತಿ ಅನುಭವಿಸುವ ಹೆತ್ತವರು – ಹೀಗೆ ಇಂಗ್ಲಿಷ್‌ ಸುತ್ತ ಹರಡಿಕೊಂಡಿರುವ ಪ್ರಭಾವಳಿಯಿಂದಾಗಿ ಉಳಿದ ಭಾಷೆಗಳೆಲ್ಲ  ತೀರಾ ಕುಬj ಎನ್ನುವ ಕೀಳರಿಮೆಯ ಭಾವವೊಂದು ಆವರಿಸಿದೆ, ಅದನ್ನು ಕಳಚಬೇಕಾಗಿದೆ.

ಕನ್ನಡ ಭಾಷೆಗಿರುವ 2,500ಕ್ಕೂ ಅಧಿಕ ವರ್ಷಗಳ ಇತಿಹಾಸ, ಕನ್ನಡದ ಮಹಾನ್‌ ಕೃತಿಗಳು, ಭಾಷಾ ಪರಂಪರೆ, ಸೌಂದರ್ಯವನ್ನು ನಾವು ಹೊಸ ಪೀಳಿಗೆಗೆ ಪರಿಚಯಿಸಿದರೆ ಅವರಿಗೆ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಮೂಡಬಹುದು. ಜಗತ್ತಿನ ಅತ್ಯಂತ ವೈಜ್ಞಾನಿಕ ಮತ್ತು ಪರಿಪೂರ್ಣ ಭಾಷೆ ಕನ್ನಡ ಎನ್ನುವುದು ಹೆಗ್ಗಳಿಕೆ. ಇಂಗ್ಲಿಷ್‌ ಸೇರಿದಂತೆ ಹಲವಾರು ಭಾಷೆಗಳಲ್ಲಿ  ಬರೆಯುವುದು ಒಂದು ರೀತಿ, ಉಚ್ಚಾರಣೆ ಇನ್ನೊಂದು ರೀತಿ ಇದೆ. ಆದರೆ ಬರೆದಂತೆ ಓದುವ, ಓದಿದಂತೆಯೇ ಬರೆಯುವ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡ ಮೇಲ್ಪಂಕ್ತಿಯಲ್ಲಿದೆ. ಬರೆಯುವ ಲಿಪಿಯಲ್ಲಿ ಸೌಂದರ್ಯವಿದೆ, ಕೇಳುವ ಮಾತಿನಲ್ಲಿ ಮಾಧುರ್ಯವಿದೆ.  ಭಾಷೆ ಎಂದರೆ ವ್ಯಾವಹಾರಿಕವಲ್ಲ, ಅದು ನಮ್ಮ ಸಂಸ್ಕೃತಿ, ಪ್ರಾಚೀನತೆ, ನಮ್ಮ ನಡವಳಿಕೆಗಳನ್ನು ಪ್ರತಿನಿಧಿಸುವ ಸೂಕ್ಷ್ಮ ಅಸ್ಮಿತೆ ಎನ್ನುವುದರ ಅರಿವನ್ನು ಜನರಲ್ಲಿ ಮೂಡಿಸಬೇಕಾಗಿದೆ.

