ಭರತನಾಟ್ಯ: ಕರ್ನಾಟಕ ಪರಂಪರೆ ಬೆಳಗಿಸಲು ಪಣ ತೊಟ್ಟ ಡಾ.ಜಯಲಕ್ಷ್ಮೀ ಜಿತೇಂದ್ರ

ವಕೀಲೆ, ಕ್ರಿಯಾಶೀಲೆ ಬಹುಮಖ ಪ್ರತಿಭಾ ಸಂಪನ್ನೆ

Team Udayavani, Apr 21, 2022, 7:06 PM IST

1-SDFFSDFDS-1

ಇತ್ತೀಚೆಗಷ್ಟೇ ಜನಮನ ಸೂರೆಗೊಂಡ ಶ್ರೀನಿವಾಸ ಕಲ್ಯಾಣ ಹಾಗೂ ವೆಂಕಟಾದ್ರಿ ಮಹಿಮೆ ಎಂಬ ನೃತ್ಯನಾಟಕದ ಮೂಲಕ ಮನೆಮಾತಾಗಿರುವ ಗುರು ಡಾ.ಜಯಲಕ್ಷ್ಮೀ ಜಿತೇಂದ್ರ ರವರು , ನೃತ್ಯರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯಗಳಿಂದ ಸಾಧನೆಯ ಮಜಲುಗಳಲ್ಲಿ ಸಾಗುತ್ತಿರುವ ಬಹುಮುಖ ಪ್ರತಿಭೆ.

ಮೂಲತಃ ಬೆಂಗಳೂರಿಗರಾದ ಆಧ್ಯಾತ್ಮಿಕ ಚಿಂತಕ, ಕೃಷ್ಣಯ್ಯ ಭಾಗವತರ್ ಮತ್ತು ಶ್ರೀಲಕ್ಷ್ಮೀ ಅವರ ಪುತ್ರಿಯಾದ ಇವರು ಬಾಲ್ಯದಿಂದಲೇ ತಂದೆಯ ಜತೆ ಕೃಷ್ಣಭಕ್ತಿಯ ದೈವೀಕ ನೃತ್ಯಕ್ಕೆ ಹೆಜ್ಜೆ ಹಾಕಲಾರಂಭಿಸಿದರು. ಮೊದಲಿಗೆ ಖ್ಯಾತ ನೃತ್ಯಗುರು ಶಿವರಾವ್ ಅವರಲ್ಲಿ ನೃತ್ಯ ಕಲಿಕೆಗೆ ಸೇರ್ಪಡೆ. ಅಲ್ಲಿನ ಏಳೆಂಟು ವರ್ಷಗಳ ಸತತ ಅಭ್ಯಾಸದ ನಂತರ ತಮ್ಮೊಳಗಿನ ನೃತ್ಯಾಸಕ್ತಿ ಇವರನ್ನು ಭರತನಾಟ್ಯದ ಮೈಸೂರು, ಮೂಗೂರು, ನಂಜನಗೂಡು, ಕೋಲಾರ ನೃತ್ಯಶೈಲಿಗಳನ್ನೊಳಗೊಂಡ ಕರ್ನಾಟಕ ಪರಂಪರೆಯ ನಾಟ್ಯ ಪಾಠಾಂತರಕ್ಕಾಗಿ ಕೈಶಿಕಿ ನಾಟ್ಯವಾಹಿನಿ ನೃತ್ಯ ಸಂಸ್ಥೆಯ ಗುರು ಶ್ರೀಮತಿ ಮಾಲಾ ಶಶಿಕಾಂತ್ ಅವರ ಮಾರ್ಗದರ್ಶನದಲ್ಲಿಯೇ ಭರತಕಲಾಮಣಿ ಗುರು ಸಿ ರಾಧಾಕೃಷ್ಣ ಅವರ ಗರಡಿಯಲ್ಲಿ ಪಳಗಿದರು.

ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಇವರು ತಮ್ಮ ಮುಂದಿನ ಕಲಿಕೆಗಾಗಿ ಗುರು ಮಾಲಾ ಶಶಿಕಾಂತ್ ಅವರ ಮಾತಿನಂತೆ ಗುರು ಶ್ರೀಮತಿ ಶಕುಂತಲಾ ಅವರ ಬಳಿ ನೃತ್ಯಾಭ್ಯಾಸ ಪಡೆದರು. ದೈವಿಕ ಮನೋಭಾವದಿಂದ ನೃತ್ಯಕಲಿಕೆ ಪೂರೈಸುತ್ತಿರುವ ಇವರು ಪ್ರಥಮ ಶ್ರೇಣಿ ಗಳಿಸಿ ವಿದ್ವತ್ ಪರೀಕ್ಷೆಯಲ್ಲಿ ಹೊರಹೊಮ್ಮಿದ್ದು ಸ್ತುತ್ಯರ್ಹ. ಇವರು ಈಗಲೂ ಗುರು ಮಾಲಾ ಶಶಿಕಾಂತ್ ಮತ್ತು ಗುರು ರಾಧಾಕೃಷ್ಣ ಅವರ ಶಿಷ್ಯೆಯಾಗಿಯೇ ಕಲಿಕೆಯನ್ನು ಮುಂದುವರೆಸುತ್ತಾ ಕರ್ನಾಟಕ ನೃತ್ಯಪರಂಪರೆಯನ್ನೇ ಅಭ್ಯಸಿಸುತ್ತಿರುವುದು ಗಮನಾರ್ಹ.

ನೃತ್ಯಕ್ಷೇತ್ರದಲ್ಲಿ ಭರತನಾಟ್ಯಕ್ಕೆ ಸೀಮಿತವಾಗಿರದೆ ಗುರು. ಡಾ ಸುಮನಾ ರಂಜಲ್ಕರ್ ಅವರ ಬಳಿ ಕಥಕ್ ನೃತ್ಯವನ್ನೂ, ಗುರು ವೀಣಾಮೂರ್ತಿ ವಿಜಯ್ ಅವರ ಬಳಿ ಕೂಚಿಪುಡಿ ನೃತ್ಯಶೈಲಿಯನ್ನು ಅಭ್ಯಸಿಸಿದ್ದಾರೆ. ಸುಮಾರು ಐದುನೂರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುತ್ತಿರುವ ನೃತ್ಯಗುರುವೆನಿಸಿಕೊಂಡಿದ್ದೂ ಸ್ವತಃ ನೃತ್ಯ ಕಲಾವಿದೆಯಾಗಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕ್ರಿಯಾಶೀಲೆ ಎಂಬುದು ಗಮನಾರ್ಹ.

ನಾಟ್ಯರಂಗದ ಜೊತೆಗೆ ಶಿಕ್ಷಣದಲ್ಲಿ ಕಲಾ ಪದವೀಧರೆ, ವಕೀಲೆಯಾಗಿರುವ ಇವರು ಹಾಗೆಯೇ ಗುರು ಆಚಾರ್ಯ ರಕುಂ ಅವರ ಮಾರ್ಗದರ್ಶನದಲ್ಲಿ ಮಾರ್ಷಲ್ ಆರ್ಟ್ಸ್ ಅಭ್ಯಾಸ ಗೈದು, ಮಾರ್ಷಲ್ ಆರ್ಟ್ಸ್ ನ ಶಿಕ್ಷಕಿಯಾಗಿ ಬೆಂಗಳೂರಿನ ವಿಜಯ ಕಾಲೇಜು , ಕಾರ್ಮಲ್ ಕಾನ್ವೆಂಟ್ , ಬಿಷಪ್ ಕಾಟನ್ ಶಾಲೆ ಮತ್ತೂ ಹಲವಾರು ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಎರಡು ದಶಕಗಳ ಹಿಂದೆಯೇ ರಂಗಪ್ರವೇಶ ಮಾಡಿದ್ದರೂ ಸಹ ಇಂದಿಗೂ ದೇಶಾದ್ಯಂತ ಎಲ್ಲ ಪ್ರಮುಖ ವೇದಿಕೆಗಳಲ್ಲಿ ನರ್ತಿಸುತ್ತಾ ಅನುಭವ ಪಡೆದುಕೊಂಡಿದ್ದಾರೆ. ನೃತ್ಯದಲ್ಲಿ ಬಿ.ಎ. ಪದವಿ ಜೊತೆಗೆ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡ ಹಿರಿಮೆ ಇವರದಾಗಿದೆ.

