BNS ಭಾರತ ಸಂಹಿತೆಯಲ್ಲಿ ದಂಡನೆಗಲ್ಲ, ನ್ಯಾಯಕ್ಕೆ ಒತ್ತು

ಬದಲಾದ ಭಾರತಕ್ಕೆ ತಕ್ಕಂತೆ ಅಪರಾಧ ಕಾನೂನು ಪರಿಷ್ಕರಣೆ... ಎಲೆಕ್ಟ್ರಾನಿಕ್‌ ಸಾಕ್ಷ್ಯ ಸೇರಿ ಮಹತ್ವದ ಸೇರ್ಪಡೆ

Team Udayavani, Jul 16, 2024, 6:26 AM IST

1-BNS

ಬ್ರಿಟಿಷ್‌ ಕಾಲದ ಅಪರಾಧ ಕಾನೂನುಗಳನ್ನು ಪರಿಷ್ಕರಿಸಿ, ಆಧುನಿಕ ಕಾಲಕ್ಕೆ ಸೂಕ್ತವಾದ ಮತ್ತು ಭಾರತದ ನ್ಯಾಯ ಕಲ್ಪನೆಯಡಿ ರೂಪಿಸಲಾದ ಹೊಸ ಮೂರು ಅಪರಾಧ ಕಾನೂನುಗಳು ಜುಲೈ 1ರಿಂದಲೇ ದೇಶದಲ್ಲಿ ಜಾರಿಯಾಗಿವೆ. ನಮ್ಮ ದೇಶದ ಅಪರಾಧ (ಕ್ರಿಮಿನಲ್‌) ಕಾನೂನುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಪರಿಷ್ಕರಿಸಿ ಮೂರು ಮಸೂದೆಗಳನ್ನು ಕೇಂದ್ರ ಗೃಹ ಇಲಾಖೆಯು 2023ರ ಆಗಸ್ಟ್‌ ತಿಂಗಳಲ್ಲಿ ಲೋಕ ಸಭೆಯಲ್ಲಿ ಮಂಡಿಸಿತ್ತು.  ಸಂಸತ್ತಿನ ಒಪ್ಪಿಗೆ ಬಳಿಕ, ಕಾನೂನುಗಳಾಗಿ ಜಾರಿಯಾಗಿವೆ.

1.ಭಾರತೀಯ ದಂಡ ಸಂಹಿತೆ-1973(ಐಪಿಸಿ-1973) ಬದಲಿಗೆ “ಭಾರತೀಯ ನ್ಯಾಯ ಸಂಹಿತೆ-2023′

(ಬಿಎನ್‌ಎಸ್‌).

  1. ದಂಡ ಪ್ರಕ್ರಿಯಾ ಸಂಹಿತೆ (Code of Criminal Procedure) ಬದಲಿಗೆ “ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023′(ಬಿಎನ್‌ಎಸ್‌ಎಸ್‌-2023).
  2. 1872ರ ಭಾರತೀಯ ಸಾಕ್ಷ್ಯ ಅಧಿನಿಯಮ (Indian Evidence Act) ಬದಲಿಗೆ “ಭಾರತೀಯ ಸಾಕ್ಷ್ಯ ಅಧಿನಿಯಮ -2023′ ಜಾರಿಗೆ ಬಂದಿವೆ.

ಇದುವರೆಗಿನ ಭಾರತದ ಕ್ರಿಮಿನಲ್‌ ಕಾನೂನು ವ್ಯವಸ್ಥೆಯು ಐಪಿಸಿ (ಇಂಡಿಯನ್‌ ಪೀನಲ್‌ ಕೋಡ್‌) ಎಂಬ 163 ವರ್ಷಗಳ ವಸಾಹತುಶಾಹಿಯುಗದ ತಳಪಾಯವನ್ನು ಆಧರಿಸಿತ್ತು.

ಹೊಸ ಕಾನೂನುಗಳ ಜಾರಿಯ ಉದ್ದೇಶವೇನು?

ಎ) ಎಲೆಕ್ಟ್ರಾನಿಕ್‌ ಸಂಪರ್ಕ ಸಾಧನಗಳು: ವಶಪಡಿಸಿಕೊಂಡಿ ರುವ ಲ್ಯಾಪ್‌ಟಾಪ್‌ಗ್ಳು, ಫೋನ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್‌ ಸಂಪರ್ಕ ಸಾಧನಗಳನ್ನು ತನಿಖಾ ಸಂಸ್ಥೆಗಳು (ತನಿಖಾ ಪ್ರಕ್ರಿಯೆಗಳಿಗಾಗಿ) ಬಳಸಿಕೊಳ್ಳಬಹುದು. ಈವರೆಗೆ ಅಸ್ತಿತ್ವದಲ್ಲಿದ್ದ ಕಾನೂನುಗಳು “ಎಲೆಕ್ಟ್ರಾನಿಕ್‌’ ಮತ್ತು “ಡಿಜಿಟಲ್‌’ ಪದಗಳನ್ನು ಒಳಗೊಂಡಿಲ್ಲವಾದುದರಿಂದ ನಿಖರ­ವಾಗಿ ಯಾವ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ಎಲೆಕ್ಟ್ರಾನಿಕ್‌ ಪುರಾ ವೆಗಳನ್ನು ವಶಪಡಿಸಿಕೊಳ್ಳುವಾಗ ಅನುಸರಿಸ­ಬೇ­ಕಾದ ಕಾರ್ಯ ವಿಧಾನಗಳೇನು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ.

