ಮಕ್ಕಳಲ್ಲಿ ಉದ್ಯಮಶೀಲತೆ ಬೆಳೆಸಿದರೆ ಉತ್ತಮ
Team Udayavani, Dec 18, 2022, 6:05 AM IST
ಸ್ವಾವಲಂಬಿ ಮಕ್ಕಳನ್ನು ನಾವು ಹೇಗೆ ಬೆಳೆಸಬಹುದು? ಅಂದರೆ ಯಾವುದೇ ಕೆಲಸಗಳಾದರೂ ಮುಂಚೂಣಿಯಲ್ಲಿ ನಿಲ್ಲುವ, ಗಟ್ಟಿತನ ಹೊಂದಿರುವ ಮತ್ತು ಯಾವುದೇ ಸಮಸ್ಯೆಗಳನ್ನು ಬಗೆಹರಿಸುವಂಥ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ? ಸೇಫ್ ಝೋನ್‌ನಿಂದ ಹೊರಗೆ ನೋಡುವ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಮುಂದೆ ಬರುವಂಥ ಧೈರ್ಯವನ್ನು ನಾವು ಮಕ್ಕಳಲ್ಲಿ ಬೆಳೆಸಬೇಕಲ್ಲವೇ?
ನಾನು ಮೂರು ಮಕ್ಕಳ ತಾಯಿ. ನನ್ನಂತೆಯೇ ನೀವು ಕೂಡ ಪೋಷಕರಾಗಿದ್ದರೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ನನಗೆ ಗೊತ್ತಿದೆ; ಎಲ್ಲ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಹೀಗೆಯೇ ಬೆಳೆಸಬೇಕು ಅಂದುಕೊಂಡಿರುತ್ತಾರೆ. ಆದರೆ ಎಲ್ಲೋ ಒಂದು ಕಡೆ ನಾವು ಇದಕ್ಕೆ ವಿರುದ್ಧವಾಗಿ ಹೋಗುತ್ತಿದ್ದೇವೆ ಎಂದೆನಿಸುತ್ತಿದೆ.
ನಮ್ಮ ಮಕ್ಕಳು ಖುಷಿಯಾಗಿ ಮತ್ತು ಯಶಸ್ವಿಯಾಗಿ ಬೆಳೆಯಲಿ ಎಂದು ಆಶಿಸುತ್ತೇವೆ. ಹೀಗಾಗಿಯೇ ನಾವು ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗುರಾಣಿಯಾಗಿ ನಿಂತು ಬೆಳೆಸುತ್ತೇವೆ. ಅವರ ಆತ್ಮಗೌರವದ ಬಗ್ಗೆ ಆತಂಕವಿದ್ದು, ಅವರು ಏನು ಮಾಡಿದರೂ ನಾವು ಹೊಗಳಲು ಶುರು ಮಾಡುತ್ತೇವೆ. ಕೆಲವೊಂದಕ್ಕೆ ಅವರು ಸಮರ್ಥರಿದ್ದಾರೋ ಇಲ್ಲವೋ ಎಂಬುದನ್ನೂ ನೋಡುವುದಿಲ್ಲ. ನಾವು ಅಂಥ ಕೆಲಸ ಮಾಡಲು ಹೇಳಿ, ಅವರು ಅದರಲ್ಲಿ ಯಶಸ್ವಿಯಾಗಲಿ ಎಂದೇ ಹಾರೈಸುತ್ತೇವೆ. ಹೀಗಾಗಿ ಕೆಲವೊಮ್ಮೆ ಅವರಲ್ಲಿ ಆ ಕೆಲಸವಾಗುವುದಿಲ್ಲ ಎಂದು ಗೊತ್ತಾದ ತತ್‌ಕ್ಷಣ, ನಾವೇ ಅವರ ಕೆಲಸ ಮುಗಿಸಿಬಿಡುತ್ತೇವೆ.
ಈ ರೀತಿ ನಾವು ಮಕ್ಕಳನ್ನು ಬೆಳೆಸುವುದರಿಂದ ಅವರಲ್ಲಿ ರಿಸ್ಕ್ ತೆಗೆದುಕೊಳ್ಳುವ ಮನೋಭಾವವನ್ನು ಕಡಿಮೆ ಮಾಡುತ್ತಿದ್ದೇವೆಯೇ? ಹೌದು, ಏಕೆಂದರೆ ನಮ್ಮ ಮಕ್ಕಳು ಸೋಲಬಾರದು ಎಂಬ ದೃಷ್ಟಿಯಿಂದ ಅವರು ರಿಸ್ಕ್ ತೆಗೆದುಕೊಳ್ಳುವಂಥ ಪರಿಸ್ಥಿತಿಯನ್ನೇ ನಾವು ಉದ್ಭವ ಮಾಡುವುದಿಲ್ಲ. ಹೀಗಾಗಿಯೇ ಮುಂದೆ ಅವರು ರಿಸ್ಕ್ ತೆಗೆದುಕೊಳ್ಳುವಂಥ ಕೆಲಸಕ್ಕೆ ಕೈ ಹಾಕಲು ಹಿಂಜರಿಯುತ್ತಾರೆ.
