“ಬೆಳ್ಳಿ ಅಂಚು’ ಸಿಂಗಾಪುರ ಕನ್ನಡ ಸಂಘದ ಬೆಳ್ಳಿ ಹಬ್ಬ ಸಿಂಗಾಪುರ
Team Udayavani, Mar 8, 2021, 5:29 PM IST
ಸಿಂಗಾಪುರ ಕನ್ನಡ ಸಂಘದ ಬೆಳ್ಳಿ ಹಬ್ಬ ಆಚರಣೆಯ ಮೊದಲ ಕಾರ್ಯಕ್ರಮ ಬೆಳ್ಳಿ ಅಂಚು ವರ್ಚುವಲ್ ಕಾರ್ಯಕ್ರಮ ಫೆ. 20ರಂದು ನಡೆಯಿತು.
ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಆರಂಭಿಸಿದ ಅಧ್ಯಕ್ಷ ರಶ್ಮೀ ಉದಯ ಕುಮಾರ್, 1996ರಲ್ಲಿ ಯಾವುದೇ ಲಾಭದ ಉದ್ದೇಶವಿಲ್ಲದೆ ಸ್ಥಾಪನೆಯಾದ ಸಿಂಗಾಪುರ ಕನ್ನಡ ಸಂಘವು 25 ವರ್ಷಗಳ ಕಲಾವಧಿಯ ಮೈಲುಗಲ್ಲನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಆಚರಣೆ ಮಾಡಲಾಗುವುದು. ಇದರ ಮೊದಲನೇ ಕಾರ್ಯಕ್ರಮವೇ “ಬೆಳ್ಳಿ ಅಂಚು’ ಸಿಂಗಾರಕ್ಕೊಂದು ಹೊಸ ಮೆರುಗು ಎಂದರು.
ಸಿಂಗಾಪುರಕ್ಕೆ ವಲಸೆ ಅಥವಾ ತಾತ್ಕಾಲಿಕವಾಗಿ ಬರುವ ಎಲ್ಲ ಕನ್ನಡಿಗರಿಗೆ ತಾಯ್ನಾಡಿನ ಆಗುಹೋಗುಗಳನ್ನು ಸಮಾನ ಅಭಿರುಚಿ, ಅನುಭವಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ವೇದಿಕೆ ಯಾಗಿ, ಸಿಂಗಾ ಪುರ ಕನ್ನ ಡಿ ಗ ರು ತಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯವನ್ನು ಅಭಿವ್ಯಕ್ತಿ ಗೊಳಿಸಲು ಅನುಕೂಲ, ಅವಕಾಶ ಮಾಡಿಕೊಡುವಂಥ ಒಂದು ಪೋಷಕ ಸಂಸ್ಥೆಯಾಗಿ ಕನ್ನಡ ಸಂಘ ಬೆಳೆದಿದೆ. ಸಿಂಗಾಪುರದಲ್ಲಿ ಕನ್ನಡ ಮಾತನಾಡುವ ಜನರಿಗೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವಿನೋದ, ಕ್ಷೇಮಾ ಭ್ಯುದಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಜಗತ್ತಿನ ವಿವಿಧೆಡೆಯ ಕನ್ನಡಿಗರೊಡನೆ ಸಾಂಸ್ಕೃತಿಕ ಸಂಬಂಧವನ್ನು ಕಲ್ಪಿಸುವುದು ಸಂಘದ ಮೂಲಭೂತ ಉದ್ದೇಶಗಳಾಗಿವೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಅನೇಕ ಸಂಸ್ಥಾಪಕರು ಮತ್ತು ಮುಖ್ಯಸ್ಥರು ಈ ಸಂಘಕ್ಕೆ ಪ್ರಬಲವಾದ ಅಡಿಪಾಯ ಹಾಕಿ¨ªಾರೆ. ಅವರ ಅತ್ಯುತ್ತಮ ನಾಯಕತ್ವ, ಅಮೂಲ್ಯವಾದ ಸೇವೆ ಮತ್ತು ಮೌಲ್ಯಯುತ ಕೊಡುಗೆಗಳು ಶ್ಲಾಘನೀಯ. ಅವರ ಮಾರ್ಗದರ್ಶನದಲ್ಲಿ ಸಂಘದ ಉದಯೋನ್ಮುಖ ಬೆಳವಣಿಗೆಯನ್ನು ನೋಡಿದ್ದೇವೆ ಎಂದ ಅವರು, 2020 ವರ್ಷದ ಕಹಿಯಳಿದು, 2021 ಎಲ್ಲರಿಗೂ ಒಳಿತನ್ನುಂಟು ಮಾಡಲಿ. ಜಗತ್ತಿಗೆ ಆವರಿಸಿರುವ ಕೊರೊನಾ ಕಂಟಕ ಕಳೆಯಲಿ, ಮುಂಬರುವ ದಿನಗಳು ಆನಂದದಾಯಕವಾಗಿರಲಿ, ಆರೋಗ್ಯ, ಸಂತೋಷ, ನೆಮ್ಮದಿ, ಅಭಿವೃದ್ಧಿ ನಿಮ್ಮದಾಗಲಿ ಎಂದು ಕಾರ್ಯಕಾರಿ ಸಮಿತಿಯ ಪರವಾಗಿ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಿಂಗಾಪುರ ಕನ್ನಡ ಸಂಘಕ್ಕೆ ಶುಭ ಹಾರೈಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರಿಗೆ ರಶ್ಮೀ ಅಭಿನಂದನೆ ಸಲ್ಲಿಸಿದರು.