ಬಿ) ನ್ಯಾಯಾಲಯಗಳಲ್ಲಿನ ಎಲೆಕ್ಟ್ರಾನಿಕ್‌ ಸಾಕ್ಷ್ಯ :  ಭಾರತ ಸಾಕ್ಷ್ಯ ಕಾಯಿದೆಯು ಇಮೇಲ್‌ಗ‌ಳು, ಸರ್ವರ್‌ ಲಾಗ್‌ಗಳು, ಎಲೆಕ್ಟ್ರಿಕ್‌ ಸಂದೇಶಗಳು ಇತ್ಯಾದಿ ಮುದ್ರಿತ (ಕಾಗದದ) ದಾಖಲೆ ಗಳಂತೆಯೇ ಅದೇ ಕಾನೂನು ಪರಿಣಾಮದೊಂದಿಗೆ ನ್ಯಾಯಾಲಯಗಳಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಅನುಮತಿಸಲಾಗುತ್ತದೆ. ಈ ಹಿಂದೆ ಜಾರಿಯಲ್ಲಿದ್ದ ಕಾನೂನುಗಳ ಅಡಿಯಲ್ಲಿ ಈ ಕುರಿತು ಸ್ಪಷ್ಟವಾಗಿ ತಿಳಿಸಿಲ್ಲವಾದ್ದರಿಂದ ನ್ಯಾಯಾಲಯಗಳಲ್ಲಿ ಅಂಥ ಪುರಾವೆಗಳ ಸಂಗ್ರಹಣೆ ಮತ್ತು ಪ್ರಸ್ತುತಿ ಪ್ರಕ್ರಿಯೆಗಳಲ್ಲಿ ನಿರಂಕುಶತೆಯುಂಟಾಗುತ್ತಿತ್ತು.

ಸಿ) ಡಿಜಿಟಿಲೀಕರಣ:  ಜಾರಿಯಾಗಿರುವ ಹೊಸ ಕಾನೂನು ಗಳಿಗೆ ಎಫ್ಐಆರ್‌ (e-FIR) ನೋಂದಣಿಯಿಂದ ಚಾರ್ಜ್‌­ ಶೀಟ್‌ ಸಲ್ಲಿಸುವವರೆಗಿನ ಹಾಗೂ ತೀರ್ಪು ನೀಡುವವರೆಗಿನ ಸಂಪೂರ್ಣ ಪ್ರಕ್ರಿಯೆಗಳ ಡಿಜಿಟಲೀಕರಣದ ಅಗತ್ಯವಿರುತ್ತದೆ. ಈ ಕಾನೂನು-ಸಾಕ್ಷಿಗಳು, ಆರೋಪಿಗಳು, ತಜ್ಞರು, ಸಂತ್ರಸ್ತರು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ನ್ಯಾಯಾಲಯದಲ್ಲಿ ಕಾಣಿಸಿಕೊಂಡು ಪ್ರತಿಕ್ರಿಯಿಸಲು ಅವಕಾಶವಿದೆ. ಈ ಕಾರ್ಯ ಗಳನ್ನು ಸಕ್ರಿಯಗೊಳಿಸಲು 2027ರ ವೇಳೆಗೆ ಎಲ್ಲಾ ನ್ಯಾಯಾಲ ಯಗಳನ್ನು ಗಣಕೀಕರಣ (ಕಂಪ್ಯೂಟರೀಕರಣ)ಗೊಳಿಸಲು ಬೇಕಾಗುತ್ತದೆ.

ಡಿ) ಅಸ್ತಿತ್ವದಲ್ಲಿರುವ ಪ್ರಕರಣಗಳ ಹೊಂದಾಣಿಕೆ: ಹೊಸ ಕಾಯ್ದೆಗಳು ದೇಶದಾದ್ಯಂತ ಈಗಾಗಲೇ ಬಾಕಿಯಿರುವ ಪ್ರಕರ ಣಗಳ ಅಡಿಯಲ್ಲಿ ನಿಬಂಧನೆಗಳನ್ನು ತಿಳಿದುಕೊಳ್ಳಲು ಪೊಲೀ ಸರಿಗೆ ಮತ್ತು ನ್ಯಾಯಾಂಗ ವ್ಯವಸ್ಥೆಗಳಿಗೆ ಮರು ತರಬೇತಿ ನೀಡುವ ಅಗತ್ಯವಿದೆ.

