ಬೆಳಗೆರೆಯವರ ಬಾಲ್ಯದ ದಿನಗಳ ಮೆಲುಕು ಹಾಕುವ “ಅಮ್ಮ ಸಿಕ್ಕಿದ್ಲು’
Team Udayavani, Nov 14, 2020, 5:45 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
“ಅಕ್ಷರಗಳ ಮಾಂತ್ರಿಕ’ ಖ್ಯಾತಿಯ ರವಿ ಬೆಳಗೆರೆಯವರ ಕೃತಿಯನ್ನು ಓದುವುದರ ಲ್ಲಿರುವ ಖುಷಿಯೇ ಬೇರೆ. ಇವರ “ಅಮ್ಮ ಸಿಕ್ಕಿದ್ಲು’ ಕೃತಿಯು ಮತ್ತೆ ಮತ್ತೆ ಓದಿಸುವಂಥ ಶಕ್ತಿ ಹೊಂದಿದೆ.
ಈ ಕೃತಿಯು ವಿಚ್ ಅಲ್ಬೊಮ್ ಅವರ “ಫಾರ್ ಒನ್ ಲಾಸ್ಟ್ ಟೈಮ…’ ಕೃತಿಯನ್ನು ಹೋಲುತ್ತದೆ. ಆದರೆ ಇದು ಯಾವುದೇ ಸಾಹಿತ್ಯದ ಅನುಕರಣೆ ಅಥವಾ ಅನುವಾದವಲ್ಲ. ಬೆಳಗೆ ರೆಯವರು ಬರವ ಣಿಗೆಯಲ್ಲಿ ವಿಶಿಷ್ಟ ವಾದ ಸ್ವಂತಿಕೆ ಹಾಗೂ ಶೈಲಿಯನ್ನು ಹೊಂದಿದ್ದರು.
“ಅಮ್ಮ ಸಿಕ್ಕಿದ್ಲು’ ಕೃತಿಯಲ್ಲಿ ಲೇಖಕರು ತನ್ನ ಹೆಂಡತಿ – ಮಕ್ಕಳನ್ನು ಬಿಟ್ಟು ಬರು ವಲ್ಲಿಂದ ಕಥೆಯನ್ನು ಆರಂಭಿ ಸುತ್ತಾರೆ. ಪತ್ನಿ ಲಲಿತಾರೊಂದಿಗೆ ಆದ ಮನ ಸ್ತಾಪದ ಕಾರಣದಿಂದ ಮನೆಯಿಂದ ದೂರ ವಿರಲು ನಿರ್ಧರಿಸಿದ ಬೆಳಗಳೆಯವರು ತಾಯಿ ಇದ್ದಲ್ಲಿಗೆ ಹೋಗಬೇಕೆಂದು ಊರಿನತ್ತ ಪ್ರಯಾಣ ಬೆಳೆಸುತ್ತಾರೆ. ಈ ಪ್ರಯಾಣದ ಮಾರ್ಗದಲ್ಲಿ ತನ್ನ ಜೀವನ ಶೈಲಿ, ಅಭ್ಯಾಸಗಳು, ಚಟಗಳು, ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಓದುಗರೊಂದಿಗೆ ಸಂಭಾಷಣೆ ನಡೆಸುವ ರೀತಿಯಲ್ಲಿ ಕಥೆಯನ್ನು ನಿರೂಪಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಕಂಡುಬರುವ ಎಷ್ಟೋ ವಿಷಯಗಳನ್ನು ತನ್ನ ಬದುಕಿನಲ್ಲಿ ಆಗಿ ಹೋದಂತಹ ಘಟನೆಗಳೊಂದಿಗೆ ತಳಕು ಹಾಕುತ್ತಾರೆ.
ಮನುಷ್ಯರ ಅಸಹಾಯಕತೆ ಪರಿಸ್ಥಿತಿಗಳ ವಿವರ ಣೆಗಾಗಿ ಅವರು ಬಳಸಿರುವ ಪದಪುಂಜಗಳು ನಮ್ಮನ್ನು ಭಾಷೆ ಮತ್ತು ಸಾಹಿತ್ಯದ ಅದ್ಭುತ ಲೋಕಕ್ಕ ಕರೆದೊಯ್ಯುತ್ತವೆ.
ಹುಟ್ಟೂರು ಬಳ್ಳಾರಿಯಲ್ಲಿ ತಾಯಿಯೊಂದಿಗೆ ಕಳೆದ ಬಾಲ್ಯ ಹಾಗೂ ಹದಿಹರೆ ಯದ ದಿನಗಳನ್ನು ಲೇಖಕರು ಕೃತಿಯಲ್ಲಿ ಮೆಲುಕು ಹಾಕಿದ್ದಾರೆ. ಮನುಷ್ಯನಿಗೆ ಗಂಟು ಬೀಳುವ ಚಟಗಳು ಹೂದೋಟದಂತಹ ಜೀವನವನ್ನು ಹೇಗೆ ನಾಶ ಮಾಡುತ್ತವೆ ಎಂಬು ದನ್ನು ತನ್ನದೇ ಅನುಭವಗಳೊಂದಿಗೆ ಹಂಚಿ ಕೊಳ್ಳುತ್ತಾರೆ. ಈ ಕೃತಿಯ ಮೂಲಕ ತನ್ನ ಬದುಕಿನ ಎಷ್ಟೋ ವಿಷಯಗಳನ್ನು ಎಳೆಎಳೆ ಯಾಗಿ ಓದುಗರ ಮುಂದಿರಿಸಿದ್ದಾರೆ. ಬಾಲ್ಯ ದಲ್ಲಿ ಆದಂಥ ನೋವುಗಳು, ಚಿಕ್ಕವನಿದ್ದಾಗ ತಂದೆಯ ಕುರಿತಾಗಿ ಇದ್ದಂಥ ಪ್ರಶ್ನೆಗಳು ಸಹಿತ ಹಲವಾರು ರಹಸ್ಯಗಳು, ಕುತೂಹಲಗಳು ಹಾಗೂ ಇನ್ನಿತರ ಗಂಭೀರ ವಿಷಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ತಾಯಿಯೊಡನೆ ಸಾಕಷ್ಟು ಸಮಯವನ್ನು ಕಳೆಯಲಿಲ್ಲವಲ್ಲ ಎಂಬ ಕೊರಗು ಈ ಕೃತಿ ಯಲ್ಲಿ ಪಡಿಮೂಡಿದೆ. ಗೆಲುವಿನ ಉತ್ತುಂಗದ ಲ್ಲಿದ್ದಾಗ, ಅದಕ್ಕೆ ಕಾರಣವಾ ದಂಥ ತಾಯಿ ಯನ್ನು, ನೋಡುವ ಭಾಗ್ಯ ತನಗಿ ಲ್ಲವಲ್ಲ ಎಂಬ ನೋವು ಕೃತಿಯಲ್ಲಿ ಎದ್ದು ಕಾಣುತ್ತದೆ.
“ಒಂದೇ ಒಂದು ಸಲ ಈಗ ಆಕೆ ಬಂದು, ಒಂದು ದಿನ ನನ್ನೊಂದಿಗೆ ಇದ್ದುಬಿಟ್ಟರೆ… ಅಂದು ಕೊಳ್ಳುತ್ತೇನೆ. ಅದೆಲ್ಲ ಆಗುವ ಮಾತೇ?’ ಎಂದು ಬೆನ್ನುಡಿಯಲ್ಲಿ ಲೇಖಕರು ತನ್ನನ್ನು ತಾನೇ ಪ್ರಶ್ನಿಸಿಕೊಂಡಿದ್ದಾರೆ.
ಬೆಳಗಳೆಯವರ ಸಾಂಪ್ರದಾಯಿಕ ಶೈಲಿ ಯಲ್ಲಿ ಮೂಡಿಬಂದ “ಅಮ್ಮ ಸಿಕ್ಕಿದ್ಲು’ ಕೃತಿ ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪ್ರಾಮುಖ್ಯವನ್ನು ಸಾರಿ ಹೇಳಿದೆ. ತಾಯಿಯ ಕುರಿತು ಆರಾಧ್ಯ ಭಾವ ಹೆಚ್ಚಾಗುತ್ತದೆ. ತಾಯಿಯ ಜತೆಗಿನ ಒಡನಾಟವನ್ನು ಅನು ಭವಿಸಿ ನೋಡಿ ಎಂಬ ಸಲಹೆಯನ್ನೂ ಈ ಕೃತಿಯನ್ನು ಲೇಖಕರು ನೀಡಿದ್ದಾರೆ. “ಒಂದು ದಿನ ಸುಮ್ಮನೆ ನಿಮ್ಮ ಅಮ್ಮನೊಂದಿಗೆ ಇಡೀ ದಿನವನ್ನು ಕಳೆಯಿರಿ. ಆಗ ತಾನೇಕೆ ಈ ಕೃತಿಯನ್ನು ಬರೆದಿರುವೆನೆಂದು ನಿಮಗೆ ತಿಳಿ ಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದ್ದಾರೆ. ಅಂತೂ ಸ್ವಗತದೊಂದಿಗೆ ತನ್ನದೇ ಕಥೆಯನ್ನು ನಿರೂಪಿಸಿರುವ ಈ ಕೃತಿಯಲ್ಲಿ ಲೇಖಕರು ತಾಯಿಯ ಮಹತ್ವವನ್ನು ನಾವಂದು ಕೊಂಡದ್ದಕ್ಕಿಂತ ವಿಶೇಷವಾಗಿ ನಮಗೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
-ಸಂಹಿತಾ ಎಸ್. ಮೈಸೂರೆ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.