ಕನ್ನಡದ ವಾತಾವರಣ ಸೃಷ್ಟಿ ಮಾಡಿ

ಯಾವುದೇ ಭಾಷೆ ಬೆಳೆಯುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ವಾತಾವರಣ. ಕನ್ನಡ ಹೋರಾಟಗಾರರು ಕನ್ನಡ ಬೋರ್ಡ್‌ ಕಡ್ಡಾಯ, ಇಲ್ಲದಿದ್ದರೆ ಮಳಿಗೆಗಳಿಗೆ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಾಗ ಹೆಚ್ಚಿನವರು, ಬೋರ್ಡ್‌ ಹಾಕಿದ ಕೂಡಲೇ ಕನ್ನಡ ಉಳಿಯುತ್ತದೆಯೇ ಎನ್ನುವ ಉಡಾಫೆ ಮಾತು ಆಡುತ್ತಾರೆ. ಆದರೆ ಈ ಬೋರ್ಡ್‌ಗಳು ಎನ್ನುವುದು ಕನ್ನಡದ ವಾತಾವರಣ ಸೃಷ್ಟಿಯ ಒಂದು ಪ್ರಯತ್ನ. ಭಾಷೆ ಬೆಳೆಯಲು ಇಂಥ ವಾತಾವರಣಗಳ ಅಗತ್ಯವಿದೆ. ಮನೆಯಲ್ಲಿ ಹೆತ್ತವರು ಆಡುವ ಭಾಷೆ, ಕೇಳುವ ಹಾಡು­ಗಳು, ನೋಡುವ ಸಿನೆಮಾಗಳು, ಆಲಿಸುವ ಜಾನಪದ ಗೀತೆಗಳು, ಸುತ್ತಲಿನ ಪರಿಸರದ ಮಾತುಕತೆ­ಗಳು ಎಲ್ಲವೂ ಒಂದು ವಾತಾವರಣವನ್ನು ಸೃಷ್ಟಿಸುತ್ತವೆ. ಅದು ಕನ್ನಡದ್ದಾಗಿದ್ದರೆ ಅಲ್ಲಿನ ಬೆಳೆಯುವ ಮಕ್ಕಳೂ ಕನ್ನಡ ಪ್ರೀತಿ ಹೊಂದಿರುತ್ತಾರೆ. ಯಕ್ಷಗಾನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಾ ವಾತಾವರಣ ಸೃಷ್ಟಿಯ ಪ್ರಧಾನ ನೆಲೆಗಳು.

ಮಕ್ಕಳಿಗೆ ತ್ರಿಶಂಕು ಸ್ಥಿತಿ ರೂಪಿಸಬೇಡಿ

ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೆ ವೃತ್ತಿಪರ ಬದುಕಿಗೆ ಪೂರಕವಾದೀತು ಎನ್ನುವುದು ಹೆತ್ತವರ ಆಸೆ. ಶಾಲೆಗಳಿಗೂ ಮಕ್ಕಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಪಾರಂಗತಗೊಳಿಸುವ ತರಾತುರಿ. ಹೀಗಾಗಿ, ಮನೆಯಲ್ಲಿ ಹೆತ್ತವರು ಕಷ್ಟಪಟ್ಟಾದರೂ ಇಂಗ್ಲಿಷ್‌ನಲ್ಲೇ ಮಾತನಾಡಲು ಪ್ರಯತ್ನಿಸುತ್ತಾರೆ, ಶಾಲೆಗಳು ಅನ್ಯ ಭಾಷೆ ಉಪಯೋಗಕ್ಕೆ ತಡೆಯೊಡ್ಡುತ್ತವೆ. ಇದರ ಒಟ್ಟು ಫ‌ಲವೆಂದರೆ ಮಕ್ಕಳಿಗೆ ಇತ್ತ ಕನ್ನಡದ ಕಂಪೂ ಇಲ್ಲ, ಇಂಗ್ಲಿಷ್‌ನ ಪೂರ್ಣ ಅರಿವೂ ಇಲ್ಲದ ತ್ರಿಶಂಕು ಸ್ಥಿತಿ ನಿರ್ಮಾಣವಾಗುತ್ತದೆ. ಅದೇ ಮಕ್ಕಳಿಗೆ ಕನ್ನಡದ ಅಂದರೆ ಮಾತೃ ಭಾಷೆಯ ಅರಿವು ಚೆನ್ನಾಗಿದ್ದರೆ ಇಂಗ್ಲಿಷ್‌ನಲ್ಲೂ ಅಷ್ಟೇ ಪ್ರಭಾವಿಯಾಗಿ ಸಂವಹನ ಮಾಡಬಲ್ಲರು. ಅದಕ್ಕೆ ಬೇಕಾಗಿರುವುದು ಸಣ್ಣದೊಂದು ಆತ್ಮವಿಶ್ವಾಸ ಮಾತ್ರ. ಅದನ್ನು ಮನೆಯಲ್ಲಿ, ಶಾಲೆಯಲ್ಲಿ ತುಂಬಬೇಕು.