ಇತ್ತೀಚಿನ ದಿನಗಳಲ್ಲಿ ದೀರ್ಘಾವಧಿವರೆಗೆ ನಮ್ಮ ಮಕ್ಕಳು ಮನೆಯಲ್ಲಿಯೇ ಕಳೆದಿದ್ದಾರೆ. ಪ್ಯೂ ಸಂಶೋಧನೆಯ ಪ್ರಕಾರ, ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಅಮೆರಿಕದಲ್ಲಿ ಶೇ.52ರಷ್ಟು ಮಕ್ಕಳು ಮನೆಯಲ್ಲೇ ಕಳೆದಿದ್ದರು. ಗ್ರೇಟ್ ಡಿಪ್ರಶನ್ ಅವಧಿಗಿಂತಲೂ ಇದು ಹೆಚ್ಚು ಪ್ರಮಾಣದ್ದಾಗಿದೆ. ಹೀಗಾಗಿ ನಮ್ಮ ಮಕ್ಕಳು ಹದಿಹರೆಯ ಮತ್ತು ಪ್ರೌಢಾವಸ್ಥೆಯ ನಡುವಿನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸದ್ಯ ನಾವೀಗ ಇಂಥದ್ದೇ ಪೀಳಿಗೆಯನ್ನು ನೋಡುತ್ತಿದ್ದೇವೆ ಮತ್ತು ಇದೇ ಪೀಳಿಗೆಯನ್ನು ಬೆಳೆಸುತ್ತಿದ್ದೇವೆ.
ಹೀಗಾಗಿ ಪೋಷಕರಾದ ನಾವು ಮಕ್ಕಳನ್ನು ಸದೃಢರಾಗಿ ಬೆಳೆಸುವಲ್ಲಿ ಸೋಲುತ್ತಿದ್ದೇವೆ. ಅಂದರೆ ಮಕ್ಕಳೇ ತಮ್ಮ ಭವಿತವ್ಯ ನಿರ್ಧರಿಸಿಕೊಳ್ಳುವ, ರಿಸ್ಕ್ ತೆಗೆದುಕೊಳ್ಳುವ, ಕಂಫರ್ಟ್ ಝೋನ್‌ನಿಂದ ಹೊರಗೆ ಕಾಲಿಡುವ ಮತ್ತು ಹಲವಾರು ಆಶ್ಚರ್ಯದಾಯಕ ಸಂಗತಿಗಳತ್ತ ಕಣ್ಣು ಹಾಯಿಸುವಂಥ ಮಕ್ಕಳನ್ನು ಬೆಳೆಸುತ್ತಿಲ್ಲ. ಆದರೆ ಈ ಸಂಗತಿಗಳೇ ಮಕ್ಕಳನ್ನು ಮುಂದಿನ ದಿನಗಳಲ್ಲಿ ಯಶಸ್ವಿಯಾಗುವಂಥ ಮತ್ತು ಈ ಯಶಸ್ಸಿಗೆ ಬೇಕಾದ ನೈಪುಣ್ಯಗಳನ್ನು ಕಲಿಸಿಕೊಡುವತ್ತ ಸೋಲುತ್ತಿದ್ದೇವೆ. ಆದರೆ ಈ ಸಂಗತಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಬೇಕಾದವು ಆಗಿವೆ ಎಂದು ಅರಿತುಕೊಳ್ಳಬೇಕು.
ಹೀಗಾಗಿ ಮತ್ತೆ ನಾನು ನನ್ನ ಹಳೆಯ ಪ್ರಶ್ನೆಗೇ ಬರುತ್ತೇನೆ. ನಾವು ಮಕ್ಕಳನ್ನು ಹೇಗೆ ಬೆಳೆಸಬೇಕು? ನನ್ನ ಪ್ರಕಾರ, ನಾವು ಮಕ್ಕಳನ್ನು ಹೆಚ್ಚು ಉದ್ಯಮಶೀಲರಾಗುವತ್ತ ಬೆಳೆಸಬೇಕು. ಇದಕ್ಕೆ ಬೇಕಾದ ಎಲ್ಲ ನೈಪುಣ್ಯಗಳನ್ನು ಕಲಿತುಕೊಳ್ಳಲು ಅವಕಾಶ ನೀಡಬೇಕು. ಆಗಲೇ, ಈ ಉದ್ಯಮಶೀಲತಾ ಜಗತ್ತಿನಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಿದೆ.
