ವೈಚಾರಿಕ ಲೇಖನ ಸಂಕಲನ “ಗೂಡೆ’
Team Udayavani, Nov 18, 2020, 5:35 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಸುಮಾರು 87 ಲೇಖನಗಳನ್ನು ಹೊಂದಿರುವ “ಗೂಡೆ’ಯು ಕ್ರಾಂತಿಕಾರಿ ಸಾಹಿತಿ ಲಕ್ಷ್ಮಣ್ ಅವರ ಪತ್ರಿಕಾ ಲೇಖನಗಳ ಸಂಗ್ರಹವಾಗಿದ್ದು, ಹಲವು ಹೊಸ ವಿಷಯಗಳ ಗಣಿಯಾಗಿದೆ. ಈಗಿನವರಿಗೆ “ಗೂಡೆ’ ಶಬ್ದದ ಅರ್ಥವೇ ಗೊತ್ತಿಲ್ಲ. ಒಂದು ಸಮುದಾಯದ ಮದುವೆಗಳಲ್ಲಿ ಮುಹೂರ್ತಕ್ಕೆ ಬೇಕಾದ ಎಲ್ಲ ಸುಮಂಗಲ ವಸ್ತುಗಳನ್ನು ಹೊತ್ತು ತರುವುದಕ್ಕೆ ಗೂಡೆ ಎನ್ನುತ್ತಿದ್ದರು. ಗೂಡೆಯ ಬಗ್ಗೆ ಇನ್ನಷ್ಟು ವಿವರವಾಗಿ ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಗೂಡೆಯು ಹಸಿವು ನೀಗಿ ಸುವ ಮತ್ತು ಸಂಪ್ರದಾಯ ಗಳನ್ನು ಮೆರೆಸುತ್ತಿದ್ದ ವಿಷ ಯವೂ ಆಗಿತ್ತು ಎಂಬುದನ್ನು ಲೇಖಕರು ತಿಳಿಸುತ್ತಾರೆ.
“ನನಗೆ ನನ್ನ ತಾಯಿಯು ಗೌಡರ ಮನೆಯಿಂದ ಪಡೆದ ಆಹಾರ ಹೊತ್ತು ತರುವ ನೆನಪಿನ ಜತೆಯಲ್ಲೇ ಈ ಗೂಡೆಯು ಸದಾ ನೆನಪಾಗುತ್ತದೆ. ಇದು ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆಯ ಸಂಕೇತ’ ಎಂದೂ ಲೇಖಕರು ತಿಳಿಸಿದ್ದಾರೆ.
ಹಿಂದೂ ಸಮಾಜದಲ್ಲಿರುವ ಕೆಲವು ಆಕ್ಷೇ ಪಾರ್ಹ ವಿಷಯಗಳ ಬಗ್ಗೆ ಈ ಕೃತಿಯಲ್ಲಿ ಲೇಖಕರು ಪ್ರಸ್ತುತಪಡಿಸಿದ್ದಾರೆ. ಜತೆಗೆ ಅಲ್ಲಲ್ಲಿ ತಮ್ಮ ವಿಚಾರವಂತಿಕೆಯಿಂದ ಸಾಮಾಜಿಕ ಅಸಮಾನತೆಯನ್ನು ಖಂಡಿಸುವ ಪ್ರಯತ್ನ ವನ್ನೂ ಮಾಡಿದ್ದಾರೆ. ಹಾವಾಡಿಗರ ಸಮಸ್ಯೆ, ಗಿಳಿಶಾಸ್ತ್ರದವರ ಮೇಲಿನ ಪ್ರಾಣಿ ದಯಾ ಸಂಘದ ಕಿರುಕುಳ, ಪೊಲೀಸರ ದೌರ್ಜನ್ಯ ಮುಂತಾದವುಗಳ ಬಗ್ಗೆಯೂ ಉಲ್ಲೇಖಗಳಿವೆ. ಪ್ರಾಣಿದಯಾ ಸಂಘದವರ ಅತಿಯಾದ ಪ್ರಾಣಿಪ್ರೀತಿಯು ಮನುಷ್ಯರ ಜೀವನದಲ್ಲಿ ತಂದೊಡ್ಡುವ ಸಮಸ್ಯೆಗಳ ಬಗ್ಗೆಯೂ ಲೇಖಕರು ಕೃತಿಯಲ್ಲಿ ವಿವರಿಸಿದ್ದಾರೆ. ಲೇಖಕರು ಕೆಲವು ಪ್ರಶ್ನೆಗಳನ್ನೂ ಕೇಳಿದ್ದು, ಅದು ನಮ್ಮ ಬುದ್ಧಿಮತ್ತೆಗೆ ಒಂದಷ್ಟು ಕೆಲಸವನ್ನೂ ಕೊಡುತ್ತಿದೆ.
“ದಯಾ ಇಲ್ಲದ ಸಂಘದವರಿಗೆ ಶಾಸ್ತ್ರ ಗೊತ್ತಾ?’ ಎಂಬ ಲೇಖನದಲ್ಲಿ ಗಿಳಿಶಾಸ್ತ್ರ ವೆಂಬುದು ಒಂದು ಕುಲಕಸುಬು. ಅದರಿಂದ ಜೀವನ ನಡೆಸುವ ಕುಟುಂಬಗಳಿಗೆ ಪ್ರಾಣಿ ದಯಾ ಸಂಘ ಕಾನೂನು, ಪೊಲೀಸ್ ಇಲಾಖೆ ಗಳೆಲ್ಲವೂ ಅವರ ಕಸುಬಿಗೆ ಉರುಳಾಗಿವೆ ಎಂದು ವಿವರಿಸಿದ್ದಾರೆ. ಪ್ರತಿಯೊಂದು ಲೇಖನದಲ್ಲೂ ಹಲವು ವಿಷಯಗಳ ಬಗ್ಗೆ ಲೇಖಕರಿಗಿರುವ ಸೂಕ್ಷ್ಮತೆ ಎದ್ದು ಕಾಣುತ್ತದೆ. ಜತೆಗೆ ವರ್ತಮಾನದ ಘಟನೆಗಳಿಗೆ ಪ್ರತಿಕ್ರಿಯಿಸುತ್ತಾ ವಿಚಾರ ಮಂಡಿಸಿದ್ದಾರೆ.
ತತ್ವಪದ ನಾರಾಯಣಪ್ಪ, ಇಸ್ಮಾಯಿಲ್‌ನಂತಹ 12 ವರ್ಷದ ಮುಸ್ಲಿಂ ಬಾಲಕನ ಬದುಕಿನ ಚಿತ್ರಣವನ್ನು ಈ ಕೃತಿಯಲ್ಲಿ ವಿಚಾರದ ಸಂಘ ರ್ಷದೊಂದಿಗೆ ಲೇಖಕರು ನಮಗೆ ನೀಡಿದ್ದಾರೆ. ಅವರ ಬದುಕಿನ ಸಂದಿಗ್ಧತೆ ಹಾಗೂ ಸರಕಾರದ ಯೋಜನೆಗಳ ಅಸ ಮರ್ಪಕ ಜಾರಿ ಕುರಿತಾದ ಚಿತ್ರಣವೂ ಇದರಿಂದ ಸಿಗುತ್ತದೆ.
ನಮ್ಮ ಆಡಳಿತ ವ್ಯವಸ್ಥೆಯಲ್ಲಿರುವ ಲೋಪ ಗಳ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಈ ಕೃತಿಯನ್ನು ಓದಿ ಮುಗಿಸಿದಾಗ ಹಲವು ಪ್ರಶ್ನೆಗಳು ನಮ್ಮ ಮನಸ್ಸುಗಳನ್ನು ಆವರಿಸಿ ಕೊಳ್ಳುತ್ತವೆ. ಅವುಗಳಿಗೆ ಉತ್ತರ ಕೊಡುವುದು ಅಥವಾ ಉತ್ತರ ಹುಡುಕುವುದು ಸುಲಭದ ಕೆಲಸವೇನಲ್ಲ. ಲೇಖನಗಳು ಓದುಗನ ವಿಚಾರವನ್ನು ವಿಸ್ತಾರಗೊಳಿಸುತ್ತಾ, ನಮ್ಮ ವ್ಯವಸ್ಥೆಯನ್ನು ವಿಶ್ಲೇಷಿಸುತ್ತಾ ಸಾಗುವ ಕಾರಣ ಓದುಗನ ಜ್ಞಾನವೃದ್ಧಿಯೂ ಆಗುತ್ತದೆ.
ಈ ಕೃತಿಯನ್ನು ಓದಿದ ಬಳಿಕ ಎಲ್ಲರ ಮನಸ್ಸಲ್ಲೂ ವಿಮರ್ಶೆ ನೆಲೆಯೂರುವುದು ಖಚಿತ. ನಾವು ಸರಿ ಎಂದು ನಂಬಿದ್ದರಲ್ಲೂ ಲೋಪಗಳಿವೆ ಎಂಬುದು ಈ ಕೃತಿಯ ಮೂಲಕ ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ಅಂಥ ಅದ್ಭುತ ಕೃತಿಯನ್ನು ಓದುವುದರಿಂದ ನಮ್ಮ ಜ್ಞಾನವೃದ್ಧಿ ಹಾಗೂ ಚಿಂತನೆ ಶಕ್ತಿ ಹರಿತವಾಗುವುದು ಖಚಿತ.
– ಪರಶುರಾಮ ಎ., ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.