ಗ್ರಾಮೀಣ ಭಾಷೆಯ ಸೊಗಡಿನ “ಸಾಮಾನ್ಯರಲ್ಲಿ ಅಸಾಮಾನ್ಯರು’


Team Udayavani, Nov 16, 2020, 5:30 AM IST

ಗ್ರಾಮೀಣ ಭಾಷೆಯ ಸೊಗಡಿನ “ಸಾಮಾನ್ಯರಲ್ಲಿ ಅಸಾಮಾನ್ಯರು’

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ “ಸಾಮಾನ್ಯರಲ್ಲಿ ಅಸಾ ಮಾನ್ಯರು’ ಎಂಬ ವಿಶಿಷ್ಟ ಹೆಸರಿನ ಕೃತಿ ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಸೊಗಡಿನೊಂದಿಗೆ ನಮ್ಮ ಮನಸ್ಸನ್ನು ಸೆಳೆಯುತ್ತದೆ. ಇದೊಂದು ಲೇಖನಗಳ ಸಂಕಲನವಾಗಿದ್ದು, ಹಲವು ಕಾರಣಗಳಿಂದ ಮನಸ್ಪರ್ಶಿಯಾಗುತ್ತದೆ. ಇದರಲ್ಲಿ ಉತ್ತರ ಕರ್ನಾಟಕದ ಜನರ ಪ್ರೇಮ, ಪರೋಪಕಾರ, ಅಂತಃಕರಣ ಮತ್ತು ವಾತ್ಸಲ್ಯವನ್ನು ಮನಸ್ಸಿಗೆ ತಟ್ಟುವಂತೆ, ಕಣ್ಣೆ ದುರು ನಿಲ್ಲುವಂತೆ ಓದು ಗರಿಗೆ ನೀಡುವಲ್ಲಿ ಲೇಖಕಿ ಸಫ‌ಲರಾಗಿದ್ದಾರೆ.

ಗ್ರಾಮೀಣ ಸೊಗಡಿನ ಭಾಷಾ ಶೈಲಿಯ ಮೂಲಕ ಹಲವು ವ್ಯಕ್ತಿ ಚಿತ್ರಣಗಳನ್ನು ಈ ಕೃತಿಯಲ್ಲಿ ಲೇಖಕಿ ನಮಗೆ ನೀಡಿದ್ದಾರೆ. ಕೃತಿಯನ್ನು ಓದುತ್ತಾ ಹೋದಂತೆ, ಉತ್ತರ ಕರ್ನಾಟಕದ ಜನರು ಆರ್ಥಿಕವಾಗಿ ಹಿಂದುಳಿದ್ದರೂ ಪ್ರೀತಿ, ವಾತ್ಸಲ್ಯ, ಕನ್ನಡಾಭಿ ಮಾನದಲ್ಲಿ ಶ್ರೀಮಂತಿಕೆ ಹೊಂದಿದವರು ಎಂಬುದು ಸ್ಪಷ್ಟವಾಗುತ್ತದೆ.

ಇಡೀ ಕೃತಿಯಲ್ಲಿ ಹೆಚ್ಚು ಸೆಳೆದದ್ದು “ಬಂಡಲ್‌ ಬಿಂದಪ್ಪ’ನ ಕುರಿತಾದ ಲೇಖನ. ಈತನ ಕನ್ನಡ ಪ್ರೇಮ ಹಾಗೂ ಇವನಿಗಿರುವ ಅಡ್ಡ ಹೆಸರಿನ ಒಳಹೊಕ್ಕಂತೆ ಅಲ್ಲೊಂದು ಸಾಮಾನ್ಯರ ನಡುವಿನ ಅಸಾಮಾನ್ಯನ ದರ್ಶನವಾಗುತ್ತದೆ.

ಲೇಖಕಿ ಬಿಂದಪ್ಪ ಅವರ ಮನೆಯನ್ನು ಹುಡುಕುತ್ತಾ ಹೋಗುತ್ತಿದ್ದಾಗ “ಕೀರ್ತಿ ಸ್ಟೋರ್‌’ ಹೆಸರಿನ ಅಂಗಡಿ ಸಿಗುತ್ತದೆ. ಅಂಗಡಿಯವನ ಬಳಿಗೆ ಹೋಗಿ ಕೇಳಿದಾಗ ಬಿಂದಪ್ಪನ ಬಗ್ಗೆ ವಿಚಾರಿಸಿದರು. ಆಗ ಅಂಗಡಿ ಯವನು, “ಇಲ್ಲಿ ಬಿಂದಪ್ಪ ಎನ್ನುವವರು ಹಲವರಿದ್ದಾರೆ. ನಿಮಗೆ ಯಾವ ಬಿಂದಪ್ಪ ಬೇಕು ಎಂಬುದು ತಿಳಿಯುತ್ತಿಲ್ಲ’ ಎನ್ನುತ್ತಾರೆ. ಆಗ ತನಗೆ ಬೇಕಾದ ಬಿಂದಪ್ಪನ ಬಗ್ಗೆ ಪೂರಕ ಮಾಹಿತಿಯಾಗಿ, “ಆತನ ಹೆಂಡತಿ ಸರಸ್ವತಿ, ಸಾಲ್ಯಾಗ ಟೀಚರ್‌ ಇದ್ದಾರೆ’ ಎನ್ನುತ್ತಾರೆ. ಕೂಡಲೇ ಅಂಗಡಿಯವನು, “ಮೊದಲೆ ಹೇಳಬೇಕಲ್ವಾ ಬಂಡಲ್‌ ಬಿಂದಪ್ಪ ಅಂತಾ! ಇಷ್ಟು ಮಾತುಕತೆನೇ ಬೇಕಾಗಿರಲಿಲ್ಲ’ ಎಂದರು. ಲೇಖಕಿಗೆ ಬಿಂದಪ್ಪನ ಅಡ್ಡ ಹೆಸರು ಹಾಗೂ ಆತನ ಜತೆಗಿದ್ದ “ಪಾಟೀಲ್‌’ ಬದಲು “ಬಂಡಲ್‌’ ಸೇರಿ ಅದೆಷ್ಟು ಪ್ರಭಾವಿಯಾಗಿದೆ ಎಂದು ತಿಳಿದು ಅಚ್ಚರಿಪಟ್ಟರು.

ಲೇಖಕಿ ಬಿಂದಪ್ಪನ ಬಗ್ಗೆ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಬಿಂದಪ್ಪ ಯಾವಾಗಲೂ ಸುಳ್ಳುಗಾರನಾಗಿದ್ದರಿಂದಲೇ ಆತನ ಹೆಸರಿನ ಜತೆಗೆ ಬಂಡಲ್‌ ಸೇರಿದೆ. ಆದರೆ ಅವನ ಬಾಯಿಯಿಂದ ಯಾವ ತ್ತಿಗೂ ನಕಾರಾತ್ಮಕ ಉತ್ತರ ಬಂದೇ ಇಲ್ಲ. ಅವನ ಮಾತುಗಳನ್ನು ನಂಬುವಂತಿ ರಲಿಲ್ಲ. ಆದರೂ ಸುಂದರ ವಾಗಿ ಇತಿಹಾಸ ಜೋಡಿಸಿ ಹೇಳುವ ಮಾತು ಮತ್ತೆ ಮತ್ತೆ ಕೇಳಬೇಕು ಎಂದನ್ನಿಸು ವುದು ಲೇಖನದಲ್ಲಿ ಪ್ರತಿ ಬಿಂಬಿತವಾಗಿದೆ.

“ಎಳೆಯರು ಎತ್ತಲ್ಲ ದಳವಾಯಿ ದೊರೆಯಲ್ಲ, ಮನೆಗೆ ಬಂದ ಅಳಿಯ ಮಗನಲ್ಲ, ಅಳಿಯ ಎಂದೂ ಮಗನಾಗು ವುದಿಲ್ಲ’ ಮುಂತಾದ ಆತನ ಮಾತುಗಳಿಂದ ಲೇಖಕಿ ಬಹಳ ಪ್ರಭಾವಿತರಾಗಿದ್ದನ್ನು ಲೇಖನದಲ್ಲಿ ಬಣ್ಣಿಸಿದ್ದಾರೆ. ಬಂಡಲ್‌ ಬಿಂದಪ್ಪನ ಕನ್ನಡಪ್ರೇಮದ ಬಗ್ಗೆಯೂ ಲೇಖಕಿ ಹಾಡಿ ಹೊಗಳಿದ್ದಾರೆ. ಬಿಂದಪ್ಪ ಮನೆ ಕಟ್ಟಲಿಲ್ಲ, ಆಸ್ತಿ ಮಾಡಿಲ್ಲ, ಯಾವುದೇ ಸಮ್ಮಾನ – ಪ್ರಶಸ್ತಿ ಸ್ವೀಕರಿಸಿಲ್ಲ. ಕೇವಲ ಕನ್ನಡಕ್ಕಾಗಿಯೇ ದುಡಿದು ಕಾನನದಲ್ಲಿ ಅರಳಿದ ಹೂವಿನಂತಿದ್ದ.

ಲೇಖಕಿ ಎಲ್ಲಿಯೇ ಇದ್ದರೂ “ಹಚ್ಚೇವು ಕನ್ನಡದ ದೀಪ’ ಹಾಡು ಕೇಳಿದಾಗ ಬಿಂದಪ್ಪನನ್ನು ಸ್ಮರಿಸುತ್ತಾರೆ. ಇದರ ಜತೆಗೆ ಕಂಡಕ್ಟರ್‌ ಭೀಮಣ್ಣ, ಅಂಗಡಿ ಜಯಣ್ಣ, ಸಿರಿವಂತ ಸೀತಾಬಾಯಿ ಮುಂತಾದ ಹಲವಾರು ಪಾತ್ರಗಳು ಈ ಸಂಕಲನದಲ್ಲಿವೆ. ಇವೆಲ್ಲವೂ ಬೇರೆ ಬೇರೆ ಕಾರಣಗಳಿಂದ ನೆನಪಿನ ಪಟಲದಲ್ಲುಳಿಯುತ್ತವೆ.


ಮಲಿಕ್‌ ಎಲ್‌. ಜಮಾದಾರ್‌, ವಿಜಯಪುರ

ಟಾಪ್ ನ್ಯೂಸ್

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

ncp

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

voter

RSS ಕಚೇರಿ ಟೆಕ್ಕಿಗಳ ಬಳಸಿ ಇವಿಎಂ ಹ್ಯಾಕ್‌: ವಸಂತ

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.