Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು


Team Udayavani, Sep 17, 2024, 7:30 AM IST

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

ವಿಶ್ವದ ನಂಬರ್‌ 1 ಜನಪ್ರಿಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟುಹುಬ್ಬದ ಸಂಭ್ರಮ. ಮೋಡಿ ಮಾತುಗಾರ ಮೋದಿ ಪ್ರಧಾನಿಯಾಗಿ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಆರ್‌ಎಸ್‌ಎಸ್‌ ಹಿನ್ನೆಲೆಯಲ್ಲಿ ಬೆಳೆದು ಬಂದ ಮೋದಿ, 74 ತುಂಬಿ 75ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಬದುಕು ಹಾಗೂ ಸಾಧನೆಗಳನ್ನು 74 ಸಂಗತಿಗಳಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ಓದಿ.

01. ವಿಶ್ವದ ನಂ.1 ನಾಯಕ: ವಿಶ್ವದ ಜನಪ್ರಿಯ ನಾಯಕರಲ್ಲಿ ಅಮೆರಿಕದ ಅಧ್ಯಕ್ಷರನ್ನು ಮೀರಿಸಿರುವ ಮೋದಿ, ವಿಶ್ವದ ನಂ.1 ನಾಯಕರಾಗಿದ್ದಾರೆ.

02. ಸೆ.17ರಂದು ಜನನ: ನರೇಂದ್ರ ಮೋದಿ ಅವರು 1950 ಸೆ.17ರಂದು ಗುಜರಾತ್‌ನ ವಡಾನಗರದಲ್ಲಿ ಜನಿಸಿದರು.

03. ಚಿಕ್ಕ ವಯಸ್ಸಿಗೆ ಆರೆಸ್ಸೆಸ್‌: 8 ವರ್ಷ ಇದ್ದಾಗಲೇ ಮೋದಿ ಆರೆಸ್ಸೆಸ್‌ನ ಕಿರಿಯ ಸೇವಕರಾಗಿ ಸೇರಿದ್ದರು.

04. ಚಾಯ್‌ವಾಲಾ: 1965 ಇಂಡೋ ಪಾಕ್‌ ಯುದ್ಧ ವೇಳೆ ವೇಳೆ ಸೈನಿಕರನ್ನು ಹೊತ್ತ ರೈಲು ಸ್ಟೇಷನ್‌ಗೆ ಬರುತ್ತಿದ್ದಂತೆ ಅವರಿಗೆ ಮಸಾಲ ಚಾಯ್‌ ನೀಡುತ್ತಿದ್ದರು.

05. ಮುಸ್ಲಿಂ ಹಬ್ಬ ಆಚರಣೆ: ಬಾಲ್ಯದಲ್ಲಿ ಮೋದಿ ಅವರು ಹಿಂದೂ- ಮುಸ್ಲಿಮ್‌ ಹಬ್ಬಗಳನ್ನು ಒಟ್ಟೊಟ್ಟಿಗೆ ಆಚರಣೆ ಮಾಡುತ್ತಿದ್ದರು.

06. ಸಾಧು ಆಗೋ ಬಯಕೆ: ಚಿಕ್ಕವರಿದ್ದಾಗ ಮೋದಿ ಅವರಿಗೆ ಸಾಧು ಆಗಬೇಕೆಂಬ ಭಾರೀ ಇಚ್ಛೆ ಇತ್ತಂತೆ.

07. 1978ರಲ್ಲಿ ಪದವಿ: 1967ರಲ್ಲಿ ಹೈಸ್ಕೂಲ್‌ ಶಿಕ್ಷಣ, 1978ರಲ್ಲಿ ಪದವಿ(ರಾಜ್ಯ ಶಾಸ್ತ್ರ) ಮತ್ತು 1982ರಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

08. ಸಾಧುಗಳ ಭೇಟಿ: ಆರಂಭಿಕ ವರ್ಷಗಳಲ್ಲಿ ಅವರು ಪ್ರವಾಸ ಕೈಗೊಳ್ಳುತ್ತಿದ್ದರು. ಹಿಮಾಲಯಕ್ಕೂ ಹೋಗಿ ಸಾಧುಗಳನ್ನು ಭೇಟಿಯಾಗಿದ್ದರು.