ಕ್ರಿಮಿನಲ್‌ ಕಾನೂನುಗಳ ಮೂಲಕ ನ್ಯಾಯ ಒದಗಿಸುವ ಪ್ರಕ್ರಿಯೆಗಳ ಸುಧಾರಣೆಯ ಉದ್ದೇಶದಿಂದ ಹೊಸ ಕಾನೂನು ಮತ್ತಷ್ಟು ಹೊಸ ನಿಬಂಧನೆಗಳನ್ನು ಹೊಂದಿದೆ. ಉದಾ: ಎಫ್ಐಆರ್‌ನ ಎಲೆಕ್ಟ್ರಾನಿಕ್‌ ಸಲ್ಲಿಕೆ (e&filing of FIR)ಸಂತ್ರಸ್ತರಿಗೆ ಸಹಾಯವಾಗುವಂತೆ ತ್ವರಿತವಾಗಿ ಅಪರಾಧವನ್ನು ವರದಿ ಮಾಡುವ ಉದ್ದೇಶದಿಂದ ಶಾಸಕಾಂಗವು ಇ-ಫೈಲಿಂಗ್‌ ಎಫ್ಐಆರ್‌ ವ್ಯವಸ್ಥೆಯನ್ನು ಮಾಡಿದೆ. ಉದಾಹರಣೆಗೆ ಒಬ್ಬ ಮಹಿಳೆ ದೈಹಿಕ ಹಲ್ಲೆಗೊಳಗಾದ ಸಂದರ್ಭದಲ್ಲಿ ಸಂತ್ರಸ್ತೆಯು ತನ್ನ ದೈಹಿಕ ಗಾಯಗಳಿಂದ (ಅಥವಾ ದುರ್ಬಲತೆಯಿಂದಾಗಿ) ಹತ್ತಿರದ ಪೋಲಿಸ್‌ ಠಾಣೆಗೆ ಭೇಟಿ ನೀಡಲು ಅಶಕ್ತಳಾಗಿದ್ದರೆ, ಆಕೆ ತನ್ನ ಸ್ಮಾರ್ಟ್‌ಫೋನ್‌ ಮೂಲಕ ಪೋಲಿಸರಿಗೆ ಇ-ಮೇಲ್‌ ಕಳಿಸಬ­ಹುದು. ಇಂಥ ಸಂದರ್ಭಗಳಲ್ಲಿ ಸಂಬಂಧಪಟ್ಟ ಪೋಲಿಸರು 3 ದಿನಗಳವರೆಗೆ ಕಾಯಬೇಕಾಗಿಲ್ಲ. ತಕ್ಷಣ ಅಪರಾಧದ ಸ್ಥಳಕ್ಕೆ ಭೇಟಿ ನೀಡಬಹುದು ಮತ್ತು ಅಗತ್ಯವಿದ್ದರೆ ಸಂತ್ರಸ್ತರನ್ನು ಆಸ್ಪತ್ರೆಗೆ ಸ್ಥಳಾಂತರಿಸಬಹುದು.

ಭಾರತದ ನ್ಯಾಯ ಸಂಹಿತೆ!

ಇದು ಮುಖ್ಯವಾಗಿ ಕ್ರಿಮಿನಲ್‌ ಅಪರಾಧಗಳ ಕಾನೂನು. ಲಘು ಅಪರಾಧಗಳಿಗೆ ಸಮುದಾಯ ಸೇವೆಯನ್ನು ಒಂದು ದಂಡವಾಗಿ ಶಿಕ್ಷೆ ವಿಧಿಸಬಹುದಾದ ವಿಧಾನವನ್ನು ಪ್ರಪ್ರಥಮ ಬಾರಿಗೆ ಅಳವಡಿಸಲಾಗಿದೆ. ಭಾರತ ನ್ಯಾಯ ಸಂಹಿತೆಯು ಭಾರತ ಗಣರಾಜ್ಯದ ಅಧಿಕೃತವಾದ ಕ್ರಿಮಿನಲ್‌ ಸಂಹಿತೆಯಾಗಿದೆ.

ಭಾರತ (ಇಂಡಿಯಾ) ಎಂದರೆ ಸಾಮಾನ್ಯವಾಗಿ ಒಂದು ಉಪಖಂಡ ಎಂದೇ ಕರೆಯಲಾಗುವ ದೊಡ್ಡ ಪರ್ಯಾಯ ದ್ವೀಪ ಪ್ರದೇಶ. ಇದು ದಕ್ಷಿಣ ಏಷ್ಯಾದಲ್ಲಿ ಹಿಮಾಲಯದ ದಕ್ಷಿಣಕ್ಕೆ ಬಂಗಾಲ ಕೊಲ್ಲಿ ಮತ್ತು ಅರಬಿ ಸಮುದ್ರದ ನಡುವೆ ಇದ್ದು, ಪಾಕಿಸ್ಥಾನ, ಬಾಂಗ್ಲಾದೇಶಗಳು ಆಕ್ರಮಿಸಿಕೊಂಡ ಪ್ರದೇಶ­ಗಳು ಮತ್ತು ಹಿಂದಿನ ಬರ್ಮಾ(ಮ್ಯಾನ್ಮಾರ್‌) ದೇಶವನ್ನು ಒಳಗೊಂಡಿದೆ.