ದೇಶದ ವಿವಿಧ ಖ್ಯಾತ ನೃತ್ಯಗುರುಗಳು ನೃತ್ಯಜ್ಞರೆನಿಸಿದ ಮೈಸೂರು ಶೈಲಿಯ ಪ್ರಧಾನ ನೃತ್ಯಗಾರ್ತಿ  ವೆಂಕಟಲಕ್ಷ್ಮಮ್ಮ ಅವರ ಮೊಮ್ಮಗಳೂ ಆದ ಶಂಕುಂತಲಾ ಅವರಲ್ಲಿ ಮೈಸೂರು ಜಾತಿ, ಜಾವಳಿ ಚೂರ್ಣಿಕೆ,ಗುರು ರಾಧಾಕೃಷ್ಣ ಅವರ ಸಪ್ತತಾಳೇಶ್ವರಿ ವರ್ಣ ಮತ್ತು ಚಿತ್ರ ನಾಟ್ಯ ಕಾರ್ಯಾಗಾರ, ಶ್ರೀಮತಿ ವಿದ್ಯಾ ಶಿಮ್ಲಡ್ಕ ಅವರ ಭಾರತ ನಾಟ್ಯ ಕರ್ಣ ಕಾರ್ಯಾಗಾರ, ಗುರು ಶ್ರೀ ಪ್ರಸನ್ನ ಮತ್ತು ಗುರು ಶ್ರೀ ಪುಲಕೇಶಿ ಅವರಲ್ಲಿ ನಟ್ಟುವಾಂಗ ಅಭ್ಯಾಸ, ಹೀಗೆ ಹಲವಾರು ಕಾರ್ಯಗಾರಗಳಲ್ಲಿ ಭಾಗವಹಿಸಿ, ನೃತ್ಯ ವ್ಯಾಕರಣ, ವಿಶೇಷ ಕೃತಿಗಳು, ನೃತ್ಯ ಸಂಯೋಜನೆಯ ಬಗ್ಗೆ ಜ್ಞಾನಾರ್ಜನೆ ಪಡೆದುಕೊಂಡಿದ್ದಾರೆ. ಜೊತೆ ಜೊತೆಯಲ್ಲಿ ಗುರು ಶ್ರೀಮತಿ ಲತಾ ಚಂದ್ರಶೇಖರ್ , ಗುರು ಶ್ರೀಮತಿ ವಸಂತ ಅವರುಗಳ ಬಳಿ ಸಂಗೀತ ಮತ್ತು ವೀಣಾ ವಾದನದ ಪಾಠಾಂತರ ವಾಗಿರುವುದು ಶ್ರೀಮತಿ ಜಯಲಕ್ಷ್ಮೀ ಜಿತೇಂದ್ರ ಅವರ ಸರ್ವಾಂಗೀಣ ಬೆಳವಣಿಗೆಯನ್ನು ತೋರಿಸುತ್ತದೆ. ಸಮಾನಾಂತರವಾಗಿ ಶ್ರೀ ಆಚಾರ್ಯ ಡಾ . ಓಂಕಾರ್ ಅವರಿಂದ ಯೋಗ ತರಬೇತಿಯನ್ನೂ ಕೂಡ ಪಡೆದು ಅದರಲ್ಲಿಯೂ ಪ್ರೌಢಿಮೆಗೆ ಪಾತ್ರವಾಗಿದ್ದು ಇವರ ಜ್ಞಾನವನದ ಮತ್ತೊಂದು ಹಿರಿಮೆ.