ಭಯ್ಯಾನಿಗೂ ಕನ್ನಡ ಮಾತನಾಡಲು ಬಿಡಿ

ಕನ್ನಡಿಗರು ಎಲ್ಲೇ ಹೋದರೂ ತತ್‌ಕ್ಷಣವೇ ಅಲ್ಲಿನ ಭಾಷೆಯನ್ನು ಅದರ ಸಕಲ ರಸ ಸಮೃದ್ಧಿ, ಭಾವಗಳ ಜತೆಗೆ ತಮ್ಮದಾಗಿಸಿಕೊಳ್ಳುತ್ತಾರೆ. ಬಹುಶಃ ಪ್ರತಿಯೊಬ್ಬರಿಗೂ ಆ ಆಸೆ ಇರುತ್ತದೆ. ಆದರೆ ಬೇರೆ ರಾಜ್ಯದ­ವರು ನಮ್ಮಲ್ಲಿ ಬಂದಾಗ ಅವರಿಗೆ ಅಂಥ ವಾತಾವರಣವನ್ನು ಸೃಷ್ಟಿ ಮಾಡುವುದೇ ಇಲ್ಲ. ಬೇಲ್‌ ಪುರಿಯ ಭಯ್ನಾನಿಗೆ ಕನ್ನಡ ಕಲಿಸಬೇಕಾದ ನಾವು, ಕಲಿಸುವುದು ಬಿಡಿ, ಕಲಿಯುವ ವಾತಾವರಣವನ್ನೇ ಕತ್ತರಿಸಿ ಬಿ­ಡುತ್ತೇವೆ. ತಮಗೆ ಅರಿವಿಲ್ಲದ ಭಾಷೆಯಲ್ಲಿ ಅರೆಬರೆಯಾಗಿ ಏನನ್ನೋ ಮಾತನಾಡಿ ಅವನ ಮುಂದೆ ಅಪಹಾಸ್ಯಕ್ಕೆ ಒಳಗಾಗುತ್ತೇವೆಯೇ ಹೊರತು ಅವನಿಗೆ ನಾಲ್ಕು ಕನ್ನಡ ಶಬ್ದ ಕಲಿಸುವುದಿಲ್ಲ.

ಅನ್ಯ ರಾಜ್ಯಗಳಿಂದ ಬರುವ ಐಟಿಬಿಟಿ ಮತ್ತಿತರ ವೃತ್ತಿಪರರಿಗೆ ಇಂಗ್ಲಿಷ್‌ ಸಂವಹನವೇ ಸಾಕಾದೀತು. ಆದರೆ ಅಲ್ಲಿಂದ ಬಂದು ಇಲ್ಲಿ ಹೊಟೇಲ್‌-ಅಂಗಡಿಗಳು, ಕೂಲಿ ಕೆಲಸ ಮಾಡುವವರಿಗೂ ಕನ್ನಡ ಕಲಿಯಬೇಕಾಗಿಲ್ಲ ಎಂಬ ವಾತಾವರಣವನ್ನು ನಾವೇ ಸೃಷ್ಟಿಸುತ್ತಿದ್ದೇವೆ. ಮಾಲ್‌ಗೆ ಹೋದಾಗ ಅಲ್ಲಿ ಕನ್ನಡದ ಹುಡುಗರೇ ಇದ್ದರೂ ನಾವು ಮಾತ್ರ ಇಂಗ್ಲಿಷೋ, ಹಿಂದಿಯೋ ಬಳಸಲು ಮುಂದಾಗುತ್ತೇವೆ!

