ಪ್ರಕೃತಿ ಪ್ರಿಯರಿಗೂ, ಸಾಹಸಪ್ರಿಯರಿಗೂ ರಸದೌತಣ ನೀಡುವ ನೇಚರ್ ಕ್ಯಾಂಪ್
Team Udayavani, Sep 27, 2020, 12:29 PM IST
ನಾವು ಇತ್ತೀಚೆಗೆ ಭೀಮೇಶ್ವರಿ ಸಾಹಸ ಮತ್ತು ಪ್ರಕೃತಿ ಶಿಬಿರಕ್ಕೆ ಭೇಟಿ ನೀಡಿದ್ದೇವೆ. ಇದು ನನ್ನ ಜೀವನದ ಅತ್ಯಂತ ಸುಂದರವಾದ ಪ್ರವಾಸವಾಗಿದೆ.
ಬೆಂಗಳೂರು ನಗರಕ್ಕೆ ಬಹಳ ಹತ್ತಿರದಲ್ಲಿರುವ ಭೀಮೇಶ್ವರಿ ಸಾಹಸ ಶಿಬಿರವು ಕಾವೇರಿ ನದಿಯ ತೀರದಲ್ಲಿ ಸ್ಥಾಪಿಸಲಾದ ಪ್ರಕೃತಿ ಶಿಬಿರ ಬಹಳ ಸುಂದರವಾಗಿದೆ. ಇದು ಮಂಡ್ಯ ಜಿಲ್ಲೆಯ ಮಲಾವಳ್ಳಿ ತಾಲ್ಲೂಕಿನ ಹಲಗುರ್ ಹೋಬಳಿಯಲ್ಲಿದೆ. ಬೆಂಗಳೂರಿನಿಂದ ಕೇವಲ 2.5 ಗಂಟೆಗಳ ಪ್ರಯಾಣವಷ್ಟೇ.
ಇಲ್ಲಿ ಕಮರಿಗಳು, ಜಲಪಾತಗಳು, ದಟ್ಟವಾದ ಕಾಡುಗಳಿದ್ದು, ಪ್ರಾಕೃತಿಕವಾಗಿ ಶ್ರೀಮಂತವಾಗಿದೆ.
ಇದು ಸಾಹಸ ಪ್ರವೃತ್ತಿಯವರಿಗೂ ಮತ್ತು ಪ್ರಕೃತಿಯೊಂದಿಗೆ ಬೆರೆಯಲು ಒಂದು ಉತ್ತಮ ಅವಕಾಶವಾಗದೆ. ಜಿಪ್ ಲೈನ್, ಹಗ್ಗದ ನಡಿಗೆ, ಕಯಾಕಿಂಗ್, ಇತ್ಯಾದಿಗಳಿದ್ದು ಹಲವಾರು ಸಾಹಸ ಚಟುವಟಿಕೆಗಳನ್ನು ಇಲ್ಲಿ ನಾವು ಪ್ರಯತ್ನಿಸಬಹುದು.
ಈ ಭಾಗಗಳಲ್ಲಿ ಕಂಡು ಬರುವ ವನ್ಯಜೀವಿಗಳಲ್ಲಿ ಆನೆಗಳು, ಜಿಂಕೆ, ಮೊಸಳೆ, ಆಮೆ, ಹಾವು ಮತ್ತು ಸುಮಾರು ಇನ್ನೂರು ಪಕ್ಷಿ ಪ್ರಭೇದಗಳಿವೆ. ಅತ್ಯುತ್ತಮ ಜಂಗಲ್ ಕಾಟೇಜ್ ಲಭ್ಯವಿದೆ. ನಮಗೆ ಇಷ್ಟವಾದ ಟ್ರೆಕಿಂಗ್ ಮರೆಯಲು ಸಾಧ್ಯವಿಲ್ಲ.
ನೀವು ಖಂಡಿತವಾಗಿಯೂ ಇಲ್ಲಿನ ಆಹಾರವನ್ನು ಆನಂದಿಸುವಿರಿ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ಲಭ್ಯವಿದೆ.
ವೈಶಾಲಿ ಸಂಜಯ್
ಬೆಳ್ಳಂದೂರ್, ಬೆಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.