ಪುಲ್ವಾಮಾ, ಬಾಲಾಕೋಟ್ ಟೈಟಲ್‌ಗಾಗಿ ಬಾಲಿವುಡ್‌ನಲ್ಲಿ ನೂಕುನುಗ್ಗಲು!
Team Udayavani, Mar 1, 2019, 12:30 AM IST
ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಜೈಶ್ ಉಗ್ರ ದಾಳಿಗೆ ನಮ್ಮ ಯೋಧರು ಬಲಿಯಾದ ಸುದ್ದಿ ತಿಳಿದು ಟೈಟಲ್ ರೆಜಿಸ್ಟ್ರೇಷನ್‌ಗಾಗಿ ಬಾಲಿವುಡ್‌ನಲ್ಲಿ ವಿಪರೀತ ಪೈಪೋಟಿ ಏರ್ಪಟ್ಟಿತ್ತು. ಬಹುತೇಕ ಬಾರಿ ಟೈಟಲ್ ನೋಂದಣಿ ಮಾಡಿಸುವವರು ಸಿನೆಮಾ ಮಾಡುವ ಬದಲು ಸ್ಟೂಡಿಯೋಗಳಿ ಟೈಟಲ್ ಮಾರಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಲೇಖಕ ಪ್ರಿತೀಶ್ ನಂದಿ “ವುಮನಿಯಾ’ ಎಂಬ ಟೈಟಲ್ ಬಿಟ್ಟುಕೊಡಲು ಅನುರಾಗ್ ಕಶ್ಯಪ್‌ಗೆ 2 ಕೋಟಿ ರೂಪಾಯಿ ಬೇಡಿಕೆ ಇಟ್ಟು ವಿವಾದಕ್ಕೊಳಗಾಗಿದ್ದರು.
“ಪುಲ್ವಾಮಾ…ದಿ ಡೆಡ್ಲಿ ಅಟ್ಯಾಕ್’ ಎಂದು ಉದ್ಗರಿಸಿದ ಮಧ್ಯವಯಸ್ಕ ಬಾಲಿವುಡ್ ಪ್ರೊಡ್ನೂಸರ್ ಒಬ್ಬರು, ತಮ್ಮ ಅಸಿಸ್ಟೆಂಟ್‌ನತ್ತ ತಿರುಗಿ ಕೇಳಿದರು-“ಹೇಗಿದೆ ಟೈಟಲ್?’ ಅವರ ಅಸಿಸ್ಟೆಂಟ್ “ಚೆನ್ನಾಗಿದೆ’ ಎನ್ನುವಂತೆ ತಲೆಯಾಡಿಸಿ ಆ ಟೈಟಲ್ ಅನ್ನು ಅರ್ಜಿಯಲ್ಲಿ ಬರೆದ. ಪ್ರೊಡ್ನೂಸರ್ ತಲೆಗೆ ಮತ್ತೂಂದು ಟೈಟಲ್ ಹೊಳೆಯಿತು. “ಇನ್ನೊಂದು ಬರಿ- ಪುಲ್ವಾಮಾ ಅಟ್ಯಾಕ್ ವರ್ಸಸ್ ಸರ್ಜಿಕಲ್ ಸ್ಟ್ರೈಕ್ 2!’ ಅಸಿಸ್ಟೆಂಟ್ ಈ ಟೈಟಲ್ಲನ್ನೂ ಅರ್ಜಿಯಲ್ಲಿ ಸೇರಿಸಿದ. ಆ ಪ್ರೊಡ್ನೂಸರ್ ನನ್ನತ್ತ ತಿರುಗಿ ಅಂದ “”ನೋಡಿ ನಾವು ಉದ್ದುದ್ದ ಟೈಟಲ್‌ಗಳನ್ನು ಯೋಚಿಸಬೇಕಾಗುತ್ತೆ, ಕಾಂಪ್ಲಿಕೇಟೆಡ್ ಟೈಟಲ್‌ಗಳಿರಬೇಕು. ಕೇವಲ ಒಂದೇ ಪದದ ನೇರಾನೇರ ಟೈಟಲ್‌ಗಳೆಲ್ಲ ಈಗ ಖಾಲಿ ಆಗಿಬಿಟ್ಟಿವೆ. “ಪುಲ್ವಾಮಾ’, “ಸರ್ಜಿಕಲ್ ಸ್ಟ್ರೈಕ್ 2.0′ ಅಥವಾ “ಬಾಲಾಕೋಟ್’ ಟೈಟಲ್‌ಗಳು ಸಿಗೋದಿಲ್ಲ. ಅವು ಆಗಲೇ ರಿಜಿಸ್ಟರ್ ಆಗಿಬಿಟ್ಟಿವೆ..” ಇಡೀ ಭಾರತವೇ ಕದನದ ಸುದ್ದಿಗಳನ್ನು ಆತಂಕದಿಂದ ಕೇಳಿಸಿಕೊಳ್ಳುತ್ತಾ ಅಭಿನಂದನ್ ಸುರಕ್ಷಿತವಾಗಿ ಹಿಂದಿರುಗಲಿ ಎಂದು ಆಶಿಸುತ್ತಿದ್ದ ಸಮಯದಲ್ಲೇ, ಬಾಲಿವುಡ್‌ಮಂದಿ ಈ ಬಿಕ್ಕಟ್ಟಿನಿಂದ ಲಾಭಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ಫೆಬ್ರವರಿ 26ರಂದು, ಅಂದರೆ ಭಾರತದ ವಾಯುಪಡೆ ಪಾಕಿಸ್ಥಾನ ದ ಮೇಲೆ ವಾಯುದಾಳಿ ನಡೆಸಿದ ದಿನ ಪಶ್ಚಿಮ ಮುಂಬಯಿಯ ಅಂಧೇರಿಯಲ್ಲಿರುವ “ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ನೂಸರ್ಸ್ ಅಸೋಸಿಯೇಷನ್ (ಐಎಂಎಂಪಿಎ)’ ಕಚೇರಿ ಕಿಕ್ಕಿರಿದು ತುಂಬಿತ್ತು. ಬಾಲಿವುಡ್‌ನ 5 ಸಿನೆಮಾ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು, ದೇಶಭಕ್ತಿಯ ಟೈಟಲ್‌ಗಳನ್ನು ನೋಂದಣಿ ಮಾಡಿಸಲು ನಾಮುಂದು ತಾಮುಂದು ಎಂದು ಮುಗಿಬಿದ್ದಿದ್ದರು. “ಇಡೀ ಚಿತ್ರಣ ಕಿಚಡಿಯಂತಾಗಿತ್ತು. ಬಾಲಾಕೋಟ್, ಸರ್ಜಿಕಲ್‌ಸ್ಟ್ರೈಕ್ 2.0 ಮತ್ತು ಪುಲ್ವಾಮಾ ಅಟ್ಯಾಕ್ ಎನ್ನುವ ಟೈಟಲ್ ರಿಜಿಸ್ಟರ್ ಮಾಡಿಸಲು ಪ್ರೊಡ್ನೂಸರ್‌ಗಳೆಲ್ಲ ಹೊಡೆದಾಡತೊಡಗಿದ್ದರು. ಆಮೇಲೆ ಅವರೆಲ್ಲ ಒಂದೇ ಟೈಟಲ್‌ನಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವ ವಿಚಾರದಲ್ಲಿ ಮಾತುಕತೆ ನಡೆಸಿ ಒಪ್ಪಂದಕ್ಕೆ ಮುಂದಾದರು. ಈ ಗದ್ದಲವನ್ನು ನೋಡಲು ಎರಡು ಕಣ್ಣು ಸಾಲಲಿಲ್ಲ ಸಾರ್!” ಎನ್ನುತ್ತಾರೆ ಅಂದು ಐಎಂಎಂಪಿಎ ಕಚೇರಿಯಲ್ಲಿದ್ದ ವ್ಯಕ್ತಿಯೊಬ್ಬರು. ಆದರೆ ಬಾಲಿವುಡ್‌ಖ್ಯಾತನಾಮರ ಮುನಿಸಿಗೆ ಪಾತ್ರರಾಗುವ ಭಯದಿಂದ ಅವರು ತಮ್ಮ ಹೆಸರು ಹೇಳಲು ಇಚ್ಛಿಸಲಿಲ್ಲ.
Uri: The Surgical Strike ಸಿನೆಮಾ ಯಶಸ್ಸಿನ ಅನಂತರ ಭಾರತ-ಪಾಕ್ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಟೈಟಲ್‌ಗಳು ಹೆಚ್ಚು ನೋಂದಣಿಯಾಗುತ್ತಿವೆ. ನಿರ್ಮಾಣ ಸಂಸ್ಥೆ ಅಬುಂದಾಂಟಿಯಾ ಎಂಟರ್‌ಟೇನ್‌ಮೆಂಟ್ ಈಗಾಗಲೇ Josh ಮತ್ತು How’s the Josh ಟೈಟಲ್‌ಗಳನ್ನು ನೋಂದಣಿ ಮಾಡಿಸಿದೆ. ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಜೈಶ್-ಎ-ಮೊಹಮ್ಮದ್ ಉಗ್ರ ದಾಳಿಗೆ ನಮ್ಮ ಯೋಧರು ಬಲಿಯಾದರಲ್ಲ, ಆ ದಿನವೂ ಟೈಟಲ್ ರೆಜಿಸ್ಟ್ರೇಷನ್‌ಗಾಗಿ ಬಾಲಿವುಡ್‌ನಲ್ಲಿ ಪೈಪೋಟಿ ಏರ್ಪಟ್ಟಿತ್ತು. ಅದೊಂದೇ ದಿನ ನೋಂದಣಿಯಾದ ಟೈಟಲ್‌ಗಳೆಂದರೆ “Pulwama’, ‘Pulwama: The Surgical Strike’, , ‘Pulwama Terror Attack’, ‘The Attacks of Pulwama’. ಈ ವಾರದಲ್ಲಿ ಪುಲ್ವಾಮಾ ಮತ್ತು ಬಾಲಾಕೋಟ್‌ಗೆ ಸಂಬಂಧಿಸಿದ ಹೆಸರುಗಳ ನೋಂದಣಿ ಜೋರಾಗಿ ನಡೆದಿದೆ. ಇದರಲ್ಲಿ ಕೆಲವು ಟೈಟಲ್‌ಗಳಿಗೆ ಅಬುಂದಾಂಟಿಯಾ ಮತ್ತು ಟಿ-ಸೀರೀಸ್ ಸಂಸ್ಥೆ ಅರ್ಜಿ ಸಲ್ಲಿಸಿವೆಯಂತೆ.
ಒಂದು ಸಿನೆಮಾ ಹೆಸರು ನೋಂದಣಿ ಮಾಡಿಸುವ ವಿಧಾನ ಸರಳವಾಗಿದೆ. ಸರಳ ಅರ್ಜಿಯನ್ನು ತುಂಬಬೇಕು, ಆದ್ಯತೆಗೆ ತಕ್ಕಂತೆ ಕ್ರಮವಾಗಿ 4-5 ಪರ್ಯಾಯ ಟೈಟಲ್‌ಗಳನ್ನೂ ಅರ್ಜಿಯಲ್ಲಿ ನಮೂದಿಸಬೇಕು. ಒಂದು ಅರ್ಜಿಗೆ 250 ರೂಪಾಯಿ ಶುಲ್ಕ ಮತ್ತು ಜಿಎಸ್‌ಟಿ ಕಟ್ಟಬೇಕಾಗುತ್ತದೆ. ಬಹುತೇಕ ಬಾರಿ ಟೈಟಲ್ ನೋಂದಣಿ ಮಾಡಿಸುವವರಿಗೆ ಸಿನೆಮಾ ಮಾಡುವ ಉದ್ದೇಶವೇ ಇರುವುದಿಲ್ಲ. ಯಾವುದಾದರೂ ಸ್ಟೂಡಿಯೋಗೆ ಈ ಟೈಟಲ್‌ಗಳನ್ನು ಭಾರೀ ಮೊತ್ತಕ್ಕೆ ಮಾರಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ಈ ವಿಷಯವಾಗಿ ಲೇಖಕ ಪ್ರಿತೀಶ್ ನಂದಿ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ನಡುವೆ ಜಗಳವಾಗಿತ್ತು. ಅನುರಾಗ್ ಕಶ್ಯಪ್ ಅವರ “ಗ್ಯಾಂಗ್ಸ್ ಆಫ್ ವಾಸೇಪುರ್’ ಸಿನೆಮಾದಲ್ಲಿ “ಓ ವುಮನಿಯಾ’ ಎನ್ನುವ ಹಾಡು ಬಂದಿತ್ತು. “ವುಮನಿಯಾ’ ಎನ್ನುವ ಪದವನ್ನು ಹುಟ್ಟುಹಾಕಿದ್ದು ಅನುರಾಗ್ ಕಶ್ಯಪ್ ಮತ್ತು ಅವರ ತಂಡ. ಆದರೆ ಈ ಪದ ಫೇಮಸ್ ಆಗುತ್ತಿದ್ದಂತೆಯೇ ಪ್ರಿತೀಶ್ ನಂದಿಯವರ ನಿರ್ಮಾಣ ಸಂಸ್ಥೆಯು “ವುಮನಿಯಾ’ ಟೈಟಲ್ ಅನ್ನು ನೋಂದಣಿ ಮಾಡಿಸಿಕೊಂಡು ಬಿಟ್ಟಿತು. ಈ ವರ್ಷ ಅನುರಾಗ್ ಕಶ್ಯಪ್ ತಾವು ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ಕೇಂದ್ರಿತ ಸಿನೆಮಾಕ್ಕೆ “ವುಮನಿಯಾ’ ಎನ್ನುವ ಹೆಸರು ಇಡಲು ಇಚ್ಛಿಸಿದರು. ಆದರೆ ಆ ಟೈಟಲ್ ಆಗಲೇ ರಿಜಿಸ್ಟರ್ ಆಗಿದ್ದು ತಿಳಿದ ಕಶ್ಯಪ್ ಈ ಟೈಟಲ್ ತಮಗೆ ಕೊಡಬೇಕೆಂದು ನಂದಿ ಅವರನ್ನು ಸಂಪರ್ಕಿಸಿದಾಗ, ಪ್ರಿತೀಶ್ ನಂದಿ 2 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಸಿಟ್ಟಾದ ಅನುರಾಗ್ ಕಶ್ಯಪ್ ಪ್ರಿತೀಶ್ ನಂದಿ ಬೇಡಿಕೆಯನ್ನು “ವಸೂಲಿ’ ಎಂದು ಕರೆದಿದ್ದಷ್ಟೇ ಅಲ್ಲದೇ, ಟೈಟಲ್ ಆಸೆಯನ್ನು ಕೈಬಿಟ್ಟು ತಮ್ಮ ಹೊಸ ಸಿನೆಮಾಕ್ಕೆ “ಸಾಂಡ್ ಕೀ ಆಂಖ್’ ಎಂದು ಹೆಸರು ಇಟ್ಟಿದ್ದಾರೆ.
ಫೆ. 27ರಂದು ಐಎಂಎಂಪಿಎದ ಕಚೇರಿಗೆ ನಾನೊಬ್ಬ ಚಿಕ್ಕ ಪ್ರೊಡ್ನೂಸರ್ ಎಂದು ಹೇಳಿಕೊಂಡು ಹೋಗಿದ್ದೆ. ಭಾರತ- ಪಾಕಿಸ್ಥಾನ ಕ್ಕೆ ಸಂಬಂಧಿಸಿದ ಟೈಟಲ್ ರೆಜಿಸ್ಟ್ರೇಷನ್ ಮಾಡಿಸಲು ಬಂದಿದ್ದೇನೆಂದು ಅವರಿಗೆ ಹೇಳಿದೆ. ಆದರೆ ಅದಾಗಲೇ ಬಹುತೇಕ ಟೈಟಲ್‌ಗಳಿಗಾಗಿ ಬೇರೆಯವರು ಅರ್ಜಿ ಸಲ್ಲಿಸಿಬಿಟ್ಟಿದ್ದರು. ಆ ಸಮಯದಲ್ಲೇ ನನಗೆ PULWAMA: THE DEADLY ATTACK” ಎಂದು ಹೆಸರು ನೋಂದಣಿ ಮಾಡಲು ಮುಂದಾದ ಪ್ರೊಡ್ನೂಸರ್ ಸಿಕ್ಕಿದು. ಆ ಪ್ರೊಡ್ನೂಸರ್ ನನಗೊಂದು ಸಲಹೆ ಕೊಟ್ಟರು - “ಪುಲ್ವಾಮಾ ಅಥವಾ ಬಾಲ್‌ಕೋಟ್ ಹೆಸರು ಬರುವಂಥ ಉದ್ದದ ಟೈಟಲ್ ಅನ್ನು ರಿಜೆಸ್ಟರ್ ಮಾಡಿಸಿಬಿಡಿ. ಸಿನೆಮಾ ಮಾಡುವಾಗ ಬರೀ ಆ ಪದವನ್ನಷ್ಟೇ ದೊಡ್ಡದಾಗಿ ದಪ್ಪ ಅಕ್ಷರಗಳಲ್ಲಿ ಬರೆದು, ಉಳಿದವನ್ನು ಚಿಕ್ಕದಾಗಿ ಮಾಡಿಬಿಡು!’. ಇಷ್ಟು ಹೇಳಿದ್ದೇ ಅವರು THE DEADLY ATTACK ನೋಂದಣಿ ಮಾಡಿಸಲು ಹಣ ಹೊರತೆಗೆದರು.
ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್‌ರನ್ನು ಪಾಕ್ ಸೇನೆ ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ನೂಸರ್ಸ್ ಅಸೋಸಿಯೇಷನ್‌ಗೆ ಫೋನ್ ಮಾಡಿ “ಅಭಿನಂದನ್/ವಿಂಗ್ ಕಮ್ಯಾಂಡರ್ ಅಭಿನಂದನ್ ಅಂತ ಟೈಟಲ್ ನೋಂದಣಿ ಮಾಡಿಸಬೇಕು. ಟೈಟಲ್ ಖಾಲಿ ಇದೆಯಾ?’ ಎಂದೆ.
ಅತ್ತ ಫೋನ್ ಎತ್ತಿದ ವ್ಯಕ್ತಿ ಹೇಳಿದ -“ಕೂಡಲೇ ನಿಮ್ಮ ಅರ್ಜಿ ಕಳಿಸಿ. ಟೈಟಲ್ ಬೇಗ ಖಾಲಿಯಾಗಿಬಿಡುತ್ತೆ’
(ಮೂಲ-ಹಫಿಂಗ್‌ಟನ್ ಪೋಸ್ಟ್)
ಅಂಕುರ್ ಪಾಠಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.