09.18ನೇ ವಯಸ್ಸಿಗೆ ಮದುವೆ: ಮೋದಿಗೆ 18 ವರ್ಷ ಆದಾಗ 17 ವರ್ಷದ ಜಶೋಧಾಬೆನ್‌ ಜತೆ ವಿವಾಹ ನೆರವೇರಿತು.

10. ಕವಿ ಮೋದಿ: 20ರ ಹರೆಯದಲ್ಲಿ ಮೋದಿ ಕವಿತೆಗಳನ್ನು ಬರೆಯುತ್ತಿದ್ದರು. ಫೋಟೋಗ್ರಫಿ ಅವರ ಹವ್ಯಾಸ ಆಗಿತ್ತು.

11.ನಾಟಕಗಳಲ್ಲಿ ಅಭಿನಯ: ಶಾಲೆಗಳಲ್ಲಿ ಓದುತ್ತಿದ್ದಾಗ ಮೋದಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

12. ಮೊಸಳೆ ಮರಿ: ಭಾರೀ ಧೈರ್ಯವಂತರಾಗಿದ್ದ ಮೋದಿ ಚಿಕ್ಕವರಿದ್ದಾಗ ಒಮ್ಮೆ ಮನೆಗೆ ಮೊಸಳೆ ಮರಿಯನ್ನು ತಂದಿದ್ದರು!

13. ಒಂದೂ ರಜೆ ಇಲ್ಲ: ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಒಂದೂ ರಜೆಯನ್ನು ತೆಗೆದುಕೊಂಡಿಲ್ಲ.

14. ಸೇನೆಗೆ ಸೇರುವ ಆಸೆ: ಮೋದಿಗೆ ಸೇನೆ ಸೇರುವ ಆಸೆ ಇತ್ತು. ಬಡತನ ಕಾರಣಕ್ಕೆ ಸೈನಿಕ ಶಾಲೆ ಸೇರಲು ಸಾಧ್ಯವಾಗಲಿಲ್ಲ.

15. ಕಡಿಮೆ ನಿದ್ದೆ: ಮೋದಿ ತುಂಬಾ ಕಡಿಮೆ ನಿದ್ದೆ ಮಾಡುತ್ತಾರೆ. ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಅವರಿಗೆ ಶಕ್ತಿ ಒದಗಿಸುತ್ತವೆ.

16. ವಿಮಾನದಲ್ಲೇ ನಿದ್ದೆ: ವಿದೇಶ ಪ್ರವಾಸ ಕೈಗೊಂಡ ಹೊಟೇಲ್‌ಗ‌ಳಲ್ಲಿ ಉಳಿಯೋದು ಕಡಿಮೆ. ಹೆಚ್ಚಿನ ಬಾರಿ ವಿಮಾನದಲ್ಲೇ ನಿದ್ದೆ ಮಾಡುತ್ತಾರೆ.

17. ಶಾಸಕರಾಗಿರಲಿಲ್ಲ: 2001ರಲ್ಲಿ ಮೋದಿ ಗುಜರಾತ್‌ ಸಿಎಂ ಆಗಿ ನೇಮಕವಾದಾಗ ಅವರು ಗುಜರಾತ್‌ ಶಾಸನ ಸಭೆಯ ಸದಸ್ಯರಾಗಿರಲಿಲ್ಲ.

18. ಮೊದಲ ಪಿಎಂ: ಸ್ವತಂತ್ರ ಭಾರತದಲ್ಲಿ ಜನಿಸಿ ಪ್ರಧಾನ ಮಂತ್ರಿ ಹುದ್ದೆಗೇರಿದ ಮೊದಲ ವ್ಯಕ್ತಿ ಮೋದಿ.

19. 13 ವರ್ಷ ಸಿಎಂ: ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿ 13 ವರ್ಷ ಸೇವೆ ಸಲ್ಲಿಸಿದ್ದಾರೆ.