ಕರ್ನಾಟಕ ಪರಂಪರೆ ಬೆಳಗಿಸುವ ಪಣ

ಮುಂದೆ ಈ ಕರ್ನಾಟಕ ಭಾರತನಾಟ್ಯ ಪರಂಪರೆಯೂ ಎಲ್ಲಾ ವರ್ಗದವರಿಗೂ ತಲುಪಬೇಕು ಎಂಬ ಇವರ ಉದ್ದೇಶ ಕೈಲಾಸ ಕಲಾಧರ ನೃತ್ಯ ಸಂಸ್ಥೆಯ ಸ್ಥಾಪನೆಗೆ ನಾಂದಿ ಹಾಡಿತು .2001 ರಲ್ಲೇ ಎಲ್ಲ ತರಹದ ವಿದ್ಯಾರ್ಥಿಗಳಿಗೆ ಶಿಕ್ಷಣ ಆರಂಭವಾಯಿತು. ಈ ವಿದ್ಯಾರ್ಥಿ ಬಳಗದಲ್ಲಿ ಸಾಮಾನ್ಯ ಮಕ್ಕಳ ಜೊತೆಗೆ ಅಂಧರು, ಶ್ರವಣ ವೈಫಲ್ಯರು, ದಿವ್ಯಾಂಗರು, ಮಂದಗತಿಯಲ್ಲಿ ಕಲಿಯುವವರು ಹೀಗೆ ಎಲ್ಲಾ ರೀತಿಯ ವಿದ್ಯಾರ್ಥಿಗಳಿಗೂ ಸಮಾನವಾಗಿ ಶಿಕ್ಷಣ ಆರಂಭವಾಯಿತು.

ಆರ್ಥಿಕ ಸಮಸ್ಯೆ ಉಳ್ಳ ವರಿಗೆ ಅವರ ಜೀವನೋಪಾಯದ ವ್ಯವಸ್ಥೆ ಗೆ ಬೇಕಾಗುವಂತಹ ವಿಷಯಗಳನ್ನು ಕೂಡ ಕೈಲಾಸ ಕಲಾಧರ ಸಂಸ್ಥೆಯು ಗುರು, ಡಾ. ಜಯಲಕ್ಷ್ಮೀ ಜಿತೇಂದ್ರ ಅವರ ಅಧ್ಯಕ್ಷತೆಯಲ್ಲಿ ಅಂದಿನಿಂದ ಇಂದಿನ ವರೆಗೂ ನಿರ್ವಹಿಸುತ್ತಲೇ ಬಂದಿದೆ.

ಸಂಸ್ಥೆ ಅಧಿಕೃತವಾಗಿ 2014ರಲ್ಲಿ ಸರ್ಕಾರದಿಂದ ಒಂದು ಸಂಸ್ಥೆಯಾಗಿ ಗುರುತಿಸಲ್ಪಟ್ಟಿತು. ಈ ಸಂಸ್ಥೆಯಲ್ಲಿ ಗುರು ಜಯಲಕ್ಷ್ಮೀ ಯವರು ಮಂದಗತಿಯಲ್ಲಿ ಕಲಿಯುವವರಿಗೆ, ಒತ್ತಡ ನಿವಾರಣೆಗೆ ಹಾಗೆ ವಿವಿಧ ಅನಾರೋಗ್ಯದ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ನಾಟ್ಯ ಯೋಗದಿಂದ ಕಲಿಸುತ್ತಿರುವುದು ಇವರ ಹಾಗೂ ಈ ಸಂಸ್ಥೆಯ ವಿಶೇಷವಾಗಿದೆ.

ಕೈಲಾಸ ಕಲಾಧರ ತಂಡದೊಂದಿಗೆ ಹತ್ತು ಹಲವಾರು ಕಾರ್ಯಕ್ರಮಗಳಿಗೆ ಕೈಹಾಕಿ ಪ್ರೇಕ್ಷಕರ ಮನಗೆದ್ದಿದ್ದಾರೆ . ತ್ರಯಂ , ಬಾಲಭಕ್ತಿ, ಮಹಾಕಾಳಿ-ದೈತ್ಯದಮನಿ, ದಶಾವತಾರ, ಮಹಿಷಾಸುರಮರ್ದಿನಿ , ಸೀತಾಸ್ವಯಂವರ , ಅಷ್ಟಲಕ್ಷ್ಮೀ , ಪುಣ್ಯಕೋಟಿ,ಕೋಣೂರಕೊಡಗೂಸು , ಸುವರ್ಣ ಕರ್ನಾಟಕ, ಸರ್ಪ ನೃತ್ಯ , ದೇವಿ ಮಹಾತ್ಮೆ, ಕೃಷ್ಣಲೀಲಾ , ಭಾವಯಾಮಿ, ಅರ್ಧನಾರೀಶ್ವರ, ಜಗನ್ಮೋಹಿನಿ, ಶೀನಿವಾಸಕಲ್ಯಾಣ ಹೀಗೆ ಹತ್ತು ಹಲವಾರು ನೃತ್ಯನಾಟಕಗಳನ್ನೂ , ನೃತ್ಯರೂಪಕಗಳನ್ನೂ ಸ್ವತಃ ತಾವೇ ನಿರ್ದೇಶಿಸಿ ಹೊರತಂದಿದ್ದಾರೆ.