ನಾನು ಕಳೆದ 20 ವರ್ಷಗಳಿಂದಲೂ ಯುವ ಉದ್ಯಮಿಗಳಿಗೆ ಬೆಂಬಲ ನೀಡುತ್ತಾ ಬಂದಿದ್ದೇನೆ. ಅವರು ಉದ್ಯಮಿಗಳಾಗಲು ಬೇಕಾದ ನೈಪುಣ್ಯಗಳನ್ನು ಕಲಿಸುತ್ತಾ ಬಂದಿದ್ದೇನೆ. ಅಂದರೆ ಅವರಿಗೆ ತರಬೇತಿ, ತಾಂತ್ರಿಕ ನೈಪುಣ್ಯ ನೀಡುತ್ತಿದ್ದೇನೆ. ಹೇಗೆ ಉದ್ಯಮಗಳನ್ನು ಶುರು ಮಾಡಬೇಕು? ಹೇಗೆ ಇದನ್ನು ಬೆಳೆಸಬೇಕು ಎಂಬುದನ್ನು ಕಲಿಸುತ್ತಿದ್ದೇನೆ.
ನಮ್ಮ ಕಚೇರಿಗೆ ಇಬ್ಬರು ಒಂದೇ ಮಟ್ಟದ ನೈಪುಣ್ಯ ಮತ್ತು ಕೌಶಲ್ಯಗಳನ್ನು ಹೊಂದಿದ ವ್ಯಕ್ತಿಗಳು ಬಂದಿದ್ದರು. ಇವರನ್ನು ಗಮನಿಸಿದಾಗ ಒಬ್ಬರು ಒಂದು ಮಾಹಿತಿಯನ್ನು ಪಡೆದುಕೊಂಡು ಅದರ ಪ್ರಕಾರವೇ ಮುಂದುವರಿಯುವಂಥವರಾಗಿದ್ದರು. ಇನ್ನೊಬ್ಬರು ಯಾವುದೇ ಮಾಹಿತಿ ಪಡೆದರೂ ಅದನ್ನು ಗ್ರಹಿಸಿಕೊಂಡು ಅದರೊಂದಿಗೆ ಹೋಗಲು ತೊಂದರೆ ಅನುಭವಿಸುತ್ತಿದ್ದರು. ಇದರಿಂದ ನಾನು ಅರಿತುಕೊಂಡಿದ್ದೇನೆಂದರೆ ಉದ್ಯಮಶೀಲತೆಗೆ ಕೇವಲ ನೈಪುಣ್ಯತೆ ಮತ್ತು ವ್ಯಾಪಾರ ಕೌಶಲಗಳಿದ್ದರೆ ಸಾಕಾಗುವುದಿಲ್ಲ. ಇದಕ್ಕೆ ಬದಲಾಗಿ ಆ ವ್ಯಕ್ತಿಯ ಮಾನಸಿಕ ದೃಢತೆ ಮತ್ತು ಯೋಜನೆ ಹೇಗಿರಬೇಕು ಎಂಬುದು ಮುಖ್ಯವಾಗಿರುತ್ತದೆ.
ಇದೇ ರೀತಿಯಲ್ಲಿ ನನ್ನ ಮಕ್ಕಳನ್ನೂ ನಾನು ಉದ್ಯಮಶೀಲರನ್ನಾಗಿ ಮಾಡುವ ನಿಟ್ಟಿನಲ್ಲಿ ಬೆಳೆಸುತ್ತಿದ್ದೇನೆ. ಏಕೆಂದರೆ ಈ ಉದ್ಯಮಶೀಲತೆ ಎಂಬುದು ಅನುವಂಶೀಯ ಆಧಾರದಲ್ಲಿ ಬರುವಂಥದ್ದಲ್ಲ. ಇದಕ್ಕೆ ಬೇಕಾದ ವೇದಿಕೆಯನ್ನು ನಾವು ಚಿಕ್ಕಂದಿನಿಂದಲೇ ಕಲ್ಪಿಸಬೇಕು. ಅಂದರೆ ಅದು ಅವರ ವರ್ತನೆ ಮತ್ತು ಅವಕಾಶಗಳನ್ನು ನೀಡುವ ಮೂಲಕ
ಅವರಲ್ಲಿ ಕಲಿಸಬಹುದಾದದ್ದಾಗಿದೆ. ಅಲ್ಲದೆ ಯಾರೊಬ್ಬರೂ ಹುಟ್ಟಿನಿಂದಲೇ ಯಶಸ್ವಿ ಉದ್ಯಮಿಗಳಾಗಿರುವುದಿಲ್ಲ. ಅವರು ಸಾಮರ್ಥ್ಯ, ನೈಪುಣ್ಯ, ಕೌಶಲಗಳನ್ನು ಒಟ್ಟಾಗಿ ಸೇರಿಸಿಕೊಂಡು, ರಿಸ್ಕ್ ತೆಗೆದುಕೊಳ್ಳುವ ಮನೋಭಾವದೊಂದಿಗೆ ಯಶಸ್ವಿ ಉದ್ಯಮಿಯಾಗಿರುತ್ತಾಳೆ.