20. ಗ್ಲೋಬಲ್‌ ಫ್ಯಾಶನ್‌: ವಿಶಿಷ್ಟ ಮೋದಿ ಜಾಕೆಟ್‌, ಮೋದಿ ಕುರ್ತಾ ಅವರನ್ನು ಜಾಗತಿಕ ಫ್ಯಾಶನ್‌ ಐಕಾನ್‌ನ್ನಾಗಿ ಮಾಡಿವೆ.

21. 2ನೇ ಪಿಎಂ: ಸತತ 2ನೇ ಅವಧಿಗೂ ಮೋದಿ ಪೂರ್ಣ ಪ್ರಮಾಣ ಬಹುಮತದೊಂದಿಗೆ ಪ್ರಧಾನಿಯಾದ 2ನೇ ವ್ಯಕ್ತಿ. ಮೊದಲನೆಯವರು ಇಂದಿರಾ ಗಾಂಧಿಯವರು.

22. 10 ಕೋಟಿ ಫಾಲೋವರ್ಸ್‌: ಟ್ವಿಟರ್‌ನಲ್ಲಿ ಮೋದಿಗೆ 10.1 ಕೋಟಿ ಫಾಲೋವರ್ಸ್‌ ಇದ್ದಾರೆ.

23. ಸ್ವಾಮಿ ವಿವೇಕಾನಂದ: ಪ್ರಧಾನಿ ಮೋದಿ ಅವರಿಗೆ ಸ್ವಾಮಿ ವಿವೇಕಾನಂದ ಅವರು ದೊಡ್ಡ ಪ್ರೇರಣೆಯಾಗಿದ್ದಾರೆ.

24.ಮಾತುಗಾರ ಮೋದಿ: ಮೋದಿ ಅತ್ಯುತ್ತಮ ಭಾಷಣಕಾರರು. ಅವರ ಮಾತು ಕೇಳಲು ಲಕ್ಷಾಂತರ ಜನರು ಸೇರುತ್ತಾರೆ.

25. ತಂತ್ರಜ್ಞಾನ ಸ್ನೇಹಿ: ಮೋದಿ ತಂತ್ರಜ್ಞಾನಿಸ್ನೇಹಿಯಾಗಿದ್ದು, ಎಲ್ಲ ಸೋಶಿಯಲ್‌ ಮೀಡಿಯಾಗಳಲ್ಲೂ ಅವರು ಖಾತೆಗಳನ್ನು ತೆರೆದಿದ್ದಾರೆ.

26. 1985ರಲ್ಲಿ ಬಿಜೆಪಿಗೆ: ಆರ್‌ಎಸ್‌ಎಸ್‌ನ ಪೂರ್ಣ ಪ್ರಮಾಣದ ಕಾರ್ಯಕರ್ತರಾಗಿದ್ದ ಮೋದಿ ಅವರು 1985ರಲ್ಲಿ ಬಿಜೆಪಿಗೆ ಬಂದರು.

27. 100 ಪ್ರಭಾವಿ ಪೈಕಿ ಒಬ್ಬರು: 2014, 2015, 2017ರಲ್ಲಿ ಟೈಮ್‌ ಮ್ಯಾಗ್‌ಜಿನ್‌ನ ಪ್ರಭಾವಿ 100 ಪೈಕಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

28. 79 ಬಾರಿ ವಿದೇಶಿ ಪ್ರವಾಸ: 2024ರ ಸೆಪ್ಟೆಂಬರ್‌ ಹೊತ್ತಿಗೆ ಮೋದಿ ಒಟ್ಟು 79 ಬಾರಿ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. 70 ದೇಶಗಳಿಗೆ ಭೇಟಿ ನೀಡಿದ್ದಾರೆ.

29. ವಿದೇಶಗಳಿಂದ ಗೌರವ: ಈವರೆಗೆ 14 ದೇಶಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮೋದಿಗೆ ನೀಡಿ ಗೌರವಿಸಿವೆ.

30. ಮೊದಲ ಬಾರಿ ಶಾಸಕ: 2001ರಲ್ಲಿ ಮೋದಿ ಗುಜರಾತ್‌ ಸಿಎಂ ಆದರೂ 2002ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

31. ಮೊದಲ ಬಾರಿ ಸಂಸದ: 2014ರಲ್ಲಿ ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದರು.

