ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?


Team Udayavani, Jul 27, 2021, 6:30 AM IST

ರಾಜಕೀಯದ ಹೊಸದಿಕ್ಕಿಗೆ ಕಾರಣವಾಗಲಿವೆಯೇ ಕಂಪನಗಳು?

ಭೂಕಂಪ ಆದ ಬಳಿಕ ಕೆಲಕಾಲ ಕಂಪನಗಳಿರುತ್ತವೆ. ಅದರಂತೆ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕರು ಅಧಿಕಾರದಿಂದ ಕೆಳಗಿಳಿದಾಗ ರಾಜಕೀಯ ಕಂಪನಗಳೂ ಆಗುತ್ತವೆ. ಜತೆಗೆ ಅನುಕಂಪವೂ…

ರಾಜ್ಯ ಕಂಡ ಪ್ರಭಾವಿ ಜನನಾಯಕರಲ್ಲಿ ಒಬ್ಬರಾದ ಬಿ.ಎಸ್‌.ಯಡಿಯೂರಪ್ಪ ಅಕಾಲಿಕ ಅಧಿಕಾರಾಂತ್ಯ ಕಂಡಿದ್ದಾರೆ. ಆದರೆ, ಸ್ವತಃ ಯಡಿಯೂರಪ್ಪನವರೇ ಹೇಳಿದಂತೆ ಅವರ ರಾಜಕಾರಣ ಇನ್ನೂ ಮುಂದುವರಿಯುತ್ತದೆ!

ದಶಕದ ಬಳಿಕ ಮತ್ತೆ ಅಷಾಢ ಮಾಸ ದಲ್ಲಿ ಅವರ ಅಧಿಕಾರ ರಾಜಕಾರಣ ಅಂತ್ಯವಾದರೂ, ಈಗ ಆಷಾಢ ಸ್ಥಿತ್ಯಂತರದಲ್ಲಿ ಅವರ ರಾಜಕಾರಣ ಇನ್ನೊಂದು ದಿಕ್ಕಿನಲ್ಲಿ ಸಾಗುವುದು ಖಚಿತ. ಅವರು ತಮ್ಮ ಭಾವಪೂರ್ಣ “ಎರಡನೇ ವರ್ಷದ ಸಂಭ್ರಮ’ದ ಕೊನೆಗೆ ರಾಜೀನಾಮೆ ಘೋಷಣೆ ಮಾಡಿ ಹೇಳಿದ ವಿದಾಯ ವಾಕ್ಯಗಳಲ್ಲಿ ಪಕ್ಷದ ಒಳಗಿದ್ದುಕೊಂಡೇ ಪಕ್ಷ ಕಟ್ಟುವ ಮಾತಾಡಿದ್ದಾರೆ. ಹಾಗೆಂದು ಅಟಲ್‌ ಬಿಹಾರಿ ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗುವ ಅವಕಾಶವಿದ್ದರೂ, ಕರ್ನಾಟಕ ರಾಜಕಾರಣದಲ್ಲೇ ಇರುವುದಾಗಿ ಸ್ಪಷ್ಟವಾಗಿ ಹೇಳಿದ್ದೆ ಎನ್ನುವ ಮೂಲಕ ದೆಹಲಿ ರಾಜಕಾರಣ ಮಾಡುವ ಇರಾದೆ ಇಲ್ಲ ಹೇಳಿ ದ್ದಾರೆ. ರಾಜ್ಯಪಾಲರಾಗಿ ಹೋಗುವ ವಿಚಾರವನ್ನೂ  ಖಂಡಿತವಾಗಿ ನಿರಾಕರಿಸಿದ್ದಾರೆ.

ಸಾಮ್ಯತೆ!: 2011ರಲ್ಲಿ ಅನಿವಾರ್ಯತೆಯಿಂದ ರಾಜೀನಾಮೆ ಕೊಡಬೇಕಾಯಿತು.  ಹತ್ತು ವರ್ಷಗಳ ಬಳಿಕ ಅದೇ ರೀತಿಯ “ಅನಿವಾರ್ಯತೆ’ಯಿಂದ ಮತ್ತೆ ರಾಜೀನಾಮೆ ನೀಡಿದ್ದಾರೆ.  ಇದು ಆಗಿನ- ಈಗಿನ ಸಾಮ್ಯತೆ! ಆದರೆ ಸಾಮ್ಯತೆ ಇಲ್ಲದಿರುವುದು ಅವರ ರಾಜಕೀಯ ನಡೆಯಲ್ಲಿ!

ಈ ಬಾರಿಯ ಅವರ ವಿದಾಯ ಭಾಷಣ ಭಾವ ಪೂರ್ವಕವಾಗಿದ್ದರೂ, ಅದರ ತೆರೆಮರೆಯಲ್ಲಿ ರಾಜ ಕೀಯ ಜಾಣ್ಮೆ ಇರುವುದನ್ನು ಗಮನಿಸಬಹುದು. ಅಂದರೆ, ಈ ಬಾರಿ ಯಡಿಯೂರಪ್ಪ ನಡೆಯೇ ಬೇರೆ!  ಮೇಲಾಗಿ ದೆಹಲಿ ರಾಜಕಾರಣ, “ರಾಜ್ಯಪಾಲರಾಗುವ ಮೂಲಕ ನಿವೃತ್ತಿ’ ಜೀವನ ವನ್ನೂ ಒಲ್ಲೆ ಎಂದಿದ್ದಾರೆ.

ಮುಂದೇನು?: ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇ ಗೌಡರಂತೆ ಪಕ್ಷದ ಬೆನ್ನ ಹಿಂದೆ ನಿಂತು ಸಲಹೆ ಸಹಕಾರ  ನೀಡುತ್ತಾ ರಾಜ್ಯ ಬಿಜೆಪಿಯನ್ನು ನಿಯಂತ್ರಿಸುವುದೆ?  ತಮ್ಮ ಪುತ್ರರಾದ ವಿಜ ಯೇಂದ್ರ ಮತ್ತು ರಾಘವೇಂದ್ರ ಅವರ  ಭವಿತವ್ಯ,  ತಮ್ಮ ಆಪ್ತ ಶಾಸಕರ ಬೆಂಗಾವಲಿಗೆ ನಿಲ್ಲು ವುದೇ?  ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇ ಕಾದರೆ, ಮುಂದಿನ ಸಂಸತ್‌ ಚುನಾವಣೆಯಲ್ಲಿ  ಪ್ರಧಾನಿ ಮೋದಿ ನಾಯಕತ್ವಕ್ಕೆ ಹೆಚ್ಚಿನ ಸಂಸದರನ್ನು ರಾಜ್ಯದಿಂದ ಮತ್ತೆ ಒದಗಿಸಬೇಕಾದರೆ ತಮ್ಮ  ರಾಜಕೀಯ ಇರುವಿಕೆ ಅಗತ್ಯ ಎಂಬುದನ್ನು ಮತ್ತೆ ಮನದಟ್ಟು ಮಾಡುವುದೇ? ಹೀಗೆ… ಒಂದೊಂದು ಆಯ್ಕೆಗಳು ಅವರ ಮುಂದಿರುವ ಸಾಧ್ಯತೆಗಳಿವೆ. ಆ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಂತೆ ಪವರ್‌ಫ‌ುಲ್‌ ರಾಜಕಾರಣಿ ಆಗುವುದು ಅವರ ಉದ್ದೇಶ ವಿರಬಹುದು!

ಬಿಜೆಪಿಯಲ್ಲಿ ಹೊಸ ರಾಜಕೀಯ ರಕ್ತಕ್ಕೆ ಅವಕಾಶ ಸೃಷ್ಟಿಸುವ ಉದ್ದೇಶವಿರಬ ಹುದು. ಆದರೆ, ಯಡಿ ಯೂರಪ್ಪ ಹೊರತಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟು ಸುಲಭವಲ್ಲ

ಎಂದೂ ಆ ಪಕ್ಷದ ವರಿಷ್ಠರಿಗೆ ಗೊತ್ತಿಲ್ಲದ ವಿಷಯ ವಲ್ಲ. ಹಾಗಾಗಿ ಯಡಿಯೂರಪ್ಪ ಅವರ ಬೆಂಬಲ ಇಟ್ಟುಕೊಂಡೇ ಪಕ್ಷ, ಸರ್ಕಾರ ನಡೆಸಬೇಕಾದ ಅನಿವಾರ್ಯತೆ ಇರಬಹುದು. ಯಡಿಯೂರಪ್ಪ ಎದುರಿಸುತ್ತಿರುವ ಕೆಲವು  ಕಾನೂನು ತೊಡಕುಗಳು ಅವರನ್ನು ಕಟ್ಟಿಹಾಕಬಹುದೆನ್ನುವ ಲೆಕ್ಕಾಚಾರವೂ ಇದೆ. ಸಕ್ರಿಯ ರಾಜಕಾರಣದಲ್ಲಿರುವುದನ್ನು  ಘಂಟಾ ಘೋಷವಾಗಿ ಹೇಳಿರುವ ಯಡಿಯೂರಪ್ಪ ಅವುಗಳೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲಗಳೂ ಇವೆ.

ಲಿಂಗಾಯತ ನಾಯಕ: ಮಾಸ್‌ಲೀಡರ್‌ ಆಗಿರುವ ಬಿಎಸ್‌ವೈ , ಲಿಂಗಾಯತ ಮುಖಂಡ ಎಂದು ಗಟ್ಟಿ ಯಾಗಿ ಗುರುತಿಸಿಕೊಂಡಿದ್ದು, ಕುಮಾರಸ್ವಾಮಿ ನೇತೃ ತ್ವದ 20-20 ಸರ್ಕಾರದಲ್ಲಿ ಡಿಸಿಎಂ ಆದ ಬಳಿಕ.

ಈಗ ಯಡಿಯೂರಪ್ಪ ರಾಜೀನಾಮೆ ಬಳಿಕ ಲಿಂಗಾಯತರು ಯಾರನ್ನು ತಮ್ಮ ಮುಖಂಡನನ್ನಾಗಿ ನೋಡುತ್ತಾರೆ ಎನ್ನುವುದು ಬಿಜೆಪಿಯ ಚಿಂತೆ. ಯಡಿಯೂರಪ್ಪ ಅವರೇ ಆ ಸ್ಥಾನದಲ್ಲಿ ಇರುತ್ತಾರೆಯೇ ಅಥವಾ ಅವರ ಪ್ರಯತ್ನದಂತೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಲಿಂಗಾಯತ ಮುಖಂಡನಾಗುವಂತೆ ಬೆಳೆಸುತ್ತಾರೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ಎಂ. ಬಿ. ಪಾಟೀಲ್‌: ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಬೇಕೆಂಬ ಹಠದಲ್ಲಿರುವ ಕಾಂಗ್ರೆಸ್‌, ತನ್ನದೇ ರೀತಿಯಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ. ತನ್ನ ಲಿಂಗಾಯತ ಮುಖಂಡರಾದ ಎಂ.ಬಿ. ಪಾಟೀಲ ಮತ್ತು ಶಾಮನೂರು ಶಿವಶಂಕರಪ್ಪ ಅವರನ್ನು “ರಾಜೀನಾಮೆ ವದಂತಿ’ ಸಂದರ್ಭದಲ್ಲೇ ಯಡಿ ಯೂರಪ್ಪ ಅವರ ಭೇಟಿ ಮಾಡಿಸಿ ಲಿಂಗಾಯತ ಮತ ಬ್ಯಾಂಕಿಗೆ ಕೈಹಾಕಲು ಹೊರಟಿರುವುದು ಬಿಜೆಪಿ ನಾಯಕರಿಗೆ ತಿಳಿಯದ ವಿಷಯ ವಲ್ಲ. ಅಲ್ಲದೆ, ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರು ಕಾಂಗ್ರೆಸ್‌ ಸೇರುವ ಸಾಧ್ಯತೆಯಿದೆ ಎಂಬ ಹೇಳಿಕೆಯನ್ನು ಪಾಟೀಲ್‌ ನೀಡಿರುವ ಹಿನ್ನೆಲೆ ಏನೆಂಬುದು ಎಲ್ಲರಿಗೂ ತಿಳಿದ ವಿಷಯ.

ಹಾಗಾಗಿ… ಈ ಎಲ್ಲಾ ಬೆಳವಣಿಗೆಗಳು  ರಾಜ್ಯ ರಾಜಕೀಯದ ಇನ್ನೊಂದು ದಿಕ್ಕಿನ ಸೂಚನೆ.

 

ನವೀನ್‌ ಅಮ್ಮೆಂಬಳ

 

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.