ಕನ್ನಡ ಶಾಲೆಗಳನ್ನು ಉಳಿಸಿ ಕೊಡಿ

ಕನ್ನಡದ ನಿಜವಾದ ಉಳಿವು ಎಲ್ಲಿದೆ ಎಂದರೆ ಕನ್ನಡ ಶಾಲೆಗಳಲ್ಲಿದೆ ಎನ್ನುತ್ತಾರೆ. ಹೆತ್ತವರಿಗೆ ಆಂಗ್ಲ ಮಾಧ್ಯಮದ ಬಗ್ಗೆ ವ್ಯಾಮೋಹ ಇರುವುದೇನೋ ನಿಜ. ಆದರೆ ಅವರ ನಿಜವಾದ ಕಾಳಜಿ ಇರುವುದು ಚೆನ್ನಾಗಿ ಪಾಠ ಮಾಡುವ, ಶಿಸ್ತು ಬೋಧಿಸುವ ಶಾಲೆಗಳಲ್ಲಿ ಮಕ್ಕಳು ಕಲಿಯಲಿ ಎನ್ನುವುದಾಗಿರುತ್ತದೆ. ಹೆಚ್ಚಿನವರಿಗೆ ವಿದ್ಯೆಯ ಜತೆಗೆ ನಮ್ಮ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆಗಳು, ಎಲ್ಲರೊಂದಿಗೆ ಬೆರೆಯುವ ವಾತಾವರಣ ಬೇಕು ಅಂತಲೇ ಇರುತ್ತದೆ. ಆದರೆ ಕನ್ನಡ ಶಾಲೆಗಳು ಈಗ ಅಂಥ ಶಿಕ್ಷಣವನ್ನು ನೀಡುವುದರಲ್ಲಿ ಸೋತಿರುವುದರಿಂದ ಖಾಸಗಿ, ಆಂಗ್ಲ ಶಿಕ್ಷಣ ಸಂಸ್ಥೆಗಳ ಕಡೆಗೆ ವಾಲುತ್ತಿದ್ದಾರೆ. ಸಮರ್ಥ ಶಿಕ್ಷಕರಿರುವ, ಅತ್ಯುತ್ತಮ ಮೂಲ ಸೌಕರ್ಯ, ಉತ್ತಮ ಕಲಿಕೆ ಇರುವ ಕನ್ನಡ ಶಾಲೆಗಳಿಗೆ ಈಗಲೂ ಬೇಡಿಕೆ ಇದೆ. ಮೂಡುಬಿದಿರೆಯ ಆಳ್ವಾಸ್‌ ಕನ್ನಡ ಶಾಲೆಯ 600 ಸೀಟುಗಳಿಗೆ 20 ಸಾವಿರ ಅರ್ಜಿಗಳು ಬರುತ್ತಿರುವುದು ಇದಕ್ಕೆ ಸಾಕ್ಷಿ. ಸರಕಾರ ಮತ್ತು ಊರಿನ ಜನರು, ಹಳೆ ವಿದ್ಯಾರ್ಥಿಗಳು ಮನಸು ಮಾಡಿದರೆ ಊರಿನ ಶಾಲೆಗಳನ್ನು ಮಾದರಿಯಾಗಿ ಕಟ್ಟಿ “ನಮ್ಮೂರ ಶಾಲೆ’ ಎಂಬ ಹೆಮ್ಮೆ ಅನುಭವಿಸಲು ಅವಕಾಶವಿದೆ.

ಏನೇ ಆಗಲಿ ಮೊದಲು ಕನ್ನಡಿಗರಾಗಲಿ

ಹೆತ್ತವರಿಗೆ ಮಕ್ಕಳು ಸಾಫ್ಟ್ವೇರ್‌ ಎಂಜಿನಿಯರ್‌ಗಳಾಗಲಿ, ವೈದ್ಯರಾ ಗಲಿ, ಬ್ಯಾಂಕರ್‌ಗಳಾಗಲಿ, ಉದ್ಯಮಿಗಳಾಗಲಿ, ವಿದೇಶದಲ್ಲಿ ಉದ್ಯೋಗ ಮಾಡಲಿ ಎನ್ನುವ ಆಸೆ ಇದ್ದೇ ಇರುತ್ತದೆ. ಇದು ತಪ್ಪಲ್ಲ. ಹಾಗಂತ ಅವರನ್ನು ಕನ್ನಡದ ವಾತಾವರಣದಿಂದಲೇ ದೂರ ಇಟ್ಟು ಶಿಕ್ಷಣ ಕೊಡಬೇಕಾದ ಆವಶ್ಯಕತೆ ಇಲ್ಲ. ಅವರು ಇಂಗ್ಲಿಷ್‌ ಕಲಿಯುವುದರ ಜತೆಗೆ ನಮ್ಮ ಕನ್ನಡದ ಚಂದದ ಭಾವಗೀತೆಗಳನ್ನು ಕೇಳುತ್ತಾ ಭಾವುಕರಾಗಲಿ, ಸಿನೆಮಾ ಗೀತೆ ಆಸ್ವಾದಿಸುತ್ತಾ ಖುಷಿಪಡಲಿ, ಸಮೃದ್ಧ ಸಾಹಿತ್ಯದ ತುಣುಕುಗಳನ್ನಾದರೂ ಕೇಳುತ್ತಾ ಸಂಭ್ರಮಿಸಲಿ, ಕನ್ನಡದ ಕಾವ್ಯ- ಛಂದಸ್ಸುಗಳು, ಯಕ್ಷಗಾನದ ಭಾಷೆ, ಜಾನಪದದ ಸೊಗಡುಗಳ ಸೆಳೆತದಲ್ಲಿ ಮೈಮರೆಯಲಿ. ಹಾಗೆ ಅವಕಾಶ ಮಾಡಿಕೊಟ್ಟಾಗ ಅವರು ಸರ್ವಾಂಗೀಣವಾಗಿ ಬೆಳೆಯುತ್ತಾರೆ. ಅದೆಷ್ಟೋ ಮಂದಿ ವೃತ್ತಿಪರರು ಬದುಕಿನ ಒಂದು ಹಂತಕ್ಕೆ ಬಂದಾಗ “ಛೆ.. ನಾವು ಇದನ್ನೆಲ್ಲ ಮಿಸ್‌ ಮಾಡಿಕೊಂಡೆವಲ್ಲ’ ಎಂದು ಪರಿತಪಿಸುವುದನ್ನು ಕಾಣುತ್ತೇವೆ, ಹಾಗಾಗದಿರಲಿ.