“ಭರತ’ ಎಂಬುದು (ಭಾರತ ದೇಶದ ವಿವಿಧ ಹೆಸರುಗಳ­ಲ್ಲೊಂದು) ಭಾರತೀಯ ಮೂಲದ ಒಬ್ಬ ರಾಜನ ಹೆಸರು. ಇದು ಸಂಸ್ಕೃತದ “ತಡೆದುಕೊಳ್ಳುವ ಅಥವಾ ಹೊತ್ತುಕೊಳ್ಳುವ’ (ಬೆಂಕಿಗೆ ಸಂಬಂಧಿಸಿದಂತೆ) ಎಂಬ ಅರ್ಥವನ್ನು ಹೊಂದಿದೆ. “ಭಾರತ’ ಎಂಬುದು ಸಂಸ್ಕೃತ ಭಾಷೆಯ ಭಾಷೆಯ ಪ್ರಾಚೀನ ಗ್ರಂಥಗಳಲ್ಲಿ ಕಾಣಬಹುದಾಗಿದೆ. ಇದರ ಆಧ್ಯಾತ್ಮಿಕ ಅರ್ಥವು ಭಾರತೀಯ ಸಂಸ್ಕೃತಿಯ ಜಾಗತಿಕ ಚೇತನವಾಗಿದೆ. “ಭಾರತ’ ಎಂಬುದರ ಅರ್ಥವು “ಪ್ರಕಾಶಕ್ಕಾಗಿ ಶ್ರಮಿಸುವವರು’ ಎಂಬು ದಾಗಿದೆ. ಅಂದರೆ ಯಾವುದೇ ಜನಾಂಗ, ರಾಷ್ಟ್ರೀಯತೆ, ಧರ್ಮ, ಲಿಂಗ, ಜಾತಿ ಇತ್ಯಾದಿಗಳ ಭೇದವಿಲ್ಲದೇ ಅತ್ಯಂತ ಶ್ರೇಷ್ಠ ಮಟ್ಟದ ಮಾನವೀಯ ಪರಿಪೂರ್ಣತೆಯಾಗಿದೆ.

ನೂತನ ಹೆಸರಿನ ಅನಿವಾರ್ಯತೆ

ಈ ಮೊದಲು ಐಪಿಸಿ (ಭಾರತೀಯ ದಂಡ ಸಂಹಿತೆ) ಎಂಬುದು ಭಾರತದ ಅಧಿಕೃತ ಅಪರಾಧ ಕಾನೂನು ಆಗಿತ್ತು. ಇದು ಸ್ವಾತಂತ್ರ್ಯದ ಅನಂತರ “ಬ್ರಿಟಿಷ್‌ ಇಂಡಿಯಾ’ದಿಂದ ಪರಂಪರಾ­ಗತ­ವಾಗಿ ಪಡೆದುದಾಗಿದೆ. ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಕ್ರೋಡೀಕರಿಸಲು ಮತ್ತು ತಿದ್ದುಪಡಿ ಮಾಡಲು ಐಪಿಸಿಯನ್ನು ರದ್ದುಗೊಳಿಸಲು ಬಿಎನ್‌ಎಸ್‌ (ಭಾರತೀಯ ನ್ಯಾಯ ಸಂಹಿತೆ) ಯನ್ನು ಜಾರಿಗೆ ತರಲಾಗಿದೆ. ಅಧಿಕ ಅಪರಾಧೀಕರಣ ಹಾಗೂ ನಿರಪರಾಧೀಕರಣಗಳ ನಡುವೆ ಒಂದು ಸಮತೋಲನದಂತೆ ಭಾರತೀಯ ನ್ಯಾಯ ಸಂಹಿತೆ ಪರಿಣಮಿಸುತ್ತದೆ. ಐಪಿಸಿಯ ವಸಾಹತುಶಾಹಿತ್ವವನ್ನು ತೆಗೆದು ಹಾಕಲು ಈ ಬದಲಾವಣೆ ಅಗತ್ಯವಾಗಿತ್ತು. ಅಂದರೆ ಪರ್ಯಾ ಯವಾಗಿ ಇದೊಂದು ಭಾರತೀಯ ಅಪರಾಧ ವ್ಯವಸ್ಥೆಯಲ್ಲಿ ಒಂದು ಮಹತ್ತರವಾದ ಬದಲಾವಣೆಯಾಗಿ ಬಿಎನ್‌ಎಸ್‌ (ಭಾರತೀಯ ನ್ಯಾಯ ಸಂಹಿತೆ)ಯಲ್ಲಿ

“ನ್ಯಾಯ’ ಎಂಬ ಕಲ್ಪನೆಯನ್ನು ಹೊಂದಿದೆ. ಆದರೆ, ಭಾರತಕ್ಕೆ ಒಂದು ಸಾಮಾನ್ಯ ದಂಡ ಸಂಹಿತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ ಎಂಬುದನ್ನು ಐಪಿಸಿ ತನ್ನ ಪೀಠಿಕೆಯಲ್ಲಿ ತಿಳಿಸಿದೆ. ಐಪಿಸಿ ಎಂಬ ಶೀರ್ಷಿಕೆಯು “ಶಿಕ್ಷೆ ‘ ಎಂಬುದನ್ನು ಸೂಚಿಸುತ್ತದೆ. ಪೀನಲ್‌ (ಕಛಿnಚl) ಎಂಬ ಶಬ್ದವು ಅಪರಾಧ ಮಾಡಿದವರನ್ನು ಶಿಕ್ಷಿಸುವುದು ಎಂಬುದನ್ನು ಒತ್ತಿ ಹೇಳುತ್ತದೆ.