ಹಾಗಂಥ ಮಕ್ಕಳನ್ನು ಉದ್ಯಮಶೀಲರನ್ನಾಗಿ ಬೆಳೆಸುವುದು ಎಂದರೆ ಕೇವಲ ಉದ್ಯಮಗಳನ್ನು ಹೇಗೆ ಆರಂಭಿಸುವುದು? ಹೇಗೆ ನಡೆಸಿಕೊಂಡು ಹೋಗುವುದು ಎಂದರ್ಥವಲ್ಲ. ಇದಕ್ಕೆ ಬದಲಾಗಿ ಉದ್ಯಮಶೀಲರನ್ನಾಗಿ ಹೇಗೆ ತಯಾರಾಗಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡುವುದು. ಇದಕ್ಕೆ ಪೂರಕವಾಗಿ ಅವರಿಗೆ ಬೇಕಾದ ಎಲ್ಲ ಅಗತ್ಯಗಳನ್ನು
ಈಡೇರಿಸುವುದು, ಆತ್ಮವಿಶ್ವಾಸ ತುಂಬುವುದು, ವೇದಿಕೆಗಳಲ್ಲಿ ಮಾತನಾಡಲು ಬೇಕಾದ ಶಕ್ತಿ ತುಂಬುವುದು, ಹಣಕಾಸಿನ ಸಾಕ್ಷರತೆ ಕಲಿಸಿಕೊಡುವುದು, ಜನರ ಮನವೊಲಿಸುವುದು ಹೇಗೆ? ಎಂಬ ಬಗ್ಗೆ ಕಲಿಸಿಕೊಡುವುದಾಗಿದೆ.
ಹಾಗೆಯೇ ಮಕ್ಕಳ ಅಗತ್ಯತೆಗೆ ಬೇಕಾದ ವಸ್ತುಗಳಿಗೆ ಹೇಗೆ ಹಣ ಹೊಂದಿಸಿಕೊಳ್ಳುವುದು ಎಂಬುದನ್ನು ಕಲಿಸಿಕೊಡಬೇಕು. ಮಕ್ಕಳಿದ್ದಾಗ ನೀವು ಅವರಿಗೆ ಪಾಕೆಟ್ ಮನಿ ಬದಲಾಗಿ ಸ್ಟೈಫೆಂಡ್ ರೀತಿಯಲ್ಲಿ ಹಣ ಕೊಡಬಹುದು. ಇದನ್ನೇ ಅವರು ಮುಂದೆ ತಮ್ಮ ಅಗತ್ಯಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸಲು ಬಳಸಿಕೊಳ್ಳುತ್ತಾರೆ. ಏಕೆಂದರೆ ಉದ್ಯಮಶೀಲತೆ ಎಂಬುದು ವೈಯಕ್ತಿಕ ಹೊಣೆಗಾರಿಕೆ ಮತ್ತು ಮಾಲಕತ್ವಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಅಲ್ಲದೆ, ಉದ್ಯಮಶೀಲರು ಜೀವನ ಪರ್ಯಂತ ಕಲಿಯುವವರೇ ಆಗಿರುತ್ತಾರೆ. ಈ ಬಗ್ಗೆಯೂ ಗಮನ ಹರಿಸಿ ಅವರ ಕಲಿಯುವಿಕೆಗೆ ಬೇಕಾದ ಸಹಾಯ ಮಾಡಬೇಕು.
(ಕೃಪೆ: ಟೆಡ್ ಟಾಕ್ಸ್)
ಟಮೇಕಾ ಮೋಂಟೋಮೆರಿ, ಮಹಿಳಾ ಉದ್ಯಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.