ಆಗಬೇಕಾದ್ದೇನು?

1 ಶಿಕ್ಷಣ ಮಾಧ್ಯಮ ಯಾವುದೇ ಇರಲಿ. ಮಕ್ಕಳಲ್ಲಿ ಕನ್ನಡ ಪ್ರೀತಿ ಬೆಳೆಸುವುದನ್ನು ಮರೆಯಬೇಡಿ. ಮನೆಯಲ್ಲಿ ಕನ್ನಡದ ವಾತಾವರಣ ರೂಪಿಸಿ.

2 ಇಂಗ್ಲಿಷ್‌ ಮಾತನಾಡಲು ಆ ಮಾಧ್ಯಮದಲ್ಲೇ ಕಲಿಯಬೇಕಾಗಿಲ್ಲ. ಬೇರೆ ಭಾಷೆಯಲ್ಲಿ ಕಲಿತರೆ ಅದಕ್ಕಿಂತಲೂ ಅದ್ಭುತವಾಗಿ ಮಾತನಾಡಬಹುದು ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಿ.

3 ಪಾನಿಪುರಿ ಭಯ್ನಾ, ಉತ್ತರ ಭಾರತದ ಕಾರ್ಮಿಕರ ಜತೆಗೆ ಅರೆಬರೆ ಹಿಂದಿ ಮಾತನಾಡಿ ಅಪಹಾಸ್ಯಕ್ಕೆ ಒಳಗಾಗುವುದಕ್ಕಿಂತ ಕನ್ನಡ ಕಲಿಸುವುದು ಉತ್ತಮ.

4 ಮೊಬೈಲ್‌ನಲ್ಲಿ ಟೈಪ್‌ ಮಾಡುವಾಗ ಕನ್ನಡದಲ್ಲೇ ಮಾಡಿ. ಸ್ಟೇಟಸ್‌ಗಳನ್ನೂ ಕನ್ನಡದಲ್ಲೇ ಹಾಕಿ. ಕನ್ನಡ ಭಾವಗೀತೆ, ಜನಪದ ಗೀತೆಗಳನ್ನು ಕೇಳಿ, ಕೇಳಿಸಿ.

5 ಊರಿನ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ನಡೆಯಲಿ. ಯಾಕೆಂದರೆ, ಕನ್ನಡದ ಮೂಲ ಇರುವುದೇ ಶಾಲೆಗಳಲ್ಲಿ.

ಕೃಷ್ಣ ಭಟ್‌

ಸ್ಥಾನಿಕ ಸಂಪಾದಕ, ಉದಯವಾಣಿ, ಮಣಿಪಾಲ

ಟಾಪ್ ನ್ಯೂಸ್

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

puttige-6-

Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.