ವಿಶೇಷ ಸಂಚಿಕೆ, ನೂತನ ಜಾಲತಾಣ ಸಂಘದ ರಜತ ಮಹೋತ್ಸವ ಸಂದರ್ಭದಲ್ಲಿ ಸಿಂಗಾರ ಪತ್ರಿಕೆ ವಿಶೇಷ ಸಂಚಿಕೆ ಪ್ರಕಟಗೊಂಡಿದ್ದು, ಇದನ್ನು ಸಂಪೂರ್ಣ ಮಹಿಳಾ ತಂಡ ಸಂಪಾದಿಸಿದೆ. ಇದರ ಪ್ರಧಾನ ಸಂಪಾದಕರಾಗಿ ಮಾಲಾ ನಾಗರಾಜ್, ವಿದ್ಯಾ ವೆಂಕಟೇಶ್, ಸಹ ಸಂಪಾದಕರಾಗಿ ಕವಿತಾ ರಾಘವೇಂದ್ರ, ಯಶಸ್ವಿನಿ ಮುರಳಿ, ಕಾರ್ಯಕಾರಿ ಸಮಿತಿ ಸದಸ್ಯರು ಇ- ಪತ್ರಿಕೆಯನ್ನು ಯಶಸ್ವಿಯಾಗಿ ಹೊರತರಲು ನೀಡಿರುವ ಕೊಡುಗೆಗಾಗಿ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಇ- ಸಿಂಗಾರ ಪತ್ರಿಕೆಯ ಪ್ರಧಾನ ಸಂಪಾದಕಿ ಮಾಲಾ ನಾಗರಾಜ್ ಅವರು ಪತ್ರಿ ಕೆಯ ಕುರಿತು ಮಾಹಿತಿ ನೀಡಿದರು.
ಸಂಘದ ವೆಬ್‌ಸೈಟ್ ಸರಳೀಕರಿಸಬೇಕು ಎನ್ನುವ ಉದ್ದೇಶದ ಪರಿಣಾಮ ವೆಬ್‌ಸೈಟ್‌ನ ಹೊಸ ರೂಪ ಸಿದ್ಧವಾಗಿದ್ದು, ಇದು ಸುಮಾರು 6 ತಿಂಗಳ ಕಠಿನ ಪರಿಶ್ರಮ ಮತ್ತು ಬದ್ಧತೆಯ ಫಲಿತಾಂಶವಾಗಿದೆ ಎಂದು ಸಂಘದ ಕಾರ್ಯದರ್ಶಿ ಪವನ್ ಜೋಶಿ ಅವರು ನೂತನ ಜಾಲತಾಣದ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ನೂತನ ಜಾಲತಾಣದ ಲೋಕಾರ್ಪಣೆಯೂ ನಡೆಯಿತು. ನೂತನ ವೆಬ್‌ಸೈಟ್ ಅನಾವರಣದಲ್ಲಿ ಅವರ ಶ್ರಮ ಮತ್ತು ಮುಂದಾಳುತನಕ್ಕೆ ಕಾರ್ಯಕಾರಿ ಸಮಿತಿ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸತ್ವ ಪರೀಕ್ಷೆ ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರಸಂಗ ಕವಿ ಹಳೆಮಕ್ಕಿ ರಾಮ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಶಂಕರ ಭಾಗವತ ಮತ್ತು ಪ್ರಸನ್ನ ಹೆಗ್ಗಾರು, ಮುಮ್ಮೇಳದಲ್ಲಿ ಉದಯ ಕಡಬಾಳ, ಕಾರ್ತಿಕ್ ಚಿಟ್ಟಾಣಿ, ಶ್ರೀಧರ ಭಟ್ಟ ಕಾಸರಕೋಡು, ಸದಾಶಿವ ಮಲವಳ್ಳಿ, ವಿನಯ ಬೇರೂಳ್ಳಿ ಅವರು ಪ್ರದರ್ಶನದ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಎತ್ತಿ ಹಿಡಿಯುವಂತೆ ಮಾಡಿದ್ದು ಸಿಂಗಾ ಪುರ ಕನ್ನ ಡಿ ಗರ ಮನ ಸಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹದ್ದೂರ ಬಂಡಿ ಏತ ನೀರಾವರಿ ಪರೀಕ್ಷೆ ? ತುಂಗಾಭದ್ರಾ ಹಿನ್ನೀರಿನಲ್ಲಿ ಜಾಕ್ ವೆಲ್
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.