32. ಮೊದಲ ಬಾರಿಗೆ ಪಿಎಂ: ಸಂಸದರಾಗಿ ಆಯ್ಕೆಯಾದ ಮೊದಲ ಬಾರಿಗೆ ಪ್ರಧಾನಿಯೂ ಆದ ವಿಶಿಷ್ಟ ದಾಖಲೆ ಮೋದಿಯದ್ದು.

33. ತುರ್ತು ಪರಿಸ್ಥಿತಿ: 1975-77 ವಿಧಿಸಲಾ ಗಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಮೋದಿ ಅವರು ಹೋರಾಟ ನಡೆಸಿದ್ದರು. ಈ ಮೂಲಕ ಪ್ರಮುಖ ನಾಯಕರಾಗಿ ಗುರುತಿಸಿಕೊಂಡರು.

34. ಯುವಕರಲ್ಲಿ ಒಗ್ಗಟ್ಟು: 1974ರಲ್ಲಿ ನಡೆದ ನವನಿರ್ಮಾಣ ಆಂದೋಲನದಲ್ಲಿ ವಿದ್ಯಾರ್ಥಿ ನಾಯಕರಾಗಿ ಭಾಗಿಯಾಗುವ ಮೂಲಕ ಮೋದಿ ಯುವಕರಲ್ಲಿ ಒಗ್ಗಟ್ಟು ಮೂಡಿಸಿದರು.

35. ರಹಸ್ಯ ಸಭೆಗಳ ನೇತೃತ್ವ: ತುರ್ತು ಪರಿಸ್ಥಿತಿ ಹೇರಿದ್ದ ಸಮಯದಲ್ಲಿ ದೇಶದಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ನಿಷೇಧ ವಿಧಿಸಲಾಗಿತ್ತು. ಈ ವೇಳೆ ಅಪಾಯಗಳಿಗೆ ಸಿದ್ಧವಾಗಿ ರಹಸ್ಯ ಸಭೆಗಳನ್ನು ನಡೆಸಿ, ವಿಚಾರಗಳನ್ನು ಹಂಚಿದರು.

36. ವಿದೇಶದೊಂದಿಗೆ ಸಂಬಂಧ: ತುರ್ತು ಪರಿಸ್ಥಿತಿಯ ಸಮಯದಲ್ಲಿ ವಿದೇಶದ ಲ್ಲಿರುವ ವ್ಯಕ್ತಿಗಳನ್ನು ಸಂಪರ್ಕಿಸಿ ಭಾರತದ ಹೋರಾಟದ ವಿವರಗಳನ್ನು ಪ್ರಕಟಿಸುವಲ್ಲಿ ಸಹಾಯ ಮಾಡಿದರು.

37. ಬಿಬಿಸಿ ಮೂಲಕದ ಪ್ರಸಾರ: ತುರ್ತು ಪರಿಸ್ಥಿತಿ ವೇಳೆ ಆರೆಸ್ಸೆಸ್‌ ಮತ್ತು ತುರ್ತು ಪರಿಸ್ಥಿತಿ ವಿರೋಧಿಸುತ್ತಿದ್ದ ನಾಯಕರ ವಿಚಾರಧಾರೆ ಬಿಬಿಸಿಯಂತಹ ಸಂಸ್ಥೆಗಳ ಮೂಲಕ ಪ್ರಸಾರ ಮಾಡಲು ಮೋದಿ ನೆರವಾದರು.

38. ಪುಸ್ತಕ ರಚನೆ ಮೂಲಕ ಅರಿವು: 1978ರಲ್ಲೇ ಮೋದಿ ಮೊದಲ ಪುಸ್ತಕ ಬರೆದರು. ಅದರ ಹೆಸರು “ಸಂಘರ್ಷ್‌ ಮಾ ಗುಜರಾತ್‌’.

