ಶಾಲಾ ಪಠ್ಯದಲ್ಲಿ ಭಗವದ್ಗೀತೆ: ಎಚ್ಚರಿಕೆಯ ಹೆಜ್ಜೆ ಅಗತ್ಯ


Team Udayavani, May 1, 2022, 6:20 AM IST

ಶಾಲಾ ಪಠ್ಯದಲ್ಲಿ ಭಗವದ್ಗೀತೆ: ಎಚ್ಚರಿಕೆಯ ಹೆಜ್ಜೆ ಅಗತ್ಯ

ಭಗವದ್ಗೀತೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿಕೊಳ್ಳುವ ಬಗ್ಗೆ ರಾಜಕೀಯದಲ್ಲಿ ಇರುವವರಲ್ಲಿ ಕೂಡ ಆಶ್ಚರ್ಯಕರವೆನಿಸುವಂತೆ ಅತ್ಯಂತ ಉತ್ಸಾಹ ಮೂಡಿಬಂದಿದೆ.

ಗುಜರಾತ್‌ ಸರಕಾರ ಇಂತಹ ಒಂದು ಧನಾತ್ಮಕವಾದ ಚಿಂತನೆಯನ್ನು ಕ್ರಿಯಾರೂಪಕ್ಕೆ ತಂದಿರುವುದೇ ಈ ಬೆಳವಣಿಗೆಗೆ ಮುಖ್ಯ ಕಾರಣ. ಆದರೆ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆಯನ್ನು ಹೇಗೆ ಅಳ ವಡಿಸಬೇಕು ಎನ್ನುವುದು ನಾಜೂಕಾದ ಮತ್ತು ಗಂಭೀರವಾದ ಮಂಥನಕ್ಕೆ ಒಳಗಾಗಬೇಕಾದ ವಿಷಯ.

ಅದು ದೈನಂದಿನ ಪಾಠ ಪಠ್ಯಗಳಲ್ಲಿ ಸೇರಿಕೊಳ್ಳಬೇಕೇ / ಅವಿಸ್ತರಣ (non detailed) ಪಠ್ಯದಲ್ಲಿ ಸೇರಿಸಬೇಕೇ ಅಲ್ಲ ಪ್ರತ್ಯೇಕ ವಾದ ಒಂದು ನೈತಿಕ ಶಿಕ್ಷಣದ ಅಂಗವಾಗಿ ಅದನ್ನು ಉಪಯೋಗಿಸಿಕೊಳ್ಳಬೇಕೇ?- ಯೋಚಿಸ ಬೇಕು.
ಇಂತಹ ವಿಷಯಗಳಲ್ಲಿ ಅಭಿಮಾನ, ಪ್ರತಿಷ್ಠೆ ಇತ್ಯಾದಿಗಳು ಸಹಜವಾಗಿ ಮುಂದೆ ನಿಲ್ಲಬಹುದು. ಭಾವಾವೇಶದ ಉದ್ಘೋಷಗಳೂ ಕೇಳಿಬರಬಹುದು. ಸಾಮಾನ್ಯವಾಗಿ ನಮಗೆ ಪ್ರಿಯವಾದ¨ªೆಲ್ಲ ನಮ್ಮ ಶಾಲಾ ಪಠ್ಯದಲ್ಲಿ ಸೇರ್ಪಡೆಯಾಗಬೇಕು ಎನ್ನುವ ಬೇಡಿಕೆ ಬೇರೆ ಬೇರೆ ಸಂದರ್ಭಗಳಲ್ಲಿ ಮುನ್ನೆಲೆಗೆ ಬರುವುದಿದೆ. ಯಕ್ಷಗಾನ, ಭರತನಾಟ್ಯ ಮೊದಲಾದ ಕಲೆಗಳ ಕುರಿತು ಮತ್ತು ಬೇರೆ ಬೇರೆ ಭಾಷೆಗಳ ಕುರಿತು ಈಗಾಗಲೇ ಅಂತಹ ಅಪೇಕ್ಷೆಗಳು ಕಾಣಿಸಿಕೊಂಡಿವೆ.

ಭಗವದ್ಗೀತೆ ಹಿಂದೂಗಳ ಪವಿತ್ರವಾದ ಆರಾಧನಾ ಗ್ರಂಥ. ಪ್ರಸ್ಥಾನತ್ರಯಗಳಲ್ಲಿ ಒಂದು. ಆಚಾರ್ಯತ್ರಯರ ಭಾಷ್ಯ ಗೌರವಕ್ಕೆ ಪಾತ್ರವಾದ ಧರ್ಮಗ್ರಂಥವೂ ಹೌದು. ಭಗವದ್ಗೀತೆಯಲ್ಲಿ ಮನುಷ್ಯ ಜೀವನಕ್ಕೆ ಅತ್ಯವಶ್ಯವಾಗಿರುವ ಅನೇಕ ಸದ್ಗುಣಗಳು ಸಾದರಗೊಂಡಿವೆ. ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ ಅತ್ಯಂತ ಪ್ರಬಲವಾದ ಶಕ್ತಿಯಾಗಿ ಪರಿಣಮಿಸಬಲ್ಲ ಮೌಲ್ಯವಿಶೇಷಗಳು ಅದರಲ್ಲಿ ಹಾಸುಹೊಕ್ಕಾಗಿವೆ. ಮಾನಸಿಕವಾದ ಅನೇಕ ಪ್ರಶ್ನೆಗಳಿಗೆ ಉತ್ತರವಿದೆ. ಮಾತ್ರವಲ್ಲ ಅದೊಂದು ಮನಃಶಾಸ್ತ್ರ ಕೃತಿಯೆಂದೂ ಜಾಗತಿಕವಾಗಿ ಅಂಗೀಕರಿಸಲ್ಪಟ್ಟಿದೆ.

ಏನಿದ್ದರೂ ಮೂಲದಲ್ಲಿ ಅದು ಧರ್ಮಗ್ರಂಥ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಪಠ್ಯಕ್ಕೆ ಸಂಬಂಧಿಸಿ ಅದರಲ್ಲಿರುವ ಅಂಶಗಳನ್ನು ಪಾರ ಮಾರ್ಥಿಕ ಚೌಕಟ್ಟಿಗೆ ತೊಡಕಾಗದಂತೆ ಎಷ್ಟನ್ನು ಹೇಗೆ ಸಂಯುಕ್ತಗೊಳಿಸಬೇಕು ಎನ್ನುವುದನ್ನು ಶಿಕ್ಷಣ ತಜ್ಞರು, ಸಮಾಜಶಾಸ್ತ್ರಜ್ಞರು ಮಾತ್ರವಲ್ಲ ಆಧ್ಯಾತ್ಮಿಕ ಧಾರ್ಮಿಕ ಕೇಂದ್ರಗಳ ಆಚಾರ್ಯ ಪುರುಷರು ಕೂಲಂ ಕಷವಾಗಿ ವಿಮರ್ಶಿಸಿಯೇ ಮುಂದುವರಿಯಬೇಕು. ಲೌಕಿಕವಾಗಿ ಸಮಾಜವನ್ನು ಕಟ್ಟಲು ಅದರಿಂದ ಪ್ರಯೋಜನವಾಗಬೇಕೇ ಹೊರತು ಅನಗತ್ಯ ತಪ್ಪು ಕಲ್ಪನೆಗಳಿಂದ ವಿವಾದಕ್ಕೆ ಕಾರಣವಾಗಬಾರದು. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.

-ಡಾ| ರಮಾನಂದ ಬನಾರಿ, ಮಂಜೇಶ್ವರ

ಟಾಪ್ ನ್ಯೂಸ್

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.