![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 4, 2021, 6:20 PM IST
ಹೆಸರೇ ಸೂಚಿಸುವಂತೆ ಇದು ಹಲವು ಸಾಹಿತ್ಯ ಕೃತಿಗಳಿಗೆ ಬರೆದ ಮುನ್ನುಡಿ ಬೆನ್ನುಡಿಗಳ ಸಂಕಲನ. ಮುನ್ನುಡಿ ಬೆನ್ನುಡಿಗಳನ್ನು ಬರೆಯಲು ಕು.ಗೋ.ಅವರಿಗಿರುವ ಅರ್ಹತೆ ಹಿರಿಯ ಸಾಹಿತಿ ಎನ್ನುವುದು ಮಾತ್ರವಲ್ಲ, ಹೃದಯವಂತ ಸಾಹಿತಿ ಎನ್ನುವುದು ಕೂಡಾ ಆಗಿದೆ.
ಸಾಹಿತ್ಯಾಸಕ್ತರಿಗೆ ನಿಸ್ವಾರ್ಥ ಬುದ್ಧಿಯಿಂದ ತಾವು ಓದಿದ ಒಳ್ಳೆಯ ಕೃತಿಗಳನ್ನು ಸದಾ ಹಂಚುತ್ತಿರುವ ಅವರಿಗೆ ದೊಡ್ಡ ಸಾಹಿತಿಗಳು ಸಣ್ಣ ಸಾಹಿತಿಗಳು, ಪ್ರಸಿದ್ಧರು, ಸಾಮಾನ್ಯರು, ಪ್ರಶಸ್ತಿಗಳನ್ನು ಪಡೆದವರು ಪಡೆಯದವರು ಎಂಬ ತಾರತಮ್ಯ ಭಾವವಿಲ್ಲ.
ಪತ್ರಿಕೆ ನಿಯತ ಕಾಲಿಕಗಳಲ್ಲಿ ಕಥೆ, ಕವಿತೆ, ಪ್ರಬಂಧಗಳನ್ನು ಬರೆದವರನ್ನು ಒಂದು ಪುಸ್ತಕ ಪ್ರಕಟಿಸಲು ಪ್ರೋತ್ಸಾಹವೀಯುವ ಅವರು ಅಂಥವರ ಕೃತಿಗಳಿಗೆ ಆಶೀರ್ವಾದ ರೂಪದಲ್ಲಿ ಮುನ್ನುಡಿ ಬೆನ್ನುಡಿಗಳನ್ನು ಬರೆದಿದ್ದಾರೆ. ಅಂಥವರು ತಮ್ಮ ಬರವಣಿಗೆಯನ್ನು ಮುಂದುವರಿಸಿ ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬುದೇ ಅವರ ಆಶಯ.
ಉದಯೋನ್ಮುಖ ಲೇಖಕ/ಲೇಖಕಿಯರ ಕೃತಿಗಳ ಖಡಕ್ ವಿಮರ್ಶೆ ಮಾಡದೆ ಅವರನ್ನು ಮಾತೃಹೃದಯದಿಂದ ಹರಸಿ ನಲ್ನುಡಿಗಳನ್ನು ಬರೆದು ಅಗತ್ಯವಿದ್ದಲ್ಲಿ ನವಿರಾಗಿ ಸಲಹೆಗಳನ್ನು ಕೊಡುವುದಷ್ಟೇ ಅವರು ಮಾಡುವ ಕೆಲಸ. ಇದು ಓರ್ವ ಸಹೃದಯಿ ವಿಮರ್ಶಕನ ಜವಾಬ್ದಾರಿಯೂ ಹೌದು. ಕು.ಗೋ.ಅವರಲ್ಲಿರುವ ( ಮತ್ತು ಬಿಗುಮುಖದ ಬುದ್ಧಿಜೀವಿ ಸಾಹಿತಿ ಗುರುಗುಂಟಿರಾಯರಲ್ಲಿಲ್ಲದ) ಈ ಗುಣದಿಂದಾಗಿಯೇ ಅನೇಕರು ಮುನ್ನುಡಿಗಾಗಿ ಅವರ ಬಳಿ ಬರುತ್ತಾರೆ. ಹಲವರು ಅವರ ಬಳಿ ತಮ್ಮ ಎರಡು ಮೂರು ಕೃತಿಗಳಿಗೆ ಮುನ್ನುಡಿ ಬರೆಸಿಕೊಂಡಿದ್ದಾರೆ.
(ಕು.ಗೋ)
ಅವರ ಬಳಿ ತಮ್ಮ ಮೊದಲ ಕೃತಿಗೆ ಮುನ್ನುಡಿ ಬರೆಯಿಸಿಕೊಂಡ ಡಾ.ಕಾತ್ಯಾಯನಿ ಕುಂಜಿಬೆಟ್ಟು ಇವತ್ತು ಬಹಳಷ್ಟು ಕೃತಿಗಳನ್ನು ಪ್ರಕಟಿಸಿರುವ ಪ್ರಸಿದ್ಧ ಸಾಹಿತಿಯಾಗಿದ್ದಾರೆ. ಗೀತಾ ಕುಂದಾಪುರ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.