39. 2 ವರ್ಷ ದೇಶ ಪ್ರವಾಸ: ಹದಿಹರೆಯದ ವಯಸ್ಸಿನಲ್ಲಿ ಮನೆ ತೊರೆದ ಮೋದಿ 2 ವರ್ಷಗಳ ಕಾಲ ದೇಶ ಸಂಚಾರ ಮಾಡಿ ಭಾರತದ ವಿವಿಧ ಸಂಸ್ಕೃತಿಗಳನ್ನು ಅಧ್ಯಯನ ಮಾಡಿದರು.

40. ಮೊದಲ ಜಯ: 1987ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಮೋದಿ ಅವರು ಅಹ್ಮದಾಬಾದ್‌ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಜಯ ತಂದುಕೊಟ್ಟರು. ಇಲ್ಲಿಂದ ರಾಜಕೀಯ ತಂತ್ರಗಾರಿಕೆ ಶುರುವಾಯಿತು.

41. ನವರಾತ್ರಿಯಲ್ಲಿ ಉಪವಾಸ: ತಂದೆಯೊಂದಿಗೆ ಸೇರಿ ನವರಾತ್ರಿಯ ದಿನಗಳಲ್ಲಿ ಮೋದಿ ಮಾಡುತ್ತಿದ್ದ ಉಪವಾಸ ಅವರ ಬದುಕಿನಲ್ಲಿ ಅಪಾರ ತಾಳ್ಮೆ ಮತ್ತು ಶಕ್ತಿಯನ್ನು ತುಂಬಿತು.ಈಗಲೂ ಈ ವ್ರತವನ್ನು ಮುಂದುವರಿಸಿದ್ದಾರೆ.

42.ಹಲವು ಕಡೆ ಧ್ಯಾನ: ನವರಾತ್ರಿಯ ಉಪವಾಸದ ಜತೆಗೆ ಮೋದಿ ಕೇದಾರನಾಥ ಸೇರಿದಂತೆ ಹಲವು ಧಾರ್ಮಿಕ ಸ್ಥಳಗಳಲ್ಲಿ ಧ್ಯಾನ ಕೈಗೊಳ್ಳುತ್ತಿದ್ದರು. ಇದು ಅವರಿಗೆ ಶಿಸ್ತನ್ನು ಕಲಿಸಿಕೊಟ್ಟಿತು.

43. ಆಧ್ಯಾತ್ಮಿಕ ಜೀವನ: ಆಧ್ಯಾತ್ಮಿಕ ಜೀವನಕ್ಕೆ ಆಕರ್ಷಣೆ. ಧ್ಯಾನಕ್ಕೆ ಒತ್ತು. 2019ರ ಚುನಾವಣೆಯ ಬಳಿಕ ಕೇದಾರನಾಥದಲ್ಲಿ ಮೋದಿ ಕೈಗೊಂಡ ಧ್ಯಾನ ಇದಕ್ಕೆ ಉದಾಹರಣೆ.

44. ಮೇಕ್‌ ಇನ್‌ ಇಂಡಿಯಾ: ಭಾರತದ ಆರ್ಥಿಕತೆಯನ್ನು ಸದೃಢಗೊಳಿಸಲು ಮೋದಿ ಮೇಕ್‌ ಇನ್‌ ಇಂಡಿಯಾ ಯೋಜನೆ ರೂಪಿಸಿದರು.

45. ತೆರಿಗೆ ವ್ಯವಸ್ಥೆ: ಇಡೀ ದೇಶದಲ್ಲಿ ಏಕೀಕೃತವಾದ ತೆರಿಗೆ ವ್ಯವಸ್ಥೆಯಾದ ಜಿಎಸ್‌ಟಿ ಜಾರಿ ಮಾಡುವ ಮೂಲಕ ತೆರಿಗೆ ಸುಧಾರಣೆ ಕೈಗೊಂಡರು.

46. ಡಿಜಿಟಲ್‌ ಇಂಡಿಯಾ: ಗ್ರಾಮೀಣ ಪ್ರದೇಶಗಳನ್ನು ಸುಲಭವಾಗಿ ತಲುಪಲು ಡಿಜಿಟಲ್‌ ಇಂಡಿಯಾ ಯೋಜನೆಗಳನ್ನು ರೂಪಿಸಿದರು. ಇದರಿಂದ ಗ್ರಾಮೀಣರಿಗೂ ಸೌಲಭ್ಯಗಳು ದೊರೆತವು.

47. ಇಂಟರ್ನೆಟ್‌ ಜಗತ್ತಿನಲ್ಲಿ ಕ್ರಾಂತಿ: ಅತೀ ವೇಗದ ಇಂಟರ್ನೆಟ್‌ ಸೌಲಭ್ಯ ಒದಗಿಸುವುದಕ್ಕಾಗಿ ಭಾರತ್‌ನೆಟ್‌ ಯೋಜನೆಯನ್ನು ಜಾರಿ ಮಾಡಿದರು. ಡಿಜಿಟಲ್‌ ಇಂಡಿಯಾ ಸಕಾರಗೊಳ್ಳಲು ಇದು ನೆರವಾಯಿತು.

48. ಸ್ವಚ್ಛ ಭಾರತ್‌: ಸ್ವಚ್ಛ ದೇಶದ ನಿರ್ಮಾಣಕ್ಕೆ ಮೋದಿ ಹೆಚ್ಚಿನ ಆಸಕ್ತಿ ತೋರಿದರು. ಇದಕ್ಕಾಗಿ ಸ್ವಚ್ಛ ಭಾರತ ಅಭಿಯಾನವನ್ನು ಜಾರಿ ಮಾಡಿದರು.

49. ಜನಧನ ಯೋಜನೆ: ಬ್ಯಾಂಕ್‌ ಖಾತೆ ಹೊಂದಿಲ್ಲದವರನ್ನು ಬ್ಯಾಂಕಿಂಗ್‌ ವ್ಯವಸ್ಥೆಗೆ ಪರಿಚಯಿಸಲು ಈ ಯೋಜನೆ ಜಾರಿ ಮಾಡಿದರು. ಅಲ್ಲದೇ ಸರಕಾರಿ ಹಣ ನೇರವಾಗಿ ಖಾತೆಗೆ ಜಮೆಯಾಗಲಿದೆ.

50. 370ನೇ ವಿಧಿ ರದ್ದು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದರು. ಇದೊಂದು ಐತಿಹಾಸಿಕ ನಿರ್ಧಾರ.

51. ರಾಮಮಂದಿರ: ಮೋದಿ ಆಡಳಿತದಲ್ಲಿ ರಾಮ ಮಂದಿರ ನಿರ್ಮಾಣ. ಮೋದಿಯಿಂದ ಬಾಲರಾಮನ ಪ್ರತಿಷ್ಠಾಪನೆ.

52. ಗ್ರಂಥಾಲಯದಲ್ಲೇ ಹೆಚ್ಚು ಸಮಯ: ಮೋದಿ ಅವರು ಬಾಲ್ಯ ಹಾಗೂ ಕಾಲೇಜಿನ ದಿನಗಳಲ್ಲಿ ಹೆಚ್ಚಿನ ಸಮಯವನ್ನು ಗ್ರಂಥಾಲಯಗಳಲ್ಲಿ ಕಳೆಯುತ್ತಿದ್ದರು.

53. ನುರಿತ ಈಜುಗಾರ: ಬಾಲ್ಯದಲ್ಲಿ ಆಟೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುತ್ತಿದ್ದರೂ ಈಜು ಅವರ ನೆಚ್ಚಿನ ಕ್ರೀಡೆಯಾಗಿತ್ತು.

54. ಉಪ್ಪು, ಮೆಣಸು, ಬೆಲ್ಲ ತ್ಯಾಗ: ಮೋದಿ ಬೆಳೆದಂತೆ ಸನ್ಯಾಸಿ ಆಗಬೇಕು ಎಂಬ ಬಯಕೆ ತೀವ್ರವಾಗಿತ್ತು. ಹೀಗಾಗಿ ಉಪ್ಪು, ಖಾರ, ಸಿಹಿ ತ್ಯಜಿಸಿದ್ದರು.

55. ಭಾರತದಲ್ಲಿ ಜಿ20: ಜಿ20 ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ಕಳೆದ ವರ್ಷ ಶೃಂಗಸಭೆಯನ್ನು ಭಾರತದಲ್ಲಿ ಆಯೋಜನೆ ಮಾಡಿತ್ತು.

56. ನೋಟ್‌ ಬ್ಯಾನ್‌: ದೇಶದಲ್ಲಿ ಹೆಚ್ಚಾಗಿದ್ದ ಕಪ್ಪು ಹಣವನ್ನು ನಿಯಂತ್ರಣ ಮಾಡುವುದಕ್ಕಾಗಿ ಮೋದಿ ಅವರು ದಿಢೀರನೇ ನೋಟ್‌ ಬ್ಯಾನ್‌ ಘೋಷಣೆ ಮಾಡಿದರು.

57. ಕೋವಿಡ್‌ ನಿಯಂತ್ರಣ: ಇಡೀ ಜಗತ್ತು ಕೋವಿಡ್‌ ಸಾಂಕ್ರಾಮಿಕದಿಂದ ನರಳುತ್ತಿದ್ದ ಸಮಯದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯ ಭಾರತೀಯರು ಸೋಂಕಿಗೆ ತುತ್ತಾಗುವುದನ್ನು ತಪ್ಪಿಸಿದರು.

58. ಸ್ಟಾರ್ಟ್‌ ಅಪ್‌: ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಉದ್ಯೋಗದಾ ತರನ್ನು ಸೃಷ್ಟಿ ಮಾಡುವುದ ಕ್ಕಾಗಿ ಸ್ಟಾರ್ಟ್‌ ಅಪ್‌ಗ್ಳಿಗೆ ಮೋದಿ ಹೆಚ್ಚಿನ ಉತ್ತೇಜನ ವನ್ನು ನೀಡಿದರು.

59. ಗರೀಬ್‌ ಕಲ್ಯಾಣ: ಗ್ರಾಮೀಣ ಭಾರತದ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಗಾಗಿ ಗರೀಬ್‌ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲಾಯಿತು.

60. ತ್ರಿವಳಿ ತಲಾಖ್‌ ನಿಷೇಧ: ಪ್ರಧಾನಿಯಾಗಿ ಮೋದಿ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ತ್ರಿವಳಿ ತಲಾಖ್‌ ನಿಷೇಧ ಕೂಡ ಒಂದು.

61. ಯೋಧರ ಜತೆ ದೀಪಾವಳಿ: ಪ್ರಧಾನಿಯಾಗಿ ಮೋದಿ ಪ್ರತಿ ದೀಪಾವಳಿಯನ್ನು ಯೋಧರ ಜತೆ ಆಚರಿಸಿಕೊಂಡು ಬರುತ್ತಿದ್ದಾರೆ.

62. ಯೋಗ ದಿನ: ಅಂತಾರಾಷ್ಟ್ರೀಯ ಯೋಗ ದಿನ ಎಂದು ವಿಶ್ವ ಸಂಸ್ಥೆ ಆಚರಿಸಲು ಮೋದಿ ಅವರ ಕೊಡುಗೆ ಅಪಾರವಾಗಿದೆ.

63. ಮನ್‌ ಕೀ ಬಾತ್‌: ಮೋದಿ ಅವರ ಮನ್‌ ಕೀ ಬಾತ್‌ ಈವರೆಗೆ 113 ಎಪಿಸೋಡ್‌ಗಳನ್ನು ಕಂಡಿದೆ.

64. ಆತ್ಮನಿರ್ಭರ ಭಾರತ್‌: ಸರ್ವ ವಲಯಲ್ಲಿ ಸ್ವಾವಲಂಬಿ ಭಾರತವನ್ನು ರೂಪಿಸುವುದಕ್ಕಾಗಿ ಆತ್ಮನಿರ್ಭರ ಭಾರತ್‌ ಅಭಿಯಾನ ಆರಂಭಿಸಿದ್ದಾರೆ.

65. ಬುಲೆಟ್‌ ಟ್ರೈನ್‌: ಇದು ಮೋದಿ ಅವರ ಕನಸು. ಮುಂಬೈ-ಅಹ್ಮದಾಬಾದ್‌ ನಡುವಿನ ಬುಲೆಟ್‌ ಟ್ರೈನ್‌ ಶೀಘ್ರವೇ ನನಸಾಗಲಿದೆ.

66. ಶಾಂತಿ ಪ್ರತಿಪಾದಕ: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮೋದಿ ತಮ್ಮ ಶಾಂತಿ ಪ್ರತಿಪಾದನೆಗೆ ಹೆಸರುವಾಸಿಯಾಗಿದ್ದಾರೆ.

67. ಅಮೆರಿಕದಿಂದ ನಿಷೇಧ: ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅಮೆರಿಕ 2005ರಲ್ಲಿ ತನ್ನ ವೀಸಾ ನೀಡಲು ಮೋದಿಗೆ ಹಿಂದೇಟು ಹಾಕಿತ್ತು.

68. ಮರುನಾಮಕರಣ: ಬ್ರಿಟಿಷ್‌ ವಸಾಹತುಶಾಹಿಯನ್ನು ಬಿಂಬಿಸುವ ಅನೇಕ ಹೆಸರನ್ನು ಮೋದಿ ಬದಲಿಸಿದ್ದಾರೆ. ಇತ್ತೀಚೆಗೆ ಪೋರ್ಟ್‌ಬ್ಲೇರ್‌ ನಗರದ ಹೆಸರು ಬದಲಿಸಲಾಗಿದೆ.

69. ಪರೀಕ್ಷೆ ಪೇ ಚರ್ಚಾ: ಮಕ್ಕಳಲ್ಲಿ ಪರೀಕ್ಷೆ ಬಗೆಗಿನ ಭಯ ಹೋಗಲಾಡಿಸಲು ಮೋದಿ ಪ್ರತೀ ವರ್ಷ ಪರೀಕ್ಷೆ ಪೇ ಚರ್ಚಾ ನಡೆಸುತ್ತಾರೆ.

70. ಪಾಕ್‌ಗೆ ತಕ್ಕ ಉತ್ತರ: ಉರಿ ಮತ್ತು ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ಮೋದಿ ಪಾಕ್‌ಗೆ ಪ್ರತ್ಯುತ್ತರ ನೀಡಿದ್ದಾರೆ.

71. ಹೊಸ ಸಂಸತ್‌ ಭವನ: ಹೊಸ ಸಂಸತ್‌ ಭವನಕ್ಕೆ ಶಂಕುಸ್ಥಾಪನೆ ಮಾಡಿ, ಅದನ್ನು ಅವರೇ ಉದ್ಘಾಟಿಸಿದ್ದು ಮೋದಿ ಸಾಧನೆ.

72. ಚಂದ್ರಯಾನ ಕಹಿ, ಸಿಹಿ: ಬಾಹ್ಯಾಕಾಶ ಮತ್ತು ಅಣು ಇಂಧನ ಇಲಾಖೆಯನ್ನು ಹೊಂದಿರುವ ಮೋದಿ ಆಡಳಿತದಲ್ಲಿ ಚಂದ್ರಯಾನ 2 ವಿಫ‌ಲವಾದರೆ, ಚಂದ್ರಯಾನ 3 ಯಶಸ್ವಿಯಾಯಿತು.

73. ಜಿಎಸ್‌ಟಿ ಸಾಧನೆ: ಮೋದಿ ಪ್ರಧಾನಿ ಯಾಗಿ ಜಾರಿ ಮಾಡಿದ ಅತ್ಯಂತ ಕಠಿನ ಕೆಲಸದಲ್ಲಿ ಜಿಎಸ್‌ಟಿ ಜಾರಿ ಕೂಡ ಒಂದು.

74. ಮೆಚ್ಚಿನ ನಾಯಕ: ಇಂದಿರಾ ಗಾಂಧಿ ಬಳಿಕ ಭಾರತದಾದ್ಯಂತ ಹೆಚ್ಚು ಮೆಚ್ಚುಗೆಯ ನಾಯಕ ಎಂದರೆ ಮೋದಿ.

ಟಾಪ್ ನ್ಯೂಸ್

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

suicide

Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.