ನಮ್ಮ ಕರ್ನಾಟಕ ಭರತನಾಟ್ಯ ಪರಂಪರೆಯ ಸೊಬಗನ್ನು ಹಂಪಿ ಉತ್ಸವ, ಮೈಸೂರು ದಸರೆ ಉತ್ಸವ ಗಳಂತಹ ಪ್ರಖ್ಯಾತ ವೇದಿಕೆಗಳಲ್ಲಿ ಜತೆಗೆ ಝೀ ಟಿವಿ , ಕಲರ್ಸ್ ಸೂಪರ್ ಕನ್ನಡ ,ಸಮಯ ನ್ಯೂಸ್ ದೂರ ದರ್ಶನ ಚಂದನದ ಮಧುರ ಮಧುರವೀ ಮಂಜುಳ ಗಾನ ಹೀಗೆ ನೂರಾರು ವೇದಿಕೆಗಳಲ್ಲಿ ಕಲಾರಸಿಕರಿಗೆ ಉಣಬಡಿಸಿದ್ದಾರೆ .

ಇವರ ಎಲ್ಲೇ ಭಾರತಕ್ಕಷ್ಟೇ ಸೀಮಿತವಾಗಿರದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಪ್ರಮುಖವಾಗಿ ಲಂಡನ್ , ಸಿಂಗಾಪುರ್ , ಕೆನಡಾ,ಅಮೆರಿಕಾ ದ ಅಕ್ಕ ಸಮ್ಮೇಳನ, ಅಟ್ಲಾಂಟಾ , ವಿಶ್ವಕನ್ನಡ ಸಮ್ಮೇಳನ ಮೆಲ್ಬರ್ನ್, ಸಿಡ್ನಿ, ಆಸ್ಟ್ರೇಲಿಯಾ ಹೀಗೆ 20ಕ್ಕೂ ಹೆಚ್ಚು ದೇಶ ಗಳಲ್ಲಿ ತಂಡದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇವರ ಸಾಧನೆಗೆ ಎಂತಹವರೂ ಕೂಡ ತಲೆದೂಗಿ ಕಲಾರಸಿಕರಾಗುತ್ತಾರೆ. ಇವರ ಕಲಾ ಸೇವೆಗೆ ಹಲವು ವೇದಿಕೆಗಳಲ್ಲಿ ಸನ್ಮಾನಗಳು, ಪ್ರಶಸ್ತಿಗಳು ಅರ್ಹವಾಗಿ ಅರಸಿ ಬಂದಿವೆ.

ಭರತನಾಟ್ಯ ತಮಿಳುನಾಡಿನದ್ದು ಕರ್ನಾಟಕದಲ್ಲಿ ಇರಲೀ ಇಲ್ಲ ಎಂದು ವಾದಿಸುವವರ ಮಧ್ಯೆ ಕರ್ನಾಟಕ ನೃತ್ಯ ಪರಂಪರೆಯ ಉಳಿವಿಗೆ ಸಂಶೋಧನೆಗಳನ್ನು ಮಾಡುತ್ತಾ ತಮ್ಮ ನೃತ್ಯದ ಮೂಲಕ ಉತ್ತರ ನೀಡುತ್ತಾ ಬಂದಿರುವ ಇವರ ಕಾರ್ಯ ವಂದನಾರ್ಹವಾದುದ್ದು.

ಟಾಪ್ ನ್ಯೂಸ್

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.