ಈ ಮೇಲೆ ತಿಳಿಸಿರುವ ವಿಷಯಗಳನ್ನು ತುಲನೆ ಮಾಡಿ ನೋಡಿದರೆ, ಹೊಸ ಕಾನೂನು ನಾಗರಿಕರಿಗೆ ಶಿಕ್ಷೆ(ದಂಡನೆ) ವಿಧಿಸುವುದೆಂಬ ಎಣಿಕೆಯ ಬದಲು “ನ್ಯಾಯ ಒದಗಿಸುವುದು’ ಎಂಬುದಾಗಿ ಸೂಚಿಸುತ್ತದೆ. ಹಾಗಾಗಿ ಭಾರತೀಯ ಸಂಸ್ಕೃತಿಯನ್ನು ಪರಿಗಣಿಸಿಕೊಂಡು ಹೊಸ ಕಾನೂನಿನ ಶೀರ್ಷಿಕೆಯನ್ನು ಸರಿಯಾಗಿ ಯೋಚಿಸಿ, ಸಮಂಜಸವಾಗಿಯೇ ಇಡಲಾಗಿದೆ.

ಗಮನಾರ್ಹ ಬದಲಾವಣೆ

ಭಾರತ ನ್ಯಾಯ ಸಂಹಿತೆಯಲ್ಲಿರುವ ಅತ್ಯಂತ ಗಮನಾರ್ಹ ಬದಲಾವಣೆ ಎಂದರೆ, ಐಪಿಸಿ ಸೆಕ್ಷನ್‌ 124ಎರಲ್ಲಿ ಹೇಳಲಾದ ದೇಶದ್ರೋಹದ ವಸಾಹಾತುಶಾಹಿ ಕಾನೂನನ್ನು ತೆಗೆದು ಹಾಕಿರುವುದು. ಆದರೆ ಸೆಕ್ಷನ್‌ 124ಎ ರಲ್ಲಿನ ಸಾರವನ್ನು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 152 ಉಳಿಸಿಕೊಂಡಿ­ರುವುದು ಗಮನಾರ್ಹವಾಗಿದೆ ಮತ್ತು ಅದು ಅಸ್ಪಷ್ಟ ರೀತಿಯಲ್ಲಿ ತನ್ನೊಳಗಿನ ಶಬ್ದ ರಚನೆಯನ್ನು ಹೊಂದಿದೆ. ಭಾರತೀಯ ಅಪರಾಧ ಶಾಸ್ತ್ರದಲ್ಲಿ “ದೇಶದ್ರೋಹ’ದ ಬಗ್ಗೆ ಸುಪ್ರೀಂ ಕೋರ್ಟ್‌ ನ 1962ರ ತೀರ್ಪಿನ ಆಧಾರದಿಂದ ಕಾನೂನು ಆಯೋಗವು ಕೆಲವು ನಿರ್ದಿಷ್ಟ ಮಾರ್ಪಾಡುಗಳೊಂದಿಗೆ 2023ರಲ್ಲಿ (ಈ ಬಗ್ಗೆ) ಮಾಡಿದ ವರದಿಯ ಬಳಿಕ ದೇಶದ್ರೋಹದ ಹಳೆಯ ಕಾನೂನನ್ನು ತೆಗೆದುಹಾಕಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 152ರಲ್ಲಿ “ವಿಧ್ವಂಸಕ ಚಟುವಟಿಕೆಗಳು’ ಮತ್ತು “ಸಮಗ್ರತೆಗೆ ಅಪಾಯವನ್ನುಂಟು ಮಾಡುವ’ ಎಂಬ ವಾಕ್ಯಾಂಶಗಳಿಗೆ ಸಮರ್ಪಕವಾದ ವ್ಯಾಖ್ಯಾನವಿಲ್ಲವಾದ್ದರಿಂದ ಈ ಸೆಕ್ಷನ್‌ ಅನ್ನು ಬಳಸುವಾಗ ಸಮಸ್ಯೆಯುಂಟಾಗಬಹುದು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ನ ತಪ್ಪು ಗ್ರಹಿಕೆ ಯಿಂದಾಗಿ ಒಬ್ಬ ವ್ಯಕ್ತಿಯ ಬಂಧನವಾದಲ್ಲಿ ಅಥವಾ ತನಿಖೆ ಯಾದಲ್ಲಿ ಅಂಥ ವಿಚಾರವನ್ನು ಪ್ರಕರಣದ ಮೂಲಕವೇ ನ್ಯಾಯಾಂಗವು ಸರಿಪಡಿಸುವ ಪ್ರಮೇಯ ಬರಬಹುದು. ಆದುದರಿಂದ ನ್ಯಾಯಾಂಗದ ನಿರ್ಧಾರದ ಬೆಂಬಲದೊಂದಿಗೆ ಹೊಸ ಕಾನೂನಿನ ಮಿತಿಗಳನ್ನು ಸಮರ್ಪಕವಾಗಿ ವ್ಯಾಖ್ಯಾನಿಸು­ವವರೆಗೆ ಸ್ವಾತಂತ್ರ್ಯ ಮೊಟಕುಗೊಳ್ಳುವ ಸಾಧ್ಯತೆಯಿದೆ.

