ಬ್ಲ್ಯಾಕ್ ಫಂಗಸ್ ಗೆ ಕಾರಣಗಳು ಹಲವು
Team Udayavani, May 28, 2021, 6:40 AM IST
ಕೋವಿಡ್ ಸೋಂಕು ಹೆಚ್ಚುತ್ತಿದ್ದಂತೆ ಬ್ಲ್ಯಾಕ್ ಫಂಗಸ್ ಕೂಡ ಹೆಚ್ಚುತ್ತಿದೆ. ಇದು ಕೊರೊನಾಕ್ಕಿಂತ ಹೆಚ್ಚು ಅಪಾಯಕಾರಿ, ಮರಣಾಂತಿಕ. ಇದು ಬಂತೆಂದರೆ ಕಣ್ಣು, ಮೂಗು, ಮೂಗಿನ ಹತ್ತಿರದ ಮಾಂಸ, ಮೂಳೆಯನ್ನು ತೆಗೆಯಬೇಕಾದ ಅಪಾಯವಿದೆ.
ಮಧುಮೇಹ ಅಧಿಕ ಇದ್ದವರಿಗೆ ಬ್ಲ್ಯಾಕ್ ಫಂಗಸ್ (ಮ್ಯೂಕರ್‌ಮೈಕೋಸಿಸ್) ಬರುತ್ತದೆ. ಸ್ಟಿರಾಯ್ಡ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೊನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತದೆ. ಮಧುಮೇಹ ನಿಯಂತ್ರಣದಲ್ಲಿದ್ದ ವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕ ವಾಗುತ್ತದೆ. ಕೊರೊನಾ ನಿಯಂತ್ರಿಸಲು ಸ್ಟಿರಾಯ್ಡ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್ ಮೈಕೋ ಸಿಸ್ ಫಂಗಸ್ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫಂಗಸ್ ಆಶ್ರಯಿಸುತ್ತದೆ.
ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್ ಅಗತ್ಯವಾಗುತ್ತದೆ. ಆಕ್ಸಿಜನ್ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್ ಕೂಡ ಬಳಕೆಯಾಗುತ್ತಿದೆ. ಕೈಗಾರಿಕಾ ಆಕ್ಸಿಜನ್ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪ ಮಿಶ್ರಣ ಇರುತ್ತದೆ. ಆಕ್ಸಿಜನ್ ಕಾನ್ಸಂಟ್ರೇಟರ್ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲ ಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿ ಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು.
ಇತ್ತೀಚೆಗಿನ ಅಧ್ಯಯನವೊಂದರ ವರದಿಯ ಪ್ರಕಾರ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳಲು ಕೊರೊನಾ ಸೋಂಕಿನ ಪರೀಕ್ಷೆಯ ವೇಳೆ ಗಂಟಲ ದ್ರವ ಸಂಗ್ರಹಿ ಸಲು ಬಳಸಲಾಗುವ ನೈರ್ಮಲ್ಯ ಯುತ ವಾಗಿರದ ನಾಳಗಳೂ ಕಾರಣವಾಗುತ್ತಿ ರುವುದು ಸಾಬೀತಾಗಿದೆ. ಅಷ್ಟು ಮಾತ್ರ ವಲ್ಲದೆ ಬ್ಲ್ಯಾಕ್ ಫಂಗಸ್‌ನಿಂದ ಬಾಧಿತ ರಾಗಿರುವ ಶೇ.60ರಷ್ಟು ರೋಗಿಗಳಿಗೆ ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟಿರಾಯ್ಡ ಅಥವಾ ಆಮ್ಲಜನಕವನ್ನು ನೀಡ ಲಾಗಿರಲಿಲ್ಲ ಎಂಬುದೂ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ. ಇವೆಲ್ಲವೂ ಗಂಟಲದ್ರವ ಸಂಗ್ರಹಕ್ಕೆ ಬಳಸಲಾಗುವ ನಾಳಗಳು ಕೂಡ ಬ್ಲ್ಯಾಕ್‌ಫಂಗಸ್ ಹರ ಡಲು ಕಾರಣವಾಗುತ್ತಿದೆ ಎಂಬ ಬಲವಾದ ಸಂಶಯ ಮೂಡುವಂತೆ ಮಾಡಿದೆ.
ಅಸುರಕ್ಷಿತ ಮತ್ತು ಅನೈರ್ಮಲ್ಯ ದಿಂದ ಕೂಡಿದ ಪ್ರದೇಶಗಳಲ್ಲಿ ಈ ನಾಳಗಳನ್ನು ತಯಾರಿಸಿದರೆ ಅಪಾಯ ಕಟ್ಟಿಟ್ಟಬುತ್ತಿಯೇ ಸರಿ. ದೇಶಾದ್ಯಂತ ಕೋವಿಡ್ ಪಸರಿಸು ತ್ತಿರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಕೊರೊನಾ ಪರೀಕ್ಷೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ನಾಳಗಳ ತಯಾರಿಕೆ ವೇಳೆ ನೈರ್ಮಲ್ಯದತ್ತ ಗಮನ ಹರಿಸಬೇಕಿದೆಯಲ್ಲದೆ ಗಂಟಲ ದ್ರವ ಸಂಗ್ರಹದ ವೇಳೆ ನಾಳದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದು ಬಲುಮುಖ್ಯ. ಗಂಟಲ ದ್ರವ ಸಂಗ್ರಹಿಸುವವರಿಗೂ ಸೂಕ್ತ ತರಬೇತಿಯನ್ನು ನೀಡುವುದು ಅತ್ಯಗತ್ಯವಾಗಿದೆ. ನಾಳವನ್ನು ಮೂಗಿಗೆ ಎರಡು ಸೆಂಟಿಮೀಟರ್ ಹಾಕಿದರೆ ಸಾಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾಲ್ಕು ಸೆಂಟಿಮೀಟರ್ ಆಳದವರೆಗೆ ಹಾಕಿ ತಿರುಗಿಸಿ ದ್ರವ ಸಂಗ್ರಹಿಸಲಾಗುತ್ತಿದೆ. ಇವೆಲ್ಲವೂ ತೀರಾ ಅಪಾಯಕಾರಿ. ಇವೆಲ್ಲದರ ಬಗೆಗೆ ನಿಗಾ ವಹಿಸುವ ಜತೆಯಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಇತ್ತ ಸರಕಾರ ಮತ್ತು ವೈದ್ಯಕೀಯ ತಜ್ಞರು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.