ಸಾಕಷ್ಟು ಬರೆದು ಪ್ರಕಟಿಸಿ ಸಾಹಿತ್ಯಕ್ಷೇತ್ರದಲ್ಲಿ ಗಮನಾರ್ಹರೆಂದು ಗುರುತಿಸಿಕೊಂಡಿರುವ ಪ್ರಬುದ್ಧ ಸಾಹಿತಿಗಳಾದ ಅಂಬ್ರಯ್ಯ ಮಠ, ಪ್ರದೀಪಕುಮಾರ್ ಹೆಬ್ರಿ, ಸುಮುಖಾನಂದ ಜಲವಳ್ಳಿ, ಅಂಶುಮಾಲಿ, ಶಾಂತರಾಜ ಐತಾಳ್ ಪರಮೇಶ್ವರಿ ಲೋಕೇಶ್ವರ್, ಜ್ಯೋತಿ ಮಹಾದೇವ್, ಸುಶೀಲಾದೇವಿ ಆರ್ ರಾವ್ ಮೊದಲಾದವರೂ ಕು.ಗೋ.ಅವರಿಂದ ಮುನ್ನುಡಿ ಬೆನ್ನುಡಿಗಳನ್ನು ಬರೆಸಿಕೊಂಡಿದ್ದಾರೆ. ಅವರ ಯಾವುದೇ ಕೃತಿಗಳನ್ನೂ ವಿಮರ್ಶೆ ಮಾಡಲು ಹೋಗದೆ ಮುನ್ನುಡಿಯ ಉದ್ದೇಶ ವಿಮರ್ಶೆ ಮಾಡುವುದಲ್ಲ ಬದಲಾಗಿ ಕೃತಿಗೆ ಶುಭ ಕೋರುವುದು ಎನ್ನುತ್ತಾರೆ ಕು.ಗೋ.ಅವರು.
ಆದರೂ ಸಾಧನೆ ಮಾಡಿದವರನ್ನು ಮತ್ತು ಅವರು ಹಿಂದೆ ಮಾಡಿದ ಕೆಲಸಗಳ ಕುರಿತು ಒಳ್ಳೆಯ ಮಾತುಗಳಲ್ಲಿ ಪರಿಚಯಿಸುವ ಕೆಲಸವನ್ನು ಅವರು ಮಾಡುತ್ತಾರೆ. ಇದು ತುಂಬಾ ಮುಖ್ಯವೂ ಹೌದು. ಯಾಕೆಂದರೆ ಇಂದು ಇತರರ ಕೃತಿಗಳನ್ನು ಓದುವ ಅಥವಾ ಇತರರ ಬಗ್ಗೆ ತಿಳಿದುಕೊಳ್ಳುವ ವ್ಯವಧಾನ ಅನೇಕರಿಗೆ ಇಲ್ಲ. ಅಂಥವರು ಕು.ಗೋ.ಅವರ ಮುನ್ನುಡಿಯಿಂದ ಬಹಳಷ್ಟು ತಿಳಿದುಕೊಳ್ಳುವ ಅವಕಾಶವಿರುತ್ತದೆ.
ಇನ್ನೊಂದು ವಿಚಾರ ಏನೆಂದರೆ ಇಂದು ಮುನ್ನುಡಿ ಬರೆಯುವ ಹಲವಾರು ಸಾಹಿತಿಗಳು ಕೃತಿಯನ್ನು ಪೂರ್ತಿಯಾಗಿ ಓದದೆಯೇ ಜಾಳುಜಾಳಾಗಿ ಬರೆದು ಬಿಡುತ್ತಾರೆ. ಆದರೆ ಕು.ಗೋ.ಹಾಗಲ್ಲ. ಅವರು ಕೃತಿಯನ್ನು ಒಂದಕ್ಷರ ಬಿಡದೆ ಓದಿದ್ದಾರೆ ಅನ್ನುವುದು ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಬೇರೆ ಬೇರೆ ಕೃತಿಗಳಲ್ಲಿ ಹರಿದು ಹಂಚಿ ಹೋಗಿರುವ ಕು.ಗೋ.ಅವರ ಈ ಬರಹಗಳನ್ನು ಮಂಡ್ಯದ ಶ್ರೀರಾಮ ಪ್ರಕಾಶನದವರು ಸಂಕಲನರೂಪದಲ್ಲಿ ತಂದು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ.
ಡಾ. ಪಾರ್ವತಿ ಜಿ. ಐತಾಳ್
ಹಿರಿಯ ಸಾಹಿತಿಗಳು, ಅನುವಾದಕರು
ಇದನ್ನೂ ಓದಿ : ನಿನ್ನ ನೀ ಗೌರವಿಸದೇ… : ಸಕಾರಾತ್ಮಕ ಬದುಕಿಗೊಂದು ಕೈ ದೀವಿಗೆ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.