ಇತರೆ ಸೇರ್ಪಡೆಗಳು ಮತ್ತು ಬದಲಾವಣೆಗಳು

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 3ರಲ್ಲಿ ಸಂಘಟಿತ ಅಪರಾಧಗಳ ವ್ಯಾಖ್ಯಾನವಿದೆ. ಈ ಅಪರಾಧಗಳಲ್ಲಿ ಒಂದು ಗುಂಪಿನಲ್ಲಾಗಲಿ ಅಥವಾ ಬೇರೊಬ್ಬರ ಪರವಾಗಿ ಆಗಲಿ ಕೈಗೊಂಡ ಅಪಹರಣ, ಭೂ ಕಬಳಿಕೆ ಇತ್ಯಾದಿ ಹಾಗೂ ಇಂಥ ಇತರ ಅಪರಾಧಗಳು ಸೇರಿವೆ.  ನಿರ್ದಿಷ್ಟ ಉದ್ದೇಶಗಳ ಸ್ಪಷ್ಟಪಡಿ­ಸು­ವಿಕೆ­­ಗಾಗಿ ವಿವಿಧ ವ್ಯಾಖ್ಯಾನಗಳನ್ನು ಬದಲಾಯಿಸಲಾಗಿದೆ. ಉದಾ: ಐಪಿಸಿ ಸೆಕ್ಷನ್‌ 103ರಲ್ಲಿ ಬರುವ “ರಾತ್ರಿ’ ಎಂಬುದನ್ನು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 43ರಲ್ಲಿ “ಸೂರ್ಯಾ ಸ್ತದ ಅನಂತರ ಮತ್ತು ಸೂರ್ಯೋದಯಕ್ಕೆ ಮುಂಚೆ’ ಎಂಬ ಪದಗಳಿಂದ ಬದಲಾಯಿಸಲಾಗಿದೆ. ಸೆಕ್ಷನ್‌ 41ರಲ್ಲಿ “ಬೆಂಕಿ’ ಎಂಬುದನ್ನು “ಬೆಂಕಿಯಿಂದಾಗಿ ಕಿಡಿಗೇಡಿತನ’ ಅಥವಾ “ಸ್ಫೋಟಕ ವಸ್ತು’ ಎಂಬ ವಿಸ್ತರಣೆಯೊಂದಿಗೆ ಸೇರಿಸಲಾಗಿದೆ.

ಪಿತೂರಿ ವಿಷಯಾಂತ್ಯಗೊಳಿಸುವಿಕೆ ಮತ್ತು ಅಂತಹ ಪ್ರಯತ್ನ­ಗಳು (ATTEMPT AND ABATEMENT) ಮುಂತಾದ ತೀಕ್ಷ್ಣವಾದ ಅಪರಾಧವೆಲ್ಲವನ್ನೂ ಒಂದೇ ಅಧ್ಯಾಯದಲ್ಲಿ ಸಂಯೋಜಿಸಲಾಗಿದೆ. ಹಿಂದಿನ ಐಪಿಸಿಯಲ್ಲಿ ಇವುಗಳನ್ನು ಬೇರೆ ಬೇರೆ ವಿಭಾಗಗಳಲ್ಲಿ ಉಲ್ಲೇಖೀಸಲಾಗಿತ್ತು.

ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್‌ 69 ಒಂದು ಉಚಿತವಾದ ಸೇರ್ಪಡೆಯಾಗಿದೆ. ಇದು ಐಪಿಸಿಯಲ್ಲಿ ಇರಲಿಲ್ಲ. ಅತ್ಯಾಚಾರ ಎಂದು ಪರಿಗಣಿಸಲಾಗದ, ವಂಚನೆಯಿಂದ ಲೈಂಗಿಕ ಸಂಭೋಗ ಮಾಡಿದರೆ ಶಿಕ್ಷೆ ನೀಡಲು ಅವಕಾಶ ಕಲ್ಪಿಸುತ್ತದೆ. ಇಲ್ಲಿ “ವಂಚನೆ’ ಎಂಬುದರಲ್ಲಿ ಸುಳ್ಳು ಭರವಸೆಗಳು ಮತ್ತು ಪ್ರೇರಣೆ ಗಳೂ ಸೇರಿವೆ.

ಸಾಮೂಹಿಕ ಅತ್ಯಾಚಾರದ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 376(1)ಎ ಯನ್ನು ವಿಸ್ತರಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 70(2)ರಲ್ಲಿ ಸಂಯೋ ಜಿಸಲಾಗಿದೆ. ಈ ವಿಸ್ತರಣೆಯಲ್ಲಿ “16 ವರ್ಷದ ಒಳಗಿನವರು’ ಎಂಬುದನ್ನು “18 ವರ್ಷದ ಒಳಗಿನವರು’ ಎಂದು ಬದಲಾಯಿಸಿ, ಹೆಚ್ಚು ಪ್ರಕರಣಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ.

ವಿವಿಧ ಅಪರಾಧಗಳಿಗೆ ನೀಡುವ ಶಿಕ್ಷೆಗಳನ್ನು ಗಮನಾರ್ಹ­ವಾಗಿ ಹೆಚ್ಚಿಸಲಾಗಿದೆ. ಅತ್ಯಂತ ಗಮನಾರ್ಹ ಹೆಚ್ಚಳವೆಂದರೆ ದುಡಿಕಿನ ಮತ್ತು ನಿರ್ಲಕ್ಷ್ಯದ ಚಾಲನೆ (Rash and Negligent Act)ಯಿಂದಾಗಿ ಮರಣ ಸಂಭವಿಸಿದಲ್ಲಿ ನೀಡಬಹುದಾದ ಶಿಕ್ಷೆ. ಐಪಿಸಿಯ ಸೆಕ್ಷನ್‌ 304(ಎ) ಯ ಪ್ರಕಾರ ಗರಿಷ್ಠ 2 ವರ್ಷಗಳ ಶಿಕ್ಷೆಯನ್ನು ಭಾರತೀಯ ನ್ಯಾಯ ಸಂಹಿತೆಯ        ಸೆಕ್ಷನ್‌106(1)ರ ಅಡಿಯಲ್ಲಿ ಗರಿಷ್ಠ 5 ವರ್ಷಗಳಿಗೆ ಹೆಚ್ಚಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 113 ಭಯೋತ್ಪಾದಕ ಚಟುವಟಿಕೆಗಳ ಕುರಿತಾಗಿದೆ. ಪ್ರಾಯಶಃ ಇದು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (Unlawful Activities (PREVENTION) Act 1967) ಯಿಂದ ಪ್ರೇರಿತ ವಾಗಿರಬಹುದು. ಆದರೆ ಯುಎಪಿಯನಲ್ಲಿ ಇಲ್ಲದಿರುವ ದಂಡಗಳ ಮಿತಿಗಳನ್ನು ವಿವಿಧ ಉಪವಿಭಾಗಗಳಲ್ಲಿ ನಿರ್ದಿ ಷ್ಟವಾಗಿ ಉಲ್ಲೇಖೀಸಲಾಗಿದೆ.

“ತಪ್ಪು ಮಾಹಿತಿ’ ಹರಡುವಿಕೆಯನ್ನು ತಡೆಯಲು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯನ್ನು ಇಡಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 353 ಅಪ್ರಾಮಾಣಿಕ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ಸೃಷ್ಟಿಸುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ಶಿಕ್ಷೆಯನ್ನು ಒದಗಿಸಿದೆ. ಅಂಥ ನಿಬಂಧನೆಗಳನ್ನು ಐಪಿಸಿಯಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿರಲಿಲ್ಲ. ಹಾಗಾಗಿ ಇದೇ ಉದ್ದೇಶಕ್ಕೆ ಮೀಸಲಾದ ಇತರ ಕಾನೂನುಗಳ ನಿರ್ವಹಣೆಗೆ ಈ ಹೊಸ ಕಾನೂನು ಪೂರಕವಾಗಿದೆ.

ಕಿಡಿಗೇಡಿತನ ಅಪರಾಧಗಳಿಗೆ ನಿರ್ದಿಷ್ಟ ಮಿತಿಯ ದಂಡ­ನೆಯ ಮೌಲ್ಯಗಳನ್ನು ಉಪ ಅಧಿನಿಯಮ 324ರ (4) ಮತ್ತು(5)ರಲ್ಲಿ ನೀಡಲಾಗಿದೆ. ಇದರನ್ವಯ ನಷ್ಟಗೊಳಿಸಲಾದ ಆಸ್ತಿಯ ಮೌಲ್ಯವು ಹೆಚ್ಚಾದಂತೆ ಜೈಲುಶಿಕ್ಷೆಯ ಅವಧಿಯೂ ಹೆಚ್ಚಾಗುತ್ತದೆ.

ಸರಕಾರ ಅಥವಾ ಪ್ರಾಧಿಕಾರಗಳಿಗೂ (ಸೇರಿದಂತೆ ) ಆಸ್ತಿ ಹಾನಿಗೆ ಒಂದು ಸಮಗ್ರ ದೃಷ್ಟಿಕೋನವಿರಿಸಿಕೊಂಡು 1 ರಿಂದ 5 ವರ್ಷಗಳವರೆಗೆ ಶಿಕ್ಷೆ ಮತ್ತು ಜುಲ್ಮಾನೆ ಸೇರಿಸಿ ದಂಡ ವಿಧಿಸಬಹುದಾಗಿದೆ.

ಅಪಹರಣದ ಅಪರಾಧಕ್ಕಾಗಿ ಸೆಕ್ಷನ್‌ 137ರಲ್ಲಿ ಕಲ್ಪಿಸಲಾದ ಅಧಿನಿಯಮದಲ್ಲಿ ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ವಯಸ್ಸಿನ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಗಿದೆ. “18 ವಯಸ್ಸಿನ ಯಾವುದೇ ವ್ಯಕ್ತಿ’ ಎಂಬ ವ್ಯಾಖ್ಯಾನದಡಿಯಲ್ಲಿ “ಯಾವುದೇ ಮಗು’ ಎಂಬ ಪದಗಳನ್ನು ಸೇರಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ ಮತ್ತು ಐಪಿಸಿಗಳ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ, ಸೆಕ್ಷನ್‌ಗಳ ಸಂಖ್ಯೆಯನ್ನು 511ರಿಂದ 358ಕ್ಕೆ ಕಡಿಮೆ ಮಾಡಲಾಗಿದೆ ಮತ್ತು ದ್ವೇಷ ಅಪ­ರಾಧ (Hate Crime ), ಗುಂಪು ಹತ್ಯೆ (Mob Lynching)ಗಳೂ ಸೇರಿ 21 ವಿಧದ ಹೊಸ ಅಪರಾಧಗಳ ಸೇರ್ಪಡೆಯಾಗಿದೆ.

ಪ್ರಸ್ತುತ ಸಾಮಾಜಿಕ ವಾತಾವರಣ ಮತ್ತು ಚೌಕಟ್ಟುಗಳಿಗೆ ಸರಿಹೊಂದುವಂತೆ ಭಾರತೀಯ ದಂಡ ಸಂಹಿತೆ(ಐಪಿಸಿ)ಯನ್ನು ಮರುಶೋಧಿಸಿ, “ಭಾರತೀಯ ನ್ಯಾಯ ಸಂಹಿತೆ’ಯನ್ನು ಜಾರಿಗೆ ತಂದಿರುವುದು ಸಕಾರಾತ್ಮಕವಾದು­ದಾಗಿದೆ. ಇದರಲ್ಲಿ ವಸಾಹಾತುಶಾಹಿ ಮೂಲವಿರುವ ಬಹು ಹಳೆಯ ಮತ್ತು ಪ್ರಸ್ತುತ ಕಾನೂನಿನ ಸನ್ನಿವೇಶದಲ್ಲಿ ವಿಶ್ವಾಸಾರ್ಹತೆಯನ್ನು ಹೊಂದಿಲ್ಲದ ಕಾನೂನುಗಳನ್ನು ತೆಗೆದು ಹಾಕಿ ವಿವಿಧ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಇದು ಲಿಂಗ ತಟಸ್ಥತೆ (Gender Neutrality)ಯಂತಹ ತತ್ವಗಳನ್ನು ಪ್ರತಿಪಾ ದಿಸಲಾಗಿದೆ. ಈ ಕಾನೂನುಗಳು ಜಾರಿಯಾಗಿರುವುದರಿಂದ ನ್ಯಾಯಾಲಯಗಳಲ್ಲಿ ಹೊಸ ಸವಾಲುಗಳು ಉದ್ಭವಿಸಿ, ಹೊಸ ಪ್ರಶ್ನೆಗಳು ಮತ್ತು ವ್ಯಾಖ್ಯಾನಗಳು ಹುಟ್ಟಿಕೊಳ್ಳಬಹುದು. ಇದರಿಂದಾಗಿ ಹಿಂದಿನ ಕಾನೂನಿನ ಪರಿಷ್ಕರಣೆ ಮತ್ತು ಹೊಸ ಕಾನೂನಿನ ಅಗತ್ಯತೆಗಳನ್ನು ನಾಗರಿಕರು ತಿಳಿಯಲು ಸಾಧ್ಯ ವಾಗಲಿದೆ ಹೊಸ ಕಾನೂನಿನ ಪರಿಣಾಮವನ್ನು ಗುರುತಿಸಲು ಸಾಧ್ಯವಾಗುತ್ತದೆ.

 ಬಿ.ಎಲ್ . ಆಚಾರ್ಯ,    ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳು

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Western Ghats ಕಸ್ತೂರಿ ರಂಗನ್‌ ವರದಿ ಯಥಾವತ್‌ ಜಾರಿ ಬೇಡ

Western Ghats ಕಸ್ತೂರಿ ರಂಗನ್‌ ವರದಿ ಯಥಾವತ್‌ ಜಾರಿ